Karnataka Times
Trending Stories, Viral News, Gossips & Everything in Kannada

Tata Motors: ದೇಶಕ್ಕೆ ಸಿಹಿಸುದ್ದಿ ಕೊಟ್ಟ ರತನ್ ಟಾಟಾ! ಈ ರಾಜ್ಯದಲ್ಲಿ 9000 ಕೋಟಿ ಹೂಡಿಕೆ, 5000 ಜನರಿಗೆ ಉದ್ಯೋಗ

advertisement

ದೇಶದ ಅತ್ಯಂತ ಹಳೆಯ ವ್ಯಾಪಾರ ಸಂಸ್ಥೆಗಳಲ್ಲಿ ಒಂದಾದ ಟಾಟಾ ಗ್ರೂಪ್ (Tata Group) ತಮಿಳುನಾಡು ಸರ್ಕಾರದೊಂದಿಗೆ ದೊಡ್ಡ ಒಪ್ಪಂದಕ್ಕೆ ಸಹಿ ಹಾಕಿದೆ. ಇದರ ಅಡಿಯಲ್ಲಿ, ಐದು ವರ್ಷಗಳ ಅವಧಿಯಲ್ಲಿ 9,000 ಕೋಟಿ ರೂ. ಹೂಡಿಕೆ ಮಾಡಲಿದೆ. ರಾಣಿಪೇಟೆಯಲ್ಲಿ ಕಾರ್ಖಾನೆ ಸ್ಥಾಪಿಸಲು ಟಾಟಾ ಮೋಟಾರ್ಸ್ (Tata Motors) ಮತ್ತು ತಮಿಳುನಾಡು ಸರ್ಕಾರದ ನಡುವೆ ಬುಧವಾರ ತಮಿಳುನಾಡು ಸಿಎಂ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಹಾಕಿದೆ.

ತಮಿಳುನಾಡಿಲ್ಲಿ Tata Motors ಹೊಸ ಘಟಕ:

 

Image Source: Indian Autos Blog

 

ದಕ್ಷಿಣ ಭಾರತದಲ್ಲಿ ಕರ್ನಾಟಕದ ಧಾರವಾಡದಲ್ಲಿ ಟಾಟಾ ಮೋಟಾರ್ಸ್‌ (Tata Motors) ಕಂಪನಿಯು ಮೊದಲ ಘಟಕವನ್ನು ಆರಂಭಿಸಿತ್ತು. ಇದೀಗ ದಕ್ಷಿಣ ಭಾರತದಲ್ಲಿ 2ನೇ ಘಟಕ ತಮಿಳುನಾಡಿನ ರಾಣಿಪೇಟ್‌ನಲ್ಲಿ ತಲೆಯೆತ್ತಲಿದೆ. ಟಾಟಾ ಮೋಟಾರ್ಸ್ ಪರವಾಗಿ, ಸಿಎಫ್‌ಒ ಪಿಬಿ ಬಾಲಾಜಿ ಮತ್ತು ಗೈಡೆನ್ಸ್ ತಮಿಳುನಾಡಿನ ಎಂಡಿ ಮತ್ತು ಸಿಇಒ ವಿ ವಿಷ್ಣು ಅವರು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ (MK Stalin) ಅವರ ಸಮ್ಮುಖದಲ್ಲಿ ಕೈಗಾರಿಕಾ ಸಚಿವ ಟಿ.ಆರ್.ಬಿ.ರಾಜಾ ಉಪಸ್ಥಿತಿಯಲ್ಲಿ ಒಪ್ಪಂದ ಪತ್ರಕ್ಕೆ ಸಹಿ ಹಾಕಿದೆ. ಟಾಟಾ ಜೊತೆಗಿನ ಒಪ್ಪಂದದ ನಂತರ, ಮುಖ್ಯಮಂತ್ರಿಗಳು ನಮ್ಮ ರಾಜ್ಯವು ಭಾರತದ ಅಪ್ರತಿಮ ಆಟೋಮೊಬೈಲ್ ಕೇಂದ್ರವಾಗಿ ತನ್ನ ಸ್ಥಾನವನ್ನು ಮತ್ತಷ್ಟು ಬಲ ಪಡಿಸಿದೆ ಎಂದು ಹೇಳಿದ್ದಾರೆ.

ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ:

advertisement

ಇದರಿಂದ ಸುಮಾರು 5,000 ಮಂದಿಗೆ ಉದ್ಯೋಗ ಸಿಗುವ ನಿರೀಕ್ಷೆ ಇದೆ ಎಂದು ಷೇರು ವಿನಿಮಯ ಕೇಂದ್ರಕ್ಕೆ ಸಲ್ಲಿಸಿದ ಮಾಹಿತಿಯಲ್ಲಿ ಟಾಟಾ ಮೋಟಾರ್ಸ್‌ (Tata Motors) ತಿಳಿಸಿದೆ. ಟಾಟಾ ಮೋಟಾರ್ಸ್‌ ಕಾರು, ಟ್ರಕ್‌ ಮತ್ತು ಬಸ್‌ಗಳ ತಯಾರಿಗೆ ಜನಪ್ರಿಯವಾಗಿದ್ದು, ಹೊಸ ಘಟಕದಲ್ಲಿ ಯಾವ ವಾಹನಗಳನ್ನು ತಯಾರಿಸಲಿದೆ ಎಂಬುದನ್ನು ಬಹಿರಂಗಪಡಿಸಿಲ್ಲ.ವಿಯೆಟ್ನಾಂನ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿ ವಿನ್‌ಫಾಸ್ಟ್ ಮುಂದಿನ ವರ್ಷದ ಮಧ್ಯಭಾಗದಲ್ಲಿ ಉತ್ಪಾದನೆಯನ್ನು ಪ್ರಾರಂಭಿಸುವ ಗುರಿಯೊಂದಿಗೆ ತಮಿಳುನಾಡಿನಲ್ಲಿ ಕಾರ್ಖಾನೆಯನ್ನು ನಿರ್ಮಿಸಲು ಪ್ರಾರಂಭಿಸಿದ ಕೆಲವೇ ದಿನಗಳಲ್ಲಿ ಈ ಪ್ರಕಟನೆ ಹೊರಬಿದ್ದಿದೆ.

ಅಟೋಮೊಬೈಲ್ ಹಬ್ ಆಗ್ತಿದೆ ತಮಿಳುನಾಡು:

ತಮಿಳುನಾಡಿನ ರಾಜಧಾನಿ ಚೆನ್ನೈ ಬಿಎಂಡಬ್ಲ್ಯೂ, ಡೈಮ್ಲರ್, ಹ್ಯುಂಡೈ ಸೇರಿದಂತೆ ಜಾಗತಿಕ ಪ್ರಮುಖ ಕಾರು ತಯಾರಿಕಾ ಕಂಪನಿಗಳನ್ನು ಹೊಂದಿದೆ. ಇದೀಗ ಈ ಪಟ್ಟಿಗೆ ದೇಶೀಯ ಆಟೊಮೊಬೈಲ್‌ ಕಂಪನಿ ಟಾಟಾ ಮೋಟಾರ್ಸ್‌ ಕೂಡ ಸೇರಿಕೊಂಡಿದೆ.

ಟಾಟಾ ಮೋಟಾರ್ಸ್ (Tata Motors) ಷೇರುಗಳಲ್ಲಿ ಏರಿಕೆ:

 

Image Source: Zee Business

 

ಮೋಟಾರ್ಸ್‌ನ ಈ ಹೂಡಿಕೆ ಒಪ್ಪಂದದ ಪ್ರಭಾವ ಗುರುವಾರ ಕಂಪನಿಯ ಷೇರುಗಳ ಮೇಲೂ ಗೋಚರಿಸಿದೆ ಮತ್ತು ಅವು ರಾಕೆಟ್‌ನ ವೇಗದಲ್ಲಿ ಏರಿದೆ. ಕಳೆದ ಕೆಲವು ಸಮಯದಿಂದ ಟಾಟಾ ಮೋಟಾರ್ಸ್ ಷೇರುಗಳಲ್ಲಿ ನಿರಂತರ ಏರಿಕೆ ಕಂಡುಬಂದಿದೆ. ಕಳೆದ ಒಂದು ತಿಂಗಳಲ್ಲಿ ಷೇರಿನ ಬೆಲೆ ಶೇ.133.57ರಷ್ಟು ಏರಿಕೆಯಾಗಿದೆ. ಅಂದರೆ, 3.56 ಲಕ್ಷ ಕೋಟಿ ರೂ.ಗಳಮಾರುಕಟ್ಟೆ ಬಂಡವಾಳ ಹೊಂದಿರುವ ಈ ಕಂಪನಿಯು ತನ್ನ ಹೂಡಿಕೆದಾರರ ಮೊತ್ತವನ್ನು ಒಂದು ತಿಂಗಳಲ್ಲೇ ದ್ವಿಗುಣಗೊಳಿಸಿದೆ. ಈ ಟಾಟಾ ಕಂಪನಿಯ ಪಾಲು ಮಲ್ಟಿಬ್ಯಾಗರ್ ಸ್ಟಾಕ್ ಆಗಿ ಉಳಿದಿದೆ.

advertisement

Leave A Reply

Your email address will not be published.