Karnataka Times
Trending Stories, Viral News, Gossips & Everything in Kannada

HSRP: ಸ್ವಂತ ಬೈಕ್, ಕಾರು ಇದ್ದವರಿಗೆ ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ, ಹೀಗೆ ಮಾಡದಿದ್ರೆ ದಂಡ ಗ್ಯಾರಂಟಿ.

advertisement

ಇನ್ನು ಮುಂದೆ ಹೀಗೆ ಮಾಡದಿದ್ರೆ ಕಾರು ಮತ್ತು ಬೈಕ್ ರೋಡಲ್ಲಿ ತಿರುಗೋದಿಲ್ಲ. ಸುರಕ್ಷತೆ ಹಾಗೂ ಭದ್ರತೆ ದೃಷ್ಟಿಯಿಂದ ಸುಪ್ರೀಂಕೋರ್ಟ್‌ ನೀಡಿರುವ ನಿರ್ದೇಶನದಂತೆ ಮೋಟಾರು ವಾಹನ ಕಾಯ್ದೆ-1989 ಸೆಕ್ಷನ್‌ 50 ಹಾಗೂ 51 ಅನ್ವಯ ಎಲ್ಲಾ ವಾಹನಗಳಿಗೆ ಗರಿಷ್ಠ ಭದ್ರತೆಯ ನಂಬರ್‌ ಪ್ಲೇಟ್‌ ಅಳವಡಿಸಲಾಗುತ್ತಿದೆ. ಇದನ್ನೇ HSRP Number Plate ಅಂದರೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಶನ್ ಪ್ಲೇಟ್ (High Security Registration Plate) ಎಂದು ಕರೆಯಲಾಗುತ್ತದೆ.

ಕರ್ನಾಟಕದಲ್ಲಿ ನೋಂದಣಿಗೊಂಡಿರುವ ಎಲ್ಲಾ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಪ್ಲೇಟ್‌ ಕಡ್ಡಾಯ ಮಾಡಲಾಗಿದೆ. ಒಂದು ವೇಳೆ ಹೆಚ್‌ಎಸ್‌ಆರ್‌ಪಿ ಅಳವಡಿಸದಿದ್ದರೆ ಮುಂದೆ ದಂಡವನ್ನೂ ಪಾವತಿಸಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಮಾಲೀಕತ್ವದ ಬದಲಾವಣೆ, ವಿಳಾಸ ಬದಲಾವಣೆ, Fake RC, Insurance ಹಾಗೂ ಇನ್ನಿತರ ಕೆಲಸಗಳಿಗೆ ಇದು ಅಡ್ಡಿಯಾಗಲಿದೆ. ಸಾರಿಗೆ ಇಲಾಖೆ ಹೊರಡಿಸಿರುವ ಈ ಸೂಚನೆಯಿಂದ ಅಧಿಕೃತವಾಗಿಲ್ಲದ ವಾಹನಗಳು ರಸ್ತೆಯಲ್ಲಿ ಓಡಾಡುವುದನ್ನು ಸುಲಭವಾಗಿ ಪತ್ತೆ ಹಚ್ಚಲು ಸಹಕಾರಿಯಾಗಲಿದೆ. ಇದರಿಂದ ಕಡ್ಡಾಯವಾಗಿ ಎಲ್ಲರೂ ಮಾಡಿಸಿಕೊಳ್ಳಲೇಬೇಕು.

ಏಕೆ ಈ ಹೊಸ ನಂಬರ್ ಪ್ಲೇಟ್?

 

 

2019ಕ್ಕಿಂತ ಮೊದಲು ವಾಹನ ಖರೀದಿಸಿರುವವರು ತಮ್ಮ ಕಾರು ಬೈಕು ಅಥವಾ ಇತರೆ ವೆಹಿಕಲ್‌ಗಳಿಗೆ HSRP ನಂಬರ್‌ ಪ್ಲೇಟ್‌ ಅಳವಡಿಸಬೇಕೆಂದು ಕಳೆದ ವರ್ಷವೇ ಸೂಚನೆ ನೀಡಲಾಗಿದೆ. ಈ ರೀತಿ ನಂಬರ್‌ ಪ್ಲೇಟ್‌ಗೆ ಅರ್ಜಿ ಸಲ್ಲಿಸಲು ಈ ಹಿಂದೆ ದಿನಾಂಕ ವಿಸ್ತರಣೆ ಮಾಡಲಾಗಿತ್ತು. ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಬದಲಾವಣೆ ಮಾಡಿಕೊಳ್ಳದೆ ಇದ್ದರೆ 500-1000 ರೂಪಾಯಿ ದಂಡ ವಿಧಿಸುವ ಅವಕಾಶವಿದೆ.

ಏನಿದು ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌?

ಇದು ಅತ್ಯಧಿಕ ಭದ್ರತೆಯ ನೋಂದಣಿ ಪ್ಲೇಟ್‌. ಇದು ಟೆಂಪರ್‌ ಪ್ರೂಪ್‌ ಹೊಂದಿದ್ದು, ನಂಬರ್‌ ಮಾರ್ಪಾಡು ಮಾಡಲಾಗದಂತಹ ಲಾಕ್‌ ಹೊಂದಿದೆ. ಅಂದರೆ, ಒಮ್ಮೆ ಈ ನಂಬರ್‌ ಪ್ಲೇಟ್‌ ಅಳವಡಿಸಿದರೆ ಅದನ್ನು ಸುಲಭವಾಗಿ ತೆಗೆಯಲು ಸಾಧ್ಯವಿಲ್ಲ. ಲಾಕ್‌ ಅನ್ನು ಒಡೆದು ತೆಗೆಯಬೇಕಷ್ಟೇ. ಎಲ್ಲಾ ಎಚ್‌ಎಸ್‌ಆರ್‌ಪಿ ಪ್ಲೇಟ್‌ಗಳು ಒಂದೇ ರೀತಿಯ ಫಾಂಟ್‌ ಮತ್ತು ವಿನ್ಯಾಸ ಹೊಂದಿರುತ್ತವೆ. ಎಡಭಾಗದಲ್ಲಿ ನೀಲಿ ಬಣ್ಣದ ಚಕ್ರ ಇರುತ್ತದೆ. ಉಳಿದಂತೆ ವಾಹನದ ರೀತಿಗೆ ತಕ್ಕಂತೆ ನಂಬರ್‌ ಪ್ಲೇಟ್‌ ಇರುತ್ತದೆ. ಖಾಸಗಿ ವಾಹನಗಳ ನಂಬರ್‌ ಪ್ಲೇಟ್‌ನ ಬ್ಯಾಕ್‌ಗ್ರೌಂಡ್‌ ಕಪ್ಪು ಇರುತ್ತದೆ. ಇದರೊಂದಿಗೆ ಈ ನಂಬರ್‌ ಪ್ಲೇಟ್‌ನಲ್ಲಿ ಇಂಡಿಯಾ ಎಂಬ ಸ್ಟ್ಯಾಂಪ್‌ ಇರುತ್ತದೆ.

advertisement

  • ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಅಳವಡಿಕೆ ಕಡ್ಡಾಯವೇ?

– 1989ರ ಸಿಎಂವಿಆರ್‌ ಕಾಯಿದೆಯ ನಿಯಮ 50ರಡಿ ಎಲ್ಲಾ ವಾಹನಗಳು ಎಚ್‌ಎಸ್‌ಆರ್‌ಪಿ ಹೊಂದಿರುವುದನ್ನು ಕಡ್ಡಾಯಗೊಳಿಸಲಾಗಿದೆ.

  • ಈ ನಂಬರ್‌ ಪ್ಲೇಟ್‌ನಲ್ಲಿ ಯಾವೆಲ್ಲ ಮಾಹಿತಿಗಳು ಕೋಡ್‌ ಆಗಿರುತ್ತವೆ?

– ನೋಂದಣಿ ಪ್ರಾಧಿಕಾರದ ಹೆಸರು, ವಾಹನದ ನೋಂದಣಿ ಸಂಖ್ಯೆ, ಲೇಸರ್‌ ಬ್ರಾಂಡೆಡ್‌ ಕಾಯಂ ಗುರುತಿನ ಸಂಖ್ಯೆ ಮತ್ತು ವಾಹನ ಮೊದಲು ನೋಂದಣಿಯಾದ ದಿನಾಂಕವನ್ನು ಕೋಡ್‌ ಮಾಡಲಾಗಿರುತ್ತದೆ.

  • ಎಚ್‌ಎಸ್‌ಆರ್‌ಪಿ ಬುಕ್ಕಿಂಗ್‌ ಮಾಡಲು ಯಾವೆಲ್ಲ ದಾಖಲೆಗಳು ಬೇಕು?

– ವಾಹನದ ನೋಂದಣಿ ಸಂಖ್ಯೆ, ಛಾಸಿ ಸಂಖ್ಯೆ, ಎಂಜಿನ್‌ ಸಂಖ್ಯೆ ಬೇಕು. ಈ ಮಾಹಿತಿಯು ನಿಮ್ಮ ವಾಹನದ ರಿಜಿಸ್ಟ್ರೇಷನ್‌ ಸರ್ಟಿಫಿಕೆಟ್‌ನಲ್ಲಿ ಲಭ್ಯ ಇರುತ್ತವೆ.

ಎಚ್‌ಎಸ್‌ಆರ್‌ಪಿ (HSRP) ನಂಬರ್‌ ಪ್ಲೇಟ್‌ ಅಳವಡಿಸುವ ಪ್ರಕ್ರಿಯೆ ಹೇಗೆ ಇರುತ್ತದೆ?

  1. ಕರ್ನಾಟಕ ಸಾರಿಗೆ ಇಲಾಖೆಯ ವೆಬ್‌ಸೈಟ್‌ https://transport.karnataka.gov.in ಅಥವಾ www.siam.in ಗೆ ಭೇಟಿ ನೀಡಿ.
  2. ಬುಕ್‌ ಹೆಚ್‌ಎಸ್‌ಆರ್‌ಪಿ ಮೇಲೆ ಕ್ಲಿಕ್ ಮಾಡಿ. ಅಲ್ಲಿ ನಿಮ್ಮ ವಾಹನದ ಉತ್ಪಾದಕ ಕಂಪನಿಯನ್ನು ಆಯ್ಕೆ ಮಾಡಬೇಕು.
  3. ಬಳಿಕ ಅಲ್ಲಿ ಬೇಸಿಕ್ ವೆಹಿಕಲ್ ಡಿಟೇಲ್ಸ್ ಕೇಳಿರುವುದನ್ನು ಭರ್ತಿ ಮಾಡಬೇಕು.
  4. ಅದಾದ ಬಳಿಕ ಡೀಲರ್ ಲೊಕೇಶನ್‌ ಅನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ ಸೆಲೆಕ್ಟ್ ಮಾಡಿಕೊಳ್ಳಬೇಕು.
  5. ಹೆಚ್‌ಎಸ್‌ಆರ್‌ಪಿಯನ್ನು ಫಿಕ್ಸ್ ಮಾಡುವುದಕ್ಕಾಗಿ ಡೀಲರ್‌ ಲೊಕೇಶನ್ ಸೆಲೆಕ್ಟ್ ಮಾಡಬೇಕು.
  6. ಹೆಚ್‌ಎಸ್‌ಆರ್‌ಪಿಗೆ ಶುಲ್ಕವನ್ನು ಆನ್‌ಲೈನ್ ಮೂಲಕವೇ ಪಾವತಿಸಬೇಕು. ಇದ್ದವರಿಗೆ ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ, ಹೀಗೆ ಮಾಡದಿದ್ರೆ ದಂಡ ಗ್ಯಾರಂಟಿ.

advertisement

Leave A Reply

Your email address will not be published.