Karnataka Times
Trending Stories, Viral News, Gossips & Everything in Kannada

Gruha Lakshmi: ಗೃಹಲಕ್ಷ್ಮಿ ಹಣ ಬರದೇ ಇದ್ದವರಿಗೆ ಮಹತ್ವದ ಸೂಚನೆ, ಈ ರೀತಿಯಾಗಿ ನಿಮ್ಮ ಹಣ ಪಡೆದುಕೊಳ್ಳಬಹುದು.

advertisement

ಗೃಹಲಕ್ಷ್ಮಿ ಯೋಜನೆಯಲ್ಲಿ ಇರುವ ಗೊಂದಲಗಳನ್ನು ನಿವಾರಿಸಿಕೊಂಡು ಸಮಸ್ಯೆಗಳನ್ನು ಹೋಗಲಾಡಿಸಿ ಮಹಿಳೆಯರ ಖಾತೆಗೆ ಹಣ ಬರುವಂತೆ ಮಾಡಲು ಸರ್ಕಾರ ಈಗ ಹೊಸದೊಂದು ಉಪಕ್ರಮ ಕೈಗೊಂಡಿದೆ. ಇದೇನಾದರೂ ಸಕ್ಸಸ್ ಆದರೆ ಎಲ್ಲಾ ಮಹಿಳೆಯರ ಖಾತೆಗೆ ಹಣ ಜಮಾ ಆಗುವುದು ಶತಸಿದ್ಧ!

Gruha Lakshmi Yojana ಗೆ ಹೊಸ ತಿರುವು:

ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಯಲ್ಲಿ ಇರುವ ಸಮಸ್ಯೆಯನ್ನು ನಿವಾರಿಸುವ ಸಲುವಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕ್ಯಾಂಪ್ ಒಂದನ್ನು ಆಯೋಜಿಸಲು ಸರ್ಕಾರ ತೀರ್ಮಾನಿಸಿದೆ. ಡಿಸೆಂಬರ್ 27 ರಿಂದ 29 ರ ವರೆಗೆ ಗ್ರಾಮ ಪಂಚಾಯತ್ ನಲ್ಲಿ ಈ ಕ್ಯಾಂಪ್ ನಡೆಯಲಿದೆ. ಗ್ರಾಮೀಣ ಅಭಿವೃದ್ಧಿ ಇಲಾಖೆ ಈ ವಿಚಾರದ ಬಗ್ಗೆ ಸುತ್ತೋಲೆ ಹೊರಡಿಸಿದ್ದು ಪ್ರತಿಯೊಬ್ಬ ಮಹಿಳೆಯರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎನ್ನಲಾಗಿದೆ.

 

 

ಏನಿದು ಗ್ರಾಮ ಪಂಚಾಯತ್ ಕ್ಯಾಂಪ್?

advertisement

PDO ಅಧಿಕಾರಿಗಳ ನೇತೃತ್ವದಲ್ಲಿ ಈ ಕ್ಯಾಂಪ್ ಗ್ರಾಮೀಣ ಮಟ್ಟದಲ್ಲಿ ಆ ಯೋಜನೆ ಮಾಡಲಾಗುತ್ತೆ. ಮಹಿಳೆಯ ಖಾತೆಗೆ ಹಣ ಜಮಾ ಆಗಿಲ್ಲವೋ ಅಂತವರನ್ನು ಖುದ್ದಾಗಿ ಕ್ಯಾಂಪ್ಗೆ ಕರೆಸಿ ಅವರ ಸಮಸ್ಯೆ ಏನು ಎಂಬುದನ್ನು ತಿಳಿದು ಅವುಗಳ ಪರಿಹಾರ ಮಾಡಲಾಗುತ್ತದೆ.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ನೇತೃತ್ವದಲ್ಲಿಯೇ ಈ ಕ್ಯಾಂಪ್ ಆಯೋಜಿಸಬೇಕು ಎಂದು ತಿಳಿಸಲಾಗಿದೆ. ಯೋಜನೆಯಲ್ಲಿ ಇರುವ ಎಲ್ಲಾ ತಾಂತ್ರಿಕ ದೋಷಗಳು ಹಾಗೂ ಬ್ಯಾಂಕಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ಈ ಕ್ಯಾಂಪ್ ಮೂಲಕವೇ ಪರಿಹರಿಸಬೇಕು. ಕ್ಯಾಂಪ್ ನಲ್ಲಿ ಬಾಪೂಜಿ ಸೇವಾ ಕೇಂದ್ರದ ಕಂಪ್ಯೂಟರ್ ತಿಳಿದಿರುವ ಸಿಬ್ಬಂದಿಗಳು ಅಂಗನವಾಡಿ ಕಾರ್ಯಕರ್ತೆಯರು, ಹಾಗೂ ಇತರ ಸಿಬ್ಬಂದಿಗಳು ಉಪಸ್ಥಿತರಿರಲಿದ್ದಾರೆ. Post India Paymrnt Bank ನ ಪ್ರತಿನಿಧಿಗಳು ಹಾಗೂ ಇತರ ಬ್ಯಾಂಕ್ ನ ಕನಿಷ್ಠ ಒಬ್ಬ ಪ್ರತಿನಿಧಿ ಕ್ಯಾಂಪ್ ನಲ್ಲಿ ಭಾಗವಹಿಸಬೇಕು.

ಮಹಿಳೆಯರಿಗೆ ಕ್ಯಾಂಪ್ ನಲ್ಲಿ ಸಿಗಲಿದೆ ಈ ಸೌಲಭ್ಯ:

  • ಬ್ಯಾಂಕ ಖಾತೆಗೆ ಆಧಾರ್ ಲಿಂಕ್ (Aadhaar Link) ಮಾಡುವುದು
  • ಬ್ಯಾಂಕ್ ಖಾತೆ ತೆರೆಯಲು ಸಹಕರಿಸುವುದು
  • ಹೊಸ ಬ್ಯಾಂಕ ಖಾತೆಗೆ ಆಧಾರ್ ಲಿಂಕ್ ಮಾಡಿಸುವುದು
  • ಕೆವೈಸಿ ಅಪ್ಡೇಟ್ (KYC Update) ಮಾಡಿಸುವುದು
  • ಮಹಿಳೆಯರ ಗೃಹಲಕ್ಷ್ಮೀ ಯೋಜನೆ (Gruha Lakshmi Yojana) ಗೆ ಅರ್ಜಿ ಸ್ಥಿತಿ ಪರಿಶೀಲಿಸುವುದು
  • ಹಾಗೂ ಇತರ ಯಾವುದೇ ಸಮಸ್ಯೆ ಇದ್ರೆ ಅವುಗಳನ್ನ ಪರಿಹರಿಸುವುದು ಕ್ಯಾಂಪ್ನ ಉದ್ದೇಶ.

ಕ್ಯಾಂಪನ ಸಮಯ:

ಗ್ರಾಮೀಣ ಮಟ್ಟದಲ್ಲಿ ನಡೆಯುವ ಕ್ಯಾಂಪ್ನಲ್ಲಿ ಭಾಗವಹಿಸುವ ಅಧಿಕಾರಿಗಳಿಗೆ ಹಾಗೂ ಇತರ ಸಿಬ್ಬಂದಿಗಳಿಗೆ ಪೂರ್ವ ತಯಾರಿ ತರಬೇತಿಯನ್ನು ನೀಡಲಾಗುತ್ತದೆ. ಪ್ರತಿ ಗ್ರಾಮ ಪಂಚಾಯತಿಯ ಕಚೇರಿಯಲ್ಲಿ 27ರಿಂದ 29ರ ವರೆಗೆ ಬೆಳಗ್ಗೆ 9 ಗಂಟೆಯಿಂದ ಸಂಜೆ 5:00 ವರೆಗೆ ಕ್ಯಾಂಪ್ ಕಾರ್ಯಗಳು ನಡೆಯಲಿವೆ. ಫಲಾನುಭವಿಗಳಿಗೆ ಇಡಿಸಿಎಸ್ ಮೂಲಕ SMS ಕಳುಹಿಸಿ ಕ್ಯಾಂಪ್ ಬಗ್ಗೆ ಅರಿವು ಮೂಡಿಸಲಾಗುತ್ತದೆ. ಅಷ್ಟೇ ಅಲ್ಲದೆ ಸ್ಥಳೀಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಬ್ಬಂದಿಗಳು ಗೃಹಲಕ್ಷ್ಮಿ (Gruha Lakshmi) ಫಲಾನುಭವಿ ಮಹಿಳೆಯರಿಗೆ ಈ ಬಗ್ಗೆ ಮಾಹಿತಿ ನೀಡಿ ಕ್ಯಾಂಪ್ಗೆ ಬರುವಂತೆ ಮಾಡಬೇಕು. ಗ್ರಾಮ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಕ್ಯಾಂಪ್ ಬಗ್ಗೆ ಪತ್ರಿಕೆಗಳಲ್ಲಿ ಮಾಧ್ಯಮಗಳಲ್ಲಿ ಪ್ರಚಾರ ನೀಡಿ ಯಾವ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯಿಂದ ವಂಚಿತರಾಗದಂತೆ ಬಂದು ಸಹಾಯ ಪಡೆದುಕೊಳ್ಳಲು ಜಾಹೀರಾತು ನೀಡಬೇಕು ಎಂದು ತಿಳಿಸಲಾಗಿದೆ.

advertisement

Leave A Reply

Your email address will not be published.