Karnataka Times
Trending Stories, Viral News, Gossips & Everything in Kannada

Car Loan: 8 ಲಕ್ಷ ರೂಪಾಯಿಗಳ ಕಾರ್ ಲೋನ್ ಮೇಲೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಎಷ್ಟು EMI ಕಟ್ಬೇಕು ಗೊತ್ತಾ?

advertisement

ಪ್ರತಿಯೊಬ್ಬರಿಗೂ ಕೂಡ ತಮ್ಮ ಜೀವನದಲ್ಲಿ ತಮ್ಮದೇ ಆಗಿರುವಂತಹ ಸ್ವಂತ ಆಗಿರುವ ಕಾರನ್ನು ಖರೀದಿ ಮಾಡಬೇಕು ಎನ್ನುವಂತಹ ಆಸೆ ಇದ್ದೇ ಇರುತ್ತದೆ. ಅಂಥವರು ಸಾಮಾನ್ಯವಾಗಿ ಕೆಲಸ ಮಾಡಲು ಪ್ರಾರಂಭಿಸಿದ ನಂತರ ಬ್ಯಾಂಕಿನಿಂದ ಲೋನ್ (Loan) ಪಡೆದುಕೊಂಡು ಕಾರನ್ನು ಖರೀದಿ ಮಾಡುತ್ತಾರೆ.

ಇವತ್ತು ವಿಶೇಷವಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ದಲ್ಲಿ ಕಾರ್ ಲೋನ್ ಪಡೆದುಕೊಳ್ಳುವ ಮೂಲಕ ಯಾವ ರೀತಿಯಲ್ಲಿ ಕಾರನ್ನು ಖರೀದಿ ಮಾಡಬಹುದು ಹಾಗೂ ಅದರ ಇಎಂಐ ಎಷ್ಟಿರುತ್ತದೆ ಅನ್ನೋದರ ಬಗ್ಗೆ ಇವತ್ತಿನ ಲೇಖನದಲ್ಲಿ ನಿಮಗೆ ಹೇಳೋದಕ್ಕೆ ಹೊರಟಿದ್ದೇವೆ. ಒಂದು ವೇಳೆ ನೀವು ಕೂಡ ಇಲ್ಲಿ ಕಾರನ್ನು ಖರೀದಿ ಮಾಡುವಂತಹ ಆಸಕ್ತಿಯನ್ನು ಹೊಂದಿದ್ದರೆ ಲೇಖನವನ್ನು ತಪ್ಪದೇ ಕೊನೆವರೆಗೂ ಓದಿ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 8 ಲಕ್ಷ ರೂಪಾಯಿಗಳ ಕಾರ್ ಲೋನ್ ಪಡೆದುಕೊಂಡರೆ ಎಷ್ಟು ಇಎಂಐ ಕಟ್ಟಬೇಕಾಗುತ್ತೆ?

 

Image Source: Times Loan

 

advertisement

ಬೇರೆ ಬ್ಯಾಂಕುಗಳಿಗೆ ಹೋಲಿಸಿದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ದಲ್ಲಿ ಅತ್ಯಂತ ಕಡಿಮೆ ಬಡ್ಡಿ ದರಕ್ಕೆ ಕಾರ್ ಲೋನ್ (Car Loan) ಅನ್ನು ನೀವು ಪಡೆದುಕೊಳ್ಳಬಹುದಾಗಿದೆ. ವಾರ್ಷಿಕ ಬಡ್ಡಿದರ 8.85 ಪ್ರತಿಶತ ಆಗಿರುತ್ತದೆ ಹಾಗೂ ಏಳು ವರ್ಷಗಳವರೆಗೂ ಕೂಡ ಮರುಪಾವತಿ ಮಾಡುವಂತಹ ಅವಕಾಶವನ್ನು ತನ್ನ ಗ್ರಾಹಕರಿಗೆ ಇದು ನೀಡುತ್ತದೆ.

ಅವರಿಗಿಂತ ಮುಂಚೆ ಸಾಲವನ್ನು ಕಟ್ಟಿದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಗ್ರಾಹಕರ ಮೇಲೆ ಯಾವುದೇ ರೀತಿಯ ಚಾರ್ಜಸ್ ಗಳನ್ನು ವಿಧಿಸುವುದಿಲ್ಲ. ಎರಡು ವರ್ಷಗಳ ನಂತರ ಲೋನ್ ಅನು ಕ್ಲೋಸ್ ಮಾಡುವಾಗ್ಲೂ ಕೂಡ ಗ್ರಾಹಕರಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಯಾವುದೇ ಶುಲ್ಕವನ್ನು ಪಡೆದುಕೊಳ್ಳುವುದಿಲ್ಲ ಎಂಬುದು ಕೂಡ ಸ್ಪಷ್ಟವಾಗಿದೆ.

ಇನ್ನು 8.85 ಪ್ರತಿಶತ ವಾರ್ಷಿಕ ಬಡ್ಡಿ ದರದ ಲೆಕ್ಕಾಚಾರದಲ್ಲಿ 5 ವರ್ಷಗಳಿಗೆ 8 ಲಕ್ಷ ರೂಪಾಯಿಗಳ ಕಾರ್ ಲೋನ್ (Car Loan) ಅನ್ನು ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಪಡೆದುಕೊಂಡರೆ ಆ ಸಂದರ್ಭದಲ್ಲಿ ಐದು ವರ್ಷಗಳಿಗೆ ನೀವು ಪ್ರತಿ ತಿಂಗಳು ಕಟ್ಟುವಂತಹ ಇಎಂಐ ಎಷ್ಟಾಗುತ್ತದೆ ಅನ್ನೋದನ್ನ ಇವತ್ತಿನ ಈ ಲೇಖನದ ಮೂಲಕ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ ಬನ್ನಿ.

ಐದು ವರ್ಷಗಳವರೆಗೆ ನೀವು ಪ್ರತಿ ತಿಂಗಳು 16,549 ರೂಪಾಯಿಗಳನ್ನು ಕಟ್ಟಬೇಕಾಗುತ್ತದೆ ಅಂದರೆ ಐದು ವರ್ಷಗಳಲ್ಲಿ ನೀವು ಕೇವಲ ಬಡ್ಡಿಯಲ್ಲಿಯೇ 1,92, 910 ರೂಪಾಯಿಗಳನ್ನು ಹೆಚ್ಚುವರಿಯಾಗಿ ಕಟ್ಟಿರುತ್ತಿರಿ ಅಂದರೆ ಪಡೆದುಕೊಂಡಿರುವಂತಹ ಎಂಟು ಲಕ್ಷ ರೂಪಾಯಿಗಳ ಲೋನ್ (Car Loan) ಅನ್ನು ನೀವು ಮರುಪಾವತಿ ಮಾಡುವ ಸಂದರ್ಭದಲ್ಲಿ ಐದು ವರ್ಷಗಳ ನಂತರ ಒಟ್ಟಾರೆಯಾಗಿ 9,92, 910 ರೂಪಾಯಿಗಳನ್ನು ಕಟ್ಟಬೇಕಾಗಿರುತ್ತದೆ.

advertisement

Leave A Reply

Your email address will not be published.