Karnataka Times
Trending Stories, Viral News, Gossips & Everything in Kannada

Gruha Lakshmi: ಗೃಹಲಕ್ಷ್ಮಿ 9ನೇ ಕಂತಿನ ಹಣದ ಬಗ್ಗೆ ಬಿಗ್ ಅಪ್ಡೇಟ್!

advertisement

ಇಂದು ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳು ಬಹಳಷ್ಟು ಪ್ರಚಲಿತ ದಲ್ಲಿದೆ.ಈ ಭಾರಿಯ ಲೋಕ ಸಭೆ ಚುನಾವಣೆ ಗೂ ಗ್ಯಾರಂಟಿ ಯೋಜನೆಯ ಅಸ್ತ್ರ ವನ್ನೇ ಕಾಂಗ್ರೆಸ್ ಸರಕಾರ ಬಳಸಿದೆ. ಹೆಚ್ಚಿನ‌ ಜನರು ಈ ಭಾರಿ ನಮ್ಮ ಮತ ಕಾಂಗ್ರೆಸ್ ಗೆ ಎನ್ನುವ ಅಭಿಪ್ರಾಯ ತಿಳಿಸಿದ್ದಾರೆ. ಅದರಲ್ಲೂ ಮಹಿಳೆಯರು ಹೆಚ್ಚು ಧನಾತ್ಮಕ ವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಇದಕ್ಕೆ‌ ಮುಖ್ಯ ಕಾರಣ ಮಹಿಳೆಯರ ಪರ ಜಾರಿಗೆ ತಂದಂತಹ ಗೃಹಲಕ್ಷ್ಮಿ ಯೋಜನೆ (Gruha Lakshmi Yojana). ಈ ಯೋಜನೆಯ ಮೂಲಕ ತಿಂಗಳಿಗೆ ಎರಡು ಸಾವಿರ ಮೊತ್ತ ವನ್ನು ಮಹಿಳೆಯರು ಪಡೆಯುತ್ತಿದ್ದಾರೆ.

ಒಂಭತ್ತನೆಯ ಕಂತಿನ ಹಣ ಬಿಡುಗಡೆ?

ಹೆಚ್ಚಿನ ಮಹಿಳೆಯರು ಈ ಯೋಜನೆಯ ಸೌಲಭ್ಯ ವನ್ನು ಬಳಸಿಕೊಳ್ಳುತ್ತಿದ್ದಾರೆ.‌ ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಯ 9ನೇ ಕಂತಿನ ವರೆಗೆ ಹಣ ಬಿಡುಗಡೆಯಾಗಿದ್ದು. ಈ ಒಂದು 9ನೇ ಕಂತಿನ ಹಣ ನಿಮಗೂ ಸಹ ಬಿಡುಗಡೆ ಆಗಿದೆಯೇ ಇಲ್ಲವೆ? ಎಂದು ಪರಿಶೀಲನೆ ಮಾಡಬಹುದು.

ಇವರಿಗೆ ಬಿಡುಗಡೆ:

 

Image Source: iStock

 

ಈಗಾಗಲೇ 9ನೇ ಕಂತಿನ ಹಣ ಕೂಡ ಸರಕಾರ ಬಿಡುಗಡೆ ಮಾಡಿದ್ದು ದಾಖಲೆ ಸರಿ ಇದ್ದ ಮಹಿಳೆಯರಿಗೆ ಇದೇ ಏಪ್ರಿಲ್ 25 ರಂದು ಖಾತೆಗೆ ಹಣ ಜಮೆ ಯಾಗಿದ್ದು ಎಲ್ಲ ಮಹಿಳೆಯರಿಗೂ ಹಂತ ಹಂತ ವಾಗಿ ಬಿಡುಗಡೆ ಯಾಗಲಿದೆ.‌ ದಾಖಲೆ ಸರಿ‌ ಇದ್ದ ಪ್ರತಿಯೊಬ್ಬ ಮಹಿಳೆಗೂ ಈ ಒಂದು ಗೃಹಲಕ್ಷ್ಮಿ ಹಣ ಬಿಡುಗಡೆ ಯಾಗಲಿದ್ದು ಮೇ 15ರ ಒಳಗೆ ಎಲ್ಲಾ ಮಹಿಳೆಯರಿಗೂ ಬಿಡುಗಡೆ ಯಾಗಬಹುದು ಎನ್ನುವ ಮಾಹಿತಿ ವಿವಿಧ ಮೂಲದಿಂದ ಲಭ್ಯವಾಗಿದೆ.

advertisement

ಪರಿಶೀಲನೆ ಮಾಡಿ:

ಒಂದು ವೇಳೆ ನಿಮಗೆ ಈ ಗೃಹಲಕ್ಷ್ಮಿ ಯೋಜನೆಯ ಹಣ (Gruha Lakshmi Money) ನಿಮ್ಮ ಖಾತೆಗೆ ಜಮಾ ಆಗಿಲ್ಲವೆಂದರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ನಿಮ್ಮ ಆಧಾರ್ ಕಾರ್ಡ್ ಅಥವಾ ರೇಷನ್ ಕಾರ್ಡ್ (Ration Card) ಪಡೆದುಕೊಂಡು ಹೋಗಿ ಅಲ್ಲಿ ಪರಿಶೀಲನೆ ಮಾಡಬಹುದು.

ತಾಂತ್ರಿಕ ಸಮಸ್ಯೆ ಪರಿಹಾರ:

ಈ ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಯ ಹಣ ಪಡೆಯಲು ಕೆಲವು ಮಹಿಳೆಯರಿಗೆ ತಾಂತ್ರಿಕ ಸಮಸ್ಯೆ ಉಂಟಾಗಿದೆ. ಹಾಗಾಗಿ ಪ್ರತಿ ಜಿಲ್ಲೆಯ ಅಂಗನವಾಡಿ ಕಾರ್ಯಕರ್ತ ರಿಗೆ ಪ್ರತಿ ಮಹಿಳೆಯ ಮನೆಗೆ ಭೇಟಿ ನೀಡಿ, ಹಣ ಬಾರದೆ ಇದ್ದಲ್ಲಿ ಅವರ ಬ್ಯಾಂಕ್ ಖಾತೆ, ಆಧಾರ್ ಜೋಡಣೆ, ರೇಷನ್ ಸಮಸ್ಯೆ ಬಗೆಹರಿಸಲು ಕೋರುವಂತೆ ಸೂಚನೆ ನೀಡಲಾಗಿದೆ.

ಮತ್ತೆ ಅರ್ಜಿ ಹಾಕಬಹುದು:

ಈ ಗೃಹಲಕ್ಷ್ಮಿ ಯೋಜನೆಯ ಹಣ ಬಾರದೇ ಇದ್ದಲ್ಲಿ ಮತ್ತೆ ಅರ್ಜಿ ಸಲ್ಲಿಕೆ ಮಾಡಲು ಅವಕಾಶ ಇದೆ. ಈಗಾಗಲೇ ಕೆಲವು ಮಹಿಳೆಯರು ಈ ಗೃಹಲಕ್ಷ್ಮಿ ಯೋಜನೆಗೆ ನೊಂದಣಿ ಮಾಡಿದ್ದರೂ ಒಂದು ಕಂತಿನ ಹಣ ಜಮೆಯಾಗಿಲ್ಲ. ಇದಕ್ಕೆ ತಮ್ಮ ದಾಖಲೆಗಳನ್ನು ಸರಿ ಪಡಿಸುವ ಮೂಲಕ ಮತ್ತೆ ಈ ಯೋಜನೆಗೆ ಅರ್ಜಿ ಹಾಕಬಹುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಸ್ಪಷ್ಟನೆ ನೀಡಿದ್ದಾರೆ.

advertisement

Leave A Reply

Your email address will not be published.