Karnataka Times
Trending Stories, Viral News, Gossips & Everything in Kannada

Bank: ಬೆಳ್ಳಂಬೆಳಿಗ್ಗೆ ಈ ಬ್ಯಾಂಕಿನಲ್ಲಿ ಹಣ ಇಟ್ಟವರಿಗೆ ಹೊಸ ರೂಲ್ಸ್! ಇಂತಹ ಅಕೌಂಟ್ ಗಳು ಬಂದ್ ಆಗಲಿವೆ

advertisement

ಪಬ್ಲಿಕ್ ಸೆಕ್ಟರ್ ನಲ್ಲಿರುವಂತಹ ಜನಪ್ರಿಯ ಬ್ಯಾಂಕು (Bank) ಗಳಲ್ಲಿ ಒಂದಾಗಿರುವಂತಹ ಪಂಜಾಬ್ ನ್ಯಾಷನಲ್ ಬ್ಯಾಂಕ್(PNB) ತನ್ನ ಗ್ರಾಹಕರಿಗೆ ಒಂದು ಅಲರ್ಟ್ ಹೊರಡಿಸಿದೆ. ಒಂದು ವೇಳೆ ನಿಮ್ಮ ಖಾತೆ 3 ವರ್ಷಗಳಿಂದ ಯಾವುದೇ ಟ್ರಾನ್ಸಾಕ್ಷನ್ ಅನ್ನು ಮಾಡದೆ ಹೋದಲ್ಲಿ ಹಾಗೂ ಈ ಖಾತೆಯಲ್ಲಿ ಯಾವುದೇ ಮೊತ್ತದ ಹಣ ಇಲ್ಲದೆ ಹೋದಲ್ಲಿ ಒಂದು ತಿಂಗಳ ನಂತರ ಇಂತಹ ಖಾತೆಗಳನ್ನು ನಿಷ್ಕ್ರಿಯಗೊಳಿಸಲಾಗುವುದು ಎಂಬುದಾಗಿ ಅಧಿಕೃತವಾಗಿ ತಿಳಿದು ಬಂದಿದೆ. ಈ ಅಲರ್ಟ್ ಅನ್ನು ತನ್ನ ಗ್ರಾಹಕರಿಗೆ ಬ್ಯಾಂಕ್ ನೀಡಿದೆ. ಈ ಮೂಲಕ ಯಾವುದೇ ರೀತಿಯಲ್ಲಿ ಇಂತಹ ಖಾತೆಗಳನ್ನು ಮೋಸ ಮಾಡುವುದಕ್ಕೆ ಉಪಯೋಗಿಸದೆ ಇರಲಿ ಎನ್ನುವ ಸುರಕ್ಷತಾ ಕ್ರಮದ ಕಾರಣದಿಂದಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳುವಂತಹ ವಿಚಾರವನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್ ಹೊರಡಿಸಿದೆ.

ಈ ರೀತಿಯ ಅಕೌಂಟ್ಗಳ ಮೇಲೆ ಯಾವುದೇ ರೀತಿಯ ಪರಿಣಾಮ ಇಲ್ಲ

ಡಿ ಮ್ಯಾಟ್ ಖಾತೆಗಳ ಜೊತೆಗೆ ಲಿಂಕ್ ಆಗಿರುವಂತ ಅಕೌಂಟ್ಗಳು, ಲಾಕರ್ ಜೊತೆಗೆ ಲಿಂಕ್ ಆಗಿರುವಂತಹ ಖಾತೆಗಳು, 25 ವರ್ಷದವರಿಗಿಂತ ಕಡಿಮೆ ವಯಸ್ಸಿನ ಜನರ ಖಾತೆಗಳು, ಸುಕನ್ಯಾ ಸಮೃದ್ಧಿ ಯೋಜನೆ ಖಾತೆ, ಪ್ರಧಾನಿ ಮಂತ್ರಿ ಜೀವನ್ ಜ್ಯೋತಿ ವಿಮಾ ಯೋಜನೆಯ ಖಾತೆ, APY, DBT ಗಳಂತಹ ಖಾತೆಗಳ ಮೇಲೆ ಈ ನಿಯಮ ಯಾವುದೇ ರೀತಿಯಲ್ಲಿ ಪರಿಣಾಮ ಬೀರುವುದಿಲ್ಲ. ಇನ್ನು ಇನ್ಕಮ್ ಟ್ಯಾಕ್ಸ್ ಸೇರಿದಂತೆ ಯಾವುದೇ ರೀತಿಯ ಕಾನೂನು ಪ್ರಕಾರ ಪ್ಲೀಸ್ ಆಗಿರುವಂತಹ ಖಾತೆಗಳ ಮೇಲೆ ಕೂಡ ಈ ರೀತಿಯ ನಿಯಮಗಳು ಯಾವುದೇ ರೀತಿಯಲ್ಲಿ ಪರಿಣಾಮ ಬೀರುವುದಿಲ್ಲ.

advertisement

Image Source: ThePrint

ಡೈಲಿ ಪೇಮೆಂಟ್ ಮಾಡುವಂತಹ ವಿಧಾನದಲ್ಲಿ ಅನಿರೀಕ್ಷಿತ ಏರಿಕೆ!

ಇನ್ನೊಂದು ಕಡೆಯಲ್ಲಿ ಭಾರತದ ಮತ್ತೊಂದು ಪ್ರತಿಷ್ಠಿತ ಬ್ಯಾಂಕುಗಳಲ್ಲಿ ಒಂದಾಗಿರುವಂತಹ ಐಸಿಐಸಿಐ ಬ್ಯಾಂಕ್ (ICICI Bank) ವಿದೇಶದಲ್ಲಿ ನೆಲೆಸಿರುವ ಅಂತಹ ಭಾರತೀಯರಿಗೆ ಇಂಟರ್ನ್ಯಾಷನಲ್ ನಂಬರ್ ಅನ್ನು ಬಳಕೆ ಮಾಡುವ ಮೂಲಕ ಆನ್ಲೈನ್ ಟ್ರಾನ್ಸಾಕ್ಷನ್ ಮಾಡುವಂತಹ ಅವಕಾಶವನ್ನು ನೀಡುವುದನ್ನು ಹೆಚ್ಚು ಮಾಡಿದ್ದು ಇದನ್ನು ಬಳಸುವಂತಹ ಗ್ರಾಹಕರ ಸಂಖ್ಯೆಯಲ್ಲಿ ಕೂಡ ಹೆಚ್ಚಾಗಿದೆ. ಇವರು ಯಾವುದೇ ರೀತಿಯ ಭಾರತೀಯ ಯುಪಿಐ ಐಡಿ ಗೆ ಅಥವಾ ಕ್ಯೂಆರ್ ಸ್ಕ್ಯಾನ್ ಕೋಡ್ ಅಂತರಾಷ್ಟ್ರೀಯ ಟ್ರಾನ್ಸಾಕ್ಷನ್ ಅನ್ನು ಸುಲಭವಾಗಿ ಮಾಡಬಹುದಾಗಿದೆ. ಈ ಮೂಲಕ ಡೈಲಿ ಹಣವನ್ನು ಟ್ರಾನ್ಸ್ಫರ್ ಮಾಡುವಂತಹ ವಿಧಾನ ಕೂಡ ಇಂತಹ ಗ್ರಾಹಕರಲ್ಲಿ ಹೆಚ್ಚಾಗಿದೆ.

ಈ ಹಿಂದೆ ಕೂಡ ಐಸಿಐಸಿಐ ಬ್ಯಾಂಕಿನ ಗ್ರಾಹಕರು ತಮ್ಮ NRI / NRO ಅಕೌಂಟಿಗೆ ಲಿಂಕ್ ಆಗಿರುವಂತಹ ಇಂಟರ್ನ್ಯಾಷನಲ್ ಮೊಬೈಲ್ ನಂಬರ್ ನಿಂದ ಹಣವನ್ನು ಟ್ರಾನ್ಸ್ಫರ್ ಮಾಡುವಂತಹ ಕೆಲಸವನ್ನು ಮಾಡ್ತಾ ಇದ್ರು. ಮೊದಲು ಇದಕ್ಕಾಗಿ ಭಾರತದಲ್ಲಿರುವಂತಹ ಬ್ಯಾಂಕಿನ ಜೊತೆಗೆ ಭಾರತದ ಮೊಬೈಲ್ ನಂಬರ್ ಅನ್ನು ಲಿಂಕ್ ಮಾಡುವ ಮೂಲಕ ಹಣವನ್ನು ಟ್ರಾನ್ಸ್ಫರ್ ಮಾಡಬೇಕಾಗಿ ಬರುತ್ತಿತ್ತು. ಈಗ ಈ ಹೊಸ ನಿಯಮದ ಮೂಲಕ ಬಳಕೆದಾರರ ಸಂಖ್ಯೆ ಕೂಡ ಹೆಚ್ಚಾಗಿದ್ದು ಒಟ್ಟಾರೆ ಟ್ರಾನ್ಸಾಕ್ಷನ್ ಆಗುತ್ತಿರುವಂತಹ ಹಣದ ಮೊತ್ತ ಕೂಡ ಹೆಚ್ಚಾಗಿದೆ.

advertisement

Leave A Reply

Your email address will not be published.