Karnataka Times
Trending Stories, Viral News, Gossips & Everything in Kannada

Gold Price: 2024ರ ಅಂತ್ಯದ ವೇಳೆ ಬಂಗಾರದ ಬೆಲೆ ಎಷ್ಟಾಗಲಿದೆ ಗೊತ್ತಾ? ನಿಖರ ಬೆಲೆ ತಿಳಿಸಿದ ತಜ್ಞರು

advertisement

ಇಡೀ ವಿಶ್ವದಲ್ಲಿ ಅತ್ಯಂತ ಹೆಚ್ಚು ಚಿನ್ನವನ್ನು ಖರೀದಿ (Gold Purchase) ಮಾಡುವ ಅಥವಾ ಆಮದು ಮಾಡುವಂತಹ ದೇಶಗಳಲ್ಲಿ ಭಾರತ ದೇಶ ಕೂಡ ಒಂದಾಗಿ ಕಾಣಿಸಿಕೊಳ್ಳುತ್ತದೆ. ಭಾರತ ದೇಶದ ಮಹಿಳೆಯರು ಕೇವಲ ಅಲಂಕಾರಿಕ ವಸ್ತುವಿನ ರೂಪದಲ್ಲಿ ಮಾತ್ರವಲ್ಲದೆ ಚಿನ್ನವನ್ನು ಹೂಡಿಕೆಯ ರೂಪದಲ್ಲಿ ಕೂಡ ಖರೀದಿ ಮಾಡುವಂತಹ ಅಭ್ಯಾಸವನ್ನು ಪ್ರಾರಂಭ ಮಾಡಿದ್ದಾರೆ. ಚಿನ್ನದ ಬೆಲೆ (Gold Price) ಯಾವತ್ತೂ ಕೂಡ ಏರಿಕೆಯನ್ನು ಕಾಣುತ್ತದೆ ಎಂಬುದು ಮೊದಲಿನಿಂದಲೂ ಕೂಡ ನಡೆದುಕೊಂಡು ಬಂದಿರುವಂತಹ ಪದ್ಧತಿಯಾಗಿದೆ.

ಇನ್ನು ಚಿನ್ನದ ಬೆಲೆಯನ್ನು ಮೊದಲು ಅಮೇರಿಕಾ ದೇಶ ನಿರ್ಧಾರ ಮಾಡುತ್ತಿತ್ತು ಎನ್ನುವುದು ನಿಮಗೆಲ್ಲರಿಗೂ ತಿಳಿದಿರಬಹುದು. ಆದರೆ ಈಗ ಸಮಯ ಬದಲಾಗಿದ್ದು ಬನ್ನಿ ಇದರ ಬಗ್ಗೆ ಹಾಗೂ 2024ರ ಕೊನೆಯಲ್ಲಿ ಭಾರತ ದೇಶದಲ್ಲಿ ಚಿನ್ನದ ಬೆಲೆ (Gold Price) ಎಷ್ಟು ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ.

2024ರ ಕೊನೆಯಲ್ಲಿ ಭಾರತದಲ್ಲಿ ಚಿನ್ನದ ಬೆಲೆ ಎಷ್ಟಾಗಿರಲಿದೆ ಗೊತ್ತಾ?

 

Image Source: Mint

 

ಮೊದಲು ಚಿನ್ನದ ರಿಸರ್ವ್ ಎನ್ನುವುದು ಅಮೆರಿಕ ದೇಶದ ಬಳಿ ಹೆಚ್ಚಾಗಿತ್ತು. ಹೀಗಾಗಿ ಅಮೆರಿಕ ದೇಶ ಚಿನ್ನದ ಬೆಲೆ ಜಾಸ್ತಿ ಆಗಬೇಕಾ ಅಥವಾ ಕಡಿಮೆ ಆಗಬೇಕಾ ಅನ್ನೋದನ್ನ ಸಂಪೂರ್ಣವಾಗಿ ಕಂಟ್ರೋಲ್ ಮಾಡುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಈ ಕೆಲಸವನ್ನು ಚೀನಾ ದೇಶ ಮಾಡುತ್ತಿದೆ ಎಂದು ಹೇಳಬಹುದಾಗಿದೆ. ಮಾರುಕಟ್ಟೆಯಲ್ಲಿ ಇರುವಂತಹ ಬಹುತೇಕ ಎಲ್ಲಾ ಚಿನ್ನವನ್ನು ಕೂಡ ಬೇಕು ಅಂತಾನೆ ಚೀನಾ ದೇಶ ಖರೀದಿ ಮಾಡುತ್ತಿದೆ.

advertisement

ಸಾಕಷ್ಟು ಸಮಯಗಳ ಹಿಂದಷ್ಟೇ ತನ್ನ ನಾಗರಿಕರಿಗೆ ಚೀನಾ ದೇಶ ಚಿನ್ನ (Gold) ಹಾಗೂ ಬೆಳ್ಳಿ (Silver) ಅನ್ನು ಹೆಚ್ಚಾಗಿ ಖರೀದಿ ಮಾಡುವುದಕ್ಕೆ ಹೇಳಿತ್ತು. ಇದೇ ಕಾರಣಕ್ಕಾಗಿ ಚೀನಾ ದೇಶದ ನಾಗರಿಕರು ಕೂಡ ಅಗತ್ಯಕ್ಕಿಂತ ಹೆಚ್ಚಾಗಿ ಚಿನ್ನ ಹಾಗೂ ಬೆಳ್ಳಿಯನ್ನು ಖರೀದಿ ಮಾಡುವುದಕ್ಕೆ ಪ್ರಾರಂಭ ಮಾಡಿದ್ರು. ಇದೇ ಕಾರಣಕ್ಕಾಗಿ ಇತ್ತೀಚಿನ ವರ್ಷಗಳಲ್ಲಿ ಸ್ವಲ್ಪ ಮಟ್ಟಿಗೆ ಚಿನ್ನದ ಬೆಲೆ (Gold Price) ಏರಿಕೆ ಆಗಿರುವುದನ್ನು ಕೂಡ ನಾವು ಗಮನಿಸಿರಬಹುದಾಗಿದೆ.

 

Image Source: Mint

 

ಈ ಚಿನ್ನದ ಬೆಲೆ (Gold Price) ಯನ್ನು ಕಂಟ್ರೋಲ್ ಮಾಡುವಂತಹ ಸಂಸ್ಥೆಯ ಅಧಿಕಾರಿಗಳು ಕೂಡ ಇತ್ತೀಚಿಗಷ್ಟೇ ಚೀನಾ ದೇಶಕ್ಕೆ ಹೋಗಿ ಮೀಟಿಂಗ್ ಮಾಡಿ ಬಂದಿರುವುದು ಕೂಡ ತಿಳಿದು ಬಂದಿದೆ.

ಇದಿನ್ನು ಅಮೆರಿಕ ದೇಶದವರಿಗೆ ತಿಳಿಯುತ್ತಿಲ್ಲ ಅವರು ಕೇವಲ ಬಿಟ್ ಕಾಯಿನ್ ನಂತಹ ಡಿಜಿಟಲ್ ಕರೆನ್ಸಿಗಳ ಮೇಲೆ ಹಣವನ್ನು ಹೂಡಿಕೆ ಮಾಡುತ್ತಿದ್ದಾರೆ. ಅವರಿಗೂ ಕೂಡ ಇದು ತಿಳಿದರೆ ಅವರು ಕೂಡ ಚಿನ್ನವನ್ನ ಖರೀದಿ ಮಾಡುವುದಕ್ಕೆ ಪ್ರಾರಂಭ ಮಾಡುತ್ತಾರೆ ಹಾಗೂ ಚಿನ್ನದ ಬೆಲೆ (Gold Rate) ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಕೂಡ ಇದೆ.

ಸದ್ಯಕ್ಕೆ ಚಿನ್ನದ ಬೆಲೆ (Gold Price) 72,000ಗಳ ಆಸು ಪಾಸಿನಲ್ಲಿ ಕಾಣಿಸಿಕೊಳ್ಳುತ್ತಿದೆ. ಇದು 2024 ಅಂತ್ಯ ಆಗುವ ಸಮಯದಲ್ಲಿ 82 ಸಾವಿರ ರೂಪಾಯಿಗಳ ಆಸು ಪಾಸಿನಲ್ಲಿ ಕಾಣಿಸಿಕೊಳ್ಳುವಂತಹ ಸಾಧ್ಯತೆ ಇದೆ ಅಂದ್ರೆ 10,000 ರೂಪಾಯಿಗಳ ಏರಿಕೆ ಕಂಡು ಬರಬಹುದು.

advertisement

Leave A Reply

Your email address will not be published.