Karnataka Times
Trending Stories, Viral News, Gossips & Everything in Kannada

Crop Insurance: ಬೆಳೆ ವಿಮೆ ಬಗ್ಗೆ ಹೊಸ ಅಪ್ಡೇಟ್! ಮೊಬೈಲ್ ನಂಬರ್ ಕೊಟ್ಟವರು ಕೂಡಲೇ ಈ ಕೆಲಸ ಮಾಡಿ

advertisement

ಇಂದು ಸರಕಾರವು ರೈತರ ಅಭಿವೃದ್ಧಿ ಗಾಗಿ ಹಲವು ರೀತಿಯ ಯೋಜನೆಯನ್ನು ಹಮ್ಮಿಕೊಳ್ಳುತ್ತಲೆ ಬಂದಿದೆ. ಅದರಲ್ಲಿ ಮುಖ್ಯವಾಗಿ ರೈತರ ಕೃಷಿಗೆ ಪೂರಕವಾಗುವಂತೆ ಕೃಷಿ ಯಂತ್ರಗಳ‌ಬಳಕೆ, ಬೀಜ ಬಿತ್ತನೆ ಇತ್ಯಾದಿಗಳಿಗೆ ಸಹಾಯಹಸ್ತವನ್ನು ಸರಕಾರ ನೀಡುತ್ತ ಬಂದಿದೆ.‌ ಅದೇ ರೀತಿ ರೈತರಿಗೆ ಬೆಳೆ‌ನಷ್ಟ ಆದಂತಹ ಸಂದರ್ಭದಲ್ಲಿ ಸಹಾಯ ನೀಡುವ ‌ನಿಟ್ಟಿನಲ್ಲಿ ಬೆಳೆ ವಿಮೆ ಯೋಜನೆ (Crop Insurance Scheme) ಯನ್ನು ಸಹ ಸರಕಾರ ಜಾರಿಗೆ ತಂದಿದೆ.

ವಿಮಾ ರಕ್ಷಣೆ ಸೌಲಭ್ಯ:

 

Image Source: iStock

 

ಕೃಷಿಯಾಧಾರಿತ ಯೋಜನೆಗಳನ್ನು ಗ್ರಾಮೀಣ ಮಾರುಕಟ್ಟೆಯಲ್ಲಿ ಜಾರಿಗೆ ತರಬೇಕು. ರೈತರನ್ನು ಪ್ರೋತ್ಸಾಹ ಮಾಡುವ ಮೂಲಕ ಬೆಳೆ ವಿಮೆಯ ವ್ಯಾಪ್ತಿಯನ್ನು ಹೆಚ್ಚಿಸುವ ಮೂಲಕ ಬಿತ್ತನೆಯ ಪ್ರದೇಶದ ಕೃಷಿಗೆ 50%ಗೆ ವಿಮಾ ರಕ್ಷಣೆ ನೀಡಲಿದೆ.

ರೈತರಿಗೆ ತಾವು ಬೆಳೆದಂತಹ ಬೆಳೆಗಳು ನಷ್ಟವಾದ ಸಂದರ್ಭದಲ್ಲಿ ಅರ್ಥಿಕವಾಗಿ ಸಹಾಯ ಮಾಡುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರ ಒಟ್ಟಿಗೆ ಸೇರಿಸಿ ಖಾಸಗಿ ವಿಮಾ ಕಂಪನಿಗಳ ಸಹಯೋಗದಲ್ಲಿ ರೈತರು ತಮ್ಮ ಬೆಳೆಗಳಿಗೆ ವಿಮಾ (Crop Insurance) ಸೌಲಭ್ಯ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ.

advertisement

ಬೆಳೆ ನಷ್ಟ ಪರಿಹಾರ:

 

Image Source: Gaon Connection

 

ಅಧಿಸೂಚಿತ ಘಟಕದಲ್ಲಿ ಶೇಕಡಾ 25ಕ್ಕಿಂತ ಹೆಚ್ಚು ವಿಸ್ತೀರ್ಣದಲ್ಲಿ ಬೆಳೆ ನಷ್ಟವಾದರೆ ಅಂತಹ ಅಧಿಸೂಚಿತ ಘಟಕದಲ್ಲಿ ಒಳಗೊಂಡ ಬೆಳೆ ವಿಮೆ (Crop Insurance) ಗೆ ಒಳಪಟ್ಟ ರೈತರಿಗೆ ಪರಿಹಾರ ನೀಡಲಾಗುತ್ತದೆ. ಬೆಳೆ ನಷ್ಟವಾದ ರೈತರಿಗೆ ಮಾತ್ರ ಸಮೀಕ್ಷೆ ಗನುಗುಣವಾಗಿ ಬೆಳೆ ನಷ್ಟ ಪರಿಹಾರವನ್ನು ನೀಡಲಾಗುತ್ತದೆ.

ಬೆಳೆ ವಿಮೆ ನೋಂದಣಿ ಮಾಡಿಸಿಕೊಂಡ ರೈತರ ಜಮೀನು ಸ್ಧಳವು ಪ್ರಕೃತಿ ವಿಕೋಪ, ಮಳೆ, ಭೂ ಕುಸಿತ, ಬೆಳೆ ಮುಳುಗಡೆ, ಸ್ಪೋಟ ಇತ್ಯಾದಿ ಯಿಂದ ಹಾನಿ ಯಾದರೆ ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಶೇ. 90 ರಷ್ಟು ಹಾಗೂ ಮಳೆಯಾಶ್ರಿತ ಬೆಳೆಗಳಿಗೆ ಶೇ. 90 ರಷ್ಟು ಬೆಳೆ ವಿಮೆ ನಿಗದಿಪಡಿಸಲಾಗಿದೆ.

ಚೆಕ್ ಮಾಡಿಕೊಳ್ಳಿ:

  • ಬೆಳೆ ವಿಮೆ (Crop Insurance) ಗೆ ಅರ್ಜಿ ಹಾಕಿರುವ ರೈತರು Samrakshane ಪೋರ್ಟಲ್ ಮೂಲಕ ಮಾಹಿತಿ ಪಡೆಯಬಹುದು. ಇದರಲ್ಲಿ ಮೊದಲಿಗೆ Crop Insurance Amount ಎಂಬ ಮೇಲೆ ಕ್ಲಿಕ್ ಮಾಡಿ ಇದರಲ್ಲಿ ಸಂರಕ್ಷಣೆ ಆಪ್ಚನ್ ‌ಬರಲಿದೆ.
  • ನಂತರದಲ್ಲಿ Select Insurance Year ಆಯ್ಕೆ ಇರಲಿದ್ದು ವರ್ಷ ಆಯ್ಕೆ ಮಾಡಿಕೊಂಡು Select Insurance Season Kharif ಇದನ್ನು ಆಯ್ಕೆ ಮಾಡಿಕೊಂಡು Go ಬಟನ್ ಮೇಲೆ ಕ್ಲಿಕ್ ಮಾಡಿ.
  • ನಂತರದಲ್ಲಿ Check Status ಬಟನ್ ಮೇಲೆ ಕ್ಲಿಕ್ ಮಾಡಿ Check Status By Type ಆಪ್ಚನ್ ಇದರಲ್ಲಿ Mobile no ಅನ್ನು ಆಯ್ಕೆ ಮಾಡಿಕೊಂಡು ಮೊಬೈಲ್ ನಂಬರ್ ಮತ್ತು ಕ್ಯಾಪ್ಚ್ ಕೋಡ್ (Captcha) ಕೋಡ್ ಅನ್ನು ನಮೂದಿಸಿ.
  • ಬಳಿಕ ನಿಮಗೆ ಅರ್ಜಿ ಸಂಖ್ಯೆ ತಿಳಿಯಲಿದ್ದು ತದನಂತರ Select ಬಟನ್‌ ಕ್ಲಿಕ್ ಮಾಡಿ ಬಳಿಕ View details ನೋಡಿದ್ರೆ Survey No. and Crop Detail ಇದರಲ್ಲಿ ವಿಮೆ ಪರಿಹಾರದ‌ ಒಟ್ಟು ಮೊತ್ತದ ಮಾಹಿತಿ ತಿಳಿಯಲಿದೆ.

advertisement

Leave A Reply

Your email address will not be published.