Karnataka Times
Trending Stories, Viral News, Gossips & Everything in Kannada

Rohit Sharma: 2 ಕೋಟಿಯ ರೇಂಜ್ ರೋವರ್ ಕಾರಿಗೆ ವಿಶೇಷ ನಂಬರ್ ಬರೆಸಿದ ರೋಹಿತ್ ಶರ್ಮ!

advertisement

ಸೆಲೆಬ್ರಿಟಿಗಳು ಏನು ಮಾಡಿದರೂ ಕೂಡ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತ ಇರುತ್ತದೆ. ಕೆಲವೊಂದು ವಿಚಾರ ಮೆಚ್ಚುಗೆ ಗಳಿಸಿದರೆ ಇನ್ನೂ ಕೆಲವೊಂದು ಟ್ರೋಲ್ ಕೂಡ ಆಗಲಿದೆ. ರಾಜಕಾರಣಿಗಳು, ಸಿನೆಮಾ ತಾರೆಯರು , ಕ್ರೀಡಾ ತಾರೆಯರು ಕೂಡ ಇಂತಹ ಸಣ್ಣ ಪುಟ್ಟ ವಿಚಾರಗಳಿಗೆ ಸುದ್ದಿಯಾಗೋದು ಇಂದು ಸಾಧಾರಣ ಸಂಗತಿಯಾಗಿದೆ. ಈಗ ಇದೇ ರೀತಿ ಕ್ರಿಕೆಟ್ ಆಟಗಾರನೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗುತ್ತಿದ್ದಾರೆ. ಅವರು ಯಾರು, ಇದು ಯಾವ ವಿಚಾರ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಯಾರು ಈ ನಾಯಕ? 

IPL ತಂಡದ 17ನೇ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ಬಲಿಷ್ಠ ಆಟಗಾರರಾದ ರೋಹಿತ್ ಶರ್ಮಾ (Rohit Sharma) ಅವರು ಈಗ ಜನಪ್ರಿಯವಾಗುತ್ತಿದ್ದಾರೆ. ರಾಜಸ್ಥಾನ್ ರಾಯಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಸೋಲನ್ನು ಅನುಭವಿಸಿದ್ದು ಇತ್ತೀಚೆಗಷ್ಟೇ ಅವರ ಫ್ಯಾನ್ಸ್ ಗೆ ನಿರಾಶೆಯಾಗಿತ್ತು. ಇದರ ನಡುವೆ ಅವರು ಕ್ರಿಕೆಟ್ ಸ್ಟೇಡಿಯಂಗೆ ಲಕ್ಶೂರಿ ಕಾರಿನಲ್ಲಿ ಬಂದಿದ್ದು ಈ ವಿಚಾರ ಭಾರಿ ಮಟ್ಟದಲ್ಲಿ ಪ್ರಚಲಿತವಾಗುತ್ತಿದೆ.

ಅತ್ಯಾಕರ್ಷಕ ಕಾರು

ಸೆಲೆಬ್ರಿಟಿ ಕಾರು ಎಂದರೆ ವಿಶೇಷತೆ ಏನಾದರೂ ಇರಲೇ ಬೇಕು. ಅದೇ ರೀತಿ ರೋಹಿತ್ ಶರ್ಮಾ (Rohit Sharma) ಅವರು ಕೂಡ ಐಶಾರಾಮಿ ರೇಂಜ್ ರೋವರ್ (Range Rover) ಕಾರಿನಲ್ಲಿ ಸ್ಟೇಡಿಎಂ ಗೆ (ಎಪ್ರಿಲ್ 1) ರಂದು ಬಂದಿದ್ದು ಸದ್ಯ ಆ ಒಂದು ಕಾರಿನ ನಂಬರ್ ಪ್ಲೇಟ್ ಸಿಕ್ಕಾಪಟ್ಟೆ ಫೇಮಸ್ ಆಗುತ್ತಿದೆ. ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ನಡೆದ IPL ಮ್ಯಾಚ್ ಗೂ ಮೊದಲೇ ರೋಹಿತ್ ಶರ್ಮಾ ಅವರ ಈ ಕಾರಿನ ನಂಬರ್ ಪ್ಲೇಟ್ ಸಂಖ್ಯೆ ನೆಟ್ಟಿಗರ ಅಚ್ಚರಿಗೆ ಕಾರಣವಾಗಿದೆ.

Image Source: Youtube

advertisement

ನಂಬರ್ ಪ್ಲೇಟ್

ಭಾರತ ತಂಡದ ಹೆಮ್ಮೆಯ ಆಟಗಾರ ಐಷಾರಾಮಿ ರೇಂಜ್ ರೋವರ್ ಕಾರಿನಲ್ಲಿ ಬಂದಿದ್ದು ಆ ಕಾರು ಲಕ್ಶೂರಿ ಎಂಬುದು ಎಲ್ಲರಿಗೂ ತಿಳಿದೆ ಇದೆ ಆದರೆ ಇಲ್ಲಿ ಕಾರಿಗಿಂತಲೂ ನಂಬರ್ ಪ್ಲೇಟ್ ಬಹಳ ಟ್ರೆಂಡ್ ಆಗುತ್ತಿದೆ. ಈ ಒಂದು ಕಾರಿನ ನಂಬರ್ ಪ್ಲೇಟ್ ನ ಸಂಖ್ಯೆಯೇ ಎಲ್ಲರ ಅಚ್ಚರಿಗೆ ಕಾರಣವಾಗುತ್ತಿದೆ. ಈ ನಂಬರ್ ಪ್ಲೇಟ್ ನಲ್ಲಿ MH01E00264 ಎಂದು ಆಗಿದೆ. ರೋಹಿತ್ ಶರ್ಮಾ ಅವರ ವೃತ್ತಿ ಜೀವನದಲ್ಲಿ 264ನೇ ಸಂಖ್ಯೆ ಬಹಳ ಮಹತ್ವ ಪಡೆದಿದ್ದು ಇಲ್ಲಿ ನೆನಪಿಸಿಕೊಳ್ಳಲಾಗುತ್ತಿದೆ.

 

ವಿಶೇಷತೆ ಏನು?

ರೋಹಿತ್ ಶರ್ಮಾ ಅವರು ಭಾರತದ ಪರವಾಗಿ ಶ್ರೀಲಂಕಾದ ವಿರುದ್ಧ 2014ರಲ್ಲಿ ರೋಚಕ ಆಟ ಆಡಿದ್ದು ಏಕದಿನದ ಕ್ರಿಕೆಟ್ ನಲ್ಲಿ ಅಧಿಕ ಸ್ಕೋರ್ ಪಡೆದವರು ಇವರಾಗಿದ್ದರು. ಒಟ್ಟು 264ಸ್ಕೋರ್ ಪಡೆದಿದ್ದು ಶ್ರೀಲಂಕಾದ ವಿರುದ್ಧ ಅದ್ಭುತ ಆಟ ಪ್ರದರ್ಶನ ಮಾಡಿದ್ದಾರೆ. ಈಗ ಇದೇ ಸಂಖ್ಯೆ ಇವರ ಕಾರಿನ ನಂಬರ್ ಪ್ಲೇಟ್ ನಲ್ಲಿ ಕೂಡ ಮೂಡಿ ಬಂದಿದ್ದು ಅವರ ಅಭಿಮಾನಿಗಳಿಗೆ ಅಚ್ಚರಿಯ ಜೊತೆಗೆ ಖುಷಿ ನೀಡಿದೆ.

advertisement

Leave A Reply

Your email address will not be published.