Karnataka Times
Trending Stories, Viral News, Gossips & Everything in Kannada

Loan: ತಂದೆ ತಾಯಿಯ ಈ ರೀತಿಯ ಸಾಲವನ್ನು ಮಕ್ಕಳು ಕಟ್ಟಬೇಕಿಲ್ಲ! ಬಂತು ಹೊಸ ರೂಲ್ಸ್

advertisement

ಪ್ರತಿಯೊಬ್ಬರೂ ಜೀವನದಲ್ಲಿ ತಮ್ಮದೇ ಆದಂತಹ ಸ್ವಂತ ಮನೆಯನ್ನು ಹೊಂದೋದಕ್ಕೆ ಇಷ್ಟ ಪಡ್ತಾರೆ ಆದರೆ ಪ್ರತಿಯೊಬ್ಬರ ಬಳಿ ಕೂಡ ಅದನ್ನು ಕಟ್ಟೋದಕ್ಕೆ ಅಷ್ಟೇ ಪ್ರಮಾಣದಲ್ಲಿ ಹಣ ಇರುತ್ತೆ ಅಂತ ಹೇಳುವುದಕ್ಕೆ ಸಾಧ್ಯವಿಲ್ಲ. ಅದರಲ್ಲಿ ವಿಶೇಷವಾಗಿ ಪೋಷಕರು ತಾವು ಹೋಗುವುದಕ್ಕಿಂತ ಮುಂಚೆ ತಮ್ಮ ಮಕ್ಕಳಿಗಾಗಿ ಮನೆಯನ್ನು ಮಾಡಿಟ್ಟು ಹೋಗಬೇಕು ಅನ್ನೋದಾಗಿ ಯೋಚಿಸುತ್ತಾರೆ. ಅದೇ ಕಾರಣಕ್ಕಾಗಿ ಅವರು ಹೋಂ ಲೋನ್ (Home Loan) ಪಡೆದುಕೊಂಡು ಮನೆಯನ್ನು ಕಟ್ಟಿರುತ್ತಾರೆ.

ಈ ಸಂದರ್ಭದಲ್ಲಿ ಆಚಾತುರ್ಯದಿಂದಾಗಿ ಒಂದು ವೇಳೆ ನಿಮ್ಮ ಪೋಷಕರು ಹೋಂ ಲೋನ್ ಅನ್ನು ಕಟ್ಟದೆ ಮರಣ ಹೊಂದಿದರೆ ಆ ಸಂದರ್ಭದಲ್ಲಿ ಲೋನ್ (Loan) ಹಣವನ್ನು ಯಾರು ಕಟ್ಟ ಬೇಕಾಗಿರುತ್ತದೆ ಎನ್ನುವುದಾಗಿ ಗೊಂದಲದಲ್ಲಿ ಸಿಲುಕಿ ಕೊಳ್ಳಬಹುದು. ಬನ್ನಿ ಇದರ ಸಾದ್ಯ ಸಾಧ್ಯತೆಗಳು ಹಾಗೂ ನಿಜವಾದ ಮಾಹಿತಿಯನ್ನು ಇವತ್ತಿನ ಈ ಲೇಖನದ ಮೂಲಕ ತಿಳಿಯೋಣ.

ನಿಮ್ಮ ಪೋಷಕರು ಲೋನ್ ಕಟ್ಟದೆ ಇದ್ದಲ್ಲಿ ಏನಾಗುತ್ತದೆ?

 

Image Source: Mint

 

advertisement

ಖಂಡಿತವಾಗಿ ಹೋಂ ಲೋನ್ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಯಾವುದಾದರು ಆಸ್ತಿಯನ್ನು ಅಡವಿಟ್ಟೆ ಲೋನ್ (Advait Loan) ಮಾಡ್ಬೇಕಾಗಿರುತ್ತದೆ. ಆದರೆ ನೀವು ನಿಮ್ಮ ಪೋಷಕರು ಹೋಂ ಲೋನ್ (Home Loan) ಮಾಡುವ ಸಂದರ್ಭದಲ್ಲಿ ಇವೆರಡು ರೀತಿಯ ಇನ್ಸೂರೆನ್ಸ್ ಮೂಲಕ ನೀವು ಹಣದ ಮರುಪಾವತಿಯನ್ನು ತಪ್ಪಿಸಿಕೊಳ್ಳಬಹುದಾದ ಸಾಧ್ಯತೆ ಕೂಡ ಇದೆ. ಹಾಗಿದ್ರೆ ಬನ್ನಿ ಅವೆರಡನ್ನು ಕೂಡ ಸರಿಯಾದ ರೀತಿಯಲ್ಲಿ ತಿಳಿದುಕೊಳ್ಳೋಣ.

1. ಮೊದಲನೇದಾಗಿ ಲೋನ್ ಇನ್ಶೂರೆನ್ಸ್ (Loan Insurance) ಒಂದು ವೇಳೆ ನಿಮ್ಮ ಪೋಷಕರು ಹೋಂ ಲೋನ್ ಮಾಡುವ ಸಂದರ್ಭದಲ್ಲಿ ಅದಕ್ಕೆ ಲೋನ್ ಇನ್ಶೂರೆನ್ಸ್ (Loan Insurance) ಮಾಡಿಸಿದ್ರೆ ಆ ಸಂದರ್ಭದಲ್ಲಿ ನೀವು ತಲೆಕೆಡಿಸಿಕೊಳ್ಳಬೇಕಾದ ಅಗತ್ಯ ಇರುವುದಿಲ್ಲ. ಯಾಕೆಂದ್ರೆ ನಿಮ್ಮ ಪೋಷಕರು ಎಷ್ಟು ಹಣಕ್ಕೆ ಲೋನ್ ಇನ್ಸೂರೆನ್ಸ್ ಮಾಡಿರ್ತಾರೋ ಅದನ್ನು ನೀವು ಕಟ್ಟಬೇಕಾಗಿರುವಂತಹ ಹೋಂ ಲೋನ್ (Home Loan) ಗೆ ಸಮನಾಗಿ ಪಾವತಿ ಮಾಡಿಸಿ ಉಳಿದಿರುವಂತಹ ಹಣವನ್ನು ಮಾತ್ರ ನೀವು ಹೋಂ ಲೋನ್ ರೂಪದಲ್ಲಿ ಕಟ್ಟಿದ್ರೆ ಸಾಕಾಗಿರುತ್ತದೆ.

2. ಒಂದು ವೇಳೆ ಲೋನ್ ಇನ್ಶೂರೆನ್ಸ್ (Loan Insurance) ಮಾಡದೆ ಟರ್ಮ್ ಇನ್ಸೂರೆನ್ಸ್ ಮಾಡಿದರೆ ಆ ಸಂದರ್ಭದಲ್ಲಿ ಟರ್ಮ್ ಇನ್ಸೂರೆನ್ಸ್ ಹಣವನ್ನು ಕಂಪನಿಯವರು ನಿಮಗೆ ನೀಡುತ್ತಾರೆ ಹಾಗೂ ಆ ಹಣವನ್ನು ನೀವು ಲೋನ್ ಕಟ್ಟುವುದಕ್ಕೆ ಪಾವತಿ ಮಾಡುವ ಮೂಲಕ ಹೋಂ ಲೋನ್ ಅನ್ನು ಕಟ್ಟಬಹುದಾಗಿದೆ.

ಸಾಮಾನ್ಯವಾಗಿ ನೀವು ಈ ಸಂದರ್ಭದಲ್ಲಿ ನಮ್ಮ ಪೋಷಕರು ಹೋಂ ಲೋನ್ ಮಾಡಿರೋದು ಹೀಗಾಗಿ ನಾವು ಕಟ್ಟಬೇಕಾದ ಅಗತ್ಯ ಇದೆಯಾ ಅನ್ನೋದಾಗಿ ನೀವು ಕೇಳಬಹುದು. ಖಂಡಿತವಾಗಿ ಯಾಕೆಂದರೆ ನೀವು ಪೋಷಕರ ನಿಜವಾದ ಉತ್ತರಾಧಿಕಾರಿ ಆಗಿರುವ ಕಾರಣದಿಂದಾಗಿ ಅವರ ಆಸ್ತಿಯ ಜೊತೆಗೆ ಈ ರೀತಿಯ ಸಾಲಗಳನ್ನು ಕೂಡ ನೀವು ಅವರಿಂದ ಪಡೆದುಕೊಳ್ಳುತ್ತೀರಿ. ಹಾಗೂ ಸರಿಯಾದ ಸಂದರ್ಭದಲ್ಲಿ ಕಟ್ಟದೆ ಹೋದಲ್ಲಿ ಅದರ ಪರಿಣಾಮಗಳನ್ನು ಕೂಡ ನೀವೇ ಎದುರಿಸಬೇಕಾಗಿರುತ್ತದೆ ಅನ್ನೋದನ್ನ ನೆನಪಿನಲ್ಲಿಟ್ಟುಕೊಳ್ಳಿ.

advertisement

Leave A Reply

Your email address will not be published.