Karnataka Times
Trending Stories, Viral News, Gossips & Everything in Kannada

FD or Loan: ಎಫ್ ಡಿ ಅಥವಾ ಲೋನ್ ಈ ಎರಡರಲ್ಲಿ ಯಾವುದು ಬೆಸ್ಟ್ ಗೊತ್ತಾ?

advertisement

ಹಣದ ಅವಶ್ಯಕತೆ ಎನ್ನುವುದು ಪ್ರತಿನಿತ್ಯದ ಜೀವನದಲ್ಲಿ ಪ್ರತಿಯೊಬ್ಬರಿಗೂ ಬೇಕೇ ಬೇಕಾಗಿರುವ ವಿಷಯ. ಯಾಕಂದ್ರೆ ನಾವು ಏನನ್ನ ಬಿಟ್ಟು ಬದುಕಲು ಸಾಧ್ಯವಾಗಬಹುದು ಆದರೆ ಹಣವನ್ನು ಬಿಟ್ಟು ಬದುಕುವುದು ಕಷ್ಟ ಎನ್ನುವಷ್ಟರ ಮಟ್ಟಿಗೆ ಹಣದ ಅವಶ್ಯಕತೆ ಮನುಷ್ಯನನ್ನು ಆವರಿಸಿಕೊಂಡು ಬಿಟ್ಟಿದೆ. ಇಂತಹ ಸಂದರ್ಭದಲ್ಲಿ ನಾವು ನಮ್ಮ ಭವಿಷ್ಯಕ್ಕಾಗಿ ಒಂದಷ್ಟು ಹಣವನ್ನು ಉಳಿತಾಯ ಮಾಡಿದಾಗ ಮಾತ್ರ ಭವಿಷ್ಯ ಆರ್ಥಿಕವಾಗಿ ಯಾವುದೇ ಸಮಸ್ಯೆ ಇಲ್ಲದೆ ಮುಂದುವರಿಯಲು ಸಾಧ್ಯವಿದೆ ಇದಕ್ಕಾಗಿ ಸಾಕಷ್ಟು ಜನ ಬೇರೆ ಬೇರೆ ರೀತಿಯ ಉಳಿತಾಯವನ್ನು ಆಯ್ದುಕೊಳ್ಳುತ್ತಾರೆ.

FD ಠೇವಣಿ ಇಡುವುದು:

ಸಾಕಷ್ಟು ಜನ ತಮ್ಮ ಬಳಿ ಇರುವ ಹಣವನ್ನು ಬ್ಯಾಂಕುಗಳಲ್ಲಿ ಸ್ಥಿರ ಠೇವಣಿ (Fixed Deposit) ಇಡುತ್ತಾರೆ. ಇದರಿಂದ ತಮ್ಮ ಮುಂದಿನ ಭವಿಷ್ಯದ ಕನಸು ಈಡೇರಿಸಿಕೊಳ್ಳಲು ಸಾಧ್ಯವಾಗುತ್ತೆ ಎಂದು ಭಾವಿಸುತ್ತಾರೆ. ಹಾಗಾಗಿ ಎಫ್ ಡಿ ಇಟ್ಟ ಹಣದ ಅವಧಿ ಮುಗಿಯುವವರೆಗೂ ಕೂಡ ಆ ಹಣವನ್ನು ಹಿಂಪಡೆಯುವುದಿಲ್ಲ ಅಥವಾ FD ಮೇಲೆ Loan ವನ್ನು ಕೂಡ ಪಡೆಯುವುದಿಲ್ಲ. ಆದ್ರೆ ಇನ್ನೊಂದಿಷ್ಟು ಜನ ತಾವು ಎಫ್ ಡಿ ಇಟ್ಟ ಹಣದ ಮೇಲೆ ಸಾಲ ಸೌಲಭ್ಯವನ್ನು ಪಡೆದು ಅವತ್ತಿನ ದಿನಕ್ಕೆ ತಮ್ಮ ಅಗತ್ಯಗಳನ್ನು ಪೂರೈಸಿ ಕೊಡುತ್ತಾರೆ. ಹಾಗಾದ್ರೆ ಎಫ್ ಡಿ ಠೇವಣಿ ಇಟ್ಟ ಅವಧಿ ಮುಗಿಯುವವರೆಗೆ ಠೇವಣಿ ಮುರಿಯದೆ ಇರುವುದು ಅಥವಾ ಸಾಲ ತೆಗೆದುಕೊಳ್ಳುವುದು ಎಷ್ಟು ಸೂಕ್ತ ಎಂಬುದನ್ನು ನೋಡೋಣ.

 

 

advertisement

FD ಮುರಿದರೆ ಏನಾಗುತ್ತೆ?

ಒಂದು ಬ್ಯಾಂಕಿನಲ್ಲಿ ಎರಡು ವರ್ಷಗಳ ಅವಧಿಗೆ ಸ್ಥಿರ ಠೇವಣಿ (Fixed Deposit) ಮಾಡಿದ್ದೀರಿ ಎಂದು ಭಾವಿಸಿ, ಅದಕ್ಕೆ ನಿಮಗೆ ಸಿಗುವ ಬಡ್ಡಿ ದರ 7%. ಹಾಗೆಯೇ ಒಂದು ವರ್ಷದ ಸ್ಥಿರ ಠೇವಣಿಯ ಮೇಲೆ 6.5% ನಷ್ಟು ಬಡ್ಡಿ ಸಿಗುತ್ತದೆ. ಇಂಥ ಸಂದರ್ಭದಲ್ಲಿ ನಿಮಗೆ ತುರ್ತು ಹಣದ ಅಗತ್ಯ ಇದ್ದರೆ ಈ ಸ್ಥಿರ ಠೇವಣಿಯನ್ನು ಮುರಿಯಬಹುದು ಆಗ 1% ದಂಡವನ್ನು ಪಾವತಿಸಬೇಕಾಗುತ್ತದೆ. ಜೊತೆಗೆ ಬ್ಯಾಂಕಿನ ವಿವಿಧ ಶುಲ್ಕಗಳನ್ನು ಪಾವತಿಸಬೇಕು. ನೀವು ಇಟ್ಟಿರುವ FD ಮುರಿದರೆ ಸಿಗುವ ಬಡ್ಡಿದರ ಕೇವಲ 5.5% ನಷ್ಟು ಆಗಿರುತ್ತದೆ.

FD ಮುರಿಯುವುದರಿಂದ ಆಗುವ ಲಾಭ ಏನು?

ನೀವು ಕೆಲವು ತಿಂಗಳವರೆಗೆ ಸ್ಥಿರ ಠೇವಣಿ ಇಟ್ಟು ಆ ಠೇವಣಿಯ ಮೇಲೆ ಸಾಲ (Loan) ವನ್ನು ಪಡೆಯಬಹುದು. ಆದರೆ ನಿಮಗೆ ತುಂಬಾ ಹಣ ಬೇಕು ಒಂದೆರಡು ದಿನಗಳ ವರೆಗೆ ಕಾಯುವ ವ್ಯವಧಾನ ಇದೆ ಎಂದಾದರೆ ಡಿಪೋಸಿಟ್ ಹಣವನ್ನು ಮುರಿಯಬೇಡಿ ಅದರ ಬದಲು 20ರಿಂದ 30% ನಷ್ಟು ಹೆಚ್ಚಿಗೆ ಹಣವನ್ನು Fixed Deposit ಗೆ ಹಾಕಿ. ನಂತರ ಆ ಹಣಕ್ಕೆ ಸಾಲವನ್ನ ತೆಗೆದುಕೊಳ್ಳಿ ಇದರಿಂದ ನಿಮ್ಮ ಅಗತ್ಯವನ್ನು ಪೂರೈಸಿಕೊಳ್ಳಿ.

ಹಾಗಾಗಿ ಬ್ಯಾಂಕುಗಳಲ್ಲಿ ಸ್ಥಿರ ಠೇವಣಿ ಇಡುವುದು ಉತ್ತಮ ಆಯ್ಕೆಯಾಗಿದೆ ಆದರೆ ನಿಮಗೆ ಪೂರ್ತಿ ಹಣ ಬೇಕಾದಾಗ ನೀವು ಸ್ಥಿರ ಠೇವಣಿಯನ್ನು ಮುರಿದು ಆ ಹಣವನ್ನು ಬಳಸಿಕೊಂಡರೆ ಅದರಿಂದ ಯಾವುದೇ ಪ್ರಯೋಜನವು ಆಗುವುದಿಲ್ಲ ಅಥವಾ ನಿಮಗೆ ಹೆಚ್ಚಿಗೆ ಬಡ್ಡಿದರ ಹೆಚ್ಚು ಲಾಭ ಸಿಗುವುದಿಲ್ಲ. ಅದರ ಬದಲು ದೊಡ್ಡ ಮೊತ್ತದ ಹಣವನ್ನು ಎಫ್ಡಿ ಇಟ್ಟು ಆ ಹಣದ ಮೇಲೆ ಸಾಲ ತೆಗೆದುಕೊಂಡರೆ ಕಡಿಮೆ ಬಡ್ಡಿ ದರದಲ್ಲಿ ತುರ್ತು ಪರಿಸ್ಥಿತಿಯಲ್ಲಿ ಸಾಲವನ್ನು ಕೂಡ ಪಡೆಯಬಹುದು.

advertisement

Leave A Reply

Your email address will not be published.