Karnataka Times
Trending Stories, Viral News, Gossips & Everything in Kannada

Tata Electric Car: 500 km ಮೈಲೇಜ್ ನೀಡುವ ಟಾಟಾ ಎಲೆಕ್ಟ್ರಿಕ್ ಕಾರ್ ಶೀಘ್ರದಲ್ಲೇ ಮಾರುಕಟ್ಟೆಗೆ! ಬೆಲೆ ಎಷ್ಟು ಗೊತ್ತಾ?

advertisement

ಭಾರತೀಯ ಗ್ರಾಹಕರು ಎಲೆಕ್ಟ್ರಿಕ್ ಕಾರುಗಳತ್ತ ಮೊರೆ ಹೋಗುತ್ತಿರುವ ಕಾರಣ ಮಾರುಕಟ್ಟೆಯಲ್ಲಿ ಇವಿ ವಾಹನಗಳಿಗೆ ಹೆಚ್ಚಿನ ಬೇಡಿಕೆ ಇದೆ ಇಂತಹ ಡಿಮ್ಯಾಂಡ್ ನಡುವೆಯೂ ಟಾಟಾ ಕಂಪನಿ (Tata Company) ಇತರೆ ಕಂಪನಿಯ ಎಲೆಕ್ಟ್ರಿಕ್ ಕಾರ್ಗಳಿಗೆ ಸೆಡ್ಡು ಹೊಡೆಯುವ ಫೀಚರ್ಸ್ ಹಾಗೂ ಮೈಲೇಜ್ ಕೆಪ್ಯಾಸಿಟಿ (Mileage Capacity) ಯನ್ನು ಅಳವಡಿಸಿ ಜನರಿಗೆ ಅತ್ಯುತ್ತಮ ಕಾರುಗಳನ್ನು ಒದಗಿಸುವ ಮೂಲಕ ಮೇಲುಗೈ ಸಾಧಿಸಿದೆ. ಹೀಗೆ ಹಲವಾರು ವಿಭಿನ್ನ ಕಾರುಗಳನ್ನು ಎಲೆಕ್ಟ್ರಿಕ್ ಇಂಧನದ ಮೋಡ್ನಲ್ಲಿ ಪರಿಚಯಿಸಿರುವ ಟಾಟಾ, ಇದೀಗ SUV ಸೆಗ್ಮೆಂಟ್ (SUV Segment) ನಲ್ಲಿ ಮತ್ತೊಂದು ಅತ್ಯಾಕರ್ಷಕ ಟಾಟಾ ಹರಿಯರ್ ಇವಿ ಕಾರನ್ನು ಬಿಡುಗಡೆ ಮಾಡಲು ಸಜ್ಜಾಗಿದೆ.

ಒಮ್ಮೆ ಚಾರ್ಜ್ ಮಾಡಿದ್ರೆ 500 km ರೇಂಜ್ :

 

Image Source: CarWale

 

ವೇಗದ ಚಾರ್ಜಿಂಗ್ ಮೊಡ್ನಲ್ಲಿ ಟಾಟಾ ಹ್ಯಾರಿಯರ್ ಇವಿ (Tata Harrier EV) ಕಾರನ್ನು ಒಮ್ಮೆ ಸಂಪೂರ್ಣವಾಗಿ ಚಾರ್ಜ್ ಮಾಡಿದರೆ ಹೈವೇಯಲ್ಲಿ ಬರೋಬ್ಬರಿ 500 km ರೇಂಜ್ ನೀಡಲಿದೆ. ಒಂದೇ ಒಂದು ಮೋಟರ್ ನಲ್ಲಿ ಅತಿ ಹೆಚ್ಚಿನ ಶಕ್ತಿ ಹಾಗೂ ಟಾರ್ಕ್ (Power and Torque) ಅನ್ನು ಉತ್ಪಾದಿಸುವ ಸಾಮರ್ಥ್ಯವಿದ್ದು, ಇದು ವಾಹನಕ್ಕೆ ಹೆಚ್ಚಿನ ಮೈಲೇಜ್ ನೀಡಲು ಸಹಕರಿಸುತ್ತದೆ.

advertisement

Tata Harrier EV Features:

 

Image Source: CarWale

 

ಟಾಟಾ ಹ್ಯಾರಿಯರ್ ಎಲೆಕ್ಟ್ರಿಕ್ ಎಸ್ಯುವಿಯಲ್ಲಿ ಆಧುನಿಕ ಫೀಚರ್ಸ್ಗಳಿದ್ದು ಕಾರಿನ ಒಳಾಂಗಣದಲ್ಲಿ ಬಹಳ ವಿಶಾಲವಾದ ಜಾಗ, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 10.25 ಇಂಚಿನ ಟಚ್ ಸ್ಕ್ರೀನ್ ಇನ್ಸಟೈನ್ಮೆಂಟ್ ಸಿಸ್ಟಮ್ ಜೊತೆಗೆ ವಯರ್ಲೆಸ್ ಆಪಲ್ ಮತ್ತು ಆಂಡ್ರಾಯ್ಡ್ ಕಾರ್ ಪ್ಲೇ, ಎರಡು ಸ್ಟ್ರೋಕ್ ನ ಸ್ಟೇರಿಂಗ್ ಚಕ್ರ, ವಯರ್ಲೆಸ್ ಚಾರ್ಜಿಂಗ್ ತಂತ್ರಜ್ಞಾನ(Wireless Charging Technology) ಮತ್ತು ಎಲ್ಇಡಿ ಹೆಡ್ ಲೈಟ್ & ಟೇಲ್ ಲೈಟ್ಗಳ ಅಳವಡಿಕೆ ಇರಲಿದೆ.

Tata Harrier EV Price:

ಟಾಟಾ ಹ್ಯಾರಿಯರ್ ಇವಿ (Tata Harrier EV) ಕಾರನ್ನು 2025ರ ವರ್ಷಾರಂಭದಲ್ಲಿ ಭಾರತೀಯ ಆಟೋ ಮೊಬೈಲ್ ಮಾರುಕಟ್ಟೆಗೆ ಪರಿಚಯಿಸುವ ಸಕಲ ತಯಾರಿಯನ್ನು ನಡೆಸುತ್ತಿದೆ. ಕಾರಿನಲ್ಲಿ ಎಲ್ಲಾ ನೂತನ ವೈಶಿಷ್ಟತೆಗಳನ್ನು ಅಳವಡಿಸಿ ವಿಶೇಷ ವಿನ್ಯಾಸದೊಂದಿಗೆ ತಯಾರಿಸುತ್ತಿದ್ದಾರೆ. ವಿಭಿನ್ನ ರೂಪಾಂತರಗಳು ಹಾಗೂ ಬಣ್ಣಗಳಲ್ಲಿ ಗ್ರಾಹಕರಿಗೆ ದೊರಕುವಂತಹ ಟಾಟಾ ಹ್ಯಾ ರಿಯರ್ ಕಾರಿಗೆ 25 ಲಕ್ಷ ಶೋರೂಮ್ ಬೆಲೆಯನ್ನು ನಿಗದಿಪಡಿಸಬಹುದೆಂಬ ಮಾಹಿತಿ ಇದೆ.

advertisement

Leave A Reply

Your email address will not be published.