Karnataka Times
Trending Stories, Viral News, Gossips & Everything in Kannada

Tata: ಬಡವರಿಗಾಗಿ ಬರುತ್ತಿದೆ ಟಾಟಾದ ಈ ಹೊಸ ಕಾರು! 12 ಲಕ್ಷದ ಒಳಗೆ ಬೆಲೆ, BMW ಗಿಂತ ಬೆಂಕಿ ಲುಕ್

advertisement

ಇತ್ತೀಚಿನ ವರ್ಷಗಳಲ್ಲಿ ಎಲೆಕ್ಟ್ರಾನಿಕ್ ವಾಹನಗಳಿಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದವರೆಗೂ ಕೂಡ ಅಧಿಕ ಬೇಡಿಕೆ ಇದೆ. ಈಗಾಗಲೇ ಎಲೆಕ್ಟ್ರಾನಿಕ್ ಕಾರಿನ ಮಾರುಕಟ್ಟೆಯಲ್ಲಿ ಅನೇಕ ವಾಹನಗಳು ಪ್ರಖ್ಯಾತಿಯನ್ನು ಪಡೆದಿದ್ದು ಅಂತವುಗಳಲ್ಲಿ ಟಾಟಾ ಮೋಟಾರ್ಸ್ ಅನ್ನು ಕೂಡ ನಾವು ಕಾಣಬಹುದು. ಟಾಟಾ ಮೋಟಾರ್ಸ್ (Tata Motors) ಎಲೆಕ್ಟ್ರಾನಿಕ್ ವಾಹನಗಳಲ್ಲಿ ಬಹಳ ಪ್ರಾಬಲ್ಯ ಪಡೆದಿದೆ. ಭಾರತದಲ್ಲಿ ಎಲೆಕ್ಟ್ರಾನಿಕ್ ವಾಹನಗಳ ಮಾರಾಟದ ವಿಚಾರವಾಗಿ ಟಾಟಾ ಮೋಟರ್ಸ್ ಮಹತ್ವದ ಸಾಧನೆಯನ್ನು ಮಾಡಿದ್ದು ಈ ಬಗ್ಗೆ ವಿಶೇಷ ಮಾಹಿತಿ ಇಲ್ಲಿದೆ.

ಟಾಟಾ ಮೋಟರ್ಸ್ (Tata Motors) ವಾಹನವು ಭಾರತದಲ್ಲಿನ ಒಟ್ಟು ಎಲೆಕ್ಟ್ರಾನಿಕ್ ವಾಹನದಲ್ಲಿ 70% ಗಿಂತ ಅಧಿಕ ಮಾರಾಟ ಆಗಿದೆ ಎಂಬುದು ತಿಳಿದು ಬಂದಿದ್ದು ಟಾಟಾ ಮೋಟರ್ಸ್ ವಾಹನಕ್ಕೆ ಹೆಮ್ಮೆ ತಂದ ವಿಚಾರ ಎನ್ನಬಹುದು. ಹಾಗಾಗಿ ಜನರ ಅಪೇಕ್ಷೆ ಮೇಲೆಗೆ ಎಲೆಕ್ಟ್ರಾನಿಕ್ ವಾಹನದ ಹೊಸ ಆವೃತ್ತಿ ಬಿಡುಗಡೆ ಮಾಡಲು ಸಜ್ಜಾಗಿದ್ದು ಈ ಹೊಸ ವಾಹನ ಕೂಡ ಮಾರುಕಯಲ್ಲಿ ಸಿಂಹ ಪಾಲು ಪಡೆಯುವ ನಿರೀಕ್ಷೆ ಇದೆ.

ಯಾವುದು ಈ ವಾಹನ?

 

Image Source: Aaj Tak

 

ಟಾಟಾ ಮೋಟರ್ಸ್ ಕಂಪೆನಿ ವತಿಯಿಂದ ಟಾಟಾ ಕರ್ವ್ ಅನ್ನೊ ಎಲೆಕ್ಟ್ರಾನಿಕ್ ವಾಹನವನ್ನು ಬಿಡುಗಡೆ ಮಾಡಲು ಮುಂದಾಗಲಾಗುತ್ತಿದೆ. ಟಾಟಾ ಕರ್ವ್ ICE (Tata Curvv ICE) ಆವೃತ್ತಿ ಬಿಡುಗಡೆ ಆಗುತ್ತಿದೆ. ಇದರ ಬಗ್ಗೆ ಇತ್ತೀಚೆಗಷ್ಟೇ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್ ಪೊ ದಲ್ಲಿ ಕಾರಿನ ಆವೃತ್ತಿ ಬಗ್ಗೆ ಪ್ರದರ್ಶನ ಮಾಡಲಾಗಿತ್ತು. ಆಗ ಇದು ಭವಿಷ್ಯದಲ್ಲಿ ಭರವಸೆಯ ಎಲೆಕ್ಟ್ರಾನಿಕ್ ಕಾರು ಆಗಲಿದೆ ಎಂಬುದು ಅನೇಕರಲ್ಲಿ ಬಹು ದೊಡ್ಡ ನಿರೀಕ್ಷೆಯನ್ನು ಹುಟ್ಟಿಸಿದೆ. 2030ರ ವೇಳೆಗೆ ಟಾಟಾ ಕರ್ವ್ ನಲ್ಲೇ ಅನೇಕ ಪ್ರತ್ಯೇಕ ಆವೃತ್ತಿ ಇಡೀ ಜಗತ್ತಿನಾದ್ಯಂತ ಪ್ರಖ್ಯಾತಿ ಪಡೆಯುವ ನಿರೀಕ್ಷೆ ಇದ್ದು ಇದರ ಫೀಚರ್ಸ್ ತುಂಬಾ ಆಕರ್ಷಕವಾಗಿದೆ.

advertisement

ಏನೆಲ್ಲ ವೈಶಿಷ್ಟ್ಯ ಇದೆ?

 

Image Source: CarWale

 

  • ಅಗಲವಾದ LED ಲೈಟ್ ಬಾರ್ ಹೊಂದಿದೆ.
  • ಸ್ಪ್ಲಿಟ್ LED ಸೆಟಪ್ ಅನ್ನು ಹೊಂದಿದೆ.
  • ಇದರಲ್ಲಿ ಹೆಚ್ಚಿನ ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ವ್ಯವಸ್ಥೆ ಇದೆ.
  • ಒಂದು ಬಾರಿ ಚಾರ್ಜ್ ಮಾಡಿದರೆ 500 km ಚಾಲನೆ ಮಾಡಬಹುದು.
  • 12.3 ಇಂಚಿನ ಟಚ್ ಸ್ಕ್ರೀನ್ ಇನ್ ಫೋಮೆಂಟ್ ಸಿಸ್ಟಂ ಹೊಂದಿದೆ.
  • level 2 ADAS ತಂತ್ರಜ್ಞಾನ ವ್ಯವಸ್ಥೆ ಇದೆ.
  • 360ಡಿಗ್ರಿ ಕ್ಯಾಮರಾ ಸೆಟಪ್
  • ಪೆನರೋಮಿಕ್ ಸನ್ ರೂಫ್ ಅನ್ನು ಹೊಂದಿದೆ.

ಯಾವಾಗ ಬಿಡುಗಡೆ ಆಗಲಿದೆ?

2024ರ ದ್ವಿತೀಯಾರ್ಧದಲ್ಲಿ ಈ ಕರ್ವ್ ಕಾರನ್ನು ಬಿಡುಗಡೆ ಮಾಡುವ ನಿರೀಕ್ಷೆ ಇದೆ. ಈ ಮೂಲಕ ಮುಂಬರುವ Hyundai Creta EV, Maruti Suzuki EVX ನೊಂದಿಗೆ ಪ್ರಬಲ ಪೈಪೋಟಿ ನೀಡಲಿದೆ. ಭಾರತದ ರಸ್ತೆಗೆ ಅನುಗುಣವಾಗಿ ಇದನ್ನು ಸರಿಯಾಗಿ ಚಾಲನೆ ಮಾಡಲು ಸಾಧ್ಯ ಇದೆ ಅಥವಾ ಇಲ್ಲ ಎಂಬ ಬಗ್ಗೆ ಕೂಡ ಈಗಾಗಲೇ ಅನೇಕ ಸಲ ಪರೀಕ್ಷೆ ನಡೆದಿದ್ದು ಇಲ್ಲಿನ ಓಡಾಟಕ್ಕೆ ಅನುಕೂಲಕರವಾಗಲಿದೆ. ಬೆಲೆ ಕೂಡ 12 ಲಕ್ಷದ ಒಳಗೆ ಇರಲಿದೆ.

advertisement

Leave A Reply

Your email address will not be published.