Karnataka Times
Trending Stories, Viral News, Gossips & Everything in Kannada

HSRP Number Plate: HSRP ನಂಬರ್ ಪ್ಲೇಟ್ ರಿಜಿಸ್ಟ್ರೇಷನ್ ಮಾಡಿಸಿಕೊಳ್ಳಲು ಈ ದಾಖಲೆಗಳು ಕಡ್ಡಾಯ! ನಿಯಮ ಬದಲು

advertisement

ಸದ್ಯದ ಮಟ್ಟಿಗೆ ಭಾರತದಲ್ಲಿ ಹೊಸ ನಿಯಮಗಳು ಜಾರಿಯಾಗಿದ್ದು ಅದರಲ್ಲೂ ವಿಶೇಷವಾಗಿ ವಾಹನಗಳ ವಿಚಾರದಲ್ಲಿ HSRP ನಂಬರ್ ಪ್ಲೇಟ್ (HSRP Number Plate) ಗಳನ್ನು ಅಳವಡಿಸಿಕೊಳ್ಳಬೇಕು ಹಾಗೂ ಕಲರ್ ಕೋಡೆಡ್ ಸ್ಟಿಕರ್ಗಳನ್ನು ಅಂಟಿಸಿಕೊಳ್ಳಬೇಕು ಎನ್ನುವುದಾಗಿ ಕಡ್ಡಾಯ ನಿಯಮಗಳನ್ನು ಜಾರಿಗೆ ತರಲಾಗಿದೆ. ಭಾರತದ ಪ್ರತಿಯೊಂದು ಭಾಗದಲ್ಲಿಯೂ ಕೂಡ ಇದು ಈಗ ಕಡ್ಡಾಯವಾಗಿದ್ದು ಪ್ರತಿಯೊಬ್ಬರೂ ಕೂಡ HSRP ನಂಬರ್ ಪ್ಲೇಟ್ಗಳ ಜೊತೆಗೆ ಅದು ಯಾವ ಇಂಧನವನ್ನು ಹೊಂದಿದೆ ಎಂಬುದನ್ನು ಸೂಚಿಸುವಂತಹ ಕಲರ್ ಕೋಡೆಡ್ ಸ್ಟಿಕರ್ಗಳನ್ನು ಕೂಡ ಅಂಟಿಸಲೇಬೇಕು ಎನ್ನುವುದನ್ನು ಸಾರಿಗೆ ಇಲಾಖೆ ಸ್ಪಷ್ಟಪಡಿಸಿದೆ.

ಹಾಗಿದ್ದರೆ ಇವುಗಳನ್ನು ಪಡೆಯುವುದು ಹೇಗೆ? ಇದಕ್ಕೆ ಬೇಕಾಗಿರುವಂತಹ ಡಾಕ್ಯುಮೆಂಟುಗಳು ಯಾವುವು ಎನ್ನುವುದರ ಬಗ್ಗೆ ಇವತ್ತಿನ ಈ ಲೇಖನದ ಮೂಲಕ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳುವ ಪ್ರಯತ್ನವನ್ನು ಮಾಡೋಣ ಬನ್ನಿ.

HSRP ನಂಬರ್ ಪ್ಲೇಟ್ ಹಾಗೂ ಕಲರ್ ಕೋಡೆಡ್ ಸ್ಟಿಕರ್ ಅಂದ್ರೆ ಏನು?

 

Image Source: Paytm

 

HSRP ಅಂದ್ರೆ ಸರ್ಕಾರದಿಂದ ಪ್ರಸ್ತುತ ಪಡಿಸಲಾಗಿರುವಂತಹ ಐ ಸೆಕ್ಯೂರಿಟಿ ನಂಬರ್ ಪ್ಲೇಟ್ (HSRP Number Plate) ಆಗಿದೆ. ಇವುಗಳು ಅಲ್ಯುಮಿನಿಯಂ ನಿಂದ ತಯಾರಿಸಲ್ಪಟ್ಟಿರುವುದರಿಂದ ಇವುಗಳನ್ನು ಯಾರಿಂದಲೂ ತೆಗೆಯೋಕೆ ಕೂಡ ಆಗೋದಿಲ್ಲ. ಹೀಗಾಗಿ ಇದನ್ನ ಬೇರೆಯವರಿಂದ ಕಿತ್ತು ಮರುಬಳಕೆ ಮಾಡುವುದಕ್ಕೆ ಆಗುವುದಿಲ್ಲ. ಇನ್ನು ಕಲರ್ ಕೊಡಿ ಸ್ಟಿಕರ್ (Colour Coded Stickers) ಗಳ ಬಗ್ಗೆ ಮಾತನಾಡುವುದಾದರೆ ಇವುಗಳನ್ನು ಮೂರು ಚಕ್ರ ಇರುವ ಅಥವಾ ನಾಲ್ಕು ಚಕ್ರ ಇರುವಂತಹ ವಾಹನಗಳಲ್ಲಿ ಅಳವಡಿಸಲಾಗಿರುತ್ತದೆ.

ಈ ಮೂಲಕ ಆ ವಾಹನಗಳು ಯಾವ ಇಂಧನದಲ್ಲಿ ಉದಾಹರಣೆಗೆ ಸಿ ಎನ್ ಜಿ ಪೆಟ್ರೋಲ್ ಹಾಗೂ ಡೀಸೆಲ್ ಅಥವಾ ಎಲೆಕ್ಟ್ರಿಸಿಟಿ ಗಳ ಮೂಲಕ ಚಲಿಸುತ್ತವೆ ಎನ್ನುವುದನ್ನ ತಿಳಿಸುವ ಕಾರಣಕ್ಕಾಗಿ ಅವುಗಳನ್ನು ಬಳಸಿಕೊಳ್ಳಲಾಗುತ್ತದೆ.

advertisement

2019 ರ ಏಪ್ರಿಲ್ ಗಿಂತ ಮುಂಚೆ ಖರೀದಿ ಮಾಡಲಾಗಿರುವಂತಹ ಪ್ರತಿಯೊಂದು ವಾಹನಗಳಲ್ಲಿ ಕೂಡ ದೆಹಲಿಯಲ್ಲಿ ಈಗಾಗಲೇ HSRP ನಂಬರ್ ಪ್ಲೇಟ್ ಹಾಗೂ ಕಲರ್ ಕೋಡ್ ಸ್ಟಿಕ್ಕರ್ ಗಳನ್ನ ಕಡ್ಡಾಯವಾಗಿ ಬಳಸಿಕೊಳ್ಳುವಂತೆ ಆದೇಶವನ್ನು ಹೊರಡಿಸಲಾಗಿದೆ. ಸದ್ಯಕ್ಕೆ ಈ ನಿಯಮ ದೆಹಲಿಯಲ್ಲಿ ಅಳವಡಿಕೆ ಆಗುತ್ತಿದ್ದು ರಾಜ್ಯದಲ್ಲಿ ಕೂಡ ಅಳವಡಿಕೆ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಇದನ್ನು ಪಡೆದುಕೊಳ್ಳಬೇಕಾಗಿರುವ ಡಾಕ್ಯುಮೆಂಟ್ಗಳು:

 

Image Source: Economic Times

 

HSRP Number Plate ಗಾಗಿ ಅಪ್ಲೈ ಮಾಡುವ ಸಂದರ್ಭದಲ್ಲಿ ಯಾವುದೇ ರೀತಿಯ ಪರ್ಸನಲ್ ಡಾಕ್ಯುಮೆಂಟ್ ಗಳನ್ನು ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿ ಎಂಬುದಾಗಿ ಸಂಸ್ಥೆ ಕೇಳೋದಿಲ್ಲ ಎಂದು ನೀವು ನೆನಪಿನಲ್ಲಿ ಇಟ್ಟುಕೊಳ್ಳಿ. ಇಲ್ಲಿ ಪ್ರಮುಖವಾಗಿ ನಿಮ್ಮ ರಿಜಿಸ್ಟ್ರೇಷನ್ ಸರ್ಟಿಫಿಕೇಟ್ ಅಂದ್ರೆ RC ಅನ್ನು ಪ್ರಮುಖವಾಗಿ ಕೇಳಲಾಗುತ್ತದೆ. ಇದರಲ್ಲಿ ವಾಹನದ ರಿಜಿಸ್ಟ್ರೇಷನ್ ಸೇರಿದಂತೆ ಚಾಸಿಸ್ ನಂಬರ್ ಹಾಗೂ ಇಂಜಿನ್ ನಂಬರ್ ಗಳಂತಹ ಮಾಹಿತಿಗಳು ಪ್ರಮುಖವಾಗಿ ದೊರಕುತ್ತವೆ.

ವಿಧಾನ:

  • ಟ್ರಾನ್ಸ್ಪೋರ್ಟ್ ಮಿನಿಸ್ಟ್ರಿಯ ಅಧಿಕೃತ ವೆಬ್ ಸೈಟ್ ಗೆ ಮೊದಲಿಗೆ ನೀವು ಹೋಗಬೇಕಾಗಿರುತ್ತದೆ. ಅಲ್ಲಿ Book My HSRP ಆಪ್ಷನ್ ಅನ್ನು ಕ್ಲಿಕ್ ಮಾಡಬೇಕಾಗಿರುತ್ತದೆ.
  • ಇಲ್ಲಿ ನಿಮಗೆ ಎರಡು ಆಪ್ಷನ್ ಗಳನ್ನು ನೀಡಲಾಗುತ್ತದೆ ಒಂದು ಮೊದಲ ಬಾರಿಗೆ ಅಪ್ಲೈ ಮಾಡುತ್ತಿದ್ದರೆ HSRP ಹಾಗೂ ಕಲರ್ ಕೋಡೆಡ್ ಸ್ಟಿಕರ್ ಅನ್ನು ಆಯ್ಕೆ ಮಾಡಬೇಕಾಗಿರುತ್ತದೆ. ಇನ್ನೊಂದು ಕಡೆ ಈಗಾಗಲೇ HSRP ನಂಬರ್ ಪ್ಲೇಟ್ ಅನ್ನು ಹಾಕಿಸಿಕೊಂಡಿದ್ದರೆ ಕೇವಲ ಕಲರ್ ಕೋಡೆಡ್ ಸ್ಟಿಕರ್ ಗಳನ್ನ ಪಡೆದುಕೊಳ್ಳುವುದಕ್ಕಾಗಿ ಅಪ್ಲೈ ಮಾಡುವಂತಹ ಆಯ್ಕೆ ಇದೆ.
  • ಈ ಸಂದರ್ಭದಲ್ಲಿ ಸರಿಯಾದ ರೀತಿಯ ಮಾಹಿತಿ ಹಾಗೂ ಡಾಕ್ಯುಮೆಂಟ್ಗಳನ್ನು ನೀಡಿದ ನಂತರ ಆನ್ಲೈನ್ ಮುಖಾಂತರ ಹಣ ಪಾವತಿ ಮಾಡುವುದಕ್ಕೆ ಕೇಳಲಾಗುತ್ತದೆ. ನೀವು ಹಣವನ್ನು ಪಾವತಿ ಮಾಡಿದ ನಂತರ HSRP ವಿವರಗಳ ಮೂಲಕ ನಿಮ್ಮ ಮೊಬೈಲ್ ನಂಬರ್ ಗೆ ಮೆಸೇಜ್ ತಲುಪುತ್ತದೆ.

advertisement

Leave A Reply

Your email address will not be published.