Karnataka Times
Trending Stories, Viral News, Gossips & Everything in Kannada

Drought Relief: ಇಂತಹ ರೈತರ ಖಾತೆಗೆ ಬರ ಪರಿಹಾರ ಮೊತ್ತ ಬಿಡುಗಡೆಯಾಗಲ್ಲ, ಕೂಡಲೇ ಈ ಕೆಲಸ ಮಾಡಿ

advertisement

ರೈತಾಪಿ ವರ್ಗದವರಿಗೆ ಸರ್ಕಾರ‌ ಬಹಳಷ್ಟು ಸಹಾಯಧನ ಒದಗಿಸುತ್ತಿದೆ. ಅದರಲ್ಲೂ ಈ ಭಾರಿ ರೈತರಿಗೆ ಬಹಳಷ್ಟು ನಷ್ಟ ವಾಗಿದೆ. ಮಳೆ ಬಾರದೇ , ಕೃಷಿಯಲ್ಲಿ ಇಳುವರಿ ಕಾಣದೇ ರೈತರು ಕಂಗಾಲು ಆಗಿದ್ದಾರೆ. ಇದಕ್ಕಾಗಿ ರಾಜ್ಯ ಸರಕಾರವು ರೈತರಿಗಾಗಿ ಬರ ಪರಿಹಾರ ಮೊತ್ತವನ್ನು ನೀಡಲು ಮುಂದಾಗಿದೆ. ರಾಜ್ಯ ಸರ್ಕಾರವು ಈಗಾಗಲೇ ಸುಮಾರು 223 ತಾಲ್ಲೂಕುಗಳನ್ನು ತೀವ್ರ ಬರ ತಾಲ್ಲೂಕು ಗಳಾಗಿ ಘೋಷಷೆ ಮಾಡಿದೆ. ಅಂತೆಯೇ ಬೆಳೆ ಪರಿಹಾರ ವಿತರಣೆಗೆ ಸರಕಾರ ಕೆಲವೊಂದು ದಾಖಲಾತಿ ಕಡ್ಡಾಯ ಎಂಬ ಮಾಹಿತಿ ಯನ್ನು ನೀಡಿದೆ.ಈಗಾಗಲೇ ಈ ಬಗ್ಗೆ ಮುಖ್ಯಮಂತ್ರಿಗಳು ಮನವಿ ಸಹ ಮಾಡಿದ್ದಾರೆ.

ಇಳುವರಿ ನಷ್ಟ

ರಾಜ್ಯದಲ್ಲಿ ಈಗಾಗಲೇ 223 ತಾಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷನೆ ಮಾಡಿದ್ದು ಅದರಲ್ಲಿ 196 ತಾಲೂಕುಗಳಲ್ಲಿ ಬರದ ತೀವ್ರತೆ ಹೆಚ್ಚಾಗಿದೆ. 48.19 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಕೃಷಿ ಮತ್ತು ತೋಟಗಾರಿಕಾ ಬೆಳೆಗಳು ನಷ್ಟವಾಗಿದ್ದು, ಈ ಬಗ್ಗೆ ರಾಜ್ಯ ಸರಕಾರವು ತೀವ್ರವಾಗಿ ಗಮನಿಸಿದೆ.

ಎರಡು ಸಾವಿರ ಪರಿಹಾರ ಮೊತ್ತ

ರೈತರಿಗೆ ಈಗಾಗಲೇ ಪರಿಹಾರ ಮೊತ್ತ ನಿಗದಿ ಪಡಿಸಿದ್ದು ಮೊದಲ ಕಂತಿನಲ್ಲಿ ಸರಕಾರ ಪ್ರತಿ ರೈತರಿಗೆ 2 ಸಾವಿರ ರೂಪಾಯಿಯನ್ನು ನೀಡಲಿದ್ದು ಉಳಿದ ಹಣವನ್ನು ಕೇಂದ್ರದಿಂದ ಬಿಡುಗಡೆ ಮಾಡಿದ ನಂತರ ರೈತರಿಗೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಈಗಾಗಲೇ ತಿಳಿಸಿದ್ದಾರೆ.

advertisement

ಇವರಿಗೆ ಈ ಹಣ ಜಮೆ ಯಾಗಲ್ಲ

ಈಗಾಗಲೇ ರೈತರು ಬರ ಪರಿಹಾರ (Drought Relief) ಮೊತ್ತ ಪಡೆದು ಕೊಳ್ಳಬೇಕಾದರೆ ತಮ್ಮ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿಸುವುದು ಕಡ್ಡಾಯ ವಾಗಿದೆ. ಬ್ಯಾಂಕ್ ಖಾತೆಗೆ ಈ ಆಧಾರ್ ಕಾರ್ಡ್ ಲಿಂಕ್ ಆಗಿದ್ದರೆ ಮಾತ್ರ ಹಣ ಜಮೆ ಯಾಗುತ್ತದೆ. ಅದೇ ರೀತಿ ರೈತರು ಪರಿಹಾರವನ್ನು ಪಡೆಯಬೇಕಾದರೆ ಎಫ್‌ಐಡಿ ಹೊಂದಿರುವುದು ಸೂಕ್ತವಾಗಿದೆ.ಈ ಎಫ್‍ಐಡಿ ಗುರುತಿನ ಸಂಖ್ಯೆಗೆ ತಮ್ಮ ಜಮೀನುಗಳ ವಿವರ, ಮಾಹಿತಿಯನ್ನು ಸೇರಿಸಬೇಕು. ಇಲ್ಲದಿದ್ದಲ್ಲಿ ನಿಮಗೆ ಹಣ ಜಮೆ ಯಾಗುವುದಿಲ್ಲ.

ರೈತರು ಎಫ್‍ಐಡಿ ಮಾಡಿಸಿಕೊಳ್ಳಲು ಈ ದಾಖಲೆ ಬೇಕು

ರೈತರು ಈ ದಾಖಲೆ ಹೊಂದಬೇಕಾದರೆ ತಮ್ಮ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ , ತಮ್ಮ ಜಮೀನುಗಳ ಪಹಣಿ, ಪೋಟೋ, ಮೊಬೈಲ್ ಸಂಖ್ಯೆ ಇತ್ಯಾದಿ ದಾಖಲೆ ಇರಬೇಕು. ಅದೇ ರೀತಿ ಈ ಹಣ ಬಂದಿದೆಯೇ ಎಂದು ತಿಳಿದು ಕೊಳ್ಳಲು ಮೊದಲಿಗೆ ನೀವು https://parihara.Karnataka.gov.in ವೆಬ್‌ಸೈಟ್‌ಗೆ ಭೇಟಿ ನೀಡಿ.
ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ, ಇಲ್ಲಿ calamity type ಗೆ ಕ್ಲಿಕ್ ಕೊಟ್ಟು ಪರಿಶೀಲನೆ ನಡೆಸಬಹುದು. calamity type ನಲ್ಲಿ Flood ಆಯ್ಕೆ ಮಾಡಿ , Get report ಮೇಲೆ ಕ್ಲಿಕ್ ಮಾಡಿದಾಗ ಹಣ ಜಮೆ ಯಾಗಿರುವ ಮಾಹಿತಿ ಕೂಡ ದೊರಕಲಿದೆ.

advertisement

Leave A Reply

Your email address will not be published.