Karnataka Times
Trending Stories, Viral News, Gossips & Everything in Kannada

Bank Loan: ಬ್ಯಾಂಕ್ ಸಾಲ ಕಟ್ಟುತ್ತಿರುವ ಎಲ್ಲರಿಗೂ ಭರ್ಜರಿ ಗುಡ್ ನ್ಯೂಸ್! ಹೊಸ ತಿರುವು

advertisement

ಇಂದು ಹಣದ ವ್ಯವಹಾರ ಹೆಚ್ಚಾದಂತೆ ಗ್ರಾಹಕರು ಬ್ಯಾಂಕ್ ಗಳ ಜೊತೆ ವ್ಯವಹಾರ ಮಾಡುವ ಸಂಖ್ಯೆ ಸಹ ಹೆಚ್ಚಾಗಿದೆ. ಅದೇ ರೀತಿ ಇಂದು ಬ್ಯಾಂಕುಗಳು ಸಹ ನಿಯಮ ಮೀರಿ ಕೆಲವೊಂದು ಸಮಸ್ಯೆ ಯನ್ನು ‌ಗ್ರಾಹಕರಿಗೆ ಉಂಟು ಮಾಡುತ್ತಿದೆ.

ಭಾರತೀಯ ರಿಸರ್ವ್ ಬ್ಯಾಂಕ್ (RBI) ಗ್ರಾಹಕರ ಹಿತ ದೃಷ್ಟಿಯಿಂದ ಅನೇಕ ಹೊಸ ಹೊಸ ರೀತಿಯ ಯೋಜನೆಗಳನ್ನು ರೂಪಿಸುತ್ತ ಬರ್ತಾ ಇದೆ.‌ ಕೆಲವೊಂದು ಬ್ಯಾಂಕ್‌ ಗಳು ಗ್ರಾಹಕರಿಗೆ ಹೆಚ್ಚಿನ ಬಡ್ಡಿದರ ವಿಧಿಸುವ ಮೂಲಕ ಗ್ರಾಹಕರಿಗೆ ಮೋಸ ಮಾಡುವ ಪ್ರಕ್ರಿಯೆ ಕಂಡು ಬಂದಿದೆ. ಹೀಗಾಗಿ ಇದನ್ನು ತಡೆಯುವ ನಿಟ್ಟಿನಲ್ಲಿ ಅರ್ ಬಿ ಐ ಕೆಲವು ಕ್ರಮಗಳನ್ನ ತೆಗೆದುಕೊಳ್ಳುತ್ತಿದೆ. ಇದೀಗ ಈ ಬಗ್ಗೆ ಸೂಚನೆಯನ್ನು ನೀಡಿದ್ದು ಬ್ಯಾಂಕ್‌ಗಳು ಮತ್ತು ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳಿಗೆ ಅರ್ ಬಿ ಐ ಸೂಚನೆಗಳನ್ನು ನೀಡಿದೆ.

ಆದೇಶ ನೀಡಲಾಗಿದೆ:

 

Image Source: ET Government

 

ಗ್ರಾಹಕರ ಸಾಲದ (Loan) ಮೇಲೆ ಹೆಚ್ಚಿನ ಬಡ್ಡಿ (High Interest) ವಿಧಿಸುವ, ಹೆಚ್ಚುವರಿ ಮೊತ್ತ ವಿಧಿಸುವ ಪ್ರಕರಣಗಳನ್ನ ಆರ್‌ಬಿಐ (RBI) ಕಂಡು ಹಿಡಿದಿದ್ದು ಈ ಬಗ್ಗೆ ಆದೇಶ ಕೂಡ ನೀಡಿದೆ. ಗ್ರಾಹಕರಿಂದ ವಿಧಿಸುವ ಬಡ್ಡಿಯು ನ್ಯಾಯಯುತ ಮತ್ತು ಪಾರದರ್ಶಕವಾಗಿದೆ ಎಂದು ಇತ್ಯರ್ಥ ಮಾಡಿಕೊಳ್ಳಲು ಹಣಕಾಸು ಸಂಸ್ಥೆಗಳು ತಕ್ಷಣವೇ ತಮ್ಮ ನೀತಿಗಳನ್ನ ಪರಿಶೀಲಿಸಲು ಆದೇಶ ನೀಡಲಾಗಿದೆ.

advertisement

ಈ ವಂಚನೆ ಕಂಡು ಬಂದಿದೆ:

 

Image Source: Mint

 

  • ಕೆಲವು ಬ್ಯಾಂಕುಗಳು ಹೆಚ್ಚಿನ ಸಾಲ (Loan) ಪಾವತಿಗಳನ್ನ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಮಾಡುತ್ತಿವೆ. ಆದರೆ ಒಟ್ಟು ಸಾಲದ ಮೊತ್ತವನ್ನು ಆಧರಿಸಿ ಬಡ್ಡಿಯನ್ನು ಲೆಕ್ಕ ಹಾಕುತ್ತಿದೆ.
  • ಅದೇ ರೀತಿ ಬ್ಯಾಂಕುಗಳು ಗ್ರಾಹಕರಿಗೆ ಸಾಲ ವಿತರಣೆ ಅಥವಾ ಮರುಪಾವತಿಯ ಸಂದರ್ಭದಲ್ಲಿ, ಸಾಲದ ಬಾಕಿಯ ಅವಧಿಯ ಬದಲಾಗಿ ಇಡೀ ತಿಂಗಳಿಗೆ ಬಡ್ಡಿಯನ್ನ ನೀಡಿ ಗ್ರಾಹಕರಿಗೆ‌ ತೊಂದರೆ‌ ಉಂಟಾಗುವಂತೆ ಮಾಡಿದೆ.
  • ಸಾಲ ಒಪ್ಪಂದಕ್ಕೆ ಸಹಿ ಮಾಡಿದ ದಿನಾಂಕದಿಂದ ಬಡ್ಡಿಯನ್ನ ವಿಧಿಸಿ. ಹಣವನ್ನ ಗ್ರಾಹಕರಿಗೆ ನೀಡಿದ ದಿನಾಂಕದಿಂದ ಬಡ್ಡಿಯನ್ನ ಲೆಕ್ಕ ಹಾಕಬೇಕು. ಈ ವಿಚಾರದಲ್ಲೂ ಗ್ರಾಹಕರಿಗೆ ತೊಂದರೆ ಉಂಟು‌ಮಾಡುತ್ತಿದೆ.

ಈ ಬಗ್ಗೆ ತಿಳಿಸಿದೆ:

ಬ್ಯಾಂಕ್‌ಗಳು, ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳು ಹೆಚ್ಚು ಬಡ್ಡಿಯನ್ನು ವಿಧಿಸುವಲ್ಲಿ ಬ್ಯಾಂಕುಗಳು ಹೆಚ್ಚುವರಿ ಶುಲ್ಕ, ಬಡ್ಡಿ ವಸೂಲಿ ಮಾಡಿದ ಬಡ್ಡಿಯನ್ನ ಗ್ರಾಹಕರಿಗೆ‌ ನೀಡಬೇಕು. ಗ್ರಾಹಕರೊಂದಿಗೆ ವ್ಯವಹಾರ ನಡೆಸುವಾಗ ನ್ಯಾಯಸಮ್ಮತೆ ಮತ್ತು ಪಾರದರ್ಶಕತೆ ಅರಿವು ಇರಬೇಕು. ಹೆಚ್ಚು ಬಡ್ಡಿಯನ್ನ ವಿಧಿಸುವ ಪ್ರಮಾಣಿತವಲ್ಲದ ಅಭ್ಯಾಸಗಳು ಸರಿಯಲ್ಲ ಎಂದು ಆರ್‌ಬಿಐ ಹೇಳಿದೆ. ಇಂತಹ ಪ್ರಕರಣ ಬೆಳಕಿಗೆ ಬಂದರೆ, ಖಚಿತಪಡಿಸಿಕೊಳ್ಳಲು ಆರ್‌ಬಿಐ (RBI) ಮೇಲ್ವಿಚಾರಣಾ ತಂಡಗಳು ಪರಿಶೀಲನೆ ಮಾಡುವ ಮೂಲಕ ಕ್ರಮ ಕೈಗೊಳ್ಳುತ್ತವೆ.

advertisement

Leave A Reply

Your email address will not be published.