Karnataka Times
Trending Stories, Viral News, Gossips & Everything in Kannada

Covishield Vaccine: ಕೋವಿಶೀಲ್ಡ್ ಲಸಿಕೆ ಪಡೆದವರಿಗೆ ಸಿಹಿಸುದ್ದಿ ಕೊಟ್ಟ ಡಾಕ್ಟರ್ ಸಿಎನ್ ಮಂಜುನಾಥ್

advertisement

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಹೆಚ್ಚಾಗಿ ಓಡಾಡುತ್ತಿರುವಂತಹ ಒಂದು ವಿಚಾರ ಅಂದ್ರೆ ಕೋವಿ ಶೀಲ್ಡ್ ವ್ಯಾಕ್ಸಿನ್ (Covishield Vaccine) ಅನ್ನು ಪಡೆದುಕೊಂಡಿರುವವರಿಗೆ ಹೃದಯ ಸಂಬಂಧಿತ ಕೆಲವೊಂದು ಗಂಭೀರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವಂತಹ ಸಾಧ್ಯತೆ ಇದೆ ಎಂಬುದಾಗಿ ಎಲ್ಲಾ ಕಡೆ ಓಡಾಡುತ್ತಿದೆ. ಸಾಮಾನ್ಯವಾಗಿ ಸೋಶಿಯಲ್ ಮೀಡಿಯಾದಲ್ಲಿ ಇಲಿ ಹೋಯಿತು ಅಂದ್ರೆ ಹುಲಿ ಹೋಯಿತು ಅಂತ ಹೇಳುತ್ತಾರೆ.

ಆದರೆ ಈ ವಿಚಾರವನ್ನು ಈ ವ್ಯಾಕ್ಸಿನ್ ಅನ್ನು ತಯಾರು ಮಾಡಿರುವಂತಹ ಕಂಪನಿಯ ಮಾಲೀಕರೇ ರಕ್ತ ಹೆಪ್ಪುಗಟ್ಟುವಿಕೆ ನಂತಹ ಸನ್ನಿವೇಶಗಳು ಎದುರಾಗಬಹುದು ಅನ್ನುವುದನ್ನು ಒಪ್ಪಿಕೊಂಡಿದ್ದಾರೆ ಎನ್ನುವ ಸುದ್ದಿಗಳು ಮಾಧ್ಯಮಗಳಲ್ಲಿ ಬಿತ್ತರಾಗುತ್ತಿವೆ ಎಂದು ತಿಳಿದ ನಂತರ ಸೋಶಿಯಲ್ ಮೀಡಿಯಾದಲ್ಲಿ ಇದರ ಬಗ್ಗೆ ಬೇರೆ ಬೇರೆ ರೀತಿಯ ಬಣ್ಣ ಕಟ್ಟುವಂತಹ ಕೆಲಸಗಳು ಕೂಡ ನಡೆಯುತ್ತಿವೆ. ಇದರ ಬಗ್ಗೆ ಹೆಚ್ಚಿನ ಜ್ಞಾನ ಇಲ್ಲದೆ ಇರುವಂತಹ ಸಾಮಾನ್ಯ ಜನರು ಇದರ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ.

 

Image Source: Scroll.in

 

ಇನ್ನು ಹೃದಯ ಸಂಬಂಧಿತ ಆರೋಗ್ಯ ಸಮಸ್ಯೆಯ ತಜ್ಞರಾಗಿರುವಂತಹ ಹಾಗೂ ಈ ಬಾರಿ ಲೋಕಸಭಾ ಚುನಾವಣೆಯ ಬಿಜೆಪಿ ಪಕ್ಷ ಪರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಇರುವಂತಹ ಹೃದಯ ತಜ್ಞ ಆಗಿರುವ ಡಾಕ್ಟರ್ ಸಿ ಎನ್ ಮಂಜುನಾಥ್ (Dr. CN Manjunath) ರವರು ಈ ಗೊಂದಲಗಳ ಬಗ್ಗೆ ಸರಿಯಾದ ರೀತಿಯಲ್ಲಿ ಮಾಹಿತಿ ನೀಡುವಂತಹ ಮಾತುಗಳನ್ನು ಆಡಿದ್ದು ಬನ್ನಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

advertisement

ಕೋವಿಶೀಲ್ಡ್ ಸೈಡ್ ಎಫೆಕ್ಟ್ ಬಗ್ಗೆ ಹೃದ್ರೋಗ ತಜ್ಞ ಡಾ. ಸಿ ಎನ್ ಮಂಜುನಾಥ್ ಹೇಳಿದ್ದೇನು ಗೊತ್ತಾ?

 

Image Source: Star of Mysore

 

ಕೋವಿಶೀಲ್ಡ್ (Covishield Vaccine) ಸೈಡ್ ಎಫೆಕ್ಟ್ ಬಗ್ಗೆ ಮಾತನಾಡುತ್ತಾ ಮಂಜುನಾಥ್ (Dr. CN Manjunath) ರವರು ಯಾವುದೇ ಒಳ್ಳೆಯ ವ್ಯಾಕ್ಸಿನ್ ಅಥವಾ ಔಷಧಿಯ ವಿಚಾರದಲ್ಲಿ 99.99 ಪ್ರತಿಶತ ಉತ್ತಮ ಹಾಗೂ 0.05 ರೀತಿಯಲ್ಲಿ ಕೆಲವೊಂದು ಸೈಡ್ ಎಫೆಕ್ಟ್ ಇರಬಹುದು. ಅದು ಖಂಡಿತವಾಗಿ ಎಲ್ಲಾ ಔಷಧಿಗಳಲ್ಲಿ ಕೂಡ ಬಹುತೇಕ ಇದ್ದೇ ಇರುತ್ತದೆ. ಇಲ್ಲಿ ಈ ಔಷಧಿಯಿಂದ ಸಿಗುತ್ತಿರುವಂತಹ ಲಾಭ ಎನ್ನುವುದು ರಿಸ್ಕ್ ಗಿಂತ ಸಾವಿರ ಪಟ್ಟು ಹೆಚ್ಚಾಗಿದೆ ಅನ್ನೋದನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು.

ಈ ವ್ಯಾಕ್ಸಿನ್ ಭಾರತಕ್ಕೆ ಬರೋದಕ್ಕಿಂತ ಮುಂಚೆ ಕೂಡ 40 ವಯಸ್ಸಿಗಿಂತ ಕಡಿಮೆ ಇರುವವರಿಗೆ 30% ಹೃದಯಘಾತ ಆಗ್ತಾನೆ ಇತ್ತು. ಕೋವಿಡ್ ಬರುವುದಕ್ಕಿಂತ ಮುಂಚೆ ಕಳೆದ 15 ವರ್ಷಗಳಿಂದ 40 ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಅಂದ್ರೆ ಮಧ್ಯಮ ವಯಸ್ಕರಲ್ಲಿ ಹೃದಯ ಘಾತ ಕಂಡು ಬರುವುದು ಹೆಚ್ಚಾಗಿದೆ. ಹೀಗಾಗಿ ಕೋವಿಶೀಲ್ಡ್ ನಿಂದ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಉಂಟಾಗುತ್ತವೆ ಎನ್ನುವಂತಹ ಭಯದಿಂದ ಜನರು ಹೊರ ಬರ್ಬೇಕು ಎಂಬುದಾಗಿ ಅವರು ಹೇಳ್ತಾರೆ.

ಬೇರೆ ರೀತಿಯ ಧೂಮಪಾನ ಮಧ್ಯಪಾನಗಳಂತಹ ಕೆಟ್ಟ ಅಭ್ಯಾಸಗಳನ್ನು ಕಡಿಮೆ ಮಾಡಬೇಕು ಅಥವಾ ಬಿಟ್ಟುಬಿಡಬೇಕು. ಡಯಾಬಿಟಿಸ್ ಇದ್ರೆ ಸಕ್ಕರೆಯ ಅಂಶವನ್ನು ಸೇವಿಸುವುದನ್ನು ಕಡಿಮೆ ಮಾಡಬೇಕು ಹೆಚ್ಚಿನ ಚಿಂತೆಯನ್ನು ತೆಗೆದುಕೊಳ್ಳಬಾರದು ಹಾಗೂ ದೈಹಿಕ ಚಟುವಟಿಕೆಗಳು ಕೂಡ ದೇಹಕ್ಕೆ ಇನ್ನಷ್ಟು ನೋವನ್ನು ಉಂಟುಮಾಡುವ ರೀತಿಯಲ್ಲಿ ಇರಬಾರದು ಎಂಬುದಾಗಿ ಅವರು ಸಲಹೆ ನೀಡಿದ್ದಾರೆ. ಹೀಗಾಗಿ ವ್ಯಾಕ್ಸಿನ್ ನಿಂದ ಸೈಡ್ ಎಫೆಕ್ಟ್ ಉಂಟಾಗುತ್ತದೆ ಎನ್ನುವುದು ಸುಳ್ಳಾಗುತ್ತದೆ ಆ ಪರಿಣಾಮ ಈಗ ಬರೋದು ಇಲ್ಲ ಎನ್ನುವುದಾಗಿ ಅವರು ಹೇಳಿದ್ದಾರೆ. ಆಹಾರ ಕ್ರಮದಲ್ಲಿ ದೇಹಕ್ಕೆ ಅನಾರೋಗ್ಯ ಉಂಟು ಮಾಡುವಂತಹ ಆಹಾರ ಪದ್ಧತಿಯನ್ನು ಅನುಸರಿಸಬಾರದು ಎನ್ನುವುದಾಗಿ ಕೂಡ ಈ ಸಂದರ್ಭದಲ್ಲಿ ಅವರು ಜನತೆಗೆ ಸಂದೇಶ ನೀಡಿದ್ದಾರೆ.

advertisement

Leave A Reply

Your email address will not be published.