Karnataka Times
Trending Stories, Viral News, Gossips & Everything in Kannada

RCB: ಆರ್ಸಿಬಿ ಪ್ಲೇ ಆಫ್ ಹಂತಕ್ಕೆ ತಲುಪೋದಕ್ಕೆ ಬ್ಲೂ ಪ್ರಿಂಟ್ ತಯಾರು ಮಾಡಿದ ಅಭಿಮಾನಿ! ನೋಡಿ ಲೆಕ್ಕಾಚಾರ ವೈರಲ್

advertisement

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪ್ರತಿಬಾರಿಯಂತೆ ಈ ಬಾರಿ ಕೂಡ ಸಾಕಷ್ಟು ನಿರಾಶ ಜನಕ ಪ್ರದರ್ಶನವನ್ನು ೋರ್ಪಡಿಸಿದ್ದು ಆರ್‌ಸಿಬಿ ಅಭಿಮಾನಿಗಳಿಗೆ (RCB Fans) ಇದರಿಂದಾಗಿ ಸಾಕಷ್ಟು ಬೇಸರವಾಗಿದೆ ಎಂದು ಹೇಳಬಹುದಾಗಿದೆ. ಯಾಕೆಂದ್ರೆ ಈ ಬಾರಿ ಹೆಸರು ಹಾಗೂ ಜರ್ಸಿ ಎರಡನ್ನು ಕೂಡ ಬದಲಾವಣೆ ಮಾಡಿಕೊಂಡು ಈ ಬಾರಿ ಐಪಿಎಲ್ ಗೆ ತಂಡ ಇಳಿದಿತ್ತು.

ಆದರೆ ತಂಡ ಈಗಲೂ ಕೂಡ ಹಾಡಿರುವಂತಹ 9 ಪಂದ್ಯಗಳಲ್ಲಿ ಎರಡು ಪಂದ್ಯಗಳನ್ನು ಮಾತ್ರ ಗೆದ್ದು ಬರೋಬ್ಬರಿ 7 ಪಂದ್ಯಗಳನ್ನು ಸೋತಿದೆ. ಎಲ್ಲಾ ಕಡೆ ಬಹುತೇಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿಯ ಐಪಿಎಲ್ ನಿಂದ ಹೊರಗೆ ಹೋದಂತೆ ಎಂಬುದಾಗಿ ಭಾವಿಸಿದ್ದಾರೆ.

ಆದರೆ ಇನ್ನೊಬ್ಬ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಅಭಿಮಾನಿ ಮಾತ್ರ ಟ್ವಿಟರ್ ನಲ್ಲಿ ಆರ್ ಸಿ ಬಿ ಪ್ಲೇ ಆಫ್ ಹಂತಕ್ಕೆ ಸೇರ್ಗಡೆ ಆಗೋದಕ್ಕೆ ಇರುವಂತಹ ಸಾಧ್ಯತೆಯ ಬಗ್ಗೆ ಬ್ಲೂಪ್ರಿಂಟ್ ಪೋಸ್ಟ್ ಮಾಡಿದ್ದಾನೆ. ಅಷ್ಟಕ್ಕೂ ಅದರಲ್ಲಿ ಏನಿದೆ ಯಾವ ರೀತಿಯಲ್ಲಿ ಆರ್‌ಸಿಬಿ ಪ್ಲೇ ಆಫ್ ಹಂತಕ್ಕೆ ಹೋಗಬಹುದು ಎನ್ನುವಂತಹ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಆರ್ ಸಿ ಬಿ ಪ್ಲೇ ಆಫ್ ಹಂತಕ್ಕೆ ತೇರ್ಗಡೆ ಆಗೋದಕ್ಕೆ ಏನಿದೆ ಪ್ಲಾನ್:

 

Image Source: Cricket Addictor

 

advertisement

ಆಯುಷ್ ಎನ್ನುವಂತಹ ರಾಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಅಭಿಮಾನಿ ಯಾವ ರೀತಿಯಲ್ಲಿ ಈ ಬಾರಿ ಆರ್‌ಸಿಬಿ ತಂಡ ಪ್ಲೇ ಆಫ್ (RCB Team Play Off) ಹಂತಕ್ಕೆ ತೇರ್ಗಡೆ ಆಗಬಹುದು ಎನ್ನುವಂತಹ ಲೆಕ್ಕಾಚಾರದ ಪಾಯಿಂಟ್ಸ್ ಟೇಬಲ್ ಅನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದು ಇದರ ಆಧಾರದ ಅಡಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡ 20 ಅಂಕಗಳ ಜೊತೆಗೆ ಟೇಬಲ್ ಟಾಪರ್ ಆಗಿದೆ, ಆದರೆ ರಾಜಸ್ಥಾನ ರಾಯಲ್ಸ್ ತಂಡ ಲೀಗ್ ಹಂತ ಮುಗಿಯುವುದರ ಒಳಗಡೆ 20 ಅಂಕಗಳ ಜೊತೆಗೆ ಅಂದರೆ 10 ಪಂದ್ಯಗಳನ್ನು ಗೆದ್ದು ಮೊದಲನೇ ಸ್ಥಾನಕ್ಕೆ ಹಕ್ಕುದಾರರಾಗಿ ಪ್ಲೇ ಆಫ್ ಹಂತಕ್ಕೆ ತೇರ್ಗಡೆಯಾಗುತ್ತದೆ.

 

Image Source: Hindustan Times

 

ಎರಡನೇ ಸ್ಥಾನದಲ್ಲಿ ಸನ್ ರೈಸರ್ಸ್ ಹೈದರಾಬಾದ್ (SRH) ತಂಡ ಕೂಡ ಹತ್ತು ಪಂದ್ಯಗಳನ್ನು ಗೆದ್ದು 20 ಅಂಕಗಳ ಜೊತೆಗೆ ಪ್ಲೇ ಆಫ್ ಹಂತಕ್ಕೆ ತೇರ್ಗಡೆಯಾಗಲಿದೆ. ಇದಾದ ನಂತರ ಮೂರನೇ ಸ್ಥಾನದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ 16 ಅಂಕಗಳ ಜೊತೆಗೆ ಅಂದರೆ ಎಂಟು ಪಂದ್ಯಗಳನ್ನು ಗೆದ್ದು ಮೂರನೇ ಸ್ಥಾನದಲ್ಲಿ ಪ್ಲೇ ಆಫ್ ಹಂತಕ್ಕೆ ತೇರ್ಗಡೆ ಆಗಲಿದ್ದು 4ನೇ ಸ್ಥಾನದಲ್ಲಿ ಆರ್ಸಿಬಿ ಅಭಿಮಾನಿ ಪ್ರಕಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 14 ಅಂಕಗಳ ಜೊತೆಗೆ ಅಂದರೆ 7 ಪಂದ್ಯಗಳನ್ನು ಗೆದ್ದು ತೆರ್ಗಡೆ ಆಗಲಿದೆ ಎಂಬುದಾಗಿ ಅಂದಾಜು ಲೆಕ್ಕಾಚಾರದ ಪಾಯಿಂಟ್ಸ್ ಟೇಬಲ್ ಅನ್ನು ಪೋಸ್ಟ್ ಮಾಡಿದ್ದಾನೆ.

 

 

ಕೆಲವರು ಈ ಪೋಸ್ಟ್ ಅನ್ನು ನೋಡಿ ್ರತಿ ಬಾರಿ ಆರ್‌ಸಿಬಿ ಅಭಿಮಾನಿಗಳು (RCB Fans) ಇದೇ ರೀತಿಯಲ್ಲಿ ಕೊನೆಗೆ ಕ್ಯಾಲ್ಕುಲೇಟರ್ ಲೆಕ್ಕಾಚಾರವನ್ನು ಪ್ರಾರಂಭ ಮಾಡುತ್ತಾರೆ ಎಂಬುದಾಗಿ ಹಾಸ್ಯಸ್ಪದವಾಗಿ ಮಾತನಾಡಿದ್ದಾರೆ. ಆದರೆ ಐಪಿಎಲ್ ನಲ್ಲಿ ಎಲ್ಲವೂ ಕೂಡ ಸಾಧ್ಯವಿದ್ದು ಯಾವ ರೀತಿಯಲ್ಲಿ ಇದು ಕೂಡ ಸಾಧ್ಯವಾಗಬಹುದಾ ಅನ್ನೋದನ್ನ ಕೊನೆಯಲ್ಲಿಯೇ ಕಾದು ನೋಡಬೇಕಾಗಿದೆ.

advertisement

Leave A Reply

Your email address will not be published.