Karnataka Times
Trending Stories, Viral News, Gossips & Everything in Kannada

EVM Machine Price: ಚುನಾವಣೆಗೆ ಬಳಸುವ ಒಂದು EVM ಮಷಿನ್ ಬೆಲೆ ಎಷ್ಟು ಗೊತ್ತಾ?

advertisement

ಲೋಕಸಭೆ ಚುನಾವಣೆ ಇತ್ತೀಚೆಗಷ್ಟೇ ಮುಗಿದಿದೆ. ಈಗ ಮತದಾನ ಮಾಡುವ ಪ್ರಕ್ರಿಯೆ ಮತ್ತಷ್ಟು ಸುಲಭ ಆಗಿದೆ. ಹಿಂದಿನ ದಿನದಲ್ಲಿ ಇರುವ ಕ್ಲಿಷ್ಟ ವಿಧಾನ ಈಗ ಇಲ್ಲ. ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ ಜಾರಿಗೆ ಬಂದ ಹಿನ್ನೆಲೆಯಲ್ಲಿ ಸರಳ ಮತ್ತು ಶೀಘ್ರ ಮತದಾನ ಬಹಳ ಪ್ರಾಮುಖ್ಯತೆ ಪಡೆಯುತ್ತಿದೆ. ಹಾಗಾದರೆ ಈ EVM ಪರಿಕಲ್ಪನೆ ಯಾವಾಗ ಜಾರಿಗೆ ಬಂತು ಯಾರು ಇದನ್ನು ಜಾರಿಗೆ ತಂದು ಇದರಿಂದ ಯಾರಿಗೆ ಹೆಚ್ಚು ಅನುಕೂಲ ಆಗಿದೆ ಎಂಬ ಇತ್ಯಾದಿ ಮಾಹಿತಿಯನ್ನು ಈಗ ನಿಮಗೆ ನಾವು ತಿಳಿಸಲಿದ್ದೇವೆ.

EVM ಎಂದರೇನು?

 

Image Source: Live Law

 

Electronic Voting Machine ಎಂಬ ಅರ್ಥವನ್ನು ಕೊಡಲಿದೆ. ಇದನ್ನು ವಿದ್ಯುನ್ಮಾನ ಮತ ಯಂತ್ರ ಎಂದು ಕೂಡ ಕರೆಯುತ್ತಾರೆ. ಇದರ ಮೂಲಕ ಮತದಾನ ಪ್ರಕ್ರಿಯೆ ಹೆಚ್ಚು ನಿಖರವಾಗಿ ಹಾಗೂ ಸುರಕ್ಷಿತವಾಗಿ ಉಳಿಯಲಿದೆ. ಈ ಹಿಂದೆ ಇದ್ದ ಸಾಂಪ್ರದಾಯಿಕ ಮತದಾನ ವಿಧಾನವಾಗ ಪೇಪರ್ ಬ್ಯಾಲೆಟ್ ಗೆ ಇರುವ ಪರ್ಯಾಯ ವ್ಯವಸ್ಥೆಯೇ ಈ EVM ಎಂದು ಹೇಳಬಹುದು‌. ಇದರಲ್ಲಿ ವಿವಿಧ ರಾಜಕೀಯ ಪಕ್ಷದ ಅಭ್ಯರ್ಥಿಗಳು ಮತ್ತು ಅವರ ಗುರುತಿನ ಚಿಹ್ನೆ ನೀಡಲಾಗುವುದು.

ಉಪಯೋಗ ಏನು?

advertisement

  • ಸಮಸ್ಯೆ ಪ್ರಮಾಣ ಕಡಿಮೆ ಇರಲಿದೆ.
  • ಮತದಾನದ ಪ್ರಕ್ರಿಯೆ ಹೆಚ್ಚು ನಿಖರವಾಗಿ ಇರಲಿದೆ.
  • ಎಣಿಕೆ, ನಿರ್ವಹಣೆ ಮಾಡುವ ಹೊರೆ ಕೂಡ ಚುನಾವಣೆ ತಂಡಕ್ಕೆ ಕಡಿಮೆ ಆಗಲಿದೆ.
  • ಸಾರ್ವಜನಿಕರಿಗೆ ಓಟ್ ಮಡುವುದು ಬಟನ್ ಚಾಲಿತವಾದ ಕಾರಣ ತುಂಬಾ ಸುಲಭ ಎನ್ನಬಹುದು.
  • ನಿರ್ವಹಣಾ ವೆಚ್ಚ ಕಡಿಮೆ ಇರಲಿದೆ.
  • ಮತ ಎಣಿಕೆ ಕೂಡ ಶೀಘ್ರ ಆಗಲಿದೆ.

ಯಾವಾಗ ಜಾರಿಗೆ ಬಂತು?

ಈ ಒಂದು EVM ವಿಧಾನ ಜಾರಿಗೆ ಬಂದು ಅನೇಕ ವರ್ಷ ಆಗಿದೆ ಎನ್ನಬಹುದು. ಚುನಾವಣೆಯಲ್ಲಿ ಬಳಸಲಾಗುವ EVM ಅನ್ನು 1980ರಲ್ಲಿ MB ಹನೀಫ್ ಎನ್ನುವವರು ಕಂಡು ಹಿಡಿದರು. ಇದನ್ನು ಮೊದಲ ಬಾರಿಗೆ ಕೇರಳದ ಉತ್ತರ ಪರವೂರ್ ನ ಉಪ ಚುನಾವಣೆ ಸಂದರ್ಭದಲ್ಲಿ ಬಳಸಲಾಯಿತು. ಬಳಿಕ 2004 ರಿಂದ ಸಂಪೂರ್ಣ ಮಟ್ಟದಲ್ಲಿ ಲಭ್ಯ ಇದೆ ಎಂದು ಹೇಳಬಹುದು. 2004ರಿಂದ ಇಲ್ಲಿ ವರೆಗೆ ಅನೇಕ ಚುನಾವಣೆಯಲ್ಲಿ ಇದು ಸಕ್ರಿಯವಾಗಿ ಕೆಲಸ ನಿರ್ವಹಣೆ ಮಾಡುತ್ತಿದೆ.

ಬೆಲೆ ಎಷ್ಟು?

 

Image Source: Business Today

 

EVM ನಲ್ಲಿ ಎರಡು ತರದ್ದು ಇದೆ. M2 EVM ಬೆಲೆ 8670 ಮತ್ತುM3 EVM ಬೆಲೆ 17,000 ಆಗಿರಲಿದೆ. ಪ್ರತಿ ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ ನಲ್ಲಿ 2000 ಮತಗಳನ್ನು ದಾಖಲಿಕರಿಸಬಹುದು. ಹಾಗಾದರೆ ಇದು ಎಷ್ಟು ವರ್ಷ ಬಾಳ್ವಿಕೆ ಬರಬಹುದು ಎಂಬ ಕುತೂಹಲ ನಿಮಗೂ ಇರಬಹುದು. ಒಂದು EVM ಗರಿಷ್ಟ 15 ವರ್ಷದ ತನಕ ಬಾಳ್ವಿಕೆ ಬರಲಿದೆ ಎಂದು ಈ ಮೂಲಕ ಕೂಡ ಹೇಳಬಹುದು.

advertisement

Leave A Reply

Your email address will not be published.