Karnataka Times
Trending Stories, Viral News, Gossips & Everything in Kannada

Ration Card List 2024: ಹೊಸ ರೇಷನ್ ಕಾರ್ಡ್ ಪಟ್ಟಿ ಬಿಡುಗಡೆ, ನಿಮ್ಮ ಹೆಸರು ಇದೆಯಾ ಪರಿಶೀಲನೆ ಮಾಡಿ

advertisement

ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳನ್ನು ಪಡೆಯಲು ಇಂದು ರೇಷನ್ ಕಾರ್ಡ್ ಎಂಬುದು ಬಹಳ‌ ಅಗತ್ಯ ವಾಗಿದೆ. ಹಾಗಾಗಿ ಹೆಚ್ಚಿನ ಜನರು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಮಾಡಲು ಕಾಯುತ್ತಿದ್ದರು. ಹಾಗಾಗಿ ಎಪ್ರಿಲ್ ಒಂದರಿಂದ ಹೊಸ ಕಾರ್ಡ್ ಪಡೆಯಲು ಆಹಾರ ‌ಇಲಾಖೆಯು ಅವಕಾಶ ನೀಡಿದ್ದು ಹೆಚ್ಚಿನ ಜನತೆ ಈ ಹೊಸ ರೇಷನ್ ಕಾರ್ಡ್ (New Ration Card) ಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ.

ಆದಾಯದ ಮೇರೆಗೆ ಹಂಚಿಕೆ:

ಹೊಸ ರೇಷನ್ ಕಾರ್ಡ್ (New Ration Card) ಅನ್ನು ವಾರ್ಷಿಕ ಆದಾಯದ ಮೇರೆಗೆ ಅಂತ್ಯೋದಯ, ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಎಂದು ವಿಂಗಡಣೆ ಮಾಡುವ ಮೂಲಕ‌ ಕಾರ್ಡ್ ವಿತರಣೆ ಮಾಡುತ್ತದೆ.ಬಡತನ ರೇಖೆಗಿಂತ ಕೆಳಗೆ ಇದ್ದರೆ ಬಿಪಿಎಲ್ ಕಾರ್ಡ್ ಅನ್ನು ವಿತರಣೆ ಮಾಡಲಿದೆ.

ಗ್ರಾಮೀಣ ಪಟ್ಟಿ ಬಿಡುಗಡೆ:

ಇದೀಗ ಹೊಸ ಪಡಿತರ ಗ್ರಾಮೀಣ ಪಟ್ಟಿ ಬಿಡುಗಡೆ ಮಾಡಿದ್ದು ನೀವು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕೃತ ವೆಬ್‌ಸೈಟ್‌ www.ahara.kar.nic.in ಮೂಲಕ ಪರಿಶೀಲನೆ ಮಾಡಬಹುದು.

ಪರಿಶೀಲನೆ‌ ಮಾಡಿ:

advertisement

ಮೊದಲಿಗೆ ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಈ ಸ್ಥಿತಿ ಎನ್ನುವ ಆಯ್ಕೆ ಮೇಲೆ ಮೊದಲು ಕ್ಲಿಕ್ ಮಾಡಿ‌. ಇದರಲ್ಲಿ ಗ್ರಾಮೀಣ ಅಥವಾ ಹಳ್ಳಿವಾರು ಪಡಿತರ ಪಟ್ಟಿ ಕಾಣಿಸಲಿದ್ದು ನಿಮ್ಮ ಹೆಸರು ಜಿಲ್ಲೆ, ಗ್ರಾಮ, ಹೋಬಳಿ ಇತ್ಯಾದಿ ವಿವರಗಳನ್ನು ಸಲ್ಲಿಕೆ ಮಾಡಬೇಕು. ಈ ಪಟ್ಟಿಯಲ್ಲಿ‌ ನಿಮ್ಮ ಹೆಸರು ಇದ್ದರೆ ನಿಮಗೆ‌ ಹೊಸ ಕಾರ್ಡ್ ಸಿಗಲಿದೆ.

ಪಡಿತರ ಚೀಟಿ ಪಡೆಯಲು ಈ ಅರ್ಹತೆ ಬೇಕು:

 

Image Source: News Next Live

 

  • ಪಡಿತರ ಚೀಟಿ (Ration Card) ಪಡೆಯಲು ಭಾರತೀಯ ನಿವಾಸಿ ಆಗಿದ್ದರೆ,ಕರ್ನಾಟಕದಲ್ಲಿ ವಾಸ ಮಾಡುತ್ತಿದ್ದರೆ ಈ ಕಾರ್ಡ್ ಸಿಗಲಿದೆ.
  • ಪಡಿತರ ಚೀಟಿ ಇಲ್ಲದಿರುವವರು ಈ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು
  • ಹೊಸದಾಗಿ ಮದುವೆಯಾದ ದಂಪತಿಗಳು ಕೂಡ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಕೆ ಮಾಡಬಹುದು.

ಬಿಪಿಎಲ್ ಕಾರ್ಡ್ ಗೆ ಅರ್ಹತೆ:

 

Image Source: DNA India

 

  • ಇನ್ನು ಬಡತನ ರೇಖೆಗಿಂತ ಕೆಳಗಿದ್ದ ಜನರಿಗೆ ಈ ಬಿಪಿಎಲ್ ಕಾರ್ಡ್ ಲಭ್ಯವಾಗುತ್ತದೆ
  • ಸರ್ಕಾರಿ ನೌಕರಿಯಲ್ಲಿರುವವರು ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸುವಂತಿಲ್ಲ
  • ಹೆಚ್ಚಿನ ಭೂಮಿ ಆದಾಯ ಇದ್ದವರಿಗೆ ಈ ಕಾರ್ಡ್ ಇಲ್ಲ
  • ಗ್ರಾಮೀಣ ಪ್ರದೇಶದಲ್ಲಿ 12,000 ರೂಪಾಯಿಗಿಂತಲೂ ಕಡಿಮೆ ಆದಾಯ ಹೊಂದಿರುವವರು ಬಿಪಿಎಲ್‌ ಕಾರ್ಡ್‌ಗೆ ಅರ್ಜಿ ಹಾಕಬಹುದು‌

advertisement

Leave A Reply

Your email address will not be published.