Karnataka Times
Trending Stories, Viral News, Gossips & Everything in Kannada

Home Loan: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದಿಂದ 15 ವರ್ಷಗಳಿಗೆ 25 ಲಕ್ಷ ರೂಪಾಯಿಗಳ ಹೋಂ ಲೋನ್ ಪಡೆದುಕೊಂಡರೆ ಎಷ್ಟು EMI ಕಟ್ಟಬೇಕಾಗುತ್ತೆ ಗೊತ್ತಾ?

advertisement

SBI Home Loan: ತಮ್ಮ ಜೀವನದಲ್ಲಿ ಪ್ರತಿಯೊಬ್ಬರೂ ಕೂಡ ತಮ್ಮದೇ ಆಗಿರುವಂತಹ ಸ್ವಂತವಾದ ಮನೆಯನ್ನು ಕಟ್ಟಬೇಕು ಅನ್ನೋದಾಗಿ ಆಸೆಯನ್ನು ಹೊಂದಿರುತ್ತಾರೆ. ಯಾಕೆಂದರೆ ನಾವು ಭಾರತೀಯರಾಗಿ ನಮ್ಮ ಸ್ವಂತ ಮನೆಯ ಬಗ್ಗೆ ಸಾಕಷ್ಟು ಎಮೋಷನಲ್ ಭಾವನೆಗಳನ್ನು ಹೊಂದಿರುತ್ತೇವೆ. ಯಾಕೆಂದರೆ ನಮ್ಮ ಸ್ವಂತ ದುಡಿಮೆಯಿಂದ ಅದನ್ನ ಕಟ್ಟಿ ಅದರಲ್ಲಿ ನಮ್ಮ ಜೀವನವನ್ನು ಕಳೆಯಬೇಕು ಎನ್ನುವಂತಹ ಒಂದು ಎಮೋಷನಲ್ ಕನೆಕ್ಷನ್ ಅನ್ನು ಹೊಂದಿರುತ್ತೇವೆ.

ಆದರೆ ಪ್ರತಿಯೊಬ್ಬರ ಬಳಿ ಕೂಡ ಮನೆಯನ್ನು ಕಟ್ಟೋದಕ್ಕೆ ಸಂಪೂರ್ಣವಾಗಿ ಹಣ ಇರುವುದಿಲ್ಲ ಹೀಗಾಗಿ ಹೆಚ್ಚಿನವರು ಬ್ಯಾಂಕಿನಿಂದ ಲೋನ್ ಪಡೆದುಕೊಂಡು ಮನೆಯನ್ನು ಕಟ್ಟುತ್ತಾರೆ. ಅದರಲ್ಲಿ ವಿಶೇಷವಾಗಿ ಇವತ್ತಿನ ಲೇಖನದಲ್ಲಿ ನಾವು ಮಾತನಾಡೋಕೆ ಹೊರಟಿರುವುದು ಒಂದು ನಿರ್ದಿಷ್ಟ ವಿಚಾರದ ಬಗ್ಗೆ. ಹೌದು ಒಂದು ವೇಳೆ ನೀವು ಮನೆ ಕಟ್ಟೋದಕ್ಕೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ(SBI) 15 ವರ್ಷಗಳಿಗೆ 25 ಲಕ್ಷ ರೂಪಾಯಿಗಳ ಲೋನ್ ಪಡೆದುಕೊಂಡರೆ ಪ್ರತಿ ತಿಂಗಳ ಎಷ್ಟು ಕಟ್ಟೋದಕ್ಕೆ ಬರುತ್ತದೆ ಅನ್ನೋದರ ಬಗ್ಗೆ ಇವತ್ತಿನ ಈ ಲೇಖನದ ಮೂಲಕ ತಿಳಿಯೋಣ ಬನ್ನಿ.

SBI
Image Source: Reuters

advertisement

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ 25 ಲಕ್ಷ ರೂಪಾಯಿಗಳ ಹೋಂ ಲೋನ್ ಅನ್ನು 15 ವರ್ಷಗಳಿಗೆ ಪಡೆದುಕೊಂಡರೆ EMI ಎಷ್ಟು ಗೊತ್ತಾ?

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಸದ್ಯದ ಮಟ್ಟಿಗೆ ಭಾರತದ ಅತ್ಯಂತ ಸುರಕ್ಷಿತ ಹಾಗೂ ಹೆಚ್ಚಿನ ಗ್ರಾಹಕರನ್ನು ಹೊಂದಿರುವಂತಹ ನಂಬಿಕಸ್ಥ ಸರ್ಕಾರಿ ಬ್ಯಾಂಕ್ ಆಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೋಂ ಲೋನ್ ಮೇಲೆ ವಾರ್ಷಿಕವಾಗಿ 8.50% ಬಡ್ಡಿ ದರವನ್ನು ವಿಧಿಸುತ್ತದೆ. ಈ ಲೆಕ್ಕಾಚಾರದಲ್ಲಿ 25 ಲಕ್ಷ ರೂಪಾಯಿಗಳನ್ನು 15 ವರ್ಷಕ್ಕೆ ಪಡೆದುಕೊಂಡರೆ ನೀವು ಪ್ರತಿ ತಿಂಗಳ ಕಂತನ್ನು ಎಷ್ಟು ತೆರಬೇಕಾಗುತ್ತದೆ ಎಂಬುದನ್ನು ತಿಳಿಯೋಣ ಬನ್ನಿ.

Home Loan
Image Source: MagicBricks

25 ಲಕ್ಷ ರೂಪಾಯಿಗಳ ಹೋಂ ಲೋನ್ ಅನ್ನು ನೀವು 8.50 ಪ್ರತಿಶತ ವಾರ್ಷಿಕ ಬಡ್ಡಿ ದರದಲ್ಲಿ 15 ವರ್ಷಗಳಿಗೆ ಸಾಲ ರೂಪದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಹೋಮ್ ಲೋನ್ ಪಡೆದುಕೊಂಡರೆ ಪ್ರತಿ ತಿಂಗಳ ಕಂತನ್ನು 24,618 ರೂಪಾಯಿಗಳ ಲೆಕ್ಕಾಚಾರದಲ್ಲಿ ಕಟ್ಟಬೇಕಾಗುತ್ತದೆ. ಇನ್ನು ಈ ಸಂದರ್ಭದಲ್ಲಿ ನೀವು ಕೇವಲ ಬಡ್ಡಿಯ ರೂಪದಲ್ಲೇ 16.31 ಲಕ್ಷ ರೂಪಾಯಿಗಳನ್ನು ಹೆಚ್ಚುವರಿಯಾಗಿ ನೀಡಬೇಕಾಗುತ್ತದೆ. ಅಂದರೆ ಪಡೆದುಕೊಂಡಿರುವಂತಹ 25 ಲಕ್ಷ ರೂಪಾಯಿಗಳ ಹೋಂ ಲೋನ್ ಅನ್ನು ನೀವು ಮರುಪಾವತಿ ಮಾಡುವ ಸಂದರ್ಭದಲ್ಲಿ ಎಲ್ಲಾ ಸೇರಿ 44.31 ಲಕ್ಷ ರೂಪಾಯಿಗಳ ರೂಪದಲ್ಲಿ ಮರುಪಾವತಿ ಮಾಡಬೇಕಾಗಿರುತ್ತದೆ. ಇನ್ನು ಹೋಂ ಲೋನ್ ಪಡೆದುಕೊಳ್ಳಲು ನಿಮ್ಮ ಕ್ರೆಡಿಟ್ ಸ್ಕೋರ್ ಚೆನ್ನಾಗಿರುವುದು ಕೂಡ ಅಗತ್ಯವಾಗಿರುತ್ತದೆ.

advertisement

Leave A Reply

Your email address will not be published.