Karnataka Times
Trending Stories, Viral News, Gossips & Everything in Kannada

HSRP: ಕರ್ನಾಟಕದಲ್ಲಿ ಇದುವರೆಗೂ HSRP ನಂಬರ್ ಪ್ಲೇಟ್ ಹಾಕದವರಿಗೆ ಬೆಳ್ಳಂಬೆಳಿಗ್ಗೆ ಸಿಹಿಸುದ್ದಿ

advertisement

High Security Registration Plates (HSRP): ಇತ್ತೀಚೆಗೆ ಎಲ್ಲಿ ಕೇಳಿದರೂ HSRP ನಂಬರ್ ಪ್ಲೇಟ್ ವಿಚಾರದ್ದೇ ಸುದ್ದಿ. ರಾಜ್ಯಾದ್ಯಂತ ಹಳೆ ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಕೆ ಮಾಡುವ ಜೊತೆಗೆ ಹೊಸ ವಾಹನಕ್ಕೆ ವಾಹನ ತಯಾರಿಕ ಕಂಪೆನಿಯಿಂದ ಅವರೇ HSRP ನಂಬರ್ ಪ್ಲೇಟ್ ಅಳವಡಿಕೆ ಮಾಡಿ ಗ್ರಾಹಕರಿಗೆ ಮಾರಬೇಕು ಎಂದು ಸೂಚನೆ ನೀಡಲಾಗಿದೆ.  ಅದೇ ರೀತಿ HSRP ನಂಬರ್ ಪ್ಲೇಟ್ ಅಳವಡಿಕೆ ಮಾಡಲು ಸಾಕಷ್ಟು ಸಮಯ ನೀಡಿದರೂ ಇನ್ನೂ ಕೂಡ ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅನ್ನು ಪೂರ್ತಿಯಾಗಿ ಅಳವಡಿಸಿಕೊಂಡಿಲ್ಲ ಎನ್ನಬಹುದು. ಈ ನಿಟ್ಟಿನಲ್ಲಿ ಸರ್ಕಾರ ಗಡುವು ವಿಸ್ತರಣೆಗೆ ತೀರ್ಮಾನ ಕೈಗೊಳ್ಳುವುದು ಬಹುತೇಕ ಖಚಿತವಾಗಿದೆ.

ಸತತ ಅವಕಾಶ
ಬೈಕ್ , ಕಾರ್ , ಸ್ಕೂಟರ್ , ಟ್ರ್ಯಾಕ್ಟರ್ ಇತರ ವಾಣಿಜ್ಯ ಹಾಗೂ ಖಾಸಗಿ ವಾಹನಗಳಿಗೆ ಹಳೆ ವಾಹನ ಅಂದರೆ 2019 ಕ್ಕೂ ಮೊದಲು ನೋಂದಾಯಿಸಿದ್ದ ವಾಹನಕ್ಕೆ HSRP ನಂಬರ್ ಪ್ಲೇಟ್ ಕಡ್ಡಾಯ ಮಾಡಲಾಗಿದೆ. ಈ ಹಿಂದೆ ಅನೇಕ ಸಲ ಸರಕಾರ ಸೂಚನೆ ನೀಡಿತ್ತು. HSRP ನಂಬರ್ ಪ್ಲೇಟ್ ಅನ್ನು 2019 ಎಪ್ರಿಲ್ ಗೂ ಮುನ್ನ ನೋಂದಣಿ ಮಾಡಿದ್ದ ವಾಹನಕ್ಕೆ ಕಡ್ಡಾಯ ಮಾಡಲಾಗಿದ್ದು ನವೆಂಬರ್ 17 , 2023 ಕೊನೆಯ ದಿನ ಎಂದು ಹೇಳಲಾಗಿತ್ತು ಬಳಿಕ ತಾಂತ್ರಿಕ ಕಾರಣ ಹಾಗೂ ಜನರಿಗೆ ಅರಿವು ಮೂಡಿಸುವ ನೆಲೆಯಲ್ಲಿ ಗಡುವು ವಿಸ್ತರಣೆ ಮಾಡಲಾಗಿದೆ.

High-Security Registration Plates deadline extended in karnataka
Image Source: Deccan Herald

ಫೆಬ್ರವರಿ 17 , 2024 ಕೊನೆಯ ದಿನ ಎಂದು ಹೇಳಲಾಗಿತ್ತು. ಹಾಗಿದ್ದರೂ ನಂಬರ್ ಪ್ಲೇಟ್ ಅಳವಡಿಕೆ ಮಾಡಿದ್ದ ಪ್ರಮಾಣ ಕಡಿಮೆ ಇದೆ ಎಂದು ಹೇಳಲಾಗಿದೆ. ಹಾಗಾಗಿ ಈ ಗಡುವನ್ನು ಈಗ ಮತ್ತೋಮ್ಮೆ ವಿಸ್ತರಣೆ ಮಾಡಲಾಗಿದೆ.

advertisement

ಸದನದಲ್ಲೂ ಚರ್ಚೆ
ರಸ್ತೆ ಮತ್ತು ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿ ಅವರು ಫೆಬ್ರವರಿಯಲ್ಲಿ ನಡೆದ ಸದನದ ಕಲಾಪದ ವೇಳೆ ಈ ಗಡುವು ವಿಸ್ತರಣೆ ಬಗ್ಗೆ ಮಾತನಾಡಿದ್ದಾರೆ. ಸರಕಾರ ಅನೇಕ ಬಾರಿ ಅವಕಾಶ ನೀಡಿದರೂ HSRP ನಂಬರ್ ಪ್ಲೇಟ್ಅನ್ನು ಪೂರ್ಣ ಪ್ರಮಾಣದಲ್ಲಿ ಇನ್ನೂ ಕೂಡ ಅಳವಡಿಕೆ ಮಾಡಲಿಲ್ಲ. ಹಾಗಾಗಿ ಹೆಚ್ಚುವರಿ ಅವಧಿ ನೀಡುವುದು ಬಹಳ ಮುಖ್ಯ ವಾಗುತ್ತದೆ. ಅನೇಕರು ಈಗಾಗಲೇ ಅಪ್ಲೈ ಮಾಡಿದ್ದು ಅವರ ವಾಹನದ ನಂಬರ್ ಪ್ಲೇಟ್ ಬರಲು ಬಾಕಿ ಇದೆ. ಹಾಗಾಗಿ ಗಡುವು ವಿಸ್ತರಣೆ ಮಾಡುವಂತೆ ವಾಹನ ಸವಾರರು ಸರಕಾರಕ್ಕೆ ಮನವಿ ಮಾಡಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.

High-Security Registration Plates deadline extended in karnataka
Image Source: Deccan Herald

ಎಲ್ಲಿವರೆಗೆ ಅವಕಾಶ ಇರಲಿದೆ?
ವಾಹನದ ಅತೀ ಸುರಕ್ಚಿತ ನೋಂದಣಿ ಫಲಕವು ಸುರಕ್ಷತಾ ದೃಷ್ಟಿಯಿಂದ ಅಗತ್ಯವಾಗಿದೆ. ಈಗ ಫೆಬ್ರವರಿ ಯಿಂದ ಮಾರ್ಚ್ ಕೂಡ ಕಳೆದು ಸತತ ನಾಲ್ಕನೇ ಬಾರಿ ಗಡುವು ವಿಸ್ತರಣೆ ಮಾಡಲು ಸರಕಾರ ತೀರ್ಮಾನಿಸಿದೆ, ಅದರ ಪ್ರಕಾರ ಮೇ 31 ರ ವರೆಗೆ ಅಂತಿಮ ಅವಧಿಯನ್ನು ನೀಡಲಾಗಿದೆ. ಹಾಗಾಗಿ ಹೆಚ್ಚುವರಿ ಅವಧಿ ಒಳಗೆ HSRP ಅಳವಡಿಸಲು ನಿಮಗೂ ಅಧಿಕ ಅವಕಾಶ ಸಿಗಲಿದೆ.

ಅಳವಡಿಸದೆ ಇದ್ದರೆ? (High-Security Registration Plates deadline extended) 
ಹೆಚ್ಚುವರಿ ಸಮಯ ನೀಡಿದರೂ ಕೂಡ HSRP ನಂಬರ್ ಪ್ಲೇಟ್ ಅಳವಡಿಕೆ ಮಾಡದೇ ಇದ್ದರೆ ಅಂತವರಿಗೆ ವಾಹನದ ಪರವಾನಿಗೆ ರದ್ದಾಗುವ ಸಾಧ್ಯತೆ ಇದೆ ಅದರ ಜೊತೆಗೆ ವಾಹನವನ್ನು ಪೊಲೀಸ್ ಅವರು ಚೆಕ್ ಮಾಡಲು ಬಂದಾಗ ನಿಮಗೆ ಫೈನ್ ಹಾಕುವ ಸಾಧ್ಯತೆ ಇದೆ. ಹಾಗಾಗಿ ಮೇ 31ರ ಒಳಗೆ ನೀವು HSRP ನಂಬರ್ ಪ್ಲೇಟ್ ಅನ್ನು ಅಳವಡಿಸಿ. ಆದರೆ ಮೂಲಹಾಳ ಪ್ರಕಾರ ಈ ಡೇಟ್ ಕೂಡ ಮುಂದೂಡುವುದು ಬಹುತೇಕ ಸಾಧ್ಯತೆ ಇದೆ.

advertisement

Leave A Reply

Your email address will not be published.