Karnataka Times
Trending Stories, Viral News, Gossips & Everything in Kannada

Yuva Nidhi Scheme: ಡಿಸೆಂಬರ್ 26 ಅಲ್ಲ, ಈ ದಿನದಂದು ಯುವನಿಧಿ ಯೋಜನೆಗೆ ಚಾಲನೆ!

advertisement

ಕಾಂಗ್ರೇಸ್ ಸರಕಾರದ ನಾಲ್ಕು ಗ್ಯಾರಂಟಿ ಯೋಜನೆಗಳು ಈಗಾಗಲೇ ಆರಂಭವಾಗಿ‌ ಜನರು ಬಳಕೆ ಮಾಡಿ ಕೊಳ್ಳುತ್ತಿದ್ದಾರೆ. ಇನ್ನು ಯುವ ನಿಧಿ ಯೋಜನೆ ಯೊಂದು ಬಾಕಿ ಇದ್ದು ಇದೀಗ ಈ ಯೋಜನೆಗೂ‌ ಚಾಲನೆ ಸಿಕ್ಕಿದಂತಾಗಿದೆ. ನಿರುದ್ಯೋಗ ಯುವಕ ಯುವತಿಯರು ಈ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ಇದ್ದು 2022-23ನೇ ಸಾಲಿನಲ್ಲಿ ಯಾವುದೇ ವೃತ್ತಿಪರ ಕೋರ್ಸ್‌ (Professional Course), ಪದವಿ (Degree), ಡಿಪ್ಲೊಮಾ (Diploma) ಉತ್ತೀರ್ಣರಾಗಿ ಇದ್ದ ಆರು ತಿಂಗಳಿನಿಂದ ಕೆಲಸ ಸಿಗದವರಿಗೆ ಈ ಯೋಜನೆ ಅನ್ವಯವಾಗಲಿದೆ.

ಚಾಲನೆ ನೀಡಲಿದ್ದಾರೆ:

ಐದನೇ ‌ಗ್ಯಾರಂಟಿ ಯೋಜನೆ ಯುವನಿಧಿ (Yuva Nidhi Scheme) ಗೆ ಇದೇ ಡಿಸೆಂಬರ್ 26 ರಿಂದ ನೋಂದಣಿ ಆರಂಭ ವಾಗಲಿದ್ದು ಜನವರಿ 12 ರಂದು ಶಿವಮೊಗ್ಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಈ ಯೋಜನೆಗೆ ಚಾಲನೆ ನೀಡಲಿದ್ದಾರೆ‌ ಎನ್ನಲಾಗಿದೆ. ಈ ಮೂಲಕ ಮುಂದಿನ ವರ್ಷ ದಲ್ಲಿ ನಿರುದ್ಯೋಗ ಯುವಕ ಯುವತಿ ಯರಿಗೆ ಈ ಯೋಜನೆಯ ಸೌಲಭ್ಯ ದೊರಕಲಿದೆ. ಈಗಾಗಲೇ ಅರ್ಜಿ ಸಲ್ಲಿಸುವ ದಿನಾಂಕ, ಏನೆಲ್ಲ ಆರ್ಹತೆ ಮಾನದಂಡ ಬೇಕು ಎಂಬುದನ್ನು ತಿಳಿಸಲಾಗಿದೆ.

 

ಅರ್ಜಿ ಹಾಕಲು ಈ ದಾಖಲಾತಿ ಬೇಕು:

advertisement

ಯುವನಿಧಿ ಯೋಜನೆ (Yuva Nidhi Scheme) ಗೆ ಅರ್ಜಿ ಹಾಕಲು ಕೆಲವೊಂದು ದಾಖಲೆ ಗಳಿದ್ದು ಅದನ್ನು ಸಲ್ಲಿಸ ಬೇಕಾಗುತ್ತದೆ. ಹೌದು ಅರ್ಜಿ ಹಾಕಲು ಮತದಾರರ ಗುರುತಿನ ಚೀಟಿ (Voter ID Card), ಪದವಿ ಅಂಕಪಟ್ಟಿ (Degree Mark Sheet) ಡಿಪ್ಲೊಮಾ ಶಿಕ್ಷಣ ಹೊಂದಿದ್ದರೆ ಅದರ ಅಂಕಪಟ್ಟಿ (Diploma Mark Sheet), ಪೊಟೋ ಆಧಾರ್ ಕಾರ್ಡ್ (Aadhaar Card), ಬ್ಯಾಂಕ್ ಖಾತೆ (Bank Account) ಮಾಹಿತಿ ಇತ್ಯಾದಿಗಳು ಬೇಕು.

ಎಷ್ಟು ಹಣ ದೊರೆಯಲಿದೆ:

ಈಗಾಗಲೇ 2022- 23ನೇ ಸಾಲಿನಲ್ಲಿ ಉತ್ತೀರ್ಣರಾಗಿ 6 ತಿಂಗಳು ಉದ್ಯೋಗ ಸಿಗದ, ಪದವೀಧರ ನಿರುದ್ಯೋಗ ಯುವಕ ಯುವತಿಯರಿಗೆ ಪ್ರತಿ ತಿಂಗಳು 3,000 ರೂ ಡಿಪ್ಲೊಮಾ ಪದವೀಧರರಿಗೆ 1,500 ರೂಪಾಯಿ ನಿರುದ್ಯೋಗ ಭತ್ಯೆ ಸಿಗಲಿದೆ. ಈ ಯೋಜನೆಯು 2 ವರ್ಷಗಳ ಅವಧಿಯ ವರೆಗೆ ಇರಲಿದ್ದು ಕೆಲಸ ಸಿಕ್ಕಿದ ನಂತರ ಮಾಹಿತಿ ನೀಡುವುದು ಕಡ್ಡಾಯ ವಾಗಿದೆ.

ಯುವ ನಿಧಿ ಅರ್ಜಿ ಎಲ್ಲಿ ಸಲ್ಲಿಸಬಹುದು?

ಯುವನಿಧಿಗೆ ಅರ್ಜಿ ಸಲ್ಲಿಕೆ ಮಾಡಲು ಅರ್ಹತೆ ಹೊಂದಿರುವ ಯುವಕ ಯುವತಿಯರು ಸೇವಾ ಸಿಂಧು ವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು.ಒಂದು ವೇಳೆ ಸುಳ್ಳು ಮಾಹಿತಿ ನೀಡಿ ನೊಂದಣಿ ಮಾಡಿದ್ದರೆ ಅವರ ವಿರುದ್ದ ಕ್ರಮ ಕೈಗೊಳ್ಳಲಾಗುತ್ತದೆ.

advertisement

Leave A Reply

Your email address will not be published.