Karnataka Times
Trending Stories, Viral News, Gossips & Everything in Kannada

HSRP: ಹೈ ಸೆಕ್ಯುರಿಟಿ ನಂಬರ್ ಪ್ಲೇಟ್‌ ಅಳವಡಿಕೆ ಮಾಡದಿದ್ದರೆ ಎಷ್ಟು ದಂಡ ವಿಧಿಸಬೇಕು?

advertisement

ಇಂದು ರಸ್ತೆ ಯಲ್ಲಿ ಓಡಾಡುವ ವಾಹನ ಗಳ ಸಂಖ್ಯೆ ಬಹಳಷ್ಟು ಹೆಚ್ಚಾಗಿದೆ.‌ಅದೇ ರೀತಿ ರಸ್ತೆ ಅಪಘಾತಗಳು, ವಾಹನ ಸವಾರರ ನಿಯಮ ಉಲ್ಲಂಘನೆ ‌ಇತ್ಯಾದಿ ಸಮಸ್ಯೆ ಗಳು ಬಹಳಷ್ಟು ಇಂದು ಹೆಚ್ಚಾಗಿದೆ. ಇದಕ್ಕಾಗಿ ಸಾರಿಗೆ ಇಲಾಖೆಯು ಹಲವು ನಿಯಮಗಳನ್ನು ಜಾರಿಗೆ ತರುತ್ತಲೆ ಇದೆ. ಇದೀಗ ವಾಹನ ಸವಾರರು ತಮ್ಮ ಹಳೆಯ ವಾಹನಗಳ ನಂಬರ್ ಪ್ಲೇಟ್ ಬದಲಾವಣೆ ಮಾಡಿಕೊಳ್ಳದಿದ್ದರೆ ಸಂಚಾರಿ ಪೊಲೀಸರು ದಂಡ ವಿಧಿಸಲಿದ್ದಾರೆ.

ಅಪ್ ಟೇಡ್ ಮಾಡಬೇಕು:

 

 

ಎಲ್ಲಾ ವಾಹನ ಮಾಲೀಕರು ತಮ್ಮ ನಂಬರ್ ಪ್ಲೇಟ್‌ಗಳನ್ನು ಹೈ ಸೆಕ್ಯುರಿಟಿ ಪ್ಲೇಟ್‌ಗಳಿಗೆ (HSRP) ಅಪ್‌ಡೇಟ್ ಮಾಡಬೇಕು ಎಂದು ಸರ್ಕಾರ ಘೋಷಣೆ ಮಾಡಿದೆ. ಒಂದು ವೇಳೆ ಮಾಡದೇ ಇದ್ದಲ್ಲಿ 10,000 ರೂ. ದಂಡ ಪಾವತಿ ಮಾಡಬೇಕಾಗುತ್ತದೆ. ಭಾರತದಲ್ಲಿನ ಎಲ್ಲಾ ವಾಹನಗಳಿಗೆ ಹೈ-ಸೆಕ್ಯುರಿಟಿ ನಂಬರ್ ಪ್ಲೇಟ್‌ಗಳು ಕಡ್ಡಾಯವಾಗಿ ಬೇಕಿದ್ದು ಖಾಸಗಿ ಮತ್ತು ವಾಣಿಜ್ಯ ವಾಹನಗಳಿಗೆ ಈ ಫಲಕಗಳನ್ನು ಕಡ್ಡಾಯ ಅಳವಡಿಸಬೇಕಾಗುತ್ತದೆ.

advertisement

ಯಾಕಾಗಿ ಈ ನಿಯಮ?

ಈ ನಿರ್ಧಾರವನ್ನು ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ಕಳ್ಳತನ ಮತ್ತು ವಂಚನೆಯ ಅಪಾಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಳವಡಿಸಲಾಗಿದೆ. ವಾಹನಗಳ ಸುರಕ್ಷತೆ ಮತ್ತು ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳಲು ಹೆಚ್ಚಿನ ಭದ್ರತೆಯ ನಂಬರ್ ಪ್ಲೇಟ್‌ಗಳಿಗೆ ಅಪ್‌ಗ್ರೇಡ್ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ. ಸೆಕ್ಯುರಿಟಿ ನಂಬರ್ ಪ್ಲೇಟ್‌ಗಳು ನಕಲಿ, ಟ್ಯಾಂಪರಿಂಗ್ ಮತ್ತು ವಾಹನ ಅಪರಾಧಗಳನ್ನು ತಡೆಯಲು ಈ ಕೆಲಸ ಮೊದಲು ಮಾಡಬೇಕಿದೆ.

ಆನ್ ಲೈನ್ ಮೂಲಕ ಮಾಡಿ:

ಆನ್‌ಲೈನ್‌ನಲ್ಲಿ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್‌ (HSRP) ಗಾಗಿ ಅರ್ಜಿ ಸಲ್ಲಿಸಲು, ವಾಹನ ಮಾಲೀಕರು RTO ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಅದೇ ರೀತಿ ವಾಹನಗಳಿಗೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ನಂಬರ್​ ಪ್ಲೇಟ್ ಅಳವಡಿಸುವ ಸಮಯವನ್ನು ಫೆ. 17 ರಿಂದ ಮೇ 31ರ ವರೆಗೆ ವಿಸ್ತರಿಸಲಾಗಿದೆ. ಈ ಮುಂಚಿತವಾಗಿ ವಾಹನ ಸವಾರರು ಈ ಕೆಲಸ ಮಾಡಬೇಕು. ಈಗಾಗಲೇ ಟ್ರಾಫಿಕ್ ಪೊಲೀಸರು‌ ಪರಿಶೀಲನೆ ನಡೆಸಲು ಆರಂಭ ಮಾಡಿದ್ದು ಮಾಡದೇ ಇದ್ದಲ್ಲಿ ದಂಡ ಪಾವತಿ ಮಾಡಬೇಕಿದೆ.

advertisement

Leave A Reply

Your email address will not be published.