Karnataka Times
Trending Stories, Viral News, Gossips & Everything in Kannada

CM Siddaramaiah: 60 ವರ್ಷ ದಾಟಿದ ಕರ್ನಾಟಕದ ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್! ಸಿದ್ದರಾಮಯ್ಯ ಘೋಷಣೆ

advertisement

ಕರ್ನಾಟಕದಲ್ಲಿ ಸರಕಾರಿ ಬಸ್ ಗಳಿಗೆ ಮಹಿಳೆಯರಿಗೆ ಉಚಿತ ಬಸ್ ವ್ಯವಸ್ಥೆ ನೀಡುವ ಶಕ್ತಿ ಯೋಜನೆ ಜನಪ್ರಿಯ ಆಗಿದ್ದಂತೆ ಬಸ್ ನಲ್ಲಿ ಪ್ರಯಾಣಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ. ಸರಕಾರಿ ಬಸ್ ಈಗ ನಿತ್ಯ ಓಡಾಟಕ್ಕೂ ಸದಾ ಜನಜಂಗುಳಿಯಿಂದ ತುಂಬುತ್ತಿದೆ‌. ಈ ನೆಲೆಯಲ್ಲಿ ಸರಕಾರಿ ಬಸ್ ನಲ್ಲಿ ಹಿರಿಯ ನಾಗರಿಕರಿಗೆ ಮತ್ತು ಮಕ್ಕಳಿಗೆ ಉಚಿತ ಪ್ರಯಾಣದ ಅವಕಾಶ ನೀಡಬೇಕು ಎಂಬ ಮನವಿ ಬಂದಿದ್ದು ಈಗಾಗಲೇ ಹಿರಿಯ ನಾಗರಿಕರಿಗೆ ಉಚಿತ ಬಸ್ ಪಾಸ್ (Free Bus Pass) ನೀಡಲು ಸರಕಾರ ಮುಂದಾಗುತ್ತಿದೆ.

ಹಿರಿಯ ನಾಗರಿಕರಿಗೆ, ಮಕ್ಕಳಿಗೆ ಪ್ರಯಾಣ ಮಾಡಲು ಸರಕಾರಿ ಬಸ್ ನಲ್ಲಿ ಉಚಿತ ವ್ಯವಸ್ಥೆ ಅಗತ್ಯವಿದೆ. ಮಹಿಳೆಯರಿಗೆ ನೀಡಿದ್ದ ಉಚಿತ ಪ್ರಯಾಣದ ಶಕ್ತಿ ಯೋಜನೆಯಂತೆ ರಾಜ್ಯಾದ್ಯಂತ ಹಿರಿಯ ನಾಗರಿಕರಿಗೆ ಉಚಿತ ಸೇವೆ ಒದಗಿಸಬೇಕು ಎಂಬ ಮನವಿ ಈ ಹಿಂದೆ ಅನೇಕ ಸಲ ಮನವಿ ಮಾಡಲಾಗಿದೆ. ಹಿರಿಯ ನಾಗರಿಕರ ಮತ್ತು ವಿಕಲಚೇತನದ ಕಲ್ಯಾಣ ಇಲಾಖೆಯಿಂದ ಪ್ರತಿ ವರ್ಷ ಉಚಿತ ಬಸ್ ಪಾಸ್ (Free Bus Pass) ಗೆ ಅರ್ಜಿ ಆಹ್ವಾನಿಸಲಾಗಿದೆ. ಹಾಗಾಗಿ ಕೆಲ ಉಪಯುಕ್ತ ಮಾಹಿತಿ ಇಲ್ಲಿದೆ.

ಮೀಸಲಾತಿ ಇದೆ:

 

Image Source: Vijay Karnataka

 

ಖಾಸಗಿ ಹಾಗೂ ಸರಕಾರಿ ಬಸ್ ನಲ್ಲಿ ಸೀಟ್ ಹಂಚಿಕೆ ಮಾಡುವಾಗ ಮಹಿಳೆಯರಿಗೆ, ಹಿರಿಯ ನಾಗರಿಕರಿಗೆ ಮತ್ತು ಅಂಗವಿಕಲರಿಗೆ ಇಂತಿಷ್ಟು ಪ್ರಮಾಣದಲ್ಲಿ ಸೀಟ್ ಮೀಸಲಾತಿ ಇದೆ. ಅದೇ ತರನಾಗಿ BMTC, KSRTC ಬಸ್ ನಲ್ಲಿ ಹಿರಿಯನಾಗರಿಕರಿಗೆ ರಿಯಾಯಿತಿ ದರ ಪ್ರಯಾಣ ಹಾಗೂ ಅರ್ಜಿ ಹಾಕಿದ್ದವರಿಗೆ ಉಚಿತ ಬಸ್ ಪಾಸ್ (Free Bus Pass) ಕೂಡ ಇದೆ. ಹಾಗಾಗಿ ಅದಕ್ಕೆ ಕೆಲವು ದಾಖಲಾತಿ ಪುರಾವೆ ಸಹ ಕೇಳಲಾಗುತ್ತದೆ. ಇದರೊಂದಿಗೆ ವಿಮಾನ, ರೈಲ್ವೇ ಹಾಗೂ ಬಸ್ ನಲ್ಲಿ ರಿಯಾಯಿತಿ ದರ ಪ್ರಯಾಣಕ್ಕೆ ಅನುಮತಿಸಲಾಗಿದೆ.

 

advertisement

Image Source: The Hindu

 

ಈ ದಾಖಲೆ ಅಗತ್ಯ:

  • ಭಾರತೀಯ ನಿವಾಸಿಯಾಗಿದ್ದು ಕರ್ನಾಟಕದಲ್ಲಿ ವಾಸ್ತವ್ಯ ಹೊಂದಿರಬೇಕು.
  • ವಯಸ್ಸಿನ ದೃಢೀಕರಣ ಪತ್ರ ಅಗತ್ಯವಾಗಿದೆ.
  • ಪಾಸ್ ಪೋರ್ಟ್ ಫೋಟೊ ಅಗತ್ಯ.
  • ಆಧಾರ್ ಕಾರ್ಡ್ ಪ್ರತಿ ನೀಡಬೇಕು.
  • ವಾಸ್ತವ್ಯ ಪುರಾವೆ ಹಾಗೂ ದಾಖಲಾತಿ ಸರಿ ಇರಬೇಕು.
  • ಸಮಾಜದ ಅಹಿತ ಕರ ಘಟನೆಯಲ್ಲಿ ಪಾಲ್ಗೊಂಡಿರಬಾರದು ಅಂತವರಿಗೆ ಬಸ್ ಪಾಸ್ ಸಿಗಲಾರದು.
  • ಆನ್ಲೈನ್ ಮೂಲಕ ಅರ್ಜಿ ಹಾಕುವ ಕಾರಣ OTP ಗಾಗಿ ಫೋನ್ ನಂಬರ್ ಅಗತ್ಯ.
  • ಹಿರಿಯ ನಾಗರಿಕರಿಗೆ ಮಾತ್ರವೇ ಈ ಯೋಜನೆ ಸಿಗಲಿದೆ.

ಇಲ್ಲಿ ಅರ್ಜಿ ಸಲ್ಲಿಸಿ:

ನೀವು ಗ್ರಾಮ ಒನ್ (Grama One) , ಕರ್ನಾಟಕ ಒನ್ (Karnataka One) ಹಾಗೂ ಬೆಂಗಳೂರು ಒನ್ (Bangalore One) ಕೇಂದ್ರದ ಮೂಲಕ ಅರ್ಜಿ ಸಲ್ಲಿಸಿ ಉಚಿತ ಬಸ್ ಪಾಸ್ ಪಡೆಯಬಹುದು. ಅಥವಾ ಹತ್ತಿರದ ಕಂಪ್ಯೂಟರ್ ಸೆಂಟರ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.60ವರ್ಷ ಮೇಲ್ಪಟ್ಟವರು https://ksrtc.in ಮೂಲಕ ಲಾಗಿನ್ ಆಗಿ ಅಧಿಕ ಮಾಹಿತಿ ಪಡೆಯಬಹುದು.

advertisement

Leave A Reply

Your email address will not be published.