Karnataka Times
Trending Stories, Viral News, Gossips & Everything in Kannada

KSRTC: ಇನ್ಮುಂದೆ ಸರ್ಕಾರದ ಈ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಇಲ್ಲ, ಹಣ ನೀಡಿಯೇ ಹೋಗಬೆಕು!

advertisement

ರಾಜ್ಯದಲ್ಲಿ ಶಕ್ತಿ ಯೋಜನೆ (Shakti Yojona) ಯಶಸ್ವಿಯಾಗಿ ಜಾರಿಗೆ ಬಂದ ಬಳಿಕ ಸರಕಾರಿ ಬಸ್ ನಲ್ಲಿ ಉಚಿತ ಪ್ರಯಾಣ (Free Bus Travel) ಪಡೆಯುವ ಮಹಿಳೆಯರ ಓಡಾಟ ಪ್ರಮಾಣ ಕೂಡ ಅಧಿಕವಾಗುತ್ತಿದೆ. ಇದೇ ನಿಟ್ಟಿನಲ್ಲಿ ಖಾಲಿಯಾಗಿ ಇರುತ್ತಿದ್ದ ಸರಕಾರಿ ಬಸ್ ಗಳು (Govt Buses) ಸದಾ ತುಂಬಿ ಹರಿಯುತ್ತಿದೆ. ಅದೇ ರೀತಿ ಶಕ್ತಿ ಯೋಜನೆ ಯಶಸ್ವಿಗೊಳಿಸಲು ಹೆಚ್ಚುವರಿ ಬಸ್ ಮತ್ತು ಸಿಬಂದಿ ನೇಮಕ ಮಾಡುವ ಬಗ್ಗೆ ಸರಕಾರ ತೀರ್ಮಾನ ಕೂಡ ಕೈಗೊಂಡಿದ್ದು ಇದೀಗ ಇದರ ಬೆನ್ನಲ್ಲೇ ಮಹಿಳೆಯರಿಗೆ ಶಕ್ತಿ ಯೋಜನೆ ಮಿತಿ ನೆನಪಿಸುವ ಕಾರ್ಯವನ್ನು ಸರಕಾರ ಮಾಡುತ್ತಿದೆ‌.

ಶಕ್ತಿ ಯೋಜನೆಯನ್ನು ಸರಕಾರಿ ಸ್ವಾಮ್ಯದ ಎಲ್ಲ ಬಸ್ ನಲ್ಲಿ ಉಚಿತ ಪ್ರಯಾಣದ ಅವಕಾಶ ಇರದ ಕಾರಣ ಈ ಬಗ್ಗೆ ಮಹಿಳೆಯರು ಅರಿವು ಹೊಂದುವುದು ಅತ್ಯವಶ್ಯಕವಾಗಿದೆ. ಈಗಾಗಲೇ ರಾಜ್ಯದಲ್ಲಿ ಪಲ್ಲಕ್ಕಿ ಬಸ್ (Pallakki Bus) ಓಡಾಟಕ್ಕೆ ಮಾನ್ಯತೆ ಸಿಗುತ್ತಿದ್ದು ಈ ಬಸ್ ಅನ್ನು ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ನೇತೃತ್ವದಲ್ಲಿ ವಿಧಾನಸೌದದ ಮುಂಭಾಗದಲ್ಲಿ ಚಾಲನೆ ನೀಡಲಾಗಿದೆ. ಆದರೆ ಈ ಬಸ್ ಶಕ್ತಿ ಯೋಜನೆಯ ಅಡಿಯಲ್ಲಿ ಬರದೇ ಪ್ರತಿ ಪ್ರಯಾಣಿಕರು ಕೂಡ ಟಿಕೆಟ್ ಹಣ ನೀಡಿಯೇ ಕಡ್ಡಾಯವಾಗಿ ಪ್ರಯಾಣ ಮಾಡಬೇಕು.

ಪಲ್ಲಕ್ಕಿ ಯೋಜನೆ:

 

 

advertisement

ಕೆಎಸ್ ಆರ್ಟಿಸಿ (KSRTC) ನಲ್ಲಿ ಸಾಮಾನ್ಯ ಬಸ್ ನಂತೆಯೇ ನಾನ್ ಎಸಿ (Non AC) ಬಸ್ ಗಳು ಕೂಡ ಜನರಿಗೆ ಚಿರ ಪರಿಚಿತವಾಗಿದ್ದು ಅನೇಕ ವರ್ಷಗಳಾದರೂ ನಾನ್ ಎಸಿ ಬಸ್ ಗಳಿಗೆ ಹೆಸರಿಟ್ಟಿರಲಿಲ್ಲ ಆದರೆ ಈಗ ಈ ಯೋಜನೆ ಮುಖೇನ ಹೆಸರಿಡಲಾಗುತ್ತಿದೆ. ಪಲ್ಲಕ್ಕಿ ಎಂಬ ಹೆಸರಿನ ಮೂಲಕ ನಾನ್ ಎಸಿ ಸೇವೆ ಮತ್ತೆ ಪುನರಾರಂಭ ಆಗಿದೆ. ಹಾಗಿದ್ದರೂ ಮಹಿಳೆಯರ ಶಕ್ತಿ ಯೋಜನೆ ಇಲ್ಲಿ ಅನ್ವಯ ಆಗಲಾರದು. ಹಾಗಾಗಿ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ಈ ಬಗ್ಗೆ ಸೂಚನೆ ನೀಡಿದ್ದಾರೆ. ಪಲ್ಲಕ್ಕಿ ಹೆಸರನ್ನು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ (Ramalinga Reddy) ಅವರೇ ಸೂಚನೆ ನೀಡಿದ್ದರು ಅದರಂತೆ ಈಗ ಪಲ್ಲಕ್ಕಿ ಹೆಸರಿನೊಂದಿಗೆ ನಾನ್ ಎಸಿ ಬಸ್ ರಿ ಎಂಟ್ರಿ ಪಡೆದಿದೆ.

ಈ ಬಾರಿ ಪಲ್ಲಕ್ಕಿ ಬಸ್ (Pallakki Bus) ನಲ್ಲಿ ಅನೇಕ ವಿಶೇಷತೆ ಇರುವುದು ಕಾಣಬಹುದು. ನಾನ್ ಎಸಿ ಬಸ್ (Non AC Bus) ಅನ್ನು ಅತ್ಯಂತ ಲಕ್ಶೂರಿಯಾಗಿ ಪರಿಚಯಿಸಲಾಗುತ್ತಿದೆ. 148ಬಸ್ ನಲ್ಲಿ 40ನಾನ್ ಎಸಿ ಬಸ್ ಅನ್ನು ಬಿಡುಗಡೆ ಮಾಡಲಾಗುತ್ತಿದೆ. ಟಾಟಾ (Tata) ಮತ್ತು ಅಶೋಕಾ ಲೇಲ್ಯಾಂಡ್ (Ashoka Leyland) ಕಂಪೆನಿಗೆ ಸೇರಿದ್ದ ಬಸ್ ನಲ್ಲಿ ವಿಭಾಗವನ್ನು ಕಾಣಬಹುದು. ಅಶೋಕ ಲೇಲ್ಯಾಂಡ್ ಕಂಪೆನಿಯಿಂದ 40 ನಾನ್ ಎಸಿ ಸ್ಲೀಪರ್ ಮತ್ತು 100 ನಗರ ಸಾರಿಗೆ ಬಸ್ ಇದೆ. 40 ನಾನ್ ಎಸಿ ಬಸ್ ನಲ್ಲಿ 30 ರಾಜ್ಯದ ಒಳಗೆ ಹಾಗೂ 10 ಹೊರ ರಾಜ್ಯಕ್ಕೆ ಈ ಬಸ್ ಪ್ರಯಾಣಿಸಲಿದೆ. ಅದೇ ರೀತಿ ಟಾಟಾ ಕಂಪೆನಿಯಿಂದ 4ನಾನ್ ಎಸಿ ಸ್ಲೀಪರ್ ಮತ್ತು 4 ಎಸಿ ಸ್ಲೀಪರ್ ಬಸ್ ಬಿಡುಗಡೆ ಮಾಡಲಾಗುತ್ತಿದೆ. ಉಳಿದಂತೆ 100 ನಗರ ಸಾರಿಗೆ ಬಸ್ ನಲ್ಲಿ ಮಹಿಳೆಯರ ಉಚಿತ ಪ್ರಯಾಣದ ಶಕ್ತಿ ಯೋಜನೆ ಅನ್ವಯ ಆಗಲಿದೆ.

ಈ ವಿಶೇಷತೆ ಇರಲಿದೆ:

  • ಬಸ್ ಅತ್ಯಂತ ಲಕ್ಶೂರಿ ವಿಧಾನದಲ್ಲಿ ಮಾಡಲಾಗಿದ್ದು ಆಡಿಯೋ ಸ್ಪೀಕರ್ ಮೂಲಕ ಪ್ರಯಾಣಿಕರಿಗೆ ಗೈಡ್ ಲೈನ್ ನೀಡಲಾಗುವುದು.
  • BS6ಮಾದರಿಯ HP ಇಂಜಿನ್ ಅಳವಡಿಕೆ ಇದರಲ್ಲಿ ಇರಲಿದೆ.
  • ಮಲಗಲು ದಿಂಬಿನ ವ್ಯವಸ್ಥೆ ಇರಲಿದೆ.
  • ಚಪ್ಪಲಿ, ನೀಡಿನ ಬಾಟಲ್ ಇಡಲು ಪ್ರತ್ಯೇಕ ಸ್ಥಳಾವಕಾಶ ಇರಲಿದೆ.
  • ಡಿಜಿಟಲ್ ಗಡಿಯಾರದ ಜೊತೆಗೆ LED ಫ್ಲೋರ್ ಸಹ ಇರಲಿದೆ.
  • ಚಾಲಕರಿಗೆ ಮತ್ತು ನಿರ್ವಾಹಕರಿಗೆ ಪ್ರಯಾಣಿಕರ ಬಗ್ಗೆ ತಿಳಿಯಲು ಹೈಟೆಕ್ ಕ್ಯಾಮರಾ ಅಳವಡಿಕೆ ಮಾಡಲಾಗಿದೆ.
  • ಮೊಬೈಲ್ ಸ್ಟ್ಯಾಂಡ್ ವ್ಯವಸ್ಥೆ ಇರಲಿದೆ.
  • ಇದು ಹೈಟೆಕ್ ಬಸ್ ಆಗಿರಲಿದ್ದು 30 ಸ್ಲೀಪರ್ ಬರ್ತ್ ಸೀಟ್ ಇರಲಿದೆ.
  • ಸೀಟ್ ನಂಬರ್ ಮೇಲೆ LED ಅಳವಡಿಕೆ ಇರಲಿದೆ. ಓದಲು ಇತರ ಪ್ರಕ್ರಿಯೆಗೆ ಇದು ನೆರವಾಗಲಿದೆ.
  • ಪ್ರತೀ ಸೀಟಿಗೆ ಮೊಬೈಲ್ ಮತ್ತು ಲ್ಯಾಪ್ ಟಾಪ್ ಚಾರ್ಜಿಂಗ್ ವ್ಯವಸ್ಥೆ ಇರಲಿದೆ.

advertisement

Leave A Reply

Your email address will not be published.