Karnataka Times
Trending Stories, Viral News, Gossips & Everything in Kannada

Gold Rate: ಬಂಗಾರ ಪ್ರಿಯರಿಗೆ ಗುಡ್ ನ್ಯೂಸ್ ಇಂದು ಚಿನ್ನದ ದರ ತಟಸ್ಥ? ಬೆಲೆ ಗಮನಿಸಿ

advertisement

ಚಿನ್ನ ಹೂಡಿಕೆಯ ಮೂಖ್ಯ ಭಾಗವಾಗಿದ್ದು ಚಿನ್ನದ ಖರೀದಿಗೆ (Gold Purchase) ಪ್ರತಿಯೊಬ್ಬರು ಕೂಡ ಆಸಕ್ತಿಯನ್ನು ವಹಿಸುತ್ತಾರೆ‌‌‌‌. ಇಂದು‌ ದಿನದಿಂದ ದಿನಕ್ಕೆ ಇದರ ಬೆಲೆ (Gold Rate) ಏರಿಕೆಯಾದರೂ ಖರೀದಿ ಸಂಖ್ಯೆ ಕಡಿಮೆಯಾಗಿಲ್ಲ.ಚಿನ್ನ‌ ಎಂಬುದು ಎಲ್ಲಾ ಕಾಲದಲ್ಲೂ ತನ್ನ ಮೌಲ್ಯವನ್ನ ಉಳಿಸಿಕೊಂಡಿದ್ದು ಉತ್ತಮ ಬೇಡಿಕೆ ಜೊತೆಗೆ ನಿಯಮಿತವಾಗಿ ಮೌಲ್ಯ ಹೆಚ್ಚಿಸಿಕೊಳ್ಳುತ್ತಲೇ ಬರ್ತಾ ಇದೆ. ಹಾಗಾಗಿ ಮುಂದೆಯು ಇದರ ಹೂಡಿಕೆ ಲಾಭ ವೆಂದು ಜನರಿಗೆ ತಿಳಿದಿದೆ.

ಮುಂದಿನ‌ ದಿನದಲ್ಲಿ ಮತ್ತಷ್ಟು ಬೆಲೆ ಹೆಚ್ಚಳ:

ಚಿನ್ನ ಪ್ರಿಯರು ಪ್ರತಿ ದಿನ ಚಿನ್ನದ ಬೆಲೆ (Gold Rate) ಇಳಿಕೆಯ ಬಗ್ಗೆ ಕಾಯುತ್ತ ಇರುತ್ತಾರೆ. ಇತ್ತೀಚಿನ ದಿನವಂತು ಚಿನ್ನದ ಬೆಲೆ ಗಣನೀಯವಾಗಿ ಏರಿಕೆಯಾಗುತ್ತಲೇ ಬರ್ತಾ ಇದ್ದು ಮದುವೆ ಶುಭಾರಂಭ, ಪೂಜೆ ಪುನಸ್ಕಾರ ಬಹಳಷ್ಟು ಹೆಚ್ಚು ಇರುವುದರಿಂದ ಚಿನ್ನಕ್ಕೆ ಬೇಡಿಕೆ ಹೆಚ್ಚಾಗಿದೆ. ಇನ್ನೇನು ಚಿನ್ನ (Gold) ಕೊಳ್ಳಲು ಉತ್ತಮ ಸಮಯವಾದ ಅಕ್ಷಯ ತೃತೀಯ ಕೂಡ ಹತ್ತಿರ ಬರುತ್ತಿದ್ದು, ಈ ಕಾರಣ ಕೂಡ ಚಿನ್ನಕ್ಕೆ ಬೆಲೆ ಹೆಚ್ಚು ಇರಲಿದ್ದು ಮುಂದಿನ ದಿನದಲ್ಲಿ ಮತ್ತಷ್ಟು ಹೆಚ್ಚಾಗಬಹುದು.

ಎಷ್ಟು ಆಗಿದೆ ಬೆಲೆ?

 

Image Source: Firstpost

 

ಇಂದು ಚಿನ್ನದ ದರ (Gold Rate) ದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ನಿನ್ನೆಯ ದರವೇ ಇಂದೂ ಕೂಡ ಮುಂದುವರಿದಿದೆ. ಇಂದು ಒಂದು ಗ್ರಾಂ ಚಿನ್ನದ ಬೆಲೆ 6,685 ರೂ. ಆಗಿದ್ದು 8 ಗ್ರಾಂ ಚಿನ್ನದ ಬೆಲೆ 53,480 ರೂ. ಆಗಿದೆ. ಅದೇ ರೀತಿ 10 ಗ್ರಾಂ ಚಿನ್ನದ ಬೆಲೆ 66,850 ರೂ. ಆಗಿದೆ.

advertisement

ಇತರ ಕಡೆ ಎಷ್ಟು ಇದೆ?

ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್‌ಗೆ 66,850 ರೂ. ಹಾಗೂ 24 ಕ್ಯಾರೆಟ್‌ ಚಿನ್ನಕ್ಕೆ 72,930‌ ರೂ. ದರ ಆಗಿದೆ.‌ಅದೇ ರೀತಿ ಚೆನ್ನೈನಲ್ಲಿ 22 ಕ್ಯಾರೆಟ್‌ ಚಿನ್ನದ ಮೊತ್ತ 67,700 ಮುಂಬೈನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ (Gold Price)  66,850 ರೂ. ಕೊಲ್ಕತ್ತಾದಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 66,850 ರೂ.ಆಗಿದೆ.

ಯಾಕಾಗಿ ಹೆಚ್ಚಳ?

ವಿಶೇಷವಾಗಿ ಚಿನ್ನಕ್ಕೆ ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ವಾತಾವರಣದಿಂದಾಗಿ ಬಹಳಷ್ಟು ಏರಿಕೆಯಾಗಿದೆ. ಇನ್ನು ಭೌಗೋಳಿಕ ರಾಜಕೀಯ ಬದಲಾವಣೆ ಆರ್ಥಿಕ ಹಿಂಜರಿತ,ಅಂತರಾಷ್ಟ್ರೀಯ ಬದಲಾವಣೆ ಹೀಗೆ ಹಲವು ಅಂಶಗಳು ಚಿನ್ನದ ಬೆಲೆ ಮೇಲೆ ಪ್ರಭಾವ ಬೀರಬಹುದು.

ಬೆಳ್ಳಿ‌ದರ?

ಇಂದು ಬೆಳ್ಳಿ (Silver) ಕೂಡ ಬಹಳಷ್ಟು ಅಗತ್ಯವಾದ ವಸ್ತು ವಾಗಿದ್ದು ಬೆಳ್ಳಿಯ ಖರೀದಿಗೂ ಕೂಡ ಹೆಚ್ಚಿನ ಜನತೆ ಆಸಕ್ತಿ ವಹಿಸುತ್ತಾರೆ.ಅದೇ ರೀತಿ ಬೆಳ್ಳಿಯ ಬೆಲೆಯು ಏರಿಕೆ ಯಾಗುತ್ತಿದ್ದು‌ ಇಂದು ಮಾತ್ರ ಸ್ಪಲ್ಪ ಮಟ್ಟಿಗೆ ಬೆಳ್ಳಿ ದರ ಕಡಿಮೆ ಯಾಗಿದೆ. ಬೆಳ್ಳಿ ಇಂದು ಗ್ರಾಂಗೆ 83.50 ರೂ. ಆಗಿದ್ದು‌ 8 ಗ್ರಾಂಗೆ 668 ರೂ. 10 ಗ್ರಾಂಗೆ 835 ರೂ ಆಗಿದೆ.

advertisement

Leave A Reply

Your email address will not be published.