Karnataka Times
Trending Stories, Viral News, Gossips & Everything in Kannada

HSRP Number Plate: ಇಂತಹವರು HSRP ನಂಬರ್ ಪ್ಲೇಟ್ ಅಳವಡಿಸುವ ಅಗತ್ಯ ವಿಲ್ಲ! ಹೊಸ ಸೂಚನೆ

advertisement

ಇತ್ರೀಚಿನ ದಿನದಲ್ಲಿ ವಾಹನಗಳಿಗೆ HSRP ನಂಬರ್ ಪ್ಲೇಟ್ ಅನ್ನು ಕಡ್ಡಾಯವಾಗಿ ಹಾಕಲೇ ಬೇಕೆಂದು ತಿಳಿಸಲಾಗುತ್ತಿದೆ. ಫೆಬ್ರವರಿ ತಿಂಗಳವರೆಗೆ ಮೊದಲ ಸಲ ಗಡುವಿನ ಅವಧಿ ನೀಡಿದ್ದು ಬಳಿಕ ಈ ಗಡುವಿನ ಅವಧಿಯನ್ನು ವಿಸ್ತಾರ ಮಾಡಲಾಗಿದೆ. ಹಾಗಿದ್ದರೂ HSRP Number Plate ಅನ್ನು ಅಳವಡಿಸಲು ಅನೇಕರು ಇದುವರೆಗೆ ಮನಸ್ಸು ಮಾಡಿಲ್ಲ. HSRP ಎಂದರೇನು?, ಅದು ಯಾಕೆ ಮುಖ್ಯ ಅನೇಕ ವಿಚಾರದ ಬಗ್ಗೆ ಮಾಹಿತಿ ಇಲ್ಲಿದೆ.

HSRP ಎಂದರೇನು?

HSRP ಎಂದರೆ High Security Number Plate ಎಂಬ ಅರ್ಥ ನೀಡಲಿದೆ. 2019ಗಿಂತ ಮೊದಲು ಖರೀದಿ ಮಾಡಿದ್ದ ಎಲ್ಲ ತರನಾದ ವಾಹನಗಳಿಗೆ ಕಡ್ಡಾಯವಾಗಿ HSRP. ಮಾಡಿಸಲೇ ಬೇಕು. ಇದನ್ನು ಎಲ್ಲ ದ್ವಿಚಕ್ರ, ನಾಲ್ಕು ಚಕ್ರದ ವಾಹನಗಳಿಗೆ ಕಡ್ಡಾಯ ಮಾಡಲಾಗಿದ್ದು ಫೆಬ್ರವರಿ 17 ರ ವರೆಗೆ ಸಮಯ ನೀಡಲಾಗಿತ್ತು ಹಾಗಿದ್ದರೂ ನಂಬರ್ ಪ್ಲೇಟ್ ಅಳವಡಿಸದೇ ಇರುವವರಿಗೆ ಮೂರು ತಿಂಗಳ ಅಧಿಕ ಗಡುವನ್ನು ನೀಡಲಾಗಿದೆ.

ವಿಶೇಷತೆ ಏನು?

ಇದರಲ್ಲಿ ನಮ್ಮ ವಾಹನದ ಸಂಖ್ಯೆಯನ್ನು ಲಾರ್ಜರ್ ಎನ್ ಕೋಡ್ ಮಾಡಿದ್ದ ಅಲುಮೀನಿಯಂ ಡಿಜಿಟಲ್ ಪ್ಲೇಟ್ ನಲ್ಲಿ ಮಾಡಿದ್ದು ದೇಶದ ಬಾವುಟದಲ್ಲಿರುವ ಅಶೋಕ ಚಕ್ರ ಈ HSRP Number Plate ನಲ್ಲಿ ಇರಲಿದೆ. ಇದು ಕಡಿಮೆ ಲೈಟ್ ಇರುವಾಗಲು ನಮ್ಮ ನಂಬರ್ ಪ್ಲೇಟ್ ಉಳಿದ ಲೈಟ್ ಗಳಿಗೆ ರಿಫ್ಲೆಕ್ಟ್ ಆಗಿ ಕಾಣಲಿದೆ. ಹಾಗಾಗಿ ಸುಲಭಕ್ಕೆ ಇತರ ವಾಹನಗಳಿಗೆ ಹಾಗೂ ಪೊಲೀಸಿನವರಿಗೆ ಈ ವಾಹನ ಹಳೆ ಮಾಡೆಲ್ ಗಾಡಿ ಎಂದು ಇತರ ಮಾಹಿತಿ ಸಹ ದೊರೆಯಲಿದೆ.

ಅನುಕೂಲತೆ ಏನು?

 

advertisement

 

  • ನಿಮ್ಮ ವಾಹನ ಈ HSRP ನಂಬರ್ ಪ್ಲೇಟ್ ಹಾಕಿದ್ದ ಬಳಿಕ ಕಳೆದು ಹೋದರೆ ಸುಲಭಕ್ಕೆ ವಾಹನ ಪರಿಶೀಲನೆ ಮಾಡಬಹುದು. RTO ನವರು ವಾಹನ ತಂತ್ರಾಂಶದ ಮೂಲಕ ನಮ್ಮ ವಾಹನದ ನಂಬರ್, ಇಂಜಿನ್ ನಂಬರ್ ಮೂಲಕ ಹುಡುಕಾಟ ಮಾಡಿ ಆ ಮಾಹಿತಿಯನ್ನು ಪೊಲೀಸರಿಗೆ ನೀಡಲಿದೆ.
  • ಪೊಲೀಸರಿಗೂ ಕಳ್ಳತನ, ದರೋಡೆ, ಇತರ ಅಪರಾಧ ಪ್ರಕರಣಗಳಲ್ಲಿ ಪಾಲ್ಗೊಂಡವರನ್ನು ಹುಡುಕಾಟ ಮಾಡಲು ಸುಲಭ ಆಗಲಿದೆ.
  • ಈ ನಂಬರ್ ಪ್ಲೇಟ್ ಅನ್ನು ಯಾರೂ ಕೂಡ ರಿ ಯೂಸ್ ಮಾಡಲು ಸಾಧ್ಯವಿಲ್ಲ. ಇದರಲ್ಲಿ ಇರುವ ತಂತ್ರಾಂಶ ಇರುವ ಕಾರಣ ಪುನರ್ ಬಳಕೆ ಹಾಗೂ ತೆಗೆದು ಹಾಕಲು ಸಾಧ್ಯವಿಲ್ಲ. ಹಾಗಾಗಿ ಕಳ್ಳತನಕ್ಕು ಅವಕಾಶ ಕಡಿಮೆ.

ಏನು ಮಾಡಬೇಕು?

HSRP ನಂಬರ್ ಪ್ಲೇಟ್ ಅನ್ನು ನೀವು ಪಡೆಯಬೇಕಾದರೆ ನೀವು ಯಾವುದೆ ಏಜೆನ್ಸಿ ಅಥವಾ ಸಣ್ಣ ಪುಟ್ಟ ಶಾಪ್ ಗೆ ಭೇಟಿ ನೀಡಬೇಕಿಲ್ಲ ಬದಲಿದೆ ಸರಕಾರದಿಂದಲೇ ಡಿಲರ್ಸ್ ಪಾಂಯ್ಟ್ ಅನ್ನು ನೇಮಕ ಮಾಡಿದ್ದು HSRP ನಂಬರ್ ಪ್ಲೇಟ್ ಹಾಕಿಸಲು ಸರಕಾರ ಅನುಮತಿ ನೀಡಿದೆ. ಸರಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ ಅಥವಾ ಸರಕಾರದಿಂದ ನೇಮಕ ಆಗಿರುವ 4000 ಡಿಲರ್ ಶಿಪ್ ಪಾಂಯ್ಟ್ ನಲ್ಲೆ ನೀವು HSRP ನಂಬರ್ ಪ್ಲೇಟ್ ಪಡೆಯಬೇಕು ಇಲ್ಲವಾದರೆ ಅವೆಲ್ಲ ಅನಧಿಕೃತ ಎಂದು ಪರಿಗಣಿಸಲಾಗುವುದು.

ಎಷ್ಟು ದಿನ ಬೇಕು?

ಆನ್ಲೈನ್ ಮೂಲಕ ನೋಂದಣಿ ಮಾಡಿ HSRP ನಂಬರ್ ಪ್ಲೇಟ್ ಪಡೆದರೆ ಆಗ ನಿಮಗೆ 15-18 ದಿನದ ಒಳಗೆ ನಿಮ್ಮ ಮನೆ ವಿಳಾಸಕ್ಕೆ HSRP ನಂಬರ್ ಪ್ಲೇಟ್ ಬಂದು ಸೇರಲಿದೆ. ರಾಷ್ಟ್ರಪತಿ, ರಾಜ್ಯಪಾಲರು ಹಾಗೂ ಪ್ರಧಾನ ಮಂತ್ರಿಗಳ ವಾಹನ ಹೊರತುಪಡಿಸಿ ಉಳಿದೆಲ್ಲ ವಾಹನಕ್ಕೂ HSRP ನಂಬರ್ ಪ್ಲೇಟ್ ಅಳವಡಿಕೆ ಮಾಡುವುದು ಕಡ್ಡಾಯವಾಗಿದೆ.

advertisement

Leave A Reply

Your email address will not be published.