Karnataka Times
Trending Stories, Viral News, Gossips & Everything in Kannada

Tata Motors: ಟಾಟಾ ಕಂಪೆನಿಯ ಈ ಎರಡು ಕಾರಿಗೆ 5 ಸ್ಟಾರ್ ರೇಟಿಂಗ್, ಸೇಫ್ಟಿ ಯಲ್ಲಿ ಈ ಕಾರಿನ ಮುಂದೆ ಯಾವುದು ಇಲ್ಲ.

advertisement

ಕಾರಿನಲ್ಲಿ ಇತ್ತೀಚೆಗೆ ಅನೇಕ ಆಯ್ಕೆಗಳು ಲಭ್ಯವಾಗುತ್ತಿದೆ. ಟಾಟಾ ಮೋಟರ್ಸ್ (Tata Motors) ಕೂಡ ಭಾರತದಲ್ಲಿ ಅತ್ಯಧಿಕ ಫೀಚರ್ಸ್ ಉಳ್ಳ ಗ್ರಾಹಕ ಸ್ನೇಹಿ ಕಾರು ಉತ್ಪಾದನೆಯಲ್ಲಿ ಮುಂಚುಣಿಯಲ್ಲಿದೆ. ಭಾರತದ ಆರ್ಥಿಕತೆಗೆ ಅನೇಕ ರೀತಿಯಾದ ಕೊಡುಗೆಯನ್ನು ಸಹ ಟಾಟಾ (Tata) ಕಂಪೆನಿ ನೀಡುತ್ತಲಿದ್ದು ಇದೀಗ ಅದೇ ಕಂಪೆನಿಯ ಎರಡು ಪ್ರಮುಖ ಕಾರುಗಳು 5 ಸ್ಟಾರ್ ರೇಟಿಂಗ್ (5 Star Rating) ಪಡೆದಿದೆ‌. ವಿಶ್ವ ಮಟ್ಟದಲ್ಲಿ ಈ ಎರಡು ಕಾರು ಗುರುತಿಸಲ್ಪಡುತ್ತಿದ್ದು ಎಲ್ಲರಿಗೂ ಹೆಮ್ಮೆ ತಂದ ವಿಚಾರವಾಗಿದೆ. ಹಾಗಾಗಿ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ (Nitin Gadkari) ಅವರು ಕೂಡ ಈ ವಿಚಾರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದು ಟಾಟಾ ಕಂಪೆನಿಯ ವಿಶೇಷತೆ ಬಗ್ಗೆ ಮೆಚ್ಚಿ ಹೊಗಳಿದ್ದಾರೆ.

ಯಾವುದು ಆ ಕಾರು?

ಟಾಟಾ ಕಂಪೆನಿಯ ಸಫಾರಿ (Tata Safari) ಮತ್ತು ಹ್ಯಾರಿಯರ್ (Tata Harrier) ಮಾದರಿಯ ಎರಡು ಪ್ರಮುಖ ಕಾರುಗಳು NCAP ನಿಂದ 5 ಸ್ಟಾರ್ ರೇಟಿಂಗ್ ಪಡೆದಿದ್ದು ಬಹುತೇಕ ಟೆಕ್ ಕಂಪೆನಿ ಮತ್ತು ಕಾರು ಕಂಪೆನಿಗಳು ಟಾಟಾ ಕಂಪೆನಿಗೆ ಶುಭ ಕೋರುತ್ತಿದ್ದಾರೆ.

 

 

ಈ ವಿಚಾರದ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಅವರು ಕೂಡ ಟಾಟಾ ಮೋಟರ್ಸ್ (Tata Motors) ನ ಈ ಸಾಧನೆಯನ್ನು ಅಭಿನಂದಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸದ್ಯ ಈ ಸುದ್ದಿ ಎಲ್ಲೆಡೆ ವೈರಲ್ ಆಗುತ್ತಿದೆ.

 

advertisement

 

ಏನಂದ್ರು ಸಚಿವರು?

ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಅವರು ಈ ಒಂದು ಸಾಧನೆ ಮಾಡಿದ್ದ ಟಾಟಾ (Tata) ಕಂಪೆನಿಗೆ ಹೃತ್ಪೂರ್ವಕ ಅಭಿನಂದನೆ. ಹೊಸದಾಗಿ ಜಾರಿಗೆ ಬರುತ್ತಿರುವ ಸಫಾರಿ ಮತ್ತು ಹ್ಯಾರಿಯರ್ ಕಾರು ಗ್ರಾಹಕರ ಸುರಕ್ಷತೆ ದೃಷ್ಟಿಯಿಂದ ಅತ್ಯಾಕರ್ಷಕ ವಾಗಿದೆ. ಭಾರತದಲ್ಲೇ ಮೊಟ್ಟ ಮೊದಲ NCAP ಪ್ರಾಮಾಣಿಕೃತ 5 ಸ್ಟಾರ್ ರೇಟಿಂಗ್ (5 Star Rating) ಅನ್ನು ಕಾರಿಗೆ ನೀಡಲಾಗಿದೆ.

ಭಾರತದಲ್ಲಿ ಟಾಟಾ ಕಂಪೆನಿಯೂ ಈ ಕಾರಿನ ಸುರಕ್ಷತೆಗಾಗಿ BNCAP ಕ್ರಮ ಅನುಸರಿಸಿದ್ದು ಬೇಂಚ್ ಮಾರ್ಕ್ ಫಾರ್ ಗ್ಲೋಬಲ್ (Benchmark for Global) ಅಂದರೆ ಇಲ್ಲಿ ವಹಿಸಲಾಗುವ ಸುರಕ್ಷತೆ ಕ್ರಮ ಜಾಗತಿಕ ಮಟ್ಟಕ್ಕೆ ಪ್ರಶಂಸಿಸುವಂತದ್ದು ಹಾಗಾಗಿ ಈ ಎರಡು ಕಾರುಗಳು ಭಾರತೀಯರ ಬದ್ಧತೆ ಮತ್ತು ಸುರಕ್ಷತೆ ದೃಷ್ಟಿಯಿಂದ ತುಂಬಾ ಉಪಯೋಗ ಹೊಂದಿದೆ ಎಂದು ಟ್ವಿಟ್ಟರ್ ಎಕ್ಸ್ ನಲ್ಲಿ ಪೋಸ್ಟ್ ಬರೆದುಕೊಂಡು ಹಂಚಿಕೊಂಡಿದ್ದಾರೆ. ಹಾಗಾಗಿ ಸದ್ಯ ಟಾಟಾ ಕಂಪೆನಿಯ ವರ್ಚಸ್ಸು ಈ ಹಿಂದಿಗಿಂತಲೂ ಅಧಿಕವಾಗುತ್ತಿದೆ ಎನ್ನಬಹುದು.

ಟಾಟಾ ಕಂಪೆನಿಯೂ ಕಾರು ಮಾತ್ರವಲ್ಲದೇ ಅನೇಕ ಆಹಾರ ಸಾಮಾಗ್ರಿಗಳ ಉತ್ಪಾದನೆಗೆ ಸಹ ಮುಂಚುಣಿಯಲ್ಲಿದೆ. ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ಮನೋ ಭಾವನೆ ಬೆಳೆಸುವ ನೆಲೆಯಲ್ಲಿ ಟಾಟಾ ಕಂಪೆನಿ ಮೊದಲಿಂದಲೂ ಬಹಳ ಸುದ್ದಿಯಲ್ಲಿದೆ. ಗ್ರಾಹಕ ಸ್ನೇಹಿ ಉಪಯುಕ್ತ ಫೀಚರ್ಸ್ ಕಾರಿನ ವೈಶಿಷ್ಟ್ಯ ಹಾಗೂ ಗುಣಮಟ್ಟ ಹೆಚ್ಚಿಸಲಿದ್ದು ಇದರ ಸತತ ಪರಿಶ್ರಮಕ್ಕೆ ಸಂದ ಗೌರವೇ 5 ಸ್ಟಾರ್ ರೇಟಿಂಗ್ ಎಂಬುದರಲ್ಲಿ ಅನುಮಾನವಿಲ್ಲ. ಈ ಲೇಖನ ನಿಮಗೆ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡಿ ತಿಳಿಸಿ.

advertisement

Leave A Reply

Your email address will not be published.