Karnataka Times
Trending Stories, Viral News, Gossips & Everything in Kannada

HSRP: 2019 ಕ್ಕಿಂತ ಹಳೆ ಮಾಡೆಲ್ ವಾಹನ ಬಳಸುವವರಿಗೆ ಸರ್ಕಾರದಿಂದ ಮಹತ್ವದ ಆದೇಶ!

advertisement

ಇಂದು ವೈಯಕ್ತಿಕ ವಾಹನಗಳಿಗೆ ಅತೀ ಹೆಚ್ಚು ಬೇಡಿಕೆ ಇರುವುದನ್ನು ಕಾಣಬಹುದು. ಸ್ವಂತ ಕೂಡಿಟ್ಟ ಹಣ ಇರಲಿ ಇಲ್ಲವೇ ಹೊಸದಾಗಿ ಬುಕ್ ಮಾಡಿದ್ದಾದರೂ ಸರಿಯೇ ವ್ಯಕ್ತಿಗೆ ವಾಹನಗಳು ಬಹಳ ಮುಖ್ಯ ಸ್ಥಾನವನ್ನು ಹೊಂದಿರುತ್ತದೆ. ವಾಹನಗಳ ವಿಚಾರದಲ್ಲಿ ಇಂತಿಷ್ಟು ವರ್ಷಕ್ಕಿಂತ ಅಧಿಕ ಬಳಸಿದ್ದ ವಾಹನಗಳಿಗೂ ಕೂಡ ನಿರ್ದಿಷ್ಟ ನೀತಿ ನಿರ್ಬಂಧಗಳನ್ನು ವಿಧಿಸಲಾಗುತ್ತಿದ್ದು ಈ ಬಗ್ಗೆ ಅಪ್ಡೇಟಿಂಗ್ ಮಾಹಿತಿ ಇಲ್ಲಿದೆ.

ಈ ನಿಯಮ‌ ಇದೆ:

ಕಾರು, ಬೈಕ್, ಸ್ಕೂಟಿ ಇತ್ತೀಚಿನ ಎಲೆಕ್ಟ್ರಾನಿಕ್ ವಾಹನಗಳು ಸೇರಿದಂತೆ ಪ್ರತೀ ವಾಹನಕ್ಕೆ ಸಹ ಅದರದ್ದೇ ಆದ ನೀತಿ ನಿರ್ಬಂಧ ಇದೆ. ವಾಹನಗಳು ಅತೀ ಹೆಚ್ಚು ಬಳಕೆ ಮಾಡಿದಂತೆ ಅನೇಕ ವರ್ಷ ಕಳೆದಿದ್ದರೆ ರಕ್ಷಣಾತ್ಮಕ ವಿಚಾರದಲ್ಲಿ ನ್ಯೂನ್ಯತೆ ಕಾಣುವ ಸಾಧ್ಯತೆ ಇದೆ. ಹಾಗಾಗಿ 2019ಕ್ಕಿಂತ ಹಳೆ ಮಾಡಲ್ ಗಾಡಿಗಳಿಗೆ HSRP ಅಳವಡಿಕೆ ಮಾಡುವುದು ಕಡ್ಡಾಯವಾಗಿದೆ. ಅಂದರೆ ಹಳೆ ಮಾಡೆಲ್ ಗಾಡಿಗಳ ಸಾಲಿನಲ್ಲಿ ಲಘು ಮೋಟಾರ್, ವಾಣಿಜ್ಯ ವಾಹನ, ಟ್ರ್ಯಾಕ್ಟರ್ ಎಲ್ಲ ಕೂಡ ಅತಿ ಸುರಕ್ಷಿತ ನೋಂದಣಿ ಫಲಕವಾದ (HSRP) ಅಳವಡಿಕೆಯನ್ನು ಇದೇ ಎಪ್ರಿಲ್ ಒಂದರೊಳಗಾಗಿ ಕಡ್ಡಾಯವಾಗಿ ಮಾಡಿಸಲೇ ಬೇಕು ಎಂಬ ನಿಯಮ ಇದೆ.

ಅನ್ ಲೈನ್ ಮೂಲಕ ನೊಂದಣಿ ಮಾಡಿ:

 

advertisement

 

ಇದಕ್ಕಾಗಿ ನೀವು ಆನ್ಲೈನ್ ಮೂಲಕವೇ ನೋಂದಣಿ ಮಾಡಿಕೊಳ್ಳಬಹುದು. https://transport.karnataka.gov.in/ ಗೆ ಭೇಟಿ ನೀಡಿ ಅದರಲ್ಲಿ HSRP ಎಂಬ ಆಯ್ಕೆ ನಿಮಗೆ ಕಾಣಸಿಗಲಿದೆ. ಅದನ್ನು ಕ್ಲಿಕ್ ಮಾಡಬೇಕು. ಬಳಿಕ ಅದರಲ್ಲಿ ವಾಹನದ ಮೂಲ ವಿವರವನ್ನು ಕೇಳಲಾಗುತ್ತದೆ. ಅವೆಲ್ಲವನ್ನು ಫಿಲಪ್ ಮಾಡಬೇಕು. ಶುಲ್ಕವನ್ನು ಆನ್ಲೈನ್ ಮೂಲಕ ಬರಿಸಬೇಕು ಬಳಿಕ ನಿಮ್ಮ ಮೊಬೈಲ್ ಗೆ ಒಂದು ಒಟಿಪಿ ಲಿಂಕ್ ಸಹ ಬರಲಿದೆ. ಈ ಮೂಲಕ ಮನೆಯಲ್ಲಿ ಕೂತು ಎಚ್ಎಸ್ ಆರ್ ಪಿ ಅಳವಡಿಸಬಹುದು.

ನಿರ್ದಿಷ್ಟ ಮಾನದಂಡ:

HSRP ಅಳವಡಿಸದೇ ಇದ್ದರೆ ಯಾವ ತೊಂದರೆ ಆಗುತ್ತದೆ ಎಂಬ ಪ್ರಶ್ನೆ ಇಂದು ಬಹುತೇಕರಿಗೆ ಇರುತ್ತದೆ. ಅಳವಡಿಸದೇ ಇದ್ದರೆ ಆಗ ವಾಹನ ಹೆಸರು ನೋಂದಣಿ, ಮಾರಾಟ ಪ್ರಕ್ರಿಯೆ, ವಿಳಾಸ ಬದಲಾವಣೆ, ಅರ್ಹತಾ ಪತ್ರ ನವೀಕರಣ ಇತ್ಯಾದಿ ಪ್ರಕ್ರಿಕೆ ಮಾಡಲು ಸಾಧ್ಯವಿಲ್ಲ.ಅದೇ ರೀತಿ ಇತ್ತೀಚಿನ ದಿನದಲ್ಲಿ ನಕಲಿ ತಾಣಗಳ ಸಂಖ್ಯೆ ಅಧಿಕವಾದ ಹಿನ್ನೆಲೆಯಲ್ಲಿ ಇದಕ್ಕೂ ಕೂಡ ಕೆಲ ನಿರ್ದಿಷ್ಟವಾದ ಮಾನದಂಡಗಳನ್ನು ತಿಳಿಸಲಾಗಿದೆ. ಇಂಡಿಯಾ, ಹಲೋಗ್ರಾಮ್ ಇರುವ ಎಚ್ಎಸ್ಆರ್ಪಿ ಯನ್ನು ಯಾವುದೇ ಕಾರಣಕ್ಕೂ ಮಾನ್ಯ ಮಾಡಲಾಗದು.

ಈ ಹಿಂದೆ ಇದರ ಅಳವಡಿಕೆಗೆ ಸಾಕಷ್ಟು ಸಮಯಾವಕಾಶ ನೀಡಿದ್ದು 2023ರಲ್ಲಿ ನವೆಂಬರ್ 17ರ ಒಳಗೆ HSRP ಅಳವಡಿಕೆ ಮಾಡಲೇ ಬೇಕು ಎಂದು ತಿಳಿಸಲಾಗಿದ್ದು ಬಳಿಕ ಈ ದಿನಾಂಕ ವಿಸ್ತರಿಸಲಾಗಿದೆ. 2024ರಲ್ಲಿ ಈ ದಿನಾಂಕವನ್ನು ಫೆಬ್ರವರಿ 17ರ ವರೆಗೆ ಕೂಡ ಸಮಯಾವಕಾಶ ನೀಡಲಾಗಿದೆ. ಈಗಾಗಲೇ ನೀವು ಅರ್ಜಿ ಸಲ್ಲಿಕೆ ಮಾಡಿದ್ದರೆ ಅದರ ಶುಲ್ಕ ಪಾವತಿ ರಶೀದಿ ತೋರಿಸಿದರೆ ದಂಡ ವಿನಾಯಿತಿ ನಿಮಗೆ ಸಿಗಲಿದೆ.

advertisement

Leave A Reply

Your email address will not be published.