Karnataka Times
Trending Stories, Viral News, Gossips & Everything in Kannada

Govt Scheme: 1 ಲಕ್ಷ ಬಿಲ್ ಆದರೆ ಸರ್ಕಾರವೇ 80 ಸಾವಿರ ನೀಡಲಿದೆ! ಈ ಯೋಜನೆಗೆ ಮುಗಿಬಿದ್ದ ಜನ

advertisement

ನಮ್ಮ ಬದುಕಿನ ಶೈಲಿಯಲ್ಲಿ ಉತ್ಸಾಹ ಬರಬೇಕಾದರೆ ದುಡಿದು ತಿನ್ನಬೇಕು ಜೀವನ ಸಾರ್ಥಕ ಎಂದು ಹಿಂದಿನ ಕಾಲದಿಂದಲೂ ಕೇಳಿ ಬರುತ್ತಿರುವ ಮಾತು.ದುಡಿಮೆ ಅಂತ ಬಂದಾಗ ಮೊದಲಿಗೆ‌ ನೆನಪಾಗುವುದೇ ಕೃಷಿ.‌ಎಷ್ಟೇ ಬಿಸಿಲಿದ್ದರೂ, ಮಳೆ ಇದ್ದರೂ ರೈತರು ತಮ್ಮ ಕೃಷಿಯನ್ನು,ಬಿತ್ತನೆಯನ್ನು‌ ಪ್ರೀತಿಸುವುದು ಬಿಟ್ಟಿಲ್ಲ. ಹಾಗಾಗಿ ಭಾರತ ಇಂದು ಕೂಡ ಕೃಷಿ ಪ್ರಧಾನ ವಂದಂತಹ ರಾಷ್ಟ್ರ ವಾಗಿದೆ. ಇಂದು ಕೃಷಿಯಲ್ಲಿ ಆಧುನಿಕ ಕೃಷಿ ಯಂತ್ರೋಪಕರಣ ‌ಬಳಸುವ ಮೂಲಕವು ರೈತರು ಕೃಷಿಯಲ್ಲಿ ಅಭಿವೃದ್ಧಿ ಕಾಣುತ್ತಿದ್ದಾರೆ. ಅದೇ ರೀತಿ ಸರಕಾರ ಕೃಷಿಯತ್ತ ಆಕರ್ಷಿತ ಮಾಡಲು ಹಲವು ರೀತಿಯ ಯೋಜನೆಗಳನ್ನು ರೂಪಿಸುತ್ತಾ ಬೆಂಬಲವನ್ನು ನೀಡುತ್ತಲೇ ಬಂದಿದೆ. ಅದೇ ರೀತಿ ಕೃಷಿ ಯಂತ್ರೋಪಕರಣ ಖರೀದಿ ಮಾಡಲು ಕೇಂದ್ರ ಸರಕಾರ ಹೊಸ ಯೋಜನೆಯನ್ನು ಸಹ ರೂಪಿಸಿದೆ

ಯಾವುದು ಈ ಯೋಜನೆ:

 

Image Source: ABP News

 

ಪ್ರಧಾನ ಮಂತ್ರಿ ಕುಸುಮ್ ಯೋಜನೆ (PM Kusum Yojana) ಯನ್ನು ಕೇಂದ್ರ ಸರಕಾರ ಜಾರಿಗೆ ತಂದಿದ್ದು ರೈತರಿಗೆ ಸೌಲಭ್ಯಗಳನ್ನು ಒದಗಿಸುವುದು ಮತ್ತು ಕೃಷಿಯಲ್ಲಿ ಅಭಿವೃದ್ಧಿ ಮಾಡುವುದು ಪ್ರಧಾನ ಮಂತ್ರಿ ಕುಸುಮ್ ಯೋಜನೆಯ (PM Kusum Yojana) ಮುಖ್ಯ ಉದ್ದೇಶವಾಗಿದ್ದು ಈ ಕುಸುಮ್ ಯೋಜನೆ ಯಡಿ ರೈತರು ಕೆಲವೊಂದು ಸೌಲಭ್ಯ ಗಳನ್ನು ಪಡೆಯಬಹುದಾಗಿದೆ.

ಪಂಪ್ ಸೆಟ್ ಅಳವಡಿದಲು ಸಬ್ಸಿಡಿ:

 

Image Source: Justdial

 

advertisement

ಪ್ರಧಾನ ಮಂತ್ರಿ ಕುಸುಮ್ ಯೋಜನೆ (PM Kusum Yojana) ಯು ರೈತರಿಗೆ ಸೋಲಾರ್ ಪಂಪ್‌ (Solar Pump) ಗಳನ್ನು ಅಳವಡಿಸಲು ಸಬ್ಸಿಡಿ ರೂಪದಲ್ಲಿ ಸಹಾಯ ಮಾಡಲಿದೆ. ಕುಸುಮ್‌ ಯೋಜನೆಯಡಿ ಶೇ. 30ರಷ್ಟು ಸಹಾಯಧನ ನೀಡಲಿದ್ದು 20% ನೀವು ಭರಿಸಿದರೆ ಸಾಕು.ಈ ಯೋಜನೆಯಡಿ ರೈತರಿಗೆ ಪಂಪ್‌, ಮೋಟರ್‌, ಪೈಪ್‌ ಒದಗಿಸಲಾಗುತ್ತದೆ. ಇದರಲ್ಲಿ 80% ಸರಕಾರ ಸಹಾಯಧನ ಒದಗಿಸಲಿದ್ದು 1 ಲಕ್ಷ ರೂಪಾಯಿ ಯಲ್ಲಿ 80,000 ಸರಕಾರ ನೀಡಿದರೆ 20,000 ದಷ್ಟು ನೀವು ಭರಿಸಬೇಕಾಗುತ್ತದೆ

ಈ ಸೌಲಭ್ಯ ‌ನೀಡಲಿದೆ:

ಈ ಯೋಜನೆ ಯಡಿಯಲ್ಲಿ ಸೌರಶಕ್ತಿ (Solar Power) ಮತ್ತು ನವೀಕರಿಸಬಹುದಾದ ಇಂಧನವನ್ನು ಬಳಸಿಕೊಂಡು ಸ್ವಾವಲಂಬಿಗಳಾಗಲು ಸಾಧ್ಯವಾಗಲಿದೆ.ಸರಕಾರವೇ ಕೊಳವೆಬಾವಿಗಳನ್ನು ನಿರ್ಮಿಸಿ ನಿರ್ದಿಷ್ಟ ಪ್ರಮಾಣದ ವಿದ್ಯುತ್ ಉತ್ಪಾದಿಸುತ್ತದೆ. ಹೀಗೆ ಕೃಷಿಯನ್ನು ಆಧುನೀಕರಣ ಗೊಳಿಸಲು ಹಲವು ರೀತಿಯ ಸೌಲಭ್ಯ ಗಳನ್ನು ಸರಕಾರ ನೀಡಲಿದೆ.

ಬೇಕಾದ ದಾಖಲೆಗಳು:

  • Aadhaar Card
  • Bank Account
  • Income Certificate
  • Mobile No
  • Address Information
  • Photo

ಅರ್ಜಿ ಸಲ್ಲಿಸಿ:

ಮೊದಲಿಗೆ‌ www.mnre.gov.in ಈ‌ ಲಿಂಕ್ ಗೆ ಭೇಟಿ ನೀಡಿ. ಆನ್‌ಲೈನ್ ನೋಂದಣಿ ಆಯ್ಕೆ ಕ್ಲಿಕ್ ಮೇಲೆ ತೆರಳಿ. ಇಲ್ಲಿ ಅರ್ಜಿ ಫಾರ್ಮ್ ಇರಲಿದ್ದು ಈ ಫಾರ್ಮ್‌ನಲ್ಲಿ, ಹೆಸರು, ವಿಳಾಸ, ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ ಮುಂತಾದ ಎಲ್ಲ ಮಾಹಿತಿ ನೀಡಿ ನಂತರ ಬೇಕಾದ ದಾಖಲೆ ಅಪ್ಲೋಡ್ ಮಾಡಬೇಕು. ರೈತರು ತಮ್ಮ ಆಧಾರ್ ಕಾರ್ಡ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆಯ ಪಾಸ್‌ಬುಕ್‌ನ ಸ್ಕ್ಯಾನ್ ಮಾಡಿದ ಪ್ರತಿಯನ್ನು ಇಲ್ಲಿ ಅಪ್‌ಲೋಡ್ ಮಾಡಿ, ಸಬ್‌ಮಿಟ್‌ ಆಯ್ಕೆ ನೀಡಬೇಕು.

advertisement

Leave A Reply

Your email address will not be published.