Karnataka Times
Trending Stories, Viral News, Gossips & Everything in Kannada

RCB: ಈ 5 ಆಟಗಾರರು RCB ಪರ ಆಡಿರೋದು ಆರ್‌ಸಿಬಿ ಅಭಿಮಾನಿಗಳಿಗೆ ಗೊತ್ತೇ ಇಲ್ಲ!

advertisement

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ 2008ರ ಆರಂಭದಿಂದಲೂ ಕೂಡ ಐಪಿಎಲ್ ನಲ್ಲಿ ಕಾಣಿಸಿಕೊಂಡಿರುವ ತಂಡ ಆಗಿದೆ. ಪ್ರತಿ ಬಾರಿಯೂ ಕೂಡ ಅಭಿಮಾನಿಗಳಿಗೆ ಕಪ್ ಗೆಲ್ಲುವಂತಹ ಆಸೆಯನ್ನು ತೋರಿಸಿ ಕೊನೆಯಲ್ಲಿ ನಿರಾಸೆ ಮಾಡೋದು ಈ ಬಾರಿ ಕೂಡ ಮುಂದುವರಿಯಬಹುದು ಎಂಬುದಾಗಿ ನಿರೀಕ್ಷಿಸಬಹುದಾಗಿದೆ. ಆದರೆ ಕೆಲವೊಮ್ಮೆ ಆರ್‌ಸಿಬಿ ತಂಡ ನೀಡುವಂತಹ ಪರ್ಫಾರ್ಮೆನ್ಸ್ ಬೇರೆ ಯಾವುದೇ ಐಪಿಎಲ್ ತಂಡದಿಂದಲೂ ಕೂಡ ನೀಡೋದು ಅನುಮಾನವೇ ಸರಿ ಎಂದು ಹೇಳಬಹುದಾಗಿದೆ.

ಇವತ್ತಿನ ಈ ಲೇಖನದ ಮೂಲಕ ನಾವು ಮಾತನಾಡೋಕೆ ಹೊರಟಿರೋದು ಆರ್‌ಸಿಬಿ ತಂಡದ ಪರವಾಗಿ ಆಡಿರುವಂತಹ ಐದು ಆಟಗಾರರ ಬಗ್ಗೆ. ಇದರಲ್ಲಿ ವಿಶೇಷ ಏನಿದೆ ಅಂತ ನೀವು ಕೇಳಬಹುದು. ವಿಶೇಷ ಇದೆ ಯಾಕಂದ್ರೆ ಇವರು ಆರ್ಸಿಬಿ ತಂಡದ ಪರವಾಗಿ ಆಡಿರೋದು ಸಾಕಷ್ಟು ಆರ್ಸಿಬಿ ಅಭಿಮಾನಿಗಳಿಗೆ ತಿಳಿದಿಲ್ಲ. ಹಾಗಿದ್ರೆ ಬನ್ನಿ ಆ ಆಟಗಾರರು ಯಾರು ಎನ್ನುವುದನ್ನು ತಿಳಿಯೋಣ.

Steve Smith:

 

Image Source: The Quint

 

ಆಸ್ಟ್ರೇಲಿಯಾ ತಂಡದ ಆಟಗಾರ ಆಗಿರುವಂತಹ ಇವರು 2010ರಲ್ಲಿ ಆರ್ಸಿಬಿ ತಂಡದ (RCB Team) ಪರವಾಗಿ ಆಯ್ಕೆಯಾದರು. ಆದರೆ ಸ್ಮಿತ್ ರವರಿಗೆ ದುರದೃಷ್ಟ ಎನ್ನುವ ರೀತಿಯಲ್ಲಿ ತಮ್ಮನ್ನು ತಾವು ಸಾಬೀತುಪಡಿಸಿಕೊಳ್ಳುವುದಕ್ಕೆ ಅವಕಾಶವನ್ನು ಆರ್‌ಸಿಬಿ ಟೀಂ ಮ್ಯಾನೇಜ್ಮೆಂಟ್ ನೀಡಲಿಲ್ಲ. ನಂತರ ಇವರು ಬೇರೆ ಬೇರೆ ತಂಡಗಳ ಪರವಾಗಿ ಆಡಿದ್ದಾರೆ.

Misbah-ul-Haq:

 

Image Source: Cricket Country

 

advertisement

ಪಾಕಿಸ್ತಾನಿ ಮೂಲದ ಈ ಆಟಗಾರ ಐಪಿಎಲ್ ನಲ್ಲಿ ಅದರಲ್ಲೂ ವಿಶೇಷವಾಗಿ 2008ರಲ್ಲಿ ಆರ್ಸಿಬಿ ತಂಡದ ಪರವಾಗಿ ಆಡಿದ್ದಾರೆ ಅಂತ ಹೇಳಿದರೆ ನೀವು ನಂಬುವುದು ಕಷ್ಟ. ಆದರೆ ಅವರು ಆಡಿರೋದು ನಿಜ. ಹೌದು ಗೆಳೆಯರೇ, ಮಿಸ್ಬಾ 2007ರಲ್ಲಿ ಟಿ20 ವಿಶ್ವಕಪ್ (T20 World Cup) ನಲ್ಲಿ ಎಲ್ಲರ ಗಮನವನ್ನು ಸೆಳೆದಿದ್ದರು. ಹೀಗಾಗಿ ಅವರನ್ನ 2008ರಲ್ಲಿ ಪ್ರಾರಂಭವಾದ ಐಪಿಎಲ್ ನಲ್ಲಿ ಆರ್‌ಸಿಬಿ (RCB) ತಂಡ ತನ್ನ ತೆಕ್ಕೆಗೆ ಸೇರಿಸಿಕೊಂಡಿತ್ತು. ಆದರೆ ನೀಡಿದಂತಹ ಕಳಪೆ ಪ್ರದರ್ಶನ ಕಾರಣದಿಂದಾಗಿ ಅವರನ್ನು ತಂಡದಿಂದ ತೆಗೆದು ಹಾಕಲಾಯಿತು.

Shivnarayan Chandrapal:

 

Image Source: Sportskeeda

 

ತಮ್ಮ ವಿಭಿನ್ನ ಸ್ಟೈಲ್ ನ ಬ್ಯಾಟಿಂಗ್ ಮೂಲಕ ವೆಸ್ಟ್ ಇಂಡೀಸ್ ಕ್ರಿಕೆಟ್ ಇತಿಹಾಸದಲ್ಲಿ ತಮ್ಮದೇ ಆದಂತಹ ಸ್ಥಾನವನ್ನು ಹೊಂದಿರುವಂತಹ ಶಿವನಾರಾಯಣ ಚಂದ್ರ ಪಾಲ್ ಎರಡು ದಶಕಗಳ ತಮ್ಮ ಕ್ರಿಕೆಟ್ ಜೀವನದಲ್ಲಿ ಸಾಕಷ್ಟು ಸಾಧನೆಗಳನ್ನು ಮಾಡಿದ್ದಾರೆ. ಆದರೆ 2008ರಲ್ಲಿ ಆರ್‌ಸಿಬಿ ಪರವಾಗಿ ಆಯ್ಕೆ ಆದ ನಂತರ ಅವರು ಅತ್ಯಂತ ಕಡಿಮೆ ರನ್ಗಳನ್ನು ಬಾರಿಸಿರುವ ಕಾರಣಕ್ಕಾಗಿ ತಂಡದಿಂದ ಡ್ರಾಪ್ ಆಗ್ತಾರೆ. ಇದಾದ ನಂತರ ಅವರು ಯಾವುದೇ ಐಪಿಎಲ್ ತಂಡದ ಪರವಾಗಿ ಆಡಿಲ್ಲ.

Eoin Morgan:

ಇಂಗ್ಲೆಂಡ್ ತಂಡದ ವಿಶ್ವಕಪ್ ವಿಜೇತ ನಾಯಕ ಆಗಿರುವಂತಹ ಈ ಆಟಗಾರ ಕೊಲ್ಕತ್ತಾ ತಂಡದ ಪರವಾಗಿ ಆಡಿರೋದು ಸಾಕಷ್ಟು ಜನರಿಗೆ ತಿಳಿದಿದೆ ಆದರೆ ಆರ್ಸಿಬಿ ತಂಡದ ಪರವಾಗಿ ಕೂಡ ಇವರು ಆಡಿದ್ದಾರೆ ಅನ್ನೋದನ್ನ ಸಾಕಷ್ಟು ಜನರು ತಿಳಿದಿಲ್ಲ. 2010ರಲ್ಲಿ ವರು ಆರ್‌ಸಿಬಿ ತಂಡದ ಪರವಾಗಿ ಆಯ್ಕೆಯಾಗ್ತಾರೆ ಆದರೆ ನಂತರ ತಮ್ಮ ಕಳಪೆ ಪ್ರದರ್ಶನದ ಕಾರಣದಿಂದಾಗಿ ತಂಡದಿಂದ ಹೊರ ಹೋಗಬೇಕಾಗಿ ಬರುತ್ತೆ.

Nathan Bracken:

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ವಿಕೆಟ್ ಟೇಕರ್ ಬೌಲರ್ ಆಗಿದ್ದ ಈತ ಏಕದಿನ ಕ್ರಿಕೆಟ್ನ ನಂಬರ್ ಒನ್ ಬೌಲರ್ ಆಗಿ ಕೂಡ ಕಾಣಿಸಿಕೊಂಡಿದ್ದಾರೆ. ಆದರೆ ಆರ್‌ಸಿಬಿ ತಂಡದ ಪರವಾಗಿ ಇವರಿಗೆ ಪಾದರ್ಪಣೆ ಮಾಡುವುದಕ್ಕೆ ಕೂಡ ಅವಕಾಶ ಸಿಗ್ಲಿಲ್ಲ. ನಂತರ 2011ರ ಸರಿಸುಮಾರಿಗೆ ಇವರು ಕ್ರಿಕೆಟ್ ಲೋಕಕ್ಕೆ ನಿವೃತ್ತಿಯನ್ನು ಘೋಷಿಸುತ್ತಾರೆ. ಇವಿಷ್ಟು ಜನ ಕ್ರಿಕೆಟಿಗರು ಆರ್‌ಸಿಬಿ ತಂಡದ ಪರವಾಗಿ ಆಡಿದ್ದಾರೆ ಆದರೆ ಆರ್‌ಸಿಬಿ ಅಭಿಮಾನಿಗಳಿಗೆ ಇವರು ತಮ್ಮ ತಂಡದ ಪರವಾಗಿ ಆಡಿದ್ದಾರೆ ಅನ್ನೋದು ಕೂಡ ತಿಳಿದಿಲ್ಲ.

advertisement

Leave A Reply

Your email address will not be published.