Karnataka Times
Trending Stories, Viral News, Gossips & Everything in Kannada

Akrama Sakrama Scheme: ಸರ್ಕಾರೀ ಭೂಮಿಯಲ್ಲಿ ಹಲವಾರು ವರ್ಷಗಳಿಂದ ಇದ್ದವರಿಗೆ ಕೊನೆಗೂ ಸಿಹಿಸುದ್ದಿ! ಇಲ್ಲಿದೆ ಹೊಸ ಅಪ್ಡೇಟ್

advertisement

Karnataka govt planning to regularize houses built on govt land: ರಾಜ್ಯ ಸರಕಾರದಿಂದ ಮೊದಲಿಂದಲೂ ಜನಸಮಾನ್ಯರಿಗೆ ಅನೇಕವಿಧವಾದ ಯೋಜನೆಯನ್ನು ಪರಿಚಯಿಸುತ್ತಲೇ ಬರಲಾಗಿದೆ. ಹಿಂದೆಲ್ಲ ಪಹಣಿ ಪತ್ರ ಸರಿ ಇಲ್ಲದೆ ಅಥವಾ ಭೂಮಿಗೆ ಸರಿಯಾದ ದಾಖಲಾತಿ ಪತ್ರ ಇಲ್ಲ ಎಂಬುವ ಕಾರಣಕ್ಕಾಗಿ ಸರಕಾರಿ ಜಮೀನಿನಲ್ಲಿ ಮನೆ , ತೋಟ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಆದರೆ ಈಗ ಕಾನೂನು ನಿಯಮಗಳು ಕಠಿಣವಾಗಿವೆ. ಒಂದೊಂದು ಪರಿಕಲ್ಪನೆಗೂ ಒಂದೊಂದು ಕಾನೂನು ಬಂದಿದೆ.

ಮನೆ ಜಮೀನು ಅಕ್ರಮವಾಗಿ ಮಾಡಿದ್ದರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳುವ ಜೊತೆಗೆ ಅಗತ್ಯವಿದ್ದವರಿಗೆ ಅಕ್ರಮ ಸಕ್ರಮ ಯೋಜನೆ(Akrama sakrama yojana)  ಅಡಿಯಲ್ಲಿ ಭೂಮಿಯನ್ನು ಮಂಜೂರು ಮಾಡಲು ಸರಕಾರ ನಿರ್ಧಾರ ತೆಗೆದುಕೊಂಡಿದೆ. ಹೆಚ್ಚುವರಿಯಾಗಿ ಸರಕಾರಿ ಭೂಮಿಯಲ್ಲಿ ಉಳುಮೆ ಮಾಡಿಕೊಂಡು ಬಂದಿರುವ ರೈತರು ಅಥವಾ ಸರಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಬಂದಿರುವವರಿಗೆ ಇಲ್ಲೊಂದು ಶುಭ ಸುದ್ದಿ ಕಾದಿದೆ. ಅಂತವರಿಗೆ ಅಕ್ರಮ ಸಕ್ರಮ ಯೋಜನೆ ಅಡಿಯಲ್ಲಿ ಆಸ್ತಿಯ ಮಾಲಿಕತ್ವ ನೀಡಲು ಸರಕಾರ ಮುಂದಾಗಿದೆ.

ಕಂದಾಯ ಸಚಿವರಿಂದ ಸೂಚನೆ( Akrama sakrama 2024) 
ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ (Krishna Byre Gowda )ಅವರು ಸರಕಾರಿ ಭೂಮಿಯ ಒತ್ತುವರಿ ಆಗುತ್ತಿರುವ ಬಗ್ಗೆ ಇತ್ತೀಚೆಗಷ್ಟೇ ಮಾಧ್ಯಮದ ಮುಂದೆ ಮಾತನಾಡಿದ್ದಾರೆ. ಅದಾದ ಬಳಿಕ ವಿಧಾನಸೌದದಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಜೊತೆಗೆ ಮಾತನಾಡಿ ಅಕ್ರಮ ಸಕ್ರಮ ಭೂಮಿಯ ಒತ್ತುವರಿ ಬಗ್ಗೆ ಪ್ರಮುಖ ಸೂಚನೆಯನ್ನು ಕೂಡ ನೀಡಿದ್ದಾರೆ‌‌. ಪ್ರಗತಿ ಪರಿಶೀಲನಾ ಸಭೆ ನಡೆಸಿ ಮುಂದಿನ ಆರು ತಿಂಗಳಲ್ಲಿ ನಡೆಯಬೇಕಾದ ಪ್ರಮುಖ ವಿಚಾರಗಳ ಬಗ್ಗೆ ಮನದಟ್ಟು ಮಾಡಲಾಗುತ್ತಿದೆ. ಆ ಸೂಚನೆಯಲ್ಲಿ ಯಾವೆಲ್ಲ ಅಂಶ ಅಡಕವಿತ್ತು ಎಂಬ ಕುತೂಹಲ ನಿಮಗೆ ಇದ್ದರೆ ಪೂರ್ತಿ ಲೇಖನ ಓದಿ.

advertisement

Akrama Sakrama Scheme by Government of Karnataka
Image Source: The Week

ಸೂಚನೆಯಲ್ಲಿ ಏನಿದೆ?
ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ಅಕ್ರಮ ಸಕ್ರಮ ಯೋಜನೆ ಅಡಿಯಲ್ಲಿ 50, 53,57ನೇ ಅಡಿ ತನಿಖೆಯಾದ ಅರ್ಜಿಗಳನ್ನು ನಿಗಧಿತ ಸಮಯದ ಒಳಗೆ ವಿಲೇವಾರಿ ಮಾಡಬೇಕು. ಮುಂದಿನ ಆರು ತಿಂಗಳ ಒಳಗಾಗಿ ತನಿಖೆಯಾದ ಅರ್ಜಿಯನ್ನು ಸಂಪೂರ್ಣವಾಗಿ ವಿಲೇವಾರಿ ಮಾಡುವ ಜೊತೆಗೆ ಅರ್ಹ ಫಲಾನುಭವಿಗಳಿಗೆ ಸಾಗುವಳಿ ಚೀಟಿ ನೀಡಬೇಕು. ಯಾವುದೆ ಜಾತಿ, ಧರ್ಮ, ರಾಜಕೀಯ ಪಕ್ಷದ ಅನುಕೂಲಕ್ಕೆ ತಕ್ಕದಾಗಿ ವರ್ತಿಸದೇ ಬಡವರಿಗೆ ನ್ಯಾಯ ಸಿಗುವಂತೆ ಆಗಬೇಕು ಎಂದು ಅವರು ತಿಳಿಸಿದ್ದಾರೆ.

ಇ ಸಾಗುವಳಿ ಚೀಟಿ
ಅಕ್ರಮ ಸಕ್ರಮ ಯೋಜನೆಯ ಅಡಿಯಲ್ಲಿ ಸಾಗುವಾಳಿ ಚೀಟಿ ನೀಡುವಂತೆ ರೈತರು ಸರಕಾರಿ ಕಚೇರಿ ಅಲೆಯುವ ಪರಿಸ್ಥಿತಿ ನಿರ್ಮಾಣ ಆಗಿದೆ. ಹಾಗಾಗಿ ರೈತರು ಹಾಗೂ ಸರಕಾರಿ ಭೂಮಿಯಲ್ಲಿ ಮನೆ ಕಟ್ಟಿಕೊಂಡು ಅನೇಕ ವರ್ಷ ವಾಸ್ತವ್ಯ ಮಾಡಿದ್ದ ಜನ ಸಾಮಾನ್ಯರ ಅರ್ಜಿಯನ್ನು ಕೂಡಲೇ ವಿಲೇವಾರಿ ಮಾಡುವಂತೆ ಆರು ತಿಂಗಳ ಕಾಲ ಸಮಯಾವಕಾಶ ನೀಡಲಾಗಿದೆ. ಕೃಷಿಗಾಗಿ ಮೀಸಲಿಟ್ಟ ಜಾಗದಲ್ಲಿ ಕೃಷಿ ಯೇತರ ಚಟುವಟಿಕೆ ಮಾಡುವುದು ಕಂಡು ಬಂದರೆ ಅಂತವರಿಗೆ ಜಾಗ ನೀಡಲು ಸಾಧ್ಯವಾಗದು ಈ ಬಗ್ಗೆ ಅಧಿಕಾರಿಗಳೇ ನೇರವಾಗಿ ಪರಿಶೀಲನೆ ನಡೆಸಿ ತೀರ್ಮಾನ ಕೈಗೊಂಡು ಆರು ತಿಂಗಳ ಒಳಗೆ ಅರ್ಜಿ ವಿಲೇವಾರಿ ಮುಕ್ತಾಯ ಆಗಬೇಕು. ಆ್ಯಪ್ ಸಹಾಯದಿಂದ ಬಗರ್ ಹುಕ್ಕುಂ ಅರ್ಜಿ ತ್ವರಿತವಾಗಿ ವಿಲೇವಾರಿ ಮಾಡಿ, ತಂತ್ರಾಂಶದ ಮೂಲಕ ಇ ಸಾಗುವಳಿ ಚೀಟಿ ನೀಡಿ ರೈತರಿಗೆ ನೆರವಾಗಬೇಕು ಎಂದು ಕಂದಾಯ ಸಚಿವರು ತಿಳಿಸಿದ್ದಾರೆ.

Akrama Sakrama Scheme by Government of Karnataka
Image Source: The Week

advertisement

Leave A Reply

Your email address will not be published.