Karnataka Times
Trending Stories, Viral News, Gossips & Everything in Kannada

Pepper: ಕಾಳುಮೆಣಸು ಬೆಳೆದ ಎಲ್ಲಾ ರೈತರಿಗೂ ಸಿಹಿಸುದ್ದಿ! ಸಂಭ್ರಮಿಸಿದ ರೈತ

advertisement

ಕೃಷಿಗೆ ಭಾರತದಲ್ಲಿ ಹೆಚ್ಚಿನ ಪ್ರೋತ್ಸಾಹ ವನ್ನು ನೀಡಲಾಗುತ್ತದೆ.ಅದರಲ್ಲೂ ರೈತರ ಅಭಿವೃದ್ಧಿ ಯಾದರೆ ಮಾತ್ರ ದೇಶ ಕೂಡ ಅಭಿವೃದ್ಧಿ ಯಾದಂತೆ. ಇಂದು ಕೃಷಿಕರನ್ನು ಪ್ರೋತ್ಸಾಹ ಪಡಿಸುವ ನಿಟ್ಟಿನಲ್ಲಿ ಸರಕಾರ ಕೂಡ ಹೆಚ್ಚು ಸೌಲಭ್ಯ ಗಳನ್ನು ಘೋಷಣೆ ಮಾಡುತ್ತಿದೆ.ಇಂದು ಯುವಕರು ಕೂಡ ಕೃಷಿಯತ್ತ ಆಕರ್ಷಿತ ರಾಗಿದ್ದು ಆಧುನಿಕ ಪದ್ದತಿ ಯ ಕೃಷಿಯನ್ನು ಕೂಡ ಅಳವಡಿಕೆ ಮಾಡಿಕೊಳ್ಳುತ್ತಿದ್ದಾರೆ.

ತಾಪಮಾನ ಹೆಚ್ಚಳ:

 

Image Source: Digpu

 

ಈಭಾರಿ ರೈತರು ಬಹಳಷ್ಟು ತೊಂದರೆ ಅನುಭವಿಸಿದ್ದಾರೆ. ಮಳೆ ಬಾರದೇ ನೀರಿಲ್ಲದೆ ರೈತರು ಸಂಕಷ್ಟಕ್ಕೆ ಒಳಗಾಗಿದ್ದು ಒಂದು ಕಡೆ ಬೇಸಿಗೆಯ ತಾಪಮಾನ ಮತ್ತೊಂದೆಡೆ ನೀರಿನ ಕೊರತೆ ರೈತರನ್ನು ಬಹಳಷ್ಟು ಬೇಸರ ತರಿಸಿತ್ತು. ಈ ಭಾರಿ ಕೃಷಿಯಲ್ಲಿ ಬಹಳಷ್ಟು ನಷ್ಟ ಉಂಟಾಗಿದ್ದು ಇದೀಗ ಈ ಬೆಳೆಯನ್ನು ಮಾಡಿದ ರೈತರ ಮೊಗದಲ್ಲಿ ಮಂದಹಾಸ ‌ಮೂಡುವಂತಾಗಿದೆ.

ಕಾಳು ಮೆಣಸು ಬೆಲೆ ಹೆಚ್ಚಳ:

 

advertisement

Image Source: Cleveland Clinic Health Essentials

 

ಮಸಾಲೆ ಕಂಪನಿಗಳಿಗೆ ಬಳಕೆ ಮಾಡಲು ಕಾಳುಮೆಣಸು ಹೆಚ್ಚಿನ‌ ಅಗತ್ಯವಿದ್ದು ದೇಶೀಯ ಮಾರುಕಟ್ಟೆಯಲ್ಲಿ ಬೇಡಿಕೆಗೆ ತಕ್ಕಂತೆ ಕಾಳುಮೆಣಸು ಲಭ್ಯವಾಗುತ್ತಿಲ್ಲ. ಹೀಗಾಗಿ ಹೆಚ್ಚಿನ ಕಂಪನಿಗಳು ಕಾಳುಮೆಣಸನ್ನು (Pepper) ಆಮದು ಮಾಡಿಕೊಳ್ಳುದರಿಂದ ಕಾಳುಮೆಣಸಿನ ಆಮದು ಹೆಚ್ಚಿದೆ ಎನ್ನಬಹುದು. ಇದೀಗ ಕಾಳುಮೆಣಸು ಬೆಲೆಯು‌ ಏರಿಕೆ ಯಾಗಿದ್ದು ಈ ಕೃಷಿ ಮಾಡಿದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಪ್ರತಿ ಕೆಜಿ ಗಾರ್ಬಲ್ಡ್‌ ಕಾಳುಮೆಣಸು ದರ 597 ರೂ. ಹಾಗೂ ಅನ್‌ ಗಾರ್ಬಲ್ಡ್‌ ದರ 577 ರೂ.ನಷ್ಟು ತಲುಪಿದೆ.

ಇತರ ಕಡೆ ಎಷ್ಟಿದೆ?

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಟನ್‌ ಭಾರತದ ಕಾಳುಮೆಣಸಿಗೆ 7,250 ಡಾಲರ್‌ ಇರಲಿದ್ದು ವಿಯೆಟ್ನಾಂ ನಲ್ಲಿ ಕಾಳುಮೆಣಸಿಗೆ (Pepper) 4,600 ಡಾಲರ್‌, ಬ್ರೆಜಿಲ್‌ ಕಾಳುಮೆಣಸಿಗೆ 4,300 ಡಾಲರ್‌ ಮತ್ತು ಶ್ರೀಲಂಕಾದ ಕಾಳುಮೆಣಸಿಗೆ (Pepper) 6,200 ಡಾಲರ್‌, ಇಂಡೋನೇಷ್ಯಾದ ಕಾಳುಮೆಣಸಿಗೆ 5,000 ಡಾಲರ್‌ ಮೊತ್ತ ಇರಲಿದೆ.

ಕಾಫಿ ಬೆಲೆಯು ಹೆಚ್ಚಳ:

ಮಲೆನಾಡು ಭಾಗದಲ್ಲಿ ಕಾಫಿಯನ್ನು ಹೆಚ್ಚು ಬೆಲೆಯುತ್ತಿದ್ದು ಜಾಗತಿಕ ಮಟ್ಟದಲ್ಲಿ ಕಾಫಿ ಉತ್ಪಾದನೆ ಕುಸಿತವಾಗಿದ್ದು, ಬರಗಾಲದಿಂದ ಕೂಡ ರಾಜ್ಯದಲ್ಲಿಯೂ ಕಾಫಿ ಉತ್ಪಾದನೆ ಕುಸಿತವಾಗಿದೆ.ಹಾಗಾಗಿ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಳವಾಗಿದೆ. ‌ಅದೇ ರೀತಿ‌ ರಾಜ್ಯದಲ್ಲಿ ಅಡಿಕೆ ಬೆಲೆ ಹೆಚ್ಚಳ ವಾಗಿದ್ದು ಕಳೆದ ಒಂದು ವಾರದಿಂದ ಅಡಿಕೆ ಬೆಲೆ ಭರ್ಜರಿ ಏರಿಕೆ ಕಂಡಿದೆ. ಸದ್ಯ ಕ್ವಿಂಟಲ್‌ಗೆ ಅಡಿಕೆ ಬೆಲೆಯು 53,000 ದಾಟಿದೆ.

advertisement

Leave A Reply

Your email address will not be published.