Karnataka Times
Trending Stories, Viral News, Gossips & Everything in Kannada

Pension: ಪಿಂಚಣಿ ಹಣ ಪಡೆಯುತ್ತಿರುವ ಎಲ್ಲರಿಗೂ ಹೊಸ ರೂಲ್ಸ್! ಸರ್ಕಾರದ ಘೋಷಣೆ

advertisement

ಸರಕಾರಿ ಉದ್ಯೋಗ ಎನ್ನುವುದು ಸೆಕ್ಯುರ್ಡ್ ಜಾಬ್ ಆಗಿದ್ದು ಎಲ್ಲ‌ ಜನರು ಸರಕಾರಿ‌ ಉದ್ಯೋಗ ಗಿಟ್ಟಿಸಿಕೊಳ್ಳಬೇಕು ಎನ್ನುವ ಆಸೆ ಕನಸು ಹೊಂದಿರುತ್ತಾರೆ. ಹೌದು ಇಲ್ಲಿ ವೇತನವು ಹೆಚ್ಚು ಇರಲಿದ್ದು ‌ಮುಂದಿನ‌ ವೃದ್ಧಾಪ್ಯದ ಸಂದರ್ಭದಲ್ಲೂ ಹೆಚ್ಚು ಸಹಾಯಕವಾಗಲಿದೆ.ಈಗಾಗಲೇ ಹೊಸ ಪಿಂಚಣಿ ಯೋಜನೆ (Pension Scheme) ಕುರಿತಂತೆ ಬಹಳಷ್ಟು ಸರಕಾರಿ ನೌಕಕರು ವಿರೋಧ ವ್ಯಕ್ತ ಪಡಿಸಿದ್ದರು.

ಮೊದಲಿ‌ ನಿಂದಲೂ ಇದ್ದ ಪಿಂಚಣಿ ಯೋಜನೆ (Pension Yojana) ಯನ್ನು ಬದಲಾವಣೆ ಮಾಡಿ 2006 ರ ಬಳಿಕ ನೇಮಕವಾದ ಸರ್ಕಾರಿ ನೌಕರರಿಗೆ ಹೊಸ ಪಿಂಚಣಿ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಈ ಯೋಜನೆ ಬೇಡ ಎಂದು ರಾಜ್ಯ ಸರ್ಕಾರಿ ನೌಕರರು ಹೋರಾಟ ನಡೆಸಿ ಮತ್ತೆ ಹಿಂದಿನ ಯೋಜನೆ ಜಾರಿಗೆ ತರಬೇಕೆಂದು ಪಟ್ಟು ಹಿಡಿದಿದ್ದರು.

ಆದೇಶ ನೀಡಿದೆ:

 

Image Source: Business Today

 

ಇದೀಗ ರಾಜ್ಯ ಸರಕಾರ‌ಇದಕ್ಕೆ ಅವಕಾಶ ನೀಡಿದ್ದು ಒಂದು ಬಾರಿ ಮಾತ್ರ ಹೊಸ ಪಿಂಚಣಿ ಯೋಜನೆ ಯಿಂದ ಹಳೆ ಪಿಂಚಣಿ ಯೋಜನೆಗೆ ವರ್ಗಾವಣೆಗೊಳ್ಳಲು ಅರ್ಜಿ ಸಲ್ಲಿಸಲು ಅವಕಾಶ ಇರಲಿದ್ದು ರಾಜ್ಯ ಸರ್ಕಾರ ದಲ್ಲಿನ ನೌಕರರನ್ನು ಹಳೆಯಪಿಂಚಣಿ ಯೋಜನೆ (Old Pension Scheme) ಗೆ ಒಳಪಡಿಸುವ ಕುರಿತು ಸರ್ಕಾರ ಆದೇಶ ನೀಡಿದೆ.

ಅರ್ಜಿ ಸಲ್ಲಿಸಬೇಕು:

advertisement

ಸರ್ಕಾರಿ ನೌಕರರು ಹಿಂದಿನ ಪಿಂಚಣಿ ಯೋಜನೆ‌ ಇಚ್ಛಿಸಿದಲ್ಲಿ ತಮ್ಮ ‌ಇಚ್ಚೆಯನ್ನು ನಿಗದಿತ ನಮೂನೆಯಲ್ಲಿ ದಿನಾಂಕ 30-06-2024 ರೊಳಗೆ ನೇಮಕಾತಿ ಪ್ರಾಧಿಕಾರಕ್ಕೆ ನೇರವಾಗಿ ಅರ್ಜಿ ಸಲ್ಲಿಸಬೇಕು.‌ ನೌಕರರು ನಿಗದಿತ ದಿನಾಂಕದೊಳಗೆ ತಮ್ಮ ಆಯ್ಕೆಯನ್ನು ಸಲ್ಲಿಸದೇ ಇದ್ದಲ್ಲಿ ರಾಷ್ಟ್ರೀಯ ಪಿಂಚಣಿ ಯೋಜನೆ (National Pension Scheme) ಯಲ್ಲಿ ಹೊಸ ಪಿಂಚಣಿ ಯೋಜನೆ ಯಲ್ಲಿಯೇ ಮುಂದುವರೆಯುತ್ತಾರೆ.

ಈ ಅವಧಿಯೊಳಗೆ ಸಲ್ಲಿಸಿ:

 

Image Source: The Economic Times

 

ಈಗಾಗಲೇ ಕೆಲವು ರಾಜ್ಯಗಳಲ್ಲಿ ಹಳೆಯ ಪಿಂಚಣಿ ಪದ್ಧತಿ ಜಾರಿಗೆ ಬಂದಿದ್ದು. ಹಳೆಯ ಪಿಂಚಣಿ ಯೋಜನೆ ಪಡೆಯಲು ಕೆಲವೊಂದು ಷರತ್ತುಗಳು ಕೂಡ ಇರಲಿದ್ದು‌,ದಿನಾಂಕ 01.04.2006 ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆಯಾದ ಮತ್ತು ಆ ದಿನಾಂಕ ಅಥವಾ ನಂತರ ರಾಜ್ಯ ಸರ್ಕಾರದ ಕರ್ತವ್ಯ ನಿರ್ವಹಿಸುವ ಸರ್ಕಾರಿ ನೌಕರರು ಹಳೆಯ ರಕ್ಷಣಾ ಪಿಂಚಣಿ ಯೋಜನೆಯನ್ನು ಬಯಸುವವರು ಈ ಬಗ್ಗೆ ಅರ್ಜಿಯನ್ನು ನೇರವಾಗಿ ಇಲ್ಲಿನ ನೇಮಕಾತಿ ಪ್ರಾಧಿಕಾರಕ್ಕೆ ಸಲ್ಲಿಸಬೇಕು. ಈ ನಮೂನೆಯನ್ನು 30.06.2024 ರೊಳಗೆ ಸಲ್ಲಿಸಬೇಕು.

ಈ ಮಾಹಿತಿ‌ ಕಡ್ಡಾಯ ಬೇಕು:

  • ನಿಮ್ಮದಿನಾಂಕದ ನೇಮಕಾತಿ ಅಧಿಸೂಚನೆಯ ಪ್ರತಿಯನ್ನು ಲಗತ್ತಿಸಿ.
  • ದಿನಾಂಕದ ಸಂಬಂಧಿತ ಆಯ್ಕೆ ಪಟ್ಟಿಯ ಪ್ರತಿ
  • ನೇಮಕಾತಿಯಿಂದ ಇಲಾಖೆಯಲ್ಲಿ ಬದಲಾವಣೆಯಾಗಿದೆಯೇ? ವಿವರಗಳನ್ನು ಸಲ್ಲಿಸಿ.
  • ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕಛೇರಿ/ಇಲಾಖೆಯ ವಿಳಾಸ:
  • ಕೆಜಿಐಡಿ ಸಂಖ್ಯೆ
  • NPS PRAN ಸಂಖ್ಯೆ
  • ಸಹಿ ಮತ್ತು ಹೆಸರು

advertisement

Leave A Reply

Your email address will not be published.