Karnataka Times
Trending Stories, Viral News, Gossips & Everything in Kannada

Crop Insurance: ರೈತರಿಗೆ ಬೆಳೆ ವಿಮೆ ಪರಿಹಾರದ ಬಗ್ಗೆ ಬಿಗ್ ಆಪ್ಡೆಟ್ ನೀಡಿದ ಸರಕಾರ! ಹಣ ಬಾರದೇ ಇದ್ದವರು ಗಮನಿಸಿ

advertisement

ಈ ಬಾರಿ ಮಳೆ ಅಭಾವ ಮತ್ತು ಸರಿಯಾಗಿ ಕೃಷಿ ಸಂಬಂಧಿಸಿದ ವಾತಾವರಣ ಇಲ್ಲದ ಹಿನ್ನೆಲೆಯಲ್ಲಿ ಕೃಷಿ ಭೂಮಿಗೆ ಸಾಕಷ್ಟು ತೊಂದರೆ ಆಗಿದೆ. ಅದೇ ರೀತಿ ಕೃಷಿಕರು ಸಾಲ ಮಾಡಿ ಇತ್ತ ಬೆಳೆಯ ಫಸಲು ಬಾರದೆ ಅತ್ತ ಸಾಲವನ್ನು ಮರುಪಾವತಿ ಮಾಡಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ನಡುವೆ ಕೃಷಿಯನ್ನೇ ನಂಬಿಕೊಂಡು ಆದಾಯ ಅರಸುವವರಿಗಂತೂ ಒಪ್ಪತ್ತಿನ ಊಟಕ್ಕೂ ಕಷ್ಟವಾಗುತ್ತಿದೆ. ಹಾಗಾಗಿ ಕೃಷಿಯನ್ನೇ ನಂಬಿಕೊಂಡಿರುವವರ ಪರವಾಗಿ ರಾಜ್ಯ ಮತ್ತು ಕೇಂದ್ರ ಸರಕಾರವು ಬೆಳೆ ವಿಮೆ (Crop Insurance) ಪರಿಹಾರ ನೀಡಲು ಮುಂದಾಗಿದೆ. ಈ ಬಗ್ಗೆ ಕೇಂದ್ರದ ಅನುದಾನ ಮಂಜೂರಾಗಲು ಸಹ ಸತತ ಪ್ರಯತ್ನ ಪಡುತ್ತಲಿದದ್ದು ಅನುದಾನ ಸಹ ಸಿಕ್ಕಿದೆ.

ರಾಜ್ಯದಲ್ಲಿ ಅನೇಕ ಕಡೆ ಬೆಳೆ ನಷ್ಟ ಆದ ಬಗ್ಗೆ ಕೇಂದ್ರಕ್ಕೆ ಅನುದಾನ ಕೋರಿ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಮನವಿ ಪತ್ರ ಬರೆದಿತ್ತು. ಇತ್ತೀಚೆಗಷ್ಟೇ ಬೆಳೆ ವಿಮೆ (Crop Insurance) ಪರಿಹಾರ ನಿಧಿಗೆ ರಾಜ್ಯ ಬಯಸಿದ್ದ ಪ್ರಮಾಣದಷ್ಟು ಮೊತ್ತ ನೀಡದೆ ಸ್ವಲ್ಪ ಭಾಗ ಮಾತ್ರವೇ ಕೇಂದ್ರದಿಂದ ಮಂಜೂರಾಗಿತ್ತು. ಈ ನಡುವೆ ರಾಜ್ಯ ಸರಕಾರವು ಮೊದಲ ಕಂತಿನ ಬೆಳೆ ವಿಮೆ ಈಗಾಗಲೇ ಬಿಡುಗಡೆ ಮಾಡಿದ್ದು ಇದೀಗ ಎರಡನೇ ಕಂತಿನ ಹಣ ಬಿಡುಗಡೆ ಮಾಡುವ ಮುನ್ನವೇ ಕೇಂದ್ರದ ಸ್ವಲ್ವ ಭಾಗ ಅನುದಾನ ಸಿಕ್ಕಿದ್ದು ಪಿಎಂ ಫಸಲ್ ಭೀಮಾ ಯೋಜನೆ (PM Fasal Bima Yojana) ಅಡಿಯಲ್ಲಿ ರೈತರ ಖಾತೆಗೆ ಹಣ ಜಮೆ ಆಗಲಿದೆ.

ಬೆಳೆ ವಿಮೆ ಪರಿಹಾರ ಎಂದರೇನು?

 

Image Source: Housing

 

advertisement

ರೈತರಿಗೆ ಕೃಷಿ ಉದ್ದೇಶ ಈಡೇರಿಸುವ ದೃಷ್ಟಿಯಿಂದ ಈ ಬೆಳೆ ವಿಮೆ (Crop Insurance) ಪರಿಹಾರ ವಿಧಾನ ಜಾರಿಗೆ ತರಲಾಗಿದೆ‌. ಇದರ ಹೆಸರೇ ಸೂಚಿಸುವಂತೆ ಬೆಳೆ ನಷ್ಟ ಕಂಡು ಬಂದಂತಹ ಸಂದರ್ಭದಲ್ಲಿ ಅನುದಾನದ ಮೂಲಕ ಪರಿಹಾರ ಮೊತ್ತ ರೈತರ ಖಾತೆಗೆ ಜಮೆ ಮಾಡಲಾಗುವುದು. ಪ್ರತೀ ವರ್ಷದಂತೆ ಈ ವರ್ಷವೂ ಕೂಡ ರೈತರ ಖಾತೆಗೆ ಹೆಕ್ಟೇರ್ ಗೆ 10,000ಗಳ ಬೆಳೆ ವಿಮೆ ಪರಿಹಾರ ನೀಡಲಾಗುತ್ತಿದ್ದು ಬೆಲೆಗಳ ಏರಿಳಿತದಿಂದ ಉಂಟಾಗುವ ತೊಂದರೆ ಮತ್ತು ನೈಸರ್ಗಿಕ ವಿಕೋಪ ಕಂಡು ಬಂದಾಗ ರೈತರಿಗೆ ನೆರವಾಗುವುದು ಈ ಯೋಜನೆಯ ಮುಖ್ಯ ಉದ್ದೇಶ ಆಗಿದೆ.

ಈ ವೆಬ್ಸೈಟ್ ಬಳಸಿ:

ನಿಮಗೆ ಬೆಳೆ ವಿಮೆ ಪರಿಹಾರ ಮೊತ್ತ ಸಿಗುತ್ತಾ ಎಂದು ತಿಳಿಯಲು https//pmfby.gov.in ಸರಕಾರಿ ಅಧಿಕೃತ ವೆಬ್‌ಸೈಟ್‌ನಲ್ಲಿ ಭೇಟಿ ನೀಡಿ ಅದರಲ್ಲಿ ರಶೀದಿ ಸಂಖ್ಯೆ ಇತರ ಮಾಹಿತಿ ಕೇಳಲಾಗುವುದು ಬಳಿಕ Check Status ಮೇಲೆ ಕ್ಲಿಕ್ ಮಾಡಿದರೆ ಅದರಲ್ಲಿ ಅನೇಕ ಮಾಹಿತಿ ತೆರೆದು ಕೊಳ್ಳಲಿದ್ದು ನೀವು ಬೆಳೆ ವಿಮಾ ಪರಿಹಾರ ಮೊತ್ತ ಎಂಬ ಮೇಲೆ ಕ್ಲಿಕ್ ಮಾಡಬೇಕು. ಈ ರೀತಿಯಾಗಿ ಯೋಜನೆಯ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆ ಅಥವಾ ಇಲ್ಲ ಎಂಬುದನ್ನು ನೀವು ಖಾತರಿ ಪಡಿಸಿಕೊಳ್ಳಬಹುದು.

ಯಾವಾಗ ಹಣ ಜಮೆ ಆಗುತ್ತದೆ?

ಬೆಳೆ ವಿಮಾ, ಖಾರಿಫ್ ವಿಮಾ ಪರಿಹಾರ ನಿಧಿ 2024ರ ಅಡಿಯಲ್ಲಿ 75% ನಷ್ಟು ವಿಮಾ ಮೊತ್ತವನ್ನು ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ಆಯ್ದ ಭಾಗಕ್ಕೆ ಪಟ್ಟಿಯಲ್ಲಿ ಹೆಸರು ಇದ್ದರೆ ಕೂಡಲೇ ಹಣ ಮಂಜೂರಾಗಲಿದೆ. ಪ್ರವಾಹ ಹಾನಿ, ಹವಾಮಾನ ವೈಪರೀತ್ಯಗಳಿಂದ ಹಾಗೂ ಮಾರುಕಟ್ಟೆಯ ಅಸಮತೋಲನ ಸಂದರ್ಭದಲ್ಲಿ ಈ ಬೆಳೆ ವಿಮೆ ಪರಿಹಾರ ಮೊತ್ತ ನೀಡಲಾಗುತ್ತಿದೆ. ಈ ಬಾರಿ ಎರಡನೇ ಕಂತಿನ ಬೆಳೆ ವಿಮಾ ಪರಿಹಾರ ಮೊತ್ತವು ಮೇ 9 -15 ರೊಳಗೆ ರೈತರ ಖಾತೆಗೆ ಹಣ ಜಮೆ ಆಗಲಿದೆ ಎಂದು ಮಾಹಿತಿ ಮೂಲಗಳು ಈ ಬಗ್ಗೆ ಮಾಹಿತಿ ನೀಡಿದೆ.

advertisement

Leave A Reply

Your email address will not be published.