Karnataka Times
Trending Stories, Viral News, Gossips & Everything in Kannada

Fortuner Alternatives: 50 ಲಕ್ಷದ ಫಾರ್ಚುನರ್ ಬದಲು ಅದರ ಅರ್ಧಕ್ಕಿಂತ ಕಡಿಮೆ ಬೆಳೆಯ ಈ ಕಾರಿಗೆ ಮುಗಿಬಿದ್ದ ಜನ! ರಗಡ್ ಲುಕ್

advertisement

Alternative To Toyota Fortuner Car: ದೊಡ್ಡ ಸ್ಪೇಸ್ ಅನ್ನು ಹೊಂದಿರುವಂತಹ ಕಾರುಗಳಲ್ಲಿ ಭಾರತ ಮಾರುಕಟ್ಟೆಯಲ್ಲಿ ಟೊಯೋಟಾ ಫಾರ್ಚುನರ್ ಕಾರು ಮುಂಚೂಣಿ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತದೆ ಆದರೆ ಇವತ್ತಿನ ಈ ಲೇಖನದಲ್ಲಿ ನಾವು ಹೇಳೋದಕ್ಕೆ ಹೊರಟಿರೋದು ಅದಕ್ಕಿಂತಲೂ ಉತ್ತಮ ಸ್ಪೇಸ್ ಹೊಂದಿರುವ ಏಳು ಸೀಟರ್, ಆಸನದ ವ್ಯವಸ್ಥೆಯನ್ನು ಹೊಂದಿರುವ Mahindra Scorpio N ಕಾರಿನ ಬಗ್ಗೆ. ಹಾಗಿದ್ರೆ ಬನ್ನಿ ಈ ಕಾರಿನ ವಿಶೇಷತೆ ಏನು ಹಾಗೂ ಬೆಲೆ ಏನು ಎಂಬುದನ್ನು ಇವತ್ತಿನ ಈ ಲೇಖನದ ಮೂಲಕ ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ.

Mahindra Scorpio N

ಟೊಯೋಟಾ ಫಾರ್ಚುನರ್ ಕಾರು ಭಾರತದ ಮಾರುಕಟ್ಟೆಯಲ್ಲಿ ಅತ್ಯಂತ ನಂಬಿಕಸ್ಥ ಹಾಗೂ ಅತ್ಯಂತ ಸುರಕ್ಷಿತ ಕಾರುಗಳಲ್ಲಿ ಒಂದಾಗಿ ಕಾಣಿಸಿಕೊಳ್ಳುತ್ತದೆ ನಿಜ ಆದರೆ ಅದರ ಬೆಲೆ ಆಕಾಶವನ್ನು ಮುಟ್ಟುವ ರೀತಿಯಲ್ಲಿದೆ. ಹೀಗಾಗಿ ಅದೇ ಫೀಚರ್ ಅನ್ನು ಹೊಂದಿರುವಂತಹ ಅದಕ್ಕಿಂತಲೂ ಕಡಿಮೆ ಬೆಲೆಯ ಕಾರಣ ನೋಡುವಾಗ ಪ್ರತಿಯೊಬ್ಬರು ಕೂಡ ಆಯ್ಕೆ ಮಾಡುವಂತಹ ಒಂದೇ ಒಂದು ಕಾರು ಅಂದ್ರೆ ಅದು Mahindra Scorpio N.

ಫಾರ್ಚುನರ್ ಕಾರಿಗೆ ಮಾರುಕಟ್ಟೆಯಲ್ಲಿ ಖಡಕ ಟಕ್ಕರ್ ನೀಡುವಂತಹ ಕಾರ್ ಎಂದು ಹೇಳಬಹುದಾಗಿದೆ. ಮೈಲೇಜ್ ಬಗ್ಗೆ ಮಾತನಾಡುವುದಾದರೆ ಇದು 14 ರಿಂದ 16 ಕಿಲೋಮೀಟರ್ಗಳ ಮೈಲೇಜ್ ಅನ್ನು ನೀಡುತ್ತದೆ. ಇದಕ್ಕೆ ಹೋಲಿಸಿದರೆ ಟೊಯೋಟಾ ಫಾರ್ಚುನರ್ ಕೇವಲ 10 ರಿಂದ 12 ಕಿಲೋಮೀಟರ್ಗಳ ಮೈಲೇಜ್ ನೀಡುತ್ತದೆ. ಈ ಮೂಲಕ Mahindra Scorpio N ಕಾರು ಇಂಧನ ದಕ್ಷತೆಯನ್ನು ಕೂಡ ಹೆಚ್ಚಾಗಿ ಹೊಂದಿದೆ ಎಂಬುದು ತಿಳಿದು ಬರುತ್ತದೆ.

advertisement

ಫೀಚರ್ಸ್ ಹಾಗೂ ಟೆಕ್ನಾಲಜಿಯ ವಿಚಾರದಲ್ಲಿ ಕೂಡ Mahindra Scorpio N ಕಾರು ಯಾವುದೇ ನಿಟ್ಟಿನಲ್ಲಿ ಕೂಡ ಫಾರ್ಚುನರ್ ಕಾರಿಗೆ ಹಿಂದೆ ಬಿದ್ದಿಲ್ಲ. ದೊಡ್ಡಮಟ್ಟದ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ನೀವು ನೋಡಬಹುದಾಗಿದೆ. ADAS, ಸೋನಿ ಸೌಂಡ್ ಸಿಸ್ಟಮ್, ವಿಭಿನ್ನ ಡ್ರೈವಿಂಗ್ ಮೋಡ್ಸ್ ಹಾಗೂ ಕನೆಕ್ಟೆಡ್ ಕಾರ್ ಫೀಚರ್ಸ್ ಗಳನ್ನು ಕೂಡ ನೀವು ನೋಡಬಹುದಾಗಿದೆ. ಫಾರ್ಚುನರ್ ನಂತೆ ಆಫ್ ರೋಡ್ ಗಳಲ್ಲಿ ಕೂಡ Mahindra Scorpio N ಪವರ್ ಫುಲ್ ಪರ್ಫಾರ್ಮೆನ್ಸ್ ನೀಡುವಂತಹ ಸಾಮರ್ಥ್ಯವನ್ನು ಹೊಂದಿದೆ. ಇಂಜಿನ್ ಸಾಮರ್ಥ್ಯ ಫಾರ್ಚುನರ್ ನಲ್ಲಿ ಸ್ವಲ್ಪಮಟ್ಟಿಗೆ ಮೇಲಿದ್ದರೂ ಕೂಡ ಒಟ್ಟಾರೆ ಪರ್ಫಾರ್ಮೆನ್ಸ್ ನಲ್ಲಿ Mahindra Scorpio N ಕಾರು ಫಾರ್ಚುನರ್ ಗೆ ಸಮಾನಾಂತರವಾಗಿ ಪೈಪೋಟಿ ನೀಡುತ್ತದೆ.

Image Source: CarTrade

Mahindra Scorpio N ವಾಹನವನ್ನು ಖರೀದಿಸುವರು ಉತ್ತಮವಾದ ಸ್ಪೇಸ್ ಹಾಗೂ ಪವರ್ ಫುಲ್ ಹಾಗೂ ಕಂಫರ್ಟೆಬಲ್ ಆರಾಮದ ಡ್ರೈವಿಂಗ್ ಹಾಗೂ ಪ್ರಯಾಣದ ನಿರೀಕ್ಷೆಯನ್ನು ಮಾಡಬಹುದಾಗಿದೆ.

Mahindra Scorpio N ಖರೀದಿಸುವುದರಿಂದ ಹಣದಲ್ಲಿ ಕೂಡ ಉಳಿತಾಯ.

ಟೊಯೋಟಾ ಫಾರ್ಚುನರ್ ಕಾರ್ ಅನ್ನು ನೀವು ಖರೀದಿ ಮಾಡುವ ಸಂದರ್ಭದಲ್ಲಿ 33 ರಿಂದ 51 ಲಕ್ಷ ರೂಪಾಯಿಗಳವರೆಗೆ ಕೂಡ ಖರ್ಚು ಮಾಡಬೇಕಾದ ಪರಿಸ್ಥಿತಿ ಒದಗಿ ಬರುತ್ತದೆ. Mahindra Scorpio N ಕಾರನ್ನು ಖರೀದಿ ಮಾಡುವಾಗ ಕೇವಲ ನೀವು ಬೇಸಿಕ್ ವರ್ಷನ್ಗೆ 13.60 ಲಕ್ಷ ರೂಪಾಯಿ ಎಕ್ಸ್ ಶೋರೂಮ್ ಬೆಲೆಯಿಂದ ಪ್ರಾರಂಭಿಸಿ ಟಾಪ್ ವೇರಿಯಂಟಿಗೆ 24.95 ಲಕ್ಷ ರೂಪಾಯಿಗಳ ವರೆಗೆ ಖರ್ಚು ಮಾಡಬೇಕಾಗಿರುತ್ತದೆ. ಹೀಗಾಗಿ ಫಾರ್ಚುನರ್ ಕಾರಿಗೆ ಹೋಲಿಸಿದರೆ ಬೆಲೆಯಲ್ಲಿ ಕೂಡ ಸಾಕಷ್ಟು ಉಳಿತಾಯವನ್ನು ಮಾಡಬಹುದಾಗಿದೆ.

advertisement

Leave A Reply

Your email address will not be published.