Karnataka Times
Trending Stories, Viral News, Gossips & Everything in Kannada

NHAI: ಹೈವೇಯಿಂದ ಎಷ್ಟು ದೂರದಲ್ಲಿ ಮನೆ ಅಥವಾ ಕಟ್ಟಡ ಇರಬೇಕು! ಹೆದ್ದಾರಿ ಪ್ರಾಧಿಕಾರದ ಹೊಸ ರೂಲ್ಸ್

advertisement

National Highway Details: ಸಾಮಾನ್ಯವಾಗಿ ಇತ್ತೀಚಿನ ವರ್ಷಗಳಲ್ಲಿ ಜನರು ರಸ್ತೆಯ ಬಳಿ ಪ್ರಾಪರ್ಟಿಯನ್ನು ಖರೀದಿಸಿ ಅಲ್ಲಿ ಮನೆ ಅಥವಾ ಕಟ್ಟಡಗಳನ್ನ ಕಟ್ಟೋದನ್ನ ನೀವು ಗಮನಿಸಬಹುದು. ಅದರಲ್ಲೂ ವಿಶೇಷವಾಗಿ ಹೈವೇ ಬಳಿ ಯಾರೆಲ್ಲ ಮನೆ ಕಟ್ಟುತ್ತಾರೋ ಅಥವಾ ಈಗಾಗಲೇ ಕಟ್ಟಿದ್ದಾರೋ ಅವರಿಗೆ ಈ ನಿಯಮಗಳನ್ನು ತಿಳಿದುಕೊಳ್ಳುವುದು ಅತ್ಯಂತ ಅಗತ್ಯವಾಗಿರುತ್ತದೆ.

ಯಾಕೆಂದರೆ ಅಪ್ಪಿ ತಪ್ಪಿ ಹೈವೇ ನಿಯಮಗಳಿಗೆ ವಿರುದ್ಧವಾಗಿ ನೀವು ನಿಗದಿತ ಅಳತೆಗಿಂತ ಹತ್ತಿರದಲ್ಲಿ ಮನೆಯನ್ನು ಕಟ್ಟಿದರೆ ಖಂಡಿತವಾಗಿ ನಿಮ್ಮ ಮನೆಯನ್ನು ಸಂಬಂಧ ಪಟ್ಟಂತಹ ಇಲಾಖೆಯವರು ಬೀಳಿಸುತ್ತಾರೆ. ಹೈವೇ ಬಳಿ ಮನೆ ಕಟ್ಟುವ ಸಂದರ್ಭದಲ್ಲಿ ಕೆಲವೊಂದು ನಿಯಮಗಳನ್ನು ನೀವು ತಿಳಿದುಕೊಂಡಿರಬೇಕು ಹಾಗೂ ನಗರಪಾಲಿಕೆಯ ಅನುಮತಿಯನ್ನು ಕೂಡ ಪಡೆದುಕೊಂಡಿರಬೇಕು.

ಹೈವೇನಲ್ಲಿ ಅಂಗಡಿ ಮುಂಗಟುಗಳನ್ನು ನಿರ್ಮಾಣ ಮಾಡುವುದರಿಂದಾಗಿ ಸಿಗುವಂತಹ ಪ್ರಮುಖ ಲಾಭ ಅಂತ ಅಂದ್ರೆ ಹೆಚ್ಚಿನ ಆದಾಯವನ್ನು ಪಡೆದುಕೊಳ್ಳಬಹುದಾಗಿದೆ. ಯಾಕೆಂದ್ರೆ ಹೈ ವೆ ನಲ್ಲಿ ಹೆಚ್ಚಿನ ವಾಹನಗಳು ಸಂಚಾರ ಮಾಡುತ್ತವೆ. ಆದರೆ ನಿಯಮಗಳನ್ನು ಮೀರಿ ಸಾಕಷ್ಟು ಹತ್ತಿರದಲ್ಲಿ ಅಂಗಡಿ ಮುಂಗಟ್ಟುಗಳನ್ನು ನಿರ್ಮಾಣ ಮಾಡಿದರೆ ಸಂಬಂಧಪಟ್ಟಂತಹ ಇಲಾಖೆಗಳಿಂದ ಶಿಕ್ಷೆಯನ್ನು ಕೂಡ ನೀವು ಎದುರಿಸಬೇಕಾಗಿ ಬರುತ್ತದೆ.

ನಿಯಮ ಏನು ಹೇಳುತ್ತೆ?

Image Source: India Today

advertisement

ಭೂಮಿ ನಿಯಂತ್ರಣ ಕಾಯ್ದೆ 1964 ರ ಪ್ರಕಾರ ಯಾವುದೇ ರೀತಿಯ ತೆರೆದ ಸ್ಥಳದಲ್ಲಿ ಅಥವಾ ಕೃಷಿ ಭೂಮಿಯಲ್ಲಿ ನ್ಯಾಷನಲ್ ಹೈವೇಯಿಂದ 75 ಫೀಟ್ ದೂರದಲ್ಲಿ ಅಥವಾ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಕಟ್ಟಡಗಳನ್ನು ಕಟ್ಟುವ ಹಾಗಿಲ್ಲ. ನಗರ ಭಾಗದಲ್ಲಿ ಈ ದೂರವನ್ನು 60 ಫೀಟ್ ಗೆ ಇಳಿಸಲಾಗಿದೆ. ಪ್ರತಿಯೊಂದು ರಾಜ್ಯಗಳಲ್ಲಿ ಕೂಡ ಈ ದೂರದ ನಿಯಮ ಬೇರೆ ಬೇರೆ ರೀತಿ ಆಗಿರುತ್ತದೆ ಅನ್ನೋದನ್ನ ನೀವು ತಿಳಿದುಕೊಳ್ಳಬೇಕಾಗಿರುತ್ತದೆ. 40 ರಿಂದ 75 ಫೀಟ್ ಅಂತರದಲ್ಲಿ ಮನೆ ಅಥವಾ ಯಾವುದೇ ರೀತಿಯ ಕಟ್ಟಡವನ್ನು ಕಟ್ಟೋದಕ್ಕಿಂತ ಮುಂಚೆ ನೀವು NHAI ಬಳಿ ಅನುಮತಿ ಪಡೆದುಕೊಳ್ಳಬೇಕಾಗಿರುವುದು ಅತ್ಯಂತ ಅಗತ್ಯವಾಗಿದೆ.

ಉತ್ತರ ಪ್ರದೇಶದ ರಸ್ತೆ ನಿಯಮಗಳ ಪ್ರಕಾರ ರಾಜ್ಯಮಾರ್ಗದಲ್ಲಿ 75 ಫೀಟ್, ಜಿಲ್ಲಾ ರೋಡ್ ನಲ್ಲಿ 65 ಫೀಟ್, ಆರ್ಡಿನರಿ ಡಿಸ್ಟ್ರಿಕ್ಟ್ ರೋಡ್ ನಲ್ಲಿ 50 ಫೀಟ್ ದೂರದಲ್ಲಿ ಕಟ್ಟಡವನ್ನು ನಿರ್ಮಿಸುವಂತಹ ಅನುಮತಿ ನೀಡಲಾಗುತ್ತದೆ ಎಂಬುದಾಗಿ ತಿಳಿದು ಬಂದಿದೆ. ಇದಕ್ಕೂ ಕೂಡ ಸಂಬಂಧ ಪಟ್ಟ ವಿಭಾಗಗಳಿಂದ ಅನುಮತಿಯನ್ನು ಪಡೆದುಕೊಂಡು ಕಟ್ಟಬೇಕಾಗಿರುತ್ತದೆ. ಕರ್ನಾಟಕದಲ್ಲಿ ಈ ದೂರದ ಬಗ್ಗೆ ಮಾತನಾಡುವುದಾದರೆ ಹೈವೇ ರಸ್ತೆಯ ಮಧ್ಯದಿಂದ 40 ಮೀಟರ್ ದೂರದಲ್ಲಿ ಕಟ್ಟಡವನ್ನು ಕಟ್ಟಬೇಕು ಎನ್ನುವಂತಹ ನಿಯಮವನ್ನು ಕಡ್ಡಾಯವಾಗಿ ಜಾರಿಗೆ ತರಲಾಗಿದೆ.

Image Source: Pngtree

ಹೈವೆಯಿಂದ ಯಾಕೆ ದೂರದಲ್ಲಿ ಕಟ್ಟಡವನ್ನು ಕಟ್ಟಬೇಕು?

ಸಾಮಾನ್ಯವಾಗಿ ಹೈವೆಗಳಲ್ಲಿ ಹೆಚ್ಚಿನ ವಾಹನಗಳು ಓಡಾಟ ನಡೆಸುವುದರಿಂದಾಗಿ ವಾಯುಮಾಲಿನ್ಯ ಹಾಗೂ ದ್ವನಿ ಪ್ರದರ್ಶನ ಸೇರಿದಂತೆ ಸಾಕಷ್ಟು ಸುರಕ್ಷತಾ ಕ್ರಮಗಳ ಕೊರತೆಯ ಆತಂಕ ಇರುವುದರಿಂದಾಗಿಯೇ ಯಾವುದೇ ರೀತಿಯ ಕಟ್ಟಡಗಳನ್ನು ಕೆಲವೊಂದು ನಿರ್ದಿಷ್ಟ ಅಂತರದ ಹತ್ತಿರದಲ್ಲಿ ಕಟ್ಟಲು ಬಿಡಲು ಸಾಧ್ಯವಿಲ್ಲ ಎನ್ನುವಂತಹ ನಿಯಮಗಳನ್ನು ರೂಪಿಸಲಾಗಿದೆ.

advertisement

Leave A Reply

Your email address will not be published.