Karnataka Times
Trending Stories, Viral News, Gossips & Everything in Kannada

Free Bus Pass: ಪತ್ರಕರ್ತರಿಗೆ ಇನ್ಮುಂದೆ ಉಚಿತ ಬಸ್ ಪ್ರಯಾಣ, ಬಜೆಟ್ ನಲ್ಲಿ ಘೋಷಣೆ

advertisement

ಸಮಾಜದ ಆಗು ಹೋಗುಗಳು, ನಡೆ ನುಡಿಗಳು, ಪ್ರಗತಿಯ ವಿಚಾರಗಳು ಇತ್ಯಾದಿಯಲ್ಲಿ ಮಾಧ್ಯಮದ ಪಾತ್ರ ಬಹಳ ಇದೆ. ಪತ್ರಕರ್ತರು ಸರಿಯಾದ ಮಾಹಿತಿ ಪ್ರಕಟಿಸಿದ್ರೆ ಮಾತ್ರ ಜನರಿಗೆ ಇದರ ಅರಿವು ಆಗುತ್ತದೆ. ಹಾಗಾಗಿ ಪತ್ರ ಕರ್ತರಿಗೆ ಈ ಸಮಾಜದಲ್ಲಿ ವಿಶೇಷ ರೀತಿಯ ಸ್ಥಾನಮಾನ ಇದೆ. ಅದೇ ರೀತಿ ಪತ್ರಕರ್ತರಿಗೂ ಸೌಲಭ್ಯಗಳ ಕೊರೆತು ಇದ್ದು ಇದಕ್ಕಾಗಿ ‌ಸಿಎಂ ಸಿದ್ದರಾಮಯ್ಯ (CM Siddaramaiah) ಈ ಬಾರಿಯ ಬಜೆಟ್ ನಲ್ಲಿ ಪತ್ರಕರ್ತರಿಗೂ ಗುಡ್ ನ್ಯೂಸ್ ನೀಡಿದ್ದಾರೆ. ಜನರ ಹಿತಕ್ಕಾಗಿ ಒಳ್ಳೆಯ ಕೆಲಸ ಮಾಡುವ, ಜನರಿಗೆ ಮಾಹಿತಿ ಪ್ರಸ್ತುತ ಪಡಿಸುವ ‌ಪತ್ರಕರ್ತರಿಗೂ ಇದೀಗ ಈ ಬಾರಿಯ ಬಜೆಟ್ ನಲ್ಲಿ ವಿಶೇಷ. ಸೌಲಭ್ಯ ಘೋಷಣೆ ಮಾಡಿದ್ದಾರೆ.

ಮನವಿ ಮಾಡಲಾಗಿತ್ತು:

ಪತ್ರಕರ್ತರಿಗೆ ವಿಮೆ ಸೌಲಭ್ಯ ಸಹ ಇಲ್ಲ ಎಂಬ ಬಗ್ಗೆ ಮನವಿ ಬಂದಿತ್ತು. ಇದರ ನಡುವೆ ಪತ್ರಕರ್ತರಿಗೆ ಉಚಿತ ಬಸ್ ಪಾಸ್ (Free Bus Pass) ನೀಡಬೇಕು ಎಂಬ ಮನವಿ ಕೂಡ ಕೇಳಿ ಬಂದಿದ್ದು 10 ವರ್ಷದಿಂದ ಉಚಿತ ಬಸ್ ಪಾಸ್ ಗಾಗಿ ಬೇಡಿಕೆ ಮುಂದಿಟ್ಟಿದ್ದು, ಗ್ರಾಮೀಣ ಭಾಗದ ಪತ್ರಕರ್ತರಿಗೆ ಉಚಿತ ಬಸ್ ಪಾಸ್ (Free Bus Pass) ನೀಡುವ ಬಗ್ಗೆ ಗಂಭೀರವಾಗಿ ಪರಿಶೀಲನೆ ಮಾಡಿ ಬಜೆಟ್ ನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಭರವಸೆ ನೀಡಿದ್ದರು. ಇಂದು ನಡೆದ ಬಜೆಟ್ ‌ನಲ್ಲಿ ಈ ಯೋಜನೆಗೆ ಅನುಮೋದನೆ ‌ಕೂಡ ಸಿಕ್ಕಿದೆ.

 

advertisement

ಶೀಘ್ರ ಹಂಚಿಕೆ:3

ಬಜೆಟ್ ನಲ್ಲಿ ಪತ್ರ ಕರ್ತರಿಗೆ ನೀಡಿರುವ ಈ ಬಸ್ ಪಾಸ್ ಯೋಜನೆಯನ್ನು ಶೀಘ್ರವಾಗಿ ಕೂಡಲೇ ಜಾರಿಗೆ ತರಲು ವಾರ್ತಾ ಇಲಾಖೆ ಮುಂದಾಗಬೇಕು ಎಂದು ಕೆಯುಡಬ್ಲ್ಯುಜೆ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ತಿಳಿಸಿದ್ದಾರೆ. ಬಜೆಟ್ ನಲ್ಲಿ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡುವ ವ್ಯವಸ್ಥೆಯನ್ನು ಸರಕಾರ ತಿಳಿಸಿದ್ದು , ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರು ಸಿಎಂ ಬಜೆಟ್ ಗೆ ಅಭಿನಂದನೆ ತಿಳಿಸಿದ್ದಾರೆ.

ಈ ಮೂಲಕ ಈ ವಿಚಾರ ಎಲ್ಲ ಪತ್ರಕರ್ತರಿಗೂ ಖುಷಿ ನೀಡಿದಂತಾಗಿದೆ.ದೂರದ ಊರಿಗೆ ವರದಿಗಾಗಿ ಪ್ರಯಾಣ ಬೆಳೆಸುವ ಪತ್ರ ಕರ್ತರಿಗೆ ಸಾಕಷ್ಟು ನೆರವಾಗಲಿದೆ.

advertisement

Leave A Reply

Your email address will not be published.