Karnataka Times
Trending Stories, Viral News, Gossips & Everything in Kannada

T20 World Cup: T20 ವರ್ಲ್ಡ್ ಕಪ್ ಗಾಗಿ ಈ 10 ಆಟಗಾರರ ಜಾಗ ಪಕ್ಕಾ! ಆದರೆ ಇಬ್ಬರು ಆಟಗಾರರು ಹೊರಗೆ

advertisement

ರೋಹಿತ್ ಶರ್ಮಾ (Rohit Sharma) ಅವರ ನಾಯಕತ್ವದಲ್ಲಿ ಈ ಬಾರಿ ಜೂನ್ ತಿಂಗಳಿಂದ ಪ್ರಾರಂಭ ಆಗಲಿರುವಂತಹ ಟಿ20 ವಿಶ್ವಕಪ್ (T20 World Cup) ದಲಿ ಭಾರತೀಯ ಕ್ರಿಕೆಟ್ ತಂಡ ಉತ್ತಮವಾದ ಪರ್ಫಾರ್ಮೆನ್ಸ್ ನೀಡುವಂತಹ ಭರವಸೆಯನ್ನು ಹೊಂದಿದೆ. ಕಳೆದ ಬಾರಿ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಭಾರತದಲ್ಲಿ ನಡೆದಿರುವಂತಹ ಏಕದಿನ ವಿಶ್ವಕಪ್ ನಲ್ಲಿ ಕಪ್ ಗೆಲ್ಲುವಂತಹ ಅವಕಾಶವನ್ನ ಭಾರತೀಯ ಕ್ರಿಕೆಟ್ ತಂಡ ಕೆಲವೇ ಅಂತರದಿಂದ ಮಿಸ್ ಮಾಡಿಕೊಂಡಿದೆ. ಈ ಬಾರಿ ಟಿ ಟ್ವೆಂಟಿ ವಿಶ್ವ ಕಪ್ ನಲ್ಲಿ ಆ ಎಲ್ಲಾ ಸಮಸ್ಯೆಗಳನ್ನು ಮೀರಿ ಕಪ್ ಗೆಲ್ಲಲೇ ಬೇಕು ಎನ್ನುವಂತಹ ಛಲದೊಂದಿಗೆ ರೋಹಿತ್ ಶರ್ಮ ಬಳಗ ಈ ಬಾರಿ ಅಮೆರಿಕ ಹಾಗೂ ವೆಸ್ಟ್ ಇಂಡೀಸ್ ನಲ್ಲಿ ಕಾಲಿಡಲಿದೆ.

ಭಾರತೀಯ ಕ್ರಿಕೆಟ್ ತಂಡದ ಆಯ್ಕೆ:

 

Image Source: SportsTiger.com

 

ಭಾರತೀಯ ಕ್ರಿಕೆಟ್ ತಂಡದ ಆಯ್ಕೆಯನ್ನು ಈ ಬಾರಿ ವಿಶ್ವಕಪ್ಗಾಗಿ ಅಜಿತ್ ಅಗರ್ಕರ್ (Ajit Agarkar) ರವರ ನೇತೃತ್ವದಲ್ಲಿ ಆಯ್ಕೆ ಸಮಿತಿ ಮೇ ತಿಂಗಳಿನಲ್ಲಿ ಭಾರತೀಯ ಕ್ರಿಕೆಟ್ ತಂಡವನ್ನು ಆಯ್ಕೆ ಮಾಡಬಹುದಾಗಿದೆ. ಈ ಬಾರಿ ಯಾರನ್ನು ಆಯ್ಕೆ ಮಾಡಬಹುದು ಯಾರನ್ನು ತಂಡದಿಂದ ಹೊರಗೆ ಇಡಬಹುದು ಎನ್ನುವುದರ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.

ಈ ಬಾರಿಯ ಐಪಿಎಲ್ ಪರ್ಫಾರ್ಮೆನ್ಸ್ ಆಧಾರದ ಮೇಲೆ ತಂಡವನ್ನು ಆಯ್ಕೆ ಮಾಡಬಹುದು ಎನ್ನುವಂತಹ ಮಾತುಕತೆ ಕೇಳಿ ಬರುತ್ತಿದೆ.

ಈ ಹತ್ತು ಆಟಗಾರರು ಆಯ್ಕೆ ಆಗೋದು ಫಿಕ್ಸ್:

advertisement

ರೋಹಿತ್ ಶರ್ಮ (Rohit Sharma) ನಾಯಕನಾಗಿ ಕಾಣಿಸಿಕೊಂಡರೆ ಅವರ ಡೆಪ್ಯೂಟಿ ಆಗಿ ಹಾರ್ದಿಕ್ ಪಾಂಡ್ಯ (Hardik Pandya) ಕಾಣಿಸಿಕೊಳ್ಳಲಿದ್ದಾರೆ. ವಿರಾಟ್ ಕೊಹ್ಲಿ (Virat Kohli), ಬೂಮ್ರಾ (Jasprit Bumrah), ರಿಂಕು ಸಿಂಗ್ (Rinku Singh) ಕೂಡ ಈ ಬಾರಿ ವಿಶ್ವಕಪ್ (T20 World Cup) ಗೆ ಆಯ್ಕೆ ಆಗುವಂತಹ ಪ್ರಮುಖ ಆಟಗಾರರಾಗಿದ್ದಾರೆ. T20 ಫಾರ್ಮಾಟಿನ ಭಾರತೀಯ ಕ್ರಿಕೆಟ್ ತಂಡದ ನಂಬರ್ ಒನ್ ಬ್ಯಾಟ್ಸ್ಮನ್ ಆಗಿರುವಂತಹ ಸೂರ್ಯ ಕುಮಾರ್ ಯಾದವ್ ಕೂಡ ಇಲ್ಲಿ ಕಾಣಿಸಿಕೊಳ್ಳಲಿದ್ದಾರೆ.

 

Image Source: Scroll.in

 

ಇನ್ನು ಈ ಬಾರಿ ಐಪಿಎಲ್ ನೋಡಿದ ಮೇಲೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ರಿಷಬ್ ಪಂತ್ (Rishabh Pant) ಕೂಡ ಈ ಬಾರಿಯ ವಿಶ್ವಕಪ್ ತಂಡಕ್ಕೆ ಫಿಕ್ಸ್ ಆಗಿದೆ ಎಂದು ಹೇಳಬಹುದು. ಇನ್ನು ರೋಹಿತ್ ಶರ್ಮ ಅವರ ಜೊತೆಗೆ ಯಶಸ್ವಿ ಜೈಸ್ವಾಲ್ ಓಪನರ್ ರೂಪದಲ್ಲಿ ಆಯ್ಕೆಯಾಗುವ ಸಾಧ್ಯತೆ ಕೂಡ ಇದೆ. ಮೊಹಮ್ಮದ್ ಸಿರಾಜ್ ಜೊತೆಗೆ ಕುಲದೀಪ್ ಯಾದವ್ ಕೂಡ ತಂಡದಲ್ಲಿ ಸ್ಥಾನವನ್ನು ಪಕ್ಕ ಮಾಡಿಕೊಳ್ಳಬಹುದು. ಈ ಮೂಲಕ ಈ 10 ಆಟಗಾರರ ಸ್ಥಾನ ಈ ಬಾರಿಯ ವಿಶ್ವಕಪ್ ನಲ್ಲಿ ತಂಡದಲ್ಲಿ ಪಕ್ಕ ಆಗಿದೆ ಎಂಬ ಸುದ್ದಿ ಇದೆ.

ಇವರಿಬ್ರೂ ವಿಶ್ವಕಪ್ ತಂಡದಲ್ಲಿ ಕಾಣಿಸಿಕೊಳ್ಳುವುದು ಡೌಟ್:

ಭಾರತೀಯ ಆಲ್ರೌಂಡರ್ಗಳಾಗಿರುವಂತಹ ಅಭಿಷೇಕ್ ಶರ್ಮ ಹಾಗೂ ಶಿವಂ ದುಬೆ ಇಬ್ಬರೂ ಕೂಡ ಈ ಬಾರಿ ಐಪಿಎಲ್ ನಲ್ಲಿ ಸಾಕಷ್ಟು ಉತ್ತಮವಾದ ಬ್ಯಾಟಿಂಗ್ ಪ್ರದರ್ಶನ ಮಾಡುತ್ತಿದ್ದಾರೆ ಆದರೆ ಅವರು ಬೌಲಿಂಗ್ ಮಾಡದೆ ಇರೋದು ಅವರು ತಂಡಕ್ಕೆ ಆಯ್ಕೆ ಆಗದೆ ಇರೋ ರೀತಿಯಲ್ಲಿ ಮಾಡ್ತಾ ಇದೆ ಎಂದು ಹೇಳಬಹುದು.

ಆದರೆ ಬ್ಯಾಟಿಂಗ್ ವಿಭಾಗಕ್ಕೆ ಬಂದರೆ ಇವರಿಬ್ಬರನ್ನು ಮೀರಿಸುವಂತಹ ಮತ್ತೊಬ್ಬ ಫಿನಿಷರ್ ಸಿಗದೇ ಇರುವಂತಹ ಸಾಧ್ಯತೆ ಕೂಡ ಇರುವುದರಿಂದಾಗಿ ಇವರನ್ನು ಆಯ್ಕೆ ಮಾಡದೆ ಇದ್ರು ಕೂಡ ಆಶ್ಚರ್ಯ ಪಡಬೇಕಾಗಿಲ್ಲ ಆದರೆ ಇವಾಗ ಇರುವಂತಹ ಸಾಧ್ಯತೆಗಳನ್ನು ಗಮನಿಸಿದರೆ ಇವರಿಬ್ರು ಆಯ್ಕೆ ಆಗೋದು ಅನುಮಾನವೇ ಸರಿ.

advertisement

Leave A Reply

Your email address will not be published.