Karnataka Times
Trending Stories, Viral News, Gossips & Everything in Kannada

Budget Cars: 4 ವರ್ಷದಲ್ಲಿ 5 ಲಕ್ಷ ಜನ ಖರೀದಿಸಿದ್ದಾರೆ ಈ ಕಾರನ್ನು! ಇದು ಬಡವರ ರೋಲ್ಸ್ ರಾಯ್ಸ್, ಅತ್ಯಂತ ಕಡಿಮೆ ಬೆಲೆ

advertisement

Maruti Ertiga: ಮಾರುತಿ ಸುಜುಕಿ ಕಾರುಗಳು ಸದ್ಯ ಮಾರುಕಟ್ಟೆಯಲ್ಲಿ ತನ್ನ ಬೇಡಿಕೆಯನ್ನು ಹೆಚ್ಚಿಸಿಕೊಂಡಿದ್ದು ಜನರು ಈ ಅತ್ಯಾಕರ್ಷಕ ವೈಶಿಷ್ಟತೆಗಳನ್ನು ಅಳವಡಿಸಿ ತಯಾರು ಮಾಡಲಾಗಿರುವ ಕಾರುಗಳನ್ನು ಖರೀದಿ ಮಾಡಲು ಮುಗಿಬಿದ್ದಿದ್ದಾರೆ. ಅದಾಗಲೇ 2024ರ ಮೇ ತಿಂಗಳು ಪ್ರಾರಂಭವಾದರೂ ಕೂಡ ಮಾರುತಿ ಸುಜುಕಿ ಕಂಪನಿಯ(Maruti Suzuki Company) ಕಾರಿನ ಆರ್ಡರ್ಗಳು ಇನ್ನು ಬಾಕಿ ಉಳಿದಿದೆ.

ಕಂಪನಿಯು ಈವರೆಗೂ ಬರೋಬ್ಬರಿ 2 ಲಕ್ಷ ಯೂನಿಟ್ ಕಾರಿನ ಆರ್ಡರ್ ಬಾಕಿ ಉಳಿಸಿಕೊಂಡಿದ್ದು, ಅದರಲ್ಲೂ ವಿಶೇಷವಾಗಿ ಏಳು ಸೀಟಿನ ಎರ್ಟಿಗಾ ಕಾರ್(Ertiga Car) ಖರೀದಿಸಲು ಗ್ರಾಹಕರು ಕಾಯುತ್ತಿದ್ದಾರೆ. ಆದರೆ ಹೆಚ್ಚಾಗಿರುವ ಡಿಮ್ಯಾಂಡ್ನಿಂದಾಗಿ ಮುಂಗಡ ಹೂಡಿಕೆ ಮಾಡಿದರು ಕೂಡ ಮಾರುತಿ ಎರ್ಟಿಗಾ(Maruti Ertiga) ದೊರಕುತ್ತಿಲ್ಲ, ಕಂಪನಿ ಹಂಚಿಕೊಂಡಿರುವ ಅಧಿಕೃತ ಮಾಹಿತಿಯ ಪ್ರಕಾರ, ಇನ್ನು 60,000 ಮಾರುತಿ ಎರ್ಟಿಗಾ ಹಾಗೂ 1,10,000 ಯೂನಿಟ್ CNG ಇಂಜಿನ್ ಕಾರಿನ ಆರ್ಡರ್ಗಳು ಬಾಕಿ ಇದೆ.

Image Source: CarWale

ಮಾರುತಿ ಎರ್ಟಿಗಾ ಕಾರ್ ಖರೀದಿ ಮಾಡಲು ಕಾಯುತ್ತಿರುವ ಒಂದು ಲಕ್ಷ ಗ್ರಾಹಕರು

advertisement

ಮಾರುತಿ ಕಾರುಗಳ ಡಿಮ್ಯಾಂಡ್ ಈ ವರ್ಷ ಹೆಚ್ಚಿರುವ ಕಾರಣ ಕಂಪನಿಯು ತಮ್ಮ 2 ಲಕ್ಷ ಆರ್ಡರ್ಗಳನ್ನು ಪೂರೈಕೆ ಮಾಡುವ ಸಲುವಾಗಿ ಹೊಚ್ಚ ಹೊಸ ಮನೆಸರ್ ಪ್ಲಾಂಟ್(Manesar Plant) ತಯಾರು ಮಾಡಲಾಗಿದ್ದು, ಈ ಪ್ಲಾಂಟ್ ನಲ್ಲಿ ವರ್ಷಾಂತ್ಯದೊಳಗೆ ಒಂದು ಲಕ್ಷ ಯೂನಿಟ್ ಮಾರುತಿ ಎರ್ಟಿಗಾ ಕಾರ್ ತಯಾರು ಮಾಡಿ ಗ್ರಾಹಕರಿಗೆ ಒದಗಿಸುವ ಭರವಸೆಯನ್ನು ಕಂಪನಿ ನೀಡಿದೆ. ಜೊತೆಗೆ ಮಾರುತಿ ಸುಜುಕಿ ಕಂಪನಿಯು ಬರೋಬ್ಬರಿ ಆರು ಲಕ್ಷ ಸಿಎನ್‌ಜಿ ಮಾರುತಿ ಎರ್ಟಿಗಾ ಕಾರನ್ನು 2025ರ ಹಣಕಾಸು ವರ್ಷ(20-25 Financial Year)ರೊಳಗೆ ಮಾರಾಟ ಮಾಡುವ ಗುರಿಯನ್ನು ಹೊಂದಿದೆ.

ಗಗನಕ್ಕೇರಿದ ಮಾರುತಿ ಎರ್ಟಿಗಾ CNG ಸೇಲ್

2024ರ ವರ್ಷ ಆರಂಭದಲ್ಲಿಯೇ ಮಾರುತಿ ಎರ್ಟಿಗಾ ಕಾರನ್ನು 1೦‌ಲಕ್ಷ ಯೂನಿಟ್ಗಳಲ್ಲಿ ಮಾರಾಟ ಮಾಡಲಾಗಿತ್ತು. ಹಲವಾರು ರೂಪಾಂತರಗಳಲ್ಲಿ ಲಭ್ಯವಿರುವಂತಹ ಈ ಕಾರಿನತ್ತ ಜನರು ಬಹಳ ಆಕರ್ಷಿತರಾಗಿ ಮುಂಗಡ ಬುಕಿಂಗ್ ಮಾಡತೊಡಗಿದ್ದಾರೆ, 2019ರವರೆಗೂ ಮಾರುತಿ ಸುಜುಕಿ ಕಂಪನಿಯ MPV ಕಾರುಗಳು 5 ಲಕ್ಷ ಯೂನಿಟ್ಗಳಲ್ಲಿ ಮಾರಾಟವಾಗಿತ್ತು. ಆದರೆ 2020 ಫೆಬ್ರವರಿ ತಿಂಗಳಿನಲ್ಲಿ ಕಂಪನಿ ಸಿಎನ್ಜಿ ಕಾರನ್ನು ಲಾಂಚ್ ಮಾಡಿ ಕಂಪೆನಿ ತನ್ನ ಬೇಡಿಕೆಯನ್ನು ಹೆಚ್ಚಿಸಿಕೊಂಡಿದೆ.

4 ವರ್ಷದಲ್ಲಿ 5 ಲಕ್ಷ ಯೂನಿಟ್ ಮಾರಾಟ!

5 ಲಕ್ಷ ಯೂನಿಟ್ಗಳಲ್ಲಿ MPV ಕಾರ್ ಗಳನ್ನು ಮಾರಾಟ ಮಾಡಲು ಮಾರುತಿ ಸುಜುಕಿ ಕಂಪನಿ 7 ವರ್ಷ ತೆಗೆದುಕೊಂಡರೆ, CNG ಇಂಧನದ 5 ಲಕ್ಷ ಯೂನಿಟ್ ಕಾರನ್ನು ಕೇವಲ 4 ವರ್ಷದಲ್ಲಿ ಮಾರಾಟ ಮಾಡಿದ್ದಾರೆ. ಹೀಗಾಗಿ ದಿನದಿಂದ ದಿನಕ್ಕೆ ಮಾರುತಿ ಎರ್ಟಿಗಾ ಸಿ ಎನ್ ಜಿ ಕಾರಿನ(Maruti Ertiga CNG car) ಬೇಡಿಕೆ ಗಗನಕ್ಕೇರಿದ್ದು, ಒಂದು ಲಕ್ಷ ಯೂನಿಟ್ ಆರ್ಡರ್ಗಳು(1 lakh unit orders) ಇನ್ನು ಬಾಕಿ ಉಳಿದಿವೆ, ಹೀಗಾಗಿ ಕಾರನ್ನು ತಯಾರು ಮಾಡಿ ಗ್ರಾಹಕರ ಆರ್ಡರ್ ಗಳನ್ನು ಪೂರೈಸುವ ಸಲುವಾಗಿ ಮಾರುತಿ ಸುಜುಕಿ ಕಂಪನಿ ಮತ್ತೊಂದು ಪ್ಲಾಂಟ್ ಖರೀದಿ ಮಾಡಿದ್ದಾರೆ.

advertisement

Leave A Reply

Your email address will not be published.