Karnataka Times
Trending Stories, Viral News, Gossips & Everything in Kannada

Aadhaar Card: ಆಧಾರ್ ಕಾರ್ಡ್ ತೋರಿಸಿ ಫ್ರಿ ಬಸ್ ಹತ್ತುತ್ತಿರುವ ಮಹಿಳೆಯರಿಗೆ ಇನ್ನೊಂದು ಹೊಸ ರೂಲ್ಸ್! ಸರ್ಕಾರದ ನಿರ್ಧಾರ

advertisement

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಕೆಎಸ್ಆರ್ಟಿಸಿ (KSRTC) ನಿಗಮದ ಬಸ್ಸುಗಳಲ್ಲಿ ಮಹಿಳೆಯರಿಗೆ ಪ್ರಯಾಣ ಮಾಡುವುದಕ್ಕೆ ಉಚಿತವಾಗಿ ಶಕ್ತಿ ಯೋಜನೆಯನ್ನು ಜಾರಿಗೆ ತಂದಿತ್ತು. ಈ ಯೋಜನೆಯನ್ನು ಜಾರಿಗೆ ತಂದ ನಂತರ ಮಹಿಳೆಯರು ಸರ್ಕಾರಿ ಬಸ್ಸುಗಳಲ್ಲಿ ರಾಜ್ಯದೊಳಗೆ ಓಡಾಡುವಂತಹ ಅವಕಾಶವನ್ನು ಪಡೆದುಕೊಂಡಿದ್ದಾರೆ.

ಆರಂಭದಲ್ಲಿ ಈ ಯೋಜನೆ ಜಾರಿಗೆ ಬಂದಾಗ ಸಾಕಷ್ಟು ಗೊಂದಲಗಳು ಹಾಗೂ ಬಸ್ಸಿನಲ್ಲಿ ನೂಕುನುಗ್ಗಲಗಳು ಹಾಗೂ ಜಗಳ ಆಡುತ್ತಿದ್ದಂತಹ ಸನ್ನಿವೇಶಗಳು ಕಂಡುಬರುತ್ತಿದ್ದವು ಆದರೆ ಇತ್ತೀಚಿನ ದಿನಗಳಲ್ಲಿ ಶಕ್ತಿ ಯೋಜನೆಯನ್ನು ಪ್ರತಿಯೊಬ್ಬರೂ ಕೂಡ ಉತ್ತಮ ರೀತಿಯಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಶಕ್ತಿ ಯೋಜನೆ (Shakti Yojana) ಅಡಿಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ನೀಡುತ್ತಿರುವ ಬೆನ್ನಲ್ಲಿ ಪುರುಷರಿಗೆ 50% ಸೀಟಿಂಗ್ ವ್ಯವಸ್ಥೆಯನ್ನು ನೀಡುವಂತಹ ಕೆಲಸ ಕೂಡ ಸರ್ಕಾರಿ ಬಸ್ಸುಗಳಲ್ಲಿ ನಡೆಯುತ್ತಿದೆ.

ಕೇವಲ ಆಧಾರ್ ಕಾರ್ಡ್ ತೋರಿಸಿದರೆ ಸಾಕಾಗಲ್ಲ:

 

Image Source: Deccan Herald

 

ಈ ಹಿಂದೆ ಶಕ್ತಿ ಯೋಜನೆ (Shakti Yojana) ಅಡಿಯಲ್ಲಿ ಉಚಿತ ಬಸ್ ಪ್ರಯಾಣ (Free Bus Travel) ವನ್ನು ಪಡೆದುಕೊಳ್ಳುವುದಕ್ಕಾಗಿ ಕೇವಲ ಆಧಾರ್ ಕಾರ್ಡ್ ತೋರಿಸಿದರೆ ಮಾತ್ರ ಸಾಕಾಗ್ತಿತ್ತು. ಆದರೆ ಈಗ ಕೇವಲ ಆಧಾರ್ ಕಾರ್ಡ್ ಮಾತ್ರ ಸಾಕಾಗುವುದಿಲ್ಲ ಯಾಕಾಗಿ ಅಂದ್ರೆ ಆಧಾರ್ ಕಾರ್ಡ್ (Aadhaar Card) ನಲ್ಲಿ ಕರ್ನಾಟಕದ ನಿವಾಸಿಯಾಗಿರುವಂತಹ ಅಧಿಕೃತ ಮಾಹಿತಿ ಇದ್ರೆ ಮಾತ್ರ ಅಂಥವರಿಗೆ ಉಚಿತ ಬಸ್ ಪ್ರಯಾಣ (Free Bus Travel) ವನ್ನು ನೀಡಲಾಗುತ್ತದೆ. ಸಾಕಷ್ಟು ಜನರು ಬೇರೆ ರಾಜ್ಯದಿಂದ ಇಲ್ಲಿ ಬಂದು ನೆಲೆಸಿರುತ್ತಾರೆ ಅಂತವರು ಕೂಡ ಈ ರೀತಿ ಮಾಡೋದು ಸಾಧ್ಯವಾಗಿರುವುದಿಲ್ಲ.

advertisement

ಸ್ಮಾರ್ಟ್ ಕಾರ್ಡ್ ಮಾಡಿಸಿಕೊಳ್ಳಲೇಬೇಕು:

 

Image Source: The Hindu

 

ನ್ಯೂ ಶಕ್ತಿ ಯೋಜನೆಗೆ ಬಳಸಿಕೊಳ್ಳುವಂತಹ ಸ್ಮಾರ್ಟ್ ಕಾರ್ಡ್ (Smart Card) ಅನ್ನು ಹತ್ತಿರ ಇರುವಂತಹ ಸೇವಾ ಕೇಂದ್ರಗಳಿಗೆ ಹೋಗುವ ಮೂಲಕ ಮಾಡಿಸಿಕೊಳ್ಳಬಹುದಾಗಿದೆ. ನಿಮ್ಮ ಆಧಾರ್ ಕಾರ್ಡ್ (Aadhaar Card) ಅನ್ನು ತೋರಿಸುವ ಮೂಲಕ ನೀವು ಸ್ಮಾರ್ಟ್ ಕಾರ್ಡ್ ಅನ್ನು ಪಡೆದುಕೊಳ್ಳಬಹುದು. ಈ ಸ್ಮಾರ್ಟ್ ಕಾರ್ಡ್ ನೋಡೋದಕ್ಕೆ ಮೆಟ್ರೋ ಸ್ಮಾರ್ಟ್ ಕಾರ್ಡ್ ರೀತಿಯಲ್ಲಿ ಮೊದಲು ಪ್ಲಾನಿಂಗ್ ನಡೆಸಿತ್ತು ಆದರೆ ಅದು ಸಾಕಷ್ಟು ಆರ್ಥಿಕ ಹೊರೆಯನ್ನು ತಂದು ಕೊಡುತ್ತೆ ಎಂಬುದಾಗಿ ತಿಳಿದಿದ್ದು ಅದರ ಪ್ಲಾನಿಂಗ್ ಅನ್ನು ಕೈ ಬಿಡಲಾಗಿದೆ.

ಸೇವಾ ಸಿಂಧು ವೆಬ್ ಪೋರ್ಟಲ್ ನಲ್ಲಿ ನೀವು ನಿಮ್ಮ ಆಧಾರ್ ಕಾರ್ಡ್ ಬಳಸಿಕೊಂಡು ಸ್ಮಾರ್ಟ್ ಕಾರ್ಡ್ ಅನ್ನು ಪ್ರಿಂಟ್ ಔಟ್ ತೆಗೆದುಕೊಳ್ಳ ಬಹುದಾಗಿದೆ. ಇದನ್ನೇ ಬಳಸಿಕೊಳ್ಳುವ ಮೂಲಕ ಶಕ್ತಿ ಯೋಜನೆಯ ಫಲಾನುಭವಿಗಳಾಗಬಹುದಾಗಿದೆ.

ಒಂದು ವೇಳೆ ಆಧಾರ್ ಕಾರ್ಡ್ ನಲ್ಲಿ ನಿಮ್ಮ ಡೀಟೇಲ್ಸ್ ನಕಲಿ ಇದ್ರೆ ಅಥವಾ ಕರ್ನಾಟಕ ರಾಜ್ಯದಿಂದ ನೀವು ಹೊರಗಡೆ ಇರುವವರಾಗಿದ್ದರೆ ಶಕ್ತಿ ಯೋಜನೆಯ ಲಾಭವನ್ನು ಪಡೆದುಕೊಳ್ಳಲು ಅವಕಾಶ ಇರೋದಿಲ್ಲ ಹಾಗೂ ಇದನ್ನು ಮೀರಿ ನೀವು ಈ ಲಾಭವನ್ನು ಪಡೆದುಕೊಂಡರೆ ಕಾನೂನಾತ್ಮಕ ಶಿಕ್ಷೆಗೆ ಒಳಪಡಬೇಕಾದಂತಹ ಸಾಧ್ಯತೆ ಕೂಡ ಇದೆ.

advertisement

Leave A Reply

Your email address will not be published.