Karnataka Times
Trending Stories, Viral News, Gossips & Everything in Kannada

School Teachers: ರಾಜ್ಯದ ಎಲ್ಲಾ ಶಾಲಾ ಶಿಕ್ಷಕರಿಗೆ ಸರಕಾರದಿಂದ ನೂತನ ಆದೇಶ! ಹೊಸ ರೂಲ್ಸ್ ತಕ್ಷಣವೇ ಜಾರಿಗೆ

advertisement

ಸರಕಾರಿ ಶಾಲೆಗಳ ಬಲವರ್ಧನೆಗೆ ಸರಕಾರ ನಿರಂತರ ಪ್ರಯತ್ನ ಪಡುತ್ತಲೆ ಇದೆ. ಈಗಾಗಲೇ ಸರಕಾರಿ ಶಾಲಾ ಕಾಲೇಜಿಗೆ ಅನೇಕ ಅಭಿವೃದ್ಧಿ ಕಾರ್ಯ ಚಟುವಟಿಕೆ ಮಾಡುತ್ತಲಿದ್ದು ಸರಕಾರಿ ಶಾಲೆಗಳ ಫಲಿತಾಂಶ ವೃದ್ಧಿಸುವ ಉದ್ದೇಶದಿಂದ ಹಾಗೂ ಮಕ್ಕಳ ಕಲಿಕಾ ಗುಣಮಟ್ಟ ಕೂಡ ಅಭಿವೃದ್ಧಿ ಮಾಡಬೇಕು ಎಂಬ ಕಾರಣಕ್ಕೆ ಶಾಲೆಯ ಶಿಕ್ಷಕರಿಗೆ (School Teachers) ಸಂಬಂಧಿಸಿದಂತೆ ಹೊಸದೊಂದು ಆದೇಶ ಹೊರಡಿಸಲಾಗಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಯಾವುದು ಈ ಮಾಹಿತಿ

ಸರಕಾರಿ ಶಾಲೆ (Govt School)ಯಲ್ಲಿ ಶಿಕ್ಷಕರ ಕೊರತೆ ಒಂದು ಕಡೆಯಾದರೆ ಇನ್ನೊಂದು ಕಡೆ ಶಿಕ್ಷಕರು ನೇಮಕ. ಆದರೂ ಸರಿಯಾದ ಸಮಯಕ್ಕೆ ಬಾರದೇ ಮಕ್ಕಳ ಶೈಕ್ಷಣಿಕ ಕಾರ್ಯ ಚಟುವಟಿಕೆಗೆ ಸಹ ತೊಂದರೆ ಆಗುತ್ತಿರುವುದು ಕಂಡು ಬಂದಿದೆ. ಹಾಗಾಗಿ ಮಕ್ಕಳ ಹಿತಾಸಕ್ತಿ ಕಾಪಾಡಬೇಕು ಎಂಬ ಉದ್ದೇಶದಿಂದ ಶಿಕ್ಷಕರಿಗೆ ಹೊಸ ಆದೇಶ ನೀಡಿದ್ದಾರೆ. ನಿಗಧಿತ ಅವಧಿಗಿಂತ ಅರ್ಧ ಗಂಟೆ ಮೊದಲೇ ಶಾಲೆಗೆ ಆಗಮಿಸಬೇಕು‌ ಎಂದು ಉಲ್ಲೇಖ ಒಂದರ ಅಡಿಯಲ್ಲಿ ನಿಗಧಿತ ಅವಧಿ ಒಳಗೆ ಕೆಲಸಕ್ಕೆ ಹಾಜರಾಗಬೇಕು ಎಂದು ಸರಕಾರದಿಂದಲೇ ತಿಳಿಸಲಾಗಿದೆ.

ಸರಕಾರದಿಂದ ಮಾರ್ಗದರ್ಶನ

ಸರಕಾರದಿಂದ ಶಿಕ್ಷಕರ ಕರ್ತವ್ಯ ವಿಚಾರವನ್ನು ಮತ್ತೆ ಪುನಃ ತಿಳಿಸಲಾಗಿದೆ. ಬೋಧನಾ ಕಲಿಕಾ ಚಟುವಟಿಕೆಯನ್ನು ಕ್ರಿಯಾಶೀಲವಾಗಿ ನಿರ್ವಹಿಸುವ ಜೊತೆಗೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂಬ ಬಗ್ಗೆ ಸರಕಾರದಿಂದ ಅಧಿಕೃತ ಆದೇಶ ನೀಡಲಾಗಿದೆ. ಇನ್ನೇನು ಮುಂದಿನ ದಿನದಲ್ಲಿ SSLC ಪರೀಕ್ಷೆ ಹತ್ತಿರ ಇರುವ ಕಾರಣ ಮಕ್ಕಳನ್ನು ಸಿದ್ಧ ಮಾಡಬೇಕಾದದ್ದು ಶಿಕ್ಷಕರ ಕರ್ತವ್ಯವಾಗಿದೆ. ಈ ಮೂಲಕ ಸರಕಾರಿ ಶಾಲೆಯ ಗುಣಮಟ್ಟ ಕಾಪಾಡುವ ಮೂಲ ಉದ್ದೇಶ ಹೊಂದಿರಲಾಗಿದೆ.

advertisement

Image Source: The Hindu

ಯಾವೆಲ್ಲ ವಿಚಾರಗಳು ಇದರಲ್ಲಿ ಇದೆ

  • ಮಕ್ಕಳ ಕಲಿಕಾ ಸಾಮರ್ಥ್ಯ ಅರ್ಥೈಸಿ ಪೂರ್ವ ಸಿದ್ಶತೆ ಕಲಿಕಾ ಪರೀಕ್ಷೆ ಮಾಡಿ ಬಳಿಕ ಕಡಿಮೆ ಶೈಕ್ಷಣಿಕ ಮೌಲ್ಯ ಪಡೆದ ಮಕ್ಕಳನ್ನು ಗಮನದಲ್ಲಿ ಇರಿಸಿ ವಿಶೇಷ ತರಬೇತಿ ಮಾಡಲಾಗಿದೆ.
  • ಬೋಧನಾ ಕಲಿಕಾ ಸಾಮಾಗ್ರಿ ಸರಿಯಾಗಿ ಬಳಸಿ ಕಲಿಕೆಯನ್ನು ಪರಿಪೂರ್ಣ ಗೊಳಿಸುವುದು.
  • ಗಣಿತ, ಇಂಗ್ಲಿಷ್ ಹಾಗೂ ವಿಜ್ಞಾನ ವಿಚಾರಗಳ ವಿಶೇಷ ರೀತಿಯ ತರಬೇತಿ ನೀಡುವುದು.
  • ಶಾಲಾ ಹಂತದ ಮೇಲ್ವಿಚಾರಣೆಯನ್ನು ಶಾಲೆಯ ಮುಖ್ಯ ಶಿಕ್ಷಕರು ನೋಡಿ ಕೊಂಡು ಮಕ್ಕಳನ್ನು ದೈಹಿಕ ಹಾಗೂ ಮಾನಸಿಕ ಸದೃಢರನ್ನಾಗಿ ಮಾಡುವುದು. ಮುಖ್ಯ ಶಿಕ್ಷಕರು ಉಳಿದ ಶಿಕ್ಷಕರು ಅರ್ಧ ಗಂಟೆ ಮೊದಲು ಬರುವಂತೆ ನೋಡಿಕೊಳ್ಳಬೇಕು.
  • ನಲಿ-ಕಲಿ, ಪ್ರಾಯೋಗಿಕ ಪ್ರಯೋಗ, ತರಗತಿ ಬೋಧನೆ ಇತ್ಯಾದಿಯನ್ನು ಶಾಲಾ ಮುಖ್ಯ ಶಿಕ್ಷಕರು ನೋಡಿಕೊಳ್ಳಬೇಕು.
  • ನಿಗಧಿ ಪಡಿಸಿದ್ದ ಪಾಠ ಬೋಧನೆಯನ್ನು ನಿಗಧಿತ ಸಮಯದೊಳಗೆ ಮುಗಿಸುವುದು.
  • ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ಕಾಳಜಿ ವಹಿಸುವುದು.
  • ಶಾಲೆ ಮುಗಿದ ಬಳಿಕ ಮಕ್ಕಳು ಸರಿಯಾಗಿ ಸುರಕ್ಷಿತವಾಗಿ ಮನೆ ತಲುಪುವಂತೆ ಮಾರ್ಗದರ್ಶನ ಮಾಡುವುದು.
  • ಶಾಲಾ ದಾಸ್ತಾನು ಹಾಗೂ ಸಾಮಾಗ್ರಿ ಸುರಕ್ಷಿತವಾಗಿರುವಂತೆ ನೋಡಿಕೊಳ್ಳುವುದು.

ದೂರು ನೀಡಲು ಅವಕಾಶ

ಶಿಕ್ಷಕರು ಶಾಲಾ ಅವಧಿಯಲ್ಲಿ ಶಾಲೆ ತೊರೆದು ಖಾಸಗಿ ಕಾರ್ಯಕ್ರಮ, ಖಾಸಗಿ ವ್ಯವಹಾರ ಇತರೆಗಳಲ್ಲಿ ತೊಡಗಿದ್ದರೆ ಈ ಬಗ್ಗೆ ಸಾರ್ವಜನಿಕರು ಮುಖ್ಯ ಶಿಕ್ಷಕರಿಗೆ ದೂರು ಸಲ್ಲಿಸಬಹುದು. ಒಂದು ವೇಳೆ ಮುಖ್ಯ ಶಿಕ್ಷಕರೇ ಈ ತಪ್ಪು ಮಾಡಿದರೆ ಆಗ ಶಿಕ್ಷಣ ಇಲಾಖೆಗೆ ದೂರು ನೀಡಬಹುದು. ಅದು ಖಾತರಿ ಆದರೆ ಆಗ ಅಂತಹ ಶಿಕ್ಷಕರ ವಿರುದ್ಧ ಶಿಸ್ತಿನ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಸರಕಾರದ ಸುತ್ತೊಲೆಯ ಆದೇಶದಲ್ಲಿ ತಿಳಿಸಲಾಗಿದೆ.

advertisement

Leave A Reply

Your email address will not be published.