Karnataka Times
Trending Stories, Viral News, Gossips & Everything in Kannada

HSRP Number Plate: ಇದುವರೆಗೂ HSRP ನಂಬರ್ ಪ್ಲೇಟ್ ಹಾಕದವರಿಗೆ ಹೊಸ ಸೂಚನೆ! RTO ಧಿಡೀರ್ ನಿರ್ಧಾರ

advertisement

ಲೋಕಸಭೆ ಚುನಾವಣೆ ಹತ್ತಿರ ಬರುತ್ತಿರುವ ಹಾಗೆ ಸಾಕಷ್ಟು ಸರ್ಕಾರಿ ನಿಯಮಗಳು ಕಠಿಣಗೊಳ್ಳುತ್ತಿವೆ. ಇದೀಗ ಸರ್ಕಾರ ತಿಳಿಸಿರುವಂತೆ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ರಸ್ತೆಗೆ ಇಳಿಯುವ ಎಲ್ಲ ವಾಹನಗಳಿಗೆ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ (HSRP Number Plate) ಇರಲೇಬೇಕು. ಇಲ್ಲವಾದರೆ ಭಾರಿ ಪ್ರಮಾಣದ ದಂಡ ಪಾವತಿ ಮಾಡಬೇಕಾಗುತ್ತದೆ.

ದೆಹಲಿ ಎನ್ ಸಿ ಆರ್ ನ ಅಧಿಕಾರಿಗಳು ವಾಹನಗಳ ನಂಬರ್ ಪ್ಲೇಟ್ ಪರಿಶೀಲನೆ ನಡೆಸುತ್ತಿದ್ದಾರೆ. ರಾಜಧಾನಿ ದೆಹಲಿ, ನೋಯಿಡಾ, ಗ್ರೇಟರ್ ನೋಯಿಡಾ, ಫರೀದಾಬಾದ್, ಗೌತಮ್ ಬುದ್ಧ ನಗರ ಮೊದಲಾದ ಕಡೆ ಅಧಿಕಾರಿಗಳು ನಂಬರ್ ಪ್ಲೇಟ್ ಪರೀಕ್ಷೆಯಲ್ಲಿ ಸಿಕ್ಕಿದ್ದು ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ (HSRP Number Plate) ಇಲ್ಲದೇ ಇರುವ ವಾಹನಗಳನ್ನು ತಡೆಹಿಡಿದು, ಚಲನ ಕೊಡಲಾಗುತ್ತಿದೆ.

ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿ:

 

Image Source: Times of India

 

advertisement

ದೇಶಾದ್ಯಂತ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಾಗಿದ್ದು ಸಾಕಷ್ಟು ನಿಯಮಗಳಲ್ಲಿ ಕಟ್ಟು ನೆಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹೆಚ್ಎಸ್‌ಆರ್‌ಪಿ (HSRP) ಇಲ್ಲದೆ ಇರುವ ವಾಹನಗಳ ಚಲಾವಣೆ ನಿರ್ಬಂಧಿಸಲಾಗುತ್ತಿದೆ.

ಪಾವತಿಸಬೇಕು ಹತ್ತು ಸಾವಿರ ರೂಪಾಯಿಗಳ ತಂಡ:

 

Image Source: Telangana Today

 

ನಿಮ್ಮ ವಾಹನಗಳಿಗೆ ಅದರಲ್ಲೂ 2019 ಕ್ಕಿಂತ ಮೊದಲು ಖರೀದಿ ಮಾಡಿದ ವಾಹನಗಳಿಗೆ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ (HSRP Number Plate) ಹಾಕಿಸಿಕೊಳ್ಳಬೇಕು ಎನ್ನುವುದನ್ನು ಕಡ್ಡಾಯ ಮಾಡಲಾಗಿದೆ. ಇದಕ್ಕಾಗಿ ಸರ್ಕಾರ ಗಡುವು ನೀಡಿತ್ತು. ಸಾಕಷ್ಟು ಜನ ಆ ನಿಗದಿತ ದಿನಾಂಕದ ಒಳಗೆ HSRP ನಂಬರ್ ಪ್ಲೇಟ್ ಹಾಕಿಸಿಕೊಳ್ಳಲು ಸಾಧ್ಯವಾಗದೆ ಇರುವ ಹಿನ್ನೆಲೆಯಲ್ಲಿ ಮೇ 31ವರೆಗೆ ಮತ್ತೆ ಅವಕಾಶ ಮಾಡಿಕೊಡಲಾಗಿದೆ. ಆದರೆ ರಾಜಧಾನಿ ದೆಹಲಿ ಹಾಗೂ ಮತ್ತಿತರ ಪ್ರದೇಶಗಳಲ್ಲಿ ಈಗಾಗಲೇ ಈ ನಿಯಮ ಕಡ್ಡಾಯಗೊಳಿಸಲಾಗಿದ್ದು, ಯಾರು ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಇಲ್ಲದೇ ವಾಹನ ಚಲಾಯಿಸುತ್ತಾರೋ ಅಂತವರಿಗೆ ಐದರಿಂದ ಹತ್ತು ಸಾವಿರ ರೂಪಾಯಿಗಳ ವರೆಗೆ ದಂಡ ವಿಧಿಸಲಾಗುವುದು.

ಇದು ಸದ್ಯಕ್ಕೆ ದೆಹಲಿಯಲ್ಲಿ ಇರುವ ನಿಯಮ ಆಗಿದ್ದರೂ ಕೂಡ ದೇಶಾದ್ಯಂತ ಈ ನಿಯಮ ಶೀಘ್ರದಲ್ಲಿಯೇ ಜಾರಿಗೆ ಬರಲಿದೆ. ಹಾಗಾಗಿ ಆದಷ್ಟು ಬೇಗ ನಿಮ್ಮ ವಾಹನಕ್ಕೆ ಹೆಚ್ ಎಸ್ ಆರ್ ಪಿ ಹಾಕಿಸಿಕೊಳ್ಳಿ ಅಥವಾ 10,000 ದಂಡ ಪಾವತಿ ಮಾಡೋದಕ್ಕೆ ರೆಡಿಯಾಗಿ!

advertisement

Leave A Reply

Your email address will not be published.