Karnataka Times
Trending Stories, Viral News, Gossips & Everything in Kannada

Dubai Gold Price: 5 ವರ್ಷಗಳ ಹಿಂದೆ ದುಬೈನ ಚಿನ್ನದ ಬೆಲೆ ಎಷ್ಟಿತ್ತು ಗೊತ್ತಾ?

advertisement

ಭಾರತದಲ್ಲಿ ಪ್ರತಿಯೊಬ್ಬರು ಕೂಡ ತಮ್ಮ ಜೀವನದಲ್ಲಿ ಹೆಚ್ಚಾಗಿ ಹಣವನ್ನು ಸಂಪಾದನೆ ಮಾಡಬೇಕು ಎನ್ನುವಂತಹ ಆಸೆಯನ್ನು ಹೊಂದಿದಾಗ ಪ್ರತಿಯೊಬ್ಬರು ದುಬೈಗೆ ಹೋಗುವಂತಹ ಪ್ಲಾನಿಂಗ್ ಮಾಡ್ತಾರೆ. ಅಷ್ಟರ ಮಟ್ಟಿಗೆ ದುಬೈಗೆ ಹೋಗಿ ಭಾರತಕ್ಕಿಂತ ಹೆಚ್ಚಿನ ಹಣವನ್ನು ಸಂಪಾದನೆ ಮಾಡುವಂತಹ ಉದ್ಯೋಗಾವಕಾಶಗಳು ದುಬೈನಲ್ಲಿವೆ. ದುಬೈ ಕೇವಲ ಉದ್ಯೋಗಾವಕಾಶಗಳಿಗೆ ಮಾತ್ರವಲ್ಲದೆ ಐಷಾರಾಮಿ ಜೀವನಕ್ಕೂ ಕೂಡ ಹೇಳಿ ಮಾಡಿಸಿದ ಪ್ರದೇಶವಾಗಿದೆ.

ಸದ್ಯದ ಮಟ್ಟಿಗೆ ನೋಡುವುದಾದರೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ನಾಯಕತ್ವದಲ್ಲಿ ದುಬೈ ಹಾಗೂ ಭಾರತ ದೇಶದ ನಡುವಿನ ಸಂಬಂಧದ ಸಾಮರಸ್ಯ ಕೂಡ ಹೆಚ್ಚಾಗಿದೆ.

ಇನ್ನು ಚಿನ್ನದ ಖರೀದಿಯ (Gold Purchase) ವಿಚಾರಕ್ಕೆ ಬಂದರೆ ಕೂಡ ದುಬೈ ಹೇಳಿ ಮಾಡಿಸಿದ ಜಾಗ ಎಂದು ಹೇಳಬಹುದಾಗಿದೆ. ಭಾರತಕ್ಕೆ ಹೋಲಿಸಿದರೆ ಚಿನ್ನವನ್ನು ಅದಕ್ಕಿಂತಲೂ ಕಡಿಮೆ ಬೆಲೆಯಲ್ಲಿ ನೀವು ದುಬೈಯಲ್ಲಿ ಖರೀದಿಸಿ ತರಬಹುದಾಗಿದೆ. ಆದರೆ ದುಬೈ ನಿಂದ ಚಿನ್ನವನ್ನ ಭಾರತಕ್ಕೆ ಖರೀದಿಸಿ ತರೋದಕ್ಕೆ ಕೂಡ ಸಾಕಷ್ಟು ಲಿಮಿಟ್ ಇದೆ ಅನ್ನೋದನ್ನ ನಾವು ತಿಳಿದುಕೊಳ್ಳಬೇಕಾಗಿರುತ್ತದೆ.

 

Image Source: www.snhdisposal.com

 

advertisement

ನಿಗದಿತ ಲಿಮಿಟ್ ಒಳಗೆ ಇದ್ದರೆ ಮಾತ್ರ ದುಬೈ ನಿಂದ ಚಿನ್ನವನ್ನ ಕೆಲವೊಂದು ನಿರ್ದಿಷ್ಟ ಪ್ರಮಾಣದಲ್ಲಿ ಭಾರತಕ್ಕೆ ತರುವಂತಹ ಅವಕಾಶವನ್ನು ನೀಡಲಾಗುತ್ತದೆ. ಅದಕ್ಕಿಂತಲೂ ಮೀರಿ ಚಿನ್ನವನ್ನು ಭಾರತಕ್ಕೆ ತರುವಂತಹ ಪ್ರಯತ್ನ ಮಾಡಿದರೆ ಅದರ ಮೇಲೆ ದಂಡವನ್ನು ಕಟ್ಟಬೇಕಾಗುತ್ತದೆ. ಇನ್ನು ಇವತ್ತಿನ ಈ ಲೇಖನದ ಮೂಲಕ 5 ವರ್ಷಗಳ ಹಿಂದೆ ಅಂದ್ರೆ 2019ನೇ ಇಸ್ವಿಯಲ್ಲಿ ಚಿನ್ನದ ಬೆಲೆ ಎಷ್ಟು ಇತ್ತು ಅನ್ನೋದನ್ನ ಹೇಳೋದಕ್ಕೆ ಹೊರಟಿದ್ದೇವೆ. ಹಾಗಿದ್ರೆ ಬನ್ನಿ ಐದು ವರ್ಷಗಳ ಹಿಂದೆ ದುಬೈನಲ್ಲಿ ಚಿನ್ನದ ಬೆಲೆ (Gold Price) ಎಷ್ಟಾಗಿದೆ ಎಂಬುದನ್ನು ಅರಿತುಕೊಳ್ಳೋಣ.

2019 ರಲ್ಲಿ ಚಿನ್ನದ ಬೆಲೆ ದುಬೈಯಲ್ಲಿ ಎಷ್ಟಾಗಿತ್ತು ಗೊತ್ತಾ?

 

Image Source: Facebook

 

2019ರಲ್ಲಿ ಅಂದರೆ ಐದು ವರ್ಷಗಳ ಹಿಂದೆ ದುಬೈನಲ್ಲಿ ಚಿನ್ನದ ಬೆಲೆ ಎಷ್ಟಾಗಿತ್ತು ಎನ್ನುವುದನ್ನು ಸಂಪೂರ್ಣ ವಿವರವಾಗಿ ತಿಳಿಯೋಣ ಬನ್ನಿ. 24 ಕ್ಯಾರೆಟ್ ಪರಿಶುದ್ಧತೆಯನ್ನು ಹೊಂದಿರುವಂತಹ 10 ಗ್ರಾಂ ಚಿನ್ನದ ಬೆಲೆ (Gold Price) ದುಬೈನಲ್ಲಿ 2019 ರಲ್ಲಿ 1807.50 ದಿರ್ಹಮ್ ಆಗಿತ್ತು. ಅಂದರೆ ಇಂದಿನ ರೂಪಾಯಿ ಬೆಲೆಗೆ ಇದನ್ನು ಪರಿವರ್ತನೆ ಮಾಡಿ ನೋಡಿದರೆ 41,144.23 ರೂಪಾಯಿಗಳಾಗಿತ್ತು.

ಇನ್ನು ಅದೇ ರೀತಿಯಲ್ಲಿ 22 ಕ್ಯಾರೆಟ್ ಪರಿಶುದ್ಧತೆಯನ್ನು ಹೊಂದಿರುವಂತಹ 10 ಗ್ರಾಂ ಚಿನ್ನದ ಬೆಲೆ 1700 ದಿರಮ್ ಆಗಿತ್ತು. ಅಂದರೆ ಭಾರತದ ರೂಪಾಯಿಯಲ್ಲಿ ಇದನ್ನು ಕನ್ವರ್ಟ್ ಮಾಡಿದರೆ 38697.20 ರೂಪಾಯಿ ಆಗಿರುತ್ತದೆ. ಈಗ ಇರುವಂತಹ ಚಿನ್ನದ ಬೆಲೆ (Gold Price) ಗೂ ಅಂದು ಇರುವಂತಹ ಚಿನ್ನದ ಬೆಲೆಗೂ ಸಾಕಷ್ಟು ಅಜಗಜಾಂತರ ವ್ಯತ್ಯಾಸವಿದೆ. ಅದೇನೇ ಇದ್ರೂ ಕೂಡ ಭಾರತದ ಬೆಲೆಗೆ ಹೋಲಿಸಿದರೆ ದುಬೈನಲ್ಲಿ ಚಿನ್ನವನ್ನು ಖರೀದಿಸುವುದೇ ಸಾಕಷ್ಟು ಉಳಿತಾಯದಾಯಕ ಎಂದು ಹೇಳಬಹುದು.

advertisement

Leave A Reply

Your email address will not be published.