Karnataka Times
Trending Stories, Viral News, Gossips & Everything in Kannada

HSRP Number Plate: HSRP ನಂಬರ್ ಪ್ಲೇಟ್ ಬಗ್ಗೆ ರಾಜ್ಯ ಪೊಲೀಸರಿಂದ ಹೊಸ ಹೇಳಿಕೆ

advertisement

ಈಗಂತೂ ವಾಹನ ಇದ್ದವರಿಗೆ ಎಲ್ಲಿ ನೋಡಿದರೂ HSRP ಕಡ್ಡಾಯವಂತೆ ಆದರೆ ಇನ್ನೂ ನೋಂದಣಿ ಆಗುತ್ತಿಲ್ಲ ಎಂಬುದೇ ಗೊಂದಲವಾಗುತ್ತಿದೆ. ಅತಿ ಸುರಕ್ಷಿತ ನೋಂದಣಿ ಫಲಕವನ್ನು ಎಲ್ಲ ವಾಹನಕ್ಕೆ ಕಡ್ಡಾಯ ಮಾಡಿದ್ದರೂ ಕೂಡ ಅಳವಡಿಸಿಕೊಂಡ ಪ್ರಮಾಣ ಇನ್ನೂ ಕೂಡ ಕಡಿಮೆ ಮಟ್ಟದಲ್ಲೇ ಇದೆ.

ಈಗಾಗಲೇ ಅನೇಕ ಸಲ ಮುನ್ನೆಚ್ಚರಿಕೆ ನೀಡಿದ್ದರೂ HSRP Number Plate ಮಾತ್ರ ಪೂರ್ಣ ಪ್ರಮಾಣದಲ್ಲಿ ಹಳೆ ವಾಹನಗಳಿಗೆ ಅಳವಡಿಕೆ ಆಗಲಿಲ್ಲ ಎಂದು ಹೇಳಬಹುದು. ಈ ನಡುವೆ ಸರಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ HSRP ನಂಬರ್ ಪ್ಲೇಟ್ ಅಪ್ಲೋಡ್ ಆಗುತ್ತಿಲ್ಲ ಎಂದು ಅನಧಿಕೃತ ವೆಬ್ಸೈಟ್ ಮೂಲಕ ನಂಬರ್ ಪ್ಲೇಟ್ ಪಡೆಯುತ್ತಿದ್ದು ಈ ಬಗ್ಗೆ ಸದ್ಯ ಪೊಲೀಸ್ ಇಲಾಖೆ ಗರಂ ಆಗಿದೆ.

2019ಕ್ಕಿಂತಲೂ ಮೊದಲು ನೋಂದಣಿಯಾದ ವಾಹನಗಳಿಗೆ HSRP ಕಡ್ಡಾಯವಾಗಿದ್ದು ಸರಕಾರ ಸೂಚನೆ ನೀಡಿದ್ದರೂ ಅದನ್ನು ಪಾಲಿಸಿದ್ದ ತೀರ ಕಡಿಮೆ. ಹೊಸದಾಗಿ ವಾಹನ ಖರೀದಿ ಮಾಡುವವರು ಸೇರಿದಂತೆ HSRP ಇನ್ನು ಮುಂದೆ ಅಳವಡಿಸಿಕೊಳ್ಳಬೇಕು ಎಂದು ಕೊಂಡವರಿಗೆ ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿ ಅವರು ಮಹತ್ವದ ಆದೇಶ ಒಂದನ್ನು ನೀಡಿದ್ದಾರೆ. ಅದರ ಜೊತೆಗೆ ಪೊಲೀಸ್ ಇಲಾಖೆ ಕೂಡ ಅನಧಿಕೃತ ವೆಬ್ಸೈಟ್ ಬಳಸದಂತೆ ಕೂಡ ಸೂಚಿಸಿದ್ದು ಈ ಕುರಿತಾದ ಪೂರ್ಣ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿಸಲಿದ್ದೇವೆ.

ಸಚಿವರು ತಿಳಿಸಿದ್ದೇನು?

 

Image Source: The Hans India

 

ಲೋಕಸಭೆ ಚುನಾವಣೆ ಇನ್ನೂ ಕೂಡ ಪೂರ್ಣಗೊಂಡಿಲ್ಲ ಈಗ ರಾಜ್ಯದಲ್ಲಿ ಚುನಾವಣೆಯ ಕಾವು ಇನ್ನು ಕೂಡ ಇದೆ. ಅದರ ನಡುವೆ ಜನರಿಗಾಗಿ ಪರಿಚಯಿಸಲಾಗುವ ಯೋಜನೆ ಮಹತ್ವವನ್ನು ತಿಳಿಯ ಪಡಿಸುವ ಕಾರ್ಯ ಕೂಡ ನಡೆಯುತ್ತಲಿದೆ‌. ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿ (Transport Minister Ramalinga Reddy) ಅವರು ಇತ್ತೀಚೆಗಷ್ಟೇ ಸಭೆ ಯೊಂದನ್ನು ಉದ್ದೇಶಿಸಿ ಮಾತನಾಡುವಾಗ HSRP Number Plate ಇದುವರೆಗೆ ಅಳವಡಿಕೆ ಮಾಡದೆ ಇದ್ದವರಿಗೆ ಸಲಹೆ ಸೂಚನೆ ನೀಡಿದ್ದಾರೆ.

advertisement

ಈಗಾಗಲೇ ಅನೇಕ ಸಲ ನೋಂದಣಿ ಮಾಡಲು ಅವಕಾಶ ನೀಡಲಾಗಿದೆ ಹಾಗಿದ್ದರು ನಕಲಿ ವೆಬ್‌ಸೈಟ್‌ ಮೂಲಕ ನೋಂದಣಿ ಮಾಡುವುದು ತಿಳಿದು ಬಂದಿದೆ ಆದರೆ ಇದು ಸರಿಯಾದ ಕ್ರಮ ಅಲ್ಲ ಎಂದು ಅವರು ಹೇಳಿದ್ದಾರೆ.

ಬಳಿಕ ಮಾತನಾಡಿ, HSRP ನಂಬರ್ ಅಳವಡಿಕೆ ಬಗ್ಗೆ ಸಾಮಾನ್ಯ ಜನರಿಗೆ ಮಾತ್ರವಲ್ಲದೆ RTO ಅಧಿಕಾರಿಗಳಿಗೆ ಹಾಗೂ ಪೊಲೀಸ್ ಅಧಿಕಾರಿಗಳಿಗೂ ಸಾಕಷ್ಟು ಗೊಂದಲ ಉಂಟಾಗಿದೆ. ಈ ಬಗ್ಗೆ ಪೂರ್ತಿ ಮಾಹಿತಿ ಪಾಲಿಸದೆ ಅನೇಕ ಕಡೆ ಜನರ ಮೇಲೆ ದಂಡ ಪ್ರಯೋಗ ಮಾಡಿದ್ದು ಕೂಡ ತಿಳಿದು ಬಂದಿದೆ. ಆದರೆ ಸದ್ಯ HSRP Number Plate ಅಳವಡಿಕೆ ಮಾಡಲು ಸರಕಾರವೇ ಕಾಲಾವಕಾಶ ನೀಡಿದ್ದು ಅಲ್ಲಿಯ ತನಕ ದಂಡ ಪ್ರಯೋಗ ಮಾಡಲು ಸಮ್ಮತಿ ಇಲ್ಲ ಹಾಗಾಗಿ ನೀವು ಈಗಾಗಲೇ ನೋಂದಣಿ ಮಾಡಿ ಇನ್ನು ನಂಬರ್ ಪ್ಲೇಟ್ ಬಂದಿಲ್ಲ ಎಂದರೆ ನೋಂದಣಿ ಮಾಡಿದ್ದ ಆನ್ಲೈನ್ ರಿಜಿಸ್ಟ್ರೇಶನ್ ಅನ್ನೇ ತೋರಿಸಬಹುದು ಎಂದಿದ್ದಾರೆ.

ಗಡುವು ವಿಸ್ತರಣೆ ಸಾಧ್ಯತೆ ಕಡಿಮೆ:

 

Image Source: Times of India

 

ಈಗಾಗಲೇ ಅನೇಕ ಸಲ ಕೊನೆ ದಿನಾಂಕ ಬದಾಲಾಯಿಸಲಾಗಿದೆ. ಮೇ 31 ಕೊನೆಯ ದಿನಾಂಕ ಆಗಲಿದೆ. ಹಾಗಾಗಿ ಅಲ್ಲಿಯ ಒಳಗೆ ಸಾಕಷ್ಟು ಸಂಖ್ಯೆಯಲ್ಲಿ ನೋಂದಣಿ ಮಾಡಿಸಿಕೊಳ್ಳಿ. HSRP ಅಳವಡಿಸುವ ಸೆಂಟರ್ ಗಳ ಸಂಖ್ಯೆ ಹೆಚ್ಚಿಸುವತ್ತ ಕೂಡ ಸರಕಾರ ಚಿಂತಿಸಿದ್ದು ತಾಂತ್ರಿಕ ದೋಷ ಕಂಡು ಬಂದರೆ ಗಡುವು ವಿಸ್ತರಣೆ ಅಗತ್ಯ ಇದೆ ಇಲ್ಲವೇ ಎಂದು ತೀರ್ಮಾನಿಸಲಾಗುವುದು. ಆದರೆ ಈ ಗಡುವು ವಿಸ್ತರಣೆ ಆಗುತ್ತೆ ಎಂದು ಕಾಯುದಕ್ಕಿಂತ HSRP ಯನ್ನು ನಿಮ್ಮ ವಾಹನಕ್ಕೆ ಅಳವಡಿಸಿಕೊಳ್ಳುವುದೇ ಬಹಳ ಉತ್ತಮ ಯೋಜನೆಯಾಗಿದೆ ಎಂದು ಅವರು ಹೇಳಿದರು.

ಹೀಗೆ ಮಾಡಬೇಡಿ?

ಸಚಿವರು HSRP ಬಗ್ಗೆ ಸ್ಪಷ್ಟನೆ ನೀಡುತ್ತಿದ್ದಂತೆ ಪೊಲೀಸ್ ಇಲಾಖೆ ಕೂಡ ಈ ಬಗ್ಗೆ ಸ್ಪಷ್ಟನೆ ನೀಡುತ್ತಿದೆ. transport.karnataka.gov.in ಮೂಲಕ ನಂಬರ್ ಪ್ಲೇಟ್ ಪಡೆಯಬಹುದು ಆದರೆ ಸರ್ವರ್ ಸಮಸ್ಯೆ ತಾಂತ್ರಿಕ ದೋಷ ಇದೆ ಎಂದು ಹಾಗೂ ಅನೇಕ ಜನರು ಬೇಗ HSRP ಸಿಗಬೇಕು ಎಂದು ಸರಕಾರಿ ಸ್ವಾಮ್ಯ ಅಲ್ಲದ ವೆಬ್ಸೈಟ್ ಲಿಂಕ್ ಬಳಕೆ ಮಾಡುತ್ತಿದ್ದಾರೆ ಅನೇಕರು ಹಣ ಕೂಡ ಕಳೆದುಕೊಂಡಿದ್ದಾರೆ.ನಕಲಿ ಕ್ಯೂ ಆರ್ ಕೋಡ್ ವೆಬ್ಸೈಟ್ ಬಳಕೆ ಮಾಡಿ ಹಣ ವರ್ಗಾವಣೆ ಮಾಡಲಾಗಿದ್ದು ಅನೇಕ ಕಡೆ ಮೋಸ ಆಗಿದೆ. ಹಾಗಾಗಿ ಈ ಬಗ್ಗೆ ಮೋಸ ಹೋಗದಂತೆ ರಾಜ್ಯದ ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.

advertisement

Leave A Reply

Your email address will not be published.