Karnataka Times
Trending Stories, Viral News, Gossips & Everything in Kannada

KSRTC: KSRTC ಯಲ್ಲಿ ಉಚಿತವಾಗಿ ಪ್ರಯಾಣಿಸುತ್ತಿರುವ ಮಹಿಳೆಯರಿಗೆ ಕೊನೆಗೂ ಹೊಸ ರೂಲ್ಸ್! ರಾಜ್ಯದ್ಯಂತ ಜಾರಿಗೆ

advertisement

ಸ್ನೇಹಿತರೆ, ಕರ್ನಾಟಕ ರಾಜ್ಯ ಸಾರಿಗೆ ರಸ್ತೆ ಸಾರಿಗೆ ನಿಗಮದ ಮುಖ್ಯ ಸಂಚಾರ ವ್ಯವಸ್ಥಾಪಕರು, ಇತ್ತೀಚಿಗಷ್ಟೇ ಹೊಸ ಆದೇಶವನ್ನು ಹೊರಡಿಸಿದ್ದು, ಅದರ ಅನ್ವಯ ಉಚಿತ ಟಿಕೆಟ್(Free Ticket) ಪಡೆದು ಬಸ್ ನಲ್ಲಿ ಪ್ರಯಾಣ ಮಾಡುವ ಮಹಿಳೆಯರು ತಮ್ಮ ಟಿಕೆಟನ್ನು ಕಳೆದುಕೊಂಡರೆ ಬಸ್ಸಿನ ನಿರ್ವಾಹಕರ ಮೇಲೆ ದಂಡ ಹಾಕಲಾಗುತ್ತದೆ. ಹೌದು ಸ್ನೇಹಿತರೆ ಬಸ್ ಕಂಡಕ್ಟರ್ ಗಳು ಶಕ್ತಿ ಯೋಜನೆಯಡಿ(Shakti scheme) ಮಹಿಳೆಯರಿಗೆ ವಿತರಿಸುವ ಪಿಂಕ್ ಟಿಕೆಟ್ ಗಳನ್ನೇನಾದರೂ ಮಹಿಳೆಯರು ಕಳೆದುಕೊಂಡರೆ, ಅದರ ಪ್ರತಿ ಟಿಕೆಟ್ಗು ಹತ್ತು ರೂಗಳ ದಂಡವನ್ನು ನಿರ್ವಾಹಕರ ಹಾಕಲಾಗುತ್ತದೆ. ಶಕ್ತಿ ಯೋಜನೆಯಿಂದ ಪ್ರತಿ ಬಸ್ ನಲ್ಲೂ ಒತ್ತಡದಿಂದ ಕೆಲಸ ಮಾಡುತ್ತಿರುವ ನೌಕರರಿಗೆ ಮತ್ತಷ್ಟು ಸಮಸ್ಯೆಯನ್ನು ತರುವ ಅಧಿಸೂಚನೆ ಇದಾಗಿದೆ ಎಂಬ ವಿರೋಧ ವ್ಯಕ್ತವಾಗುತ್ತಿದೆ.

ಟಿಕೆಟ್ ವಿತರಣ ಯಂತ್ರ ಕೈಕೊಟ್ಟರೆ ಮಹಿಳೆಯರಿಗೆ ಪಿಂಕ್ ಟಿಕೆಟ್ ನೀಡಲಾಗುತ್ತೆ!

ನಿರ್ವಾಹಕರು ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಟಿಕೆಟ್ ವಿತರಣೆ(Free Ticket Distribution) ಮಾಡುವ ವೇಳೆ ಅವರು ಬಳಸುವಂತಹ ಟಿಕೆಟ್ ವಿತರಣೆ ಮಾಡುವ ಯಂತ್ರ ಕೈಕೊಟ್ಟ ಸಮಯದಲ್ಲಿ ಪ್ರಯಾಣಿಕರಿಗೆ ಟಿಕೆಟ್ ವಿತರಿಸಲು ಹಸ್ತ ಚಾಲಿತ ಟಿಕೆಟ್ಗಳನ್ನು(Ticket should be issued manually) ಮುಂಗಡವಾಗಿ ಪ್ರಿಂಟ್ ಮಾಡಿರಲಾಗುತ್ತದೆ. ಆದರೆ ಆ ಟಿಕೆಟ್ ಗಳಲ್ಲಿ ಘಟಕ, ವಿಭಾಗ, ಎಲ್ಲಿಂದ, ಎಲ್ಲಿಗೆ ಮತ್ತು ಅನುಸೂಚಿ ಎಂಬ ಆಯ್ಕೆಗಳಲ್ಲಿ ಸ್ಥಳವನ್ನು ಖಾಲಿ ಬಿಡಲಾಗಿರುತ್ತದೆ. ಇದೆಲ್ಲವನ್ನು ನಿರ್ವಾಹಕರು ಭರ್ತಿ ಮಾಡಿ ಅವರ ಸಹಿಯನ್ನು ಹಾಕಿ ಪಿಂಕ್ ಟಿಕೆಟ್ ಗಳನ್ನು ಮಹಿಳೆಯರಿಗೆ ವಿತರಣೆ ಮಾಡಬೇಕು.

Image Source: ThePrint

advertisement

ಪಿಂಕ್ ಟಿಕೆಟ್ನಿಂದ ಕಂಡಕ್ಟರ್ಗಳ ಹೊರೆ ಹೆಚ್ಚು!

ಶಕ್ತಿ ಯೋಜನೆಯಿಂದಾಗಿ ಬಸ್ನಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಾಗಿರುವ ಕಾರಣ ಈಗಾಗಲೇ ಒತ್ತಡದಲ್ಲಿ ಕೆಲಸ ಮಾಡುವ ನಿರ್ವಾಹಕನಿಗೆ ಇದೆಲ್ಲವನ್ನು ಭರ್ತಿ ಮಾಡಿ ಟಿಕೆಟ್ ಕೊಡುವ ಕೆಲಸ ಆತನ ಹೊರೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಪುರುಷರ ಟಿಕೆಟ್ ನಲ್ಲಿ ಎಲ್ಲಿಂದ ಎಲ್ಲಿಗೆ ಎಂಬುದನ್ನು ಮೊತ್ತದ ಮೂಲಕ ಸೂಚಿಸಿರುವಂತೆ ಮಹಿಳೆಯರ ಉಚಿತ ಟಿಕೆಟ್ನಲ್ಲಿ ನಮೂದಿಸಿರುವುದಿಲ್ಲ ಹೀಗಾಗಿ ಅದೆಲ್ಲವನ್ನು ಕಂಡಕ್ಟರ್ಗಳು ಭರ್ತಿ ಮಾಡಬೇಕಾಗುತ್ತದೆ.

ಮಹಿಳೆಯರು ಪಿಂಕ್ ಟಿಕೆಟ್ ಕಳೆದುಕೊಂಡರೆ ಕಂಡಕ್ಟರ್ಗಳಿಗೆ ₹10 ದಂಡ!

ಯಂತ್ರ ಕೆಲಸ ಮಾಡದೆ ಇರುವಂತಹ ಸಂದರ್ಭದಲ್ಲಿ ಬಸ್ನಲ್ಲಿ ಪ್ರಯಾಣ ಬೆಳೆಸುವ ಪುರುಷರಿಗೆ ಹಾಗೂ ಮಹಿಳೆಯರಿಗೆ ವಿಭಿನ್ನವಾದ ಟಿಕೆಟ್ ಗಳನ್ನು ಇನ್ನು ಮುಂದೆ ವಿತರಣೆ ಮಾಡಲಾಗುತ್ತದೆ. ಪುರುಷರ ಟಿಕೆಟ್ ನಲ್ಲಿ ಎಲ್ಲಿಂದ ಎಲ್ಲಿಗೆ ಎಂಬ ಮಾಹಿತಿಯನ್ನು ಮೊತ್ತದ ಮೂಲಕ ತಿಳಿಯಬಹುದು. ಆದರೆ ಮಹಿಳೆಯರಿಗೆ ಹೊಸದಾಗಿ ನೀಡುತ್ತಿರುವ ಪಿಂಕ್ ಟಿಕೆಟ್(Pink Ticket) ನಲ್ಲಿ ಸ್ವತಃ ನಿರ್ವಾಹಕರೇ ನಮೂದಿಸಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನಿರ್ವಾಹಕರು ಕೊಟ್ಟ ಟಿಕೆಟ್ ಅನ್ನು ಮಹಿಳೆಯರು ಕಳೆದುಕೊಂಡರೆ ನಿರ್ವಾಹಕರ ಮೇಲೆ ಪ್ರತಿ ಟಿಕೆಟ್ ರೂ. 10 ದಂಡವನ್ನು ಹಾಕಲಾಗುತ್ತದೆ. ಈ ಕಾರಣದಿಂದಾಗಿ ಮುಖ್ಯ ಸರ್ಕಾರ ವ್ಯವಸ್ಥಾಪಕರ ವಿರುದ್ಧ ಸಾರಿಗೆ ನೌಕರರು ತಮ್ಮ ಬೇಸರವನ್ನು ವ್ಯಕ್ತಪಡಿಸುತ್ತಿದ್ದಾರೆ.

advertisement

Leave A Reply

Your email address will not be published.