Karnataka Times
Trending Stories, Viral News, Gossips & Everything in Kannada

Loan: ರೈತರಿಗೆ ಗುಡ್‌ ನ್ಯೂಸ್, ಇಲ್ಲಿ ಸಾಲ ಮಾಡಿದ ರೈತರಿಗೆ ಯಾವುದೇ ಬಡ್ಡಿ ಇಲ್ಲ.

advertisement

ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಜನಪರ ಮುಖ್ಯಮಂತ್ರಿ ಎಂದು ಮತ್ತೊಮ್ಮೆ ಪ್ರೂವ್ ಮಾಡಿದ್ದಾರೆ. ಈಗಾಗಲೇ 5 ಯೋಜನೆಗಳನ್ನು ಜಾರಿಗೆ ತಂದಿರುವ ಅವರು ಇದೀಗ ರಾಜ್ಯದ ರೈತರಿಗೆ ಸಿಹಿ ಸುದ್ದಿ ನೀಡಿದ್ದಾರೆ. ಸಹಕಾರಿ ಬ್ಯಾಂಕ್‌ಗಳ ಸಾಲ (Loan) ಮೇಲಿನ ಬಡ್ಡಿ (Intrest) ಮನ್ನಾ ಮಾಡುವುದಾಗಿ ಘೋಷಿಸಿದ್ದಾರೆ.

ಸಹಕಾರ ಸಂಘಗಳಲ್ಲಿನ ರೈತರ ಸಾಲದ ಮೇಲಿನ ಬಡ್ಡಿ ಮನ್ನಾ ಎಂದ ಮುಖ್ಯಮಂತ್ರಿ:

 

 

ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಅವರು ಮಾತನಾಡಿದರು, ಅವರು, ದೀರ್ಘಾವಧಿ ಸಾಲಕ್ಕೆ ಅವಧಿಯೊಳಗೆ ಸಾಲ ಮರುಪಾವತಿ ಮಾಡಿದವರಿಗೆ ಬಡ್ಡಿ ಮನ್ನಾ ಆಗಲಿದೆ ಎಂದು ಹೇಳಿದ್ದಾರೆ.

ವಿಧಾನಸಭೆ ಅಧಿವೇಶನದಲ್ಲಿ ಮಾತನಾಡಿದ ಸಿಎಂ (CM), ಮಧ್ಯಮಾವಧಿ ಆದರೂ ಆಗಿರಬಹುದು, ದೀರ್ಘಾವಧಿ ಸಾಲ ಆಗಿರಬಹುದು. ಒಟ್ಟೂ 300 ಕೋಟಿಯಷ್ಟು ಇರಬಹುದು. ಅದನ್ನು ಮನ್ನಾ ಮಾಡುತ್ತೇವೆ ಅಂತ ಘೋಷಿಸಿದ್ದಾರೆ.

advertisement

ನಮ್ಮ ಸರ್ಕಾರದ ಮೇಲೆ ಸಂಶಯ ಬೇಡ. ನಾವು ನುಡಿದಂತೆ ನಡೆಯುತ್ತೇವೆ. ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ನಾವು ಬದ್ಧ ಎಂದು ಕಲಾಪದಲ್ಲಿ ಸಿಎಂ ಸಿದ್ದರಾಮಯ್ಯ ಮಾತು ಮುಗಿಸಿದ್ದಾರೆ.

2 ಲಕ್ಷ ರೂ.ವರೆಗೆ ಸಾಲ ಮನ್ನಾ ಮಾಡಿ:

ಈ ಕುರಿತು ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಆರ್. ಅಶೋಕ್, ರೈತರು ಅವಧಿಯೊಳಗೆ ಸಾಲ (Loan) ಕಟ್ಟಲ್ಲ, ನೀವು ಬಡ್ಡಿ ಮನ್ನಾ ಮಾಡಲ್ಲ. ರೈತರ ಎರಡು ಲಕ್ಷ ರೂಪಾಯಿ ಸಾಲ ಮನ್ನಾ ಮಾಡಬೇಕು. ಬರದಿಂದ ಕಂಗೆಟ್ಟ ರೈತರಿಗೆ ಪ್ರತಿ ಬೆಲೆಗೆ 25 ಸಾವಿರ ರೂ. ಪರಿಹಾರ ನೀಡಿ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಗೆ ಒತ್ತಾಯ ಮಾಡಿದ್ದಾರೆ.

ಸಿಎಂಗೆ ಅಭಿನಂದಿಸಿದ ಬಿಜೆಪಿ ಶಾಸಕ ಎಸ್‌ಟಿ ಸೋಮಶೇಖರ್:

ಸಿಎಂ ಘೋಷಿಸುತ್ತಿದ್ದಂತೆ ಆಡಳಿತಾರೂಢ ಕಾಂಗ್ರೆಸ್ ಶಾಸಕರು ಸಿದ್ದರಾಮಯ್ಯ ಅವರನ್ನು ಅಭಿನಂದಿಸಿದರು. ವಿಶೇಷ ಅಂದ್ರೆ ರೈತರ ಸಾಲದ ಮೇಲಿನ ಬಡ್ಡಿ ಮನ್ನಾ ಘೋಷಣೆಗೆ ಬಿಜೆಪಿ ಶಾಸಕ‌ ಎಸ್.ಟಿ. ಸೋಮಶೇಖರ್ ಕೂಡ ಅಭಿನಂದಿಸಿದರು. ಇದು ರೈತರಿಗೆ ಒಳ್ಳೆಯ ಸ್ಕೀಮ್, ಇದಕ್ಕಾಗಿ ಸಿಎಂ ಅವರಿಗೆ ಅಭಿನಂದನೆಗಳು ಎಂದಿದ್ದಾರೆ.

advertisement

Leave A Reply

Your email address will not be published.