Karnataka Times
Trending Stories, Viral News, Gossips & Everything in Kannada

Aadhar Card: ಆಧಾರ್ ಕಾರ್ಡ್ ನಲ್ಲಿರುವ ಫೋಟೋವು ಮುಜುಗರ ತರಿಸುತ್ತಿದ್ದರೆ ಟೆನ್ಶನ್ ಬೇಡ, ಈ ರೀತಿಯಾಗಿ ಮನೆಯಲ್ಲಿಯೇ ಕುಳಿತು ಅಪ್ಡೇಟ್ ಮಾಡಿ.

advertisement

ಆಧಾರ್ ಕಾರ್ಡ್ (Aadhar Card) ಪ್ರತಿಯೊಬ್ಬ ಭಾರತೀಯರ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ಪ್ರತಿಯೊಬ್ಬ ವ್ಯಕ್ತಿಯ ಗುರುತಿನ ಚೀಟಿಯಾಗಿರುವ ಈ ಆಧಾರ್ ಕಾರ್ಡ್ (Aadhar Card) ಎಲ್ಲಾ ಕೆಲಸಗಳಿಗೂ ಕಡ್ಡಾಯವಾಗಿದೆ. ಇ ಈ ಆಧಾರ್‌ ಕಾರ್ಡ್‌ನಲ್ಲಿ ಹೆಸರು, ವಿಳಾಸ ಸೇರಿದಂತೆ ಒಬ್ಬ ವ್ಯಕ್ತಿಯ ಅಗತ್ಯ ಮಾಹಿತಿಯು ಇರುತ್ತದೆ. ಸರ್ಕಾರ ಹಾಗೂ ಖಾಸಗಿ ವಲಯದಲ್ಲಿ ಯಾವುದೇ ಸೌಲಭ್ಯವನ್ನು ಪಡೆಯಬೇಕಾದರೆ ಮೊದಲು ಕೇಳುವುದೇ ಈ ಆಧಾರ್ ಕಾರ್ಡ್ ಅನ್ನು. ಆದರೆ ಕೆಲವೊಮ್ಮೆ ಈ ಆಧಾರ್ ಕಾರ್ಡ್ ನಲ್ಲಿರುವ ನಿಮ್ಮ ಫೋಟೋವನ್ನು ನೋಡಿದರೆ ನಿಮಗೆ ಮುಜುಗರವನ್ನುಂಟು ಮಾಡುತ್ತವೆ. ಹೀಗಾಗಿ ನೀವು ನಿಮ್ಮ ಮನೆಯಲ್ಲಿಯೇ ಕುಳಿತು ಈ ಫೋಟೋವನ್ನು ಅಪ್ಡೇಟ್ ಮಾಡಬಹುದು. ಆ ಕುರಿತಾದ ಸಂಪೂರ್ಣ ಮಾಹಿತಿಗಾಗಿ ಈ ಲೇಖನವನ್ನು ಓದಿ.

advertisement

ಆಧಾರ್ ಕಾರ್ಡ್ ನಲ್ಲಿನ ಫೋಟೋವನ್ನು ಬದಲಾಯಿಸಬೇಕಾದರೆ ಹೀಗೆ ಮಾಡಿ?

  •  UIDAI uidai.gov.in ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅಥವಾ ಈ ಲಿಂಕ್ ಅನ್ನು ಕ್ಲಿಕ್ ಮಾಡಬೇಕು.
  •  ಆ ಬಳಿಕ ‘ಅಪ್‌ಡೇಟ್ ಆಧಾರ್’ ಆಯ್ಕೆಯನ್ನು ಕ್ಲಿಕ್ ಮಾಡಬೇಕು.
  •  ಅಲ್ಲಿ ಆಧಾರ್ ನೋಂದಣಿ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿ, ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಬೇಕು.
  •  ಈ ಫಾರ್ಮ್ ಅನ್ನು ಹತ್ತಿರದ ಆಧಾರ್ ನೋಂದಣಿ ಕೇಂದ್ರದಲ್ಲಿ ಸಲ್ಲಿಸಬೇಕು.
  •  ಪ್ರಸ್ತುತ ಆಧಾರ್ ಉದ್ಯೋಗಿ ಬಯೋಮೆಟ್ರಿಕ್ ಪರಿಶೀಲನೆಯ ಮೂಲಕ ಎಲ್ಲಾ ವಿವರಗಳನ್ನು ಪರಿಶೀಲನೆ ಮಾಡುತ್ತಾರೆ.
  • ನಿಮ್ಮ ಆಧಾರ್ ಕಾರ್ಡ್‌ನಲ್ಲಿ ಅಪ್‌ಡೇಟ್ ಆಗುವ ಹೊಸ ಛಾಯಾಚಿತ್ರದ ಮೇಲೆ ಆಧಾರ್ ನೋಂದಣಿ ಕೇಂದ್ರದ ಉದ್ಯೋಗಿಯೂ ಕ್ಲಿಕ್ ಮಾಡುತ್ತಾರೆ.
  •  ಈ ಪ್ರಕ್ರಿಯೆಯ ಬಳಿಕ 100 ಶುಲ್ಕ ಮತ್ತು ಜಿಎಸ್‌ಟಿಯನ್ನು ಪಾವತಿಸಬೇಕು.
  •  ಈ ಫೋಟೋವನ್ನು 90 ದಿನಗಳಲ್ಲಿ ನವೀಕರಿಸಲಾಗುತ್ತದೆ.
  •  ಆ ಬಳಿಕ ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಫೋಟೋ ನವೀಕರಣವಾಗಿದೆಯೇ ಎಂದು ಟ್ರ್ಯಾಕ್ ಮಾಡುವ ಆಯ್ಕೆಯೂ ಲಭ್ಯವಿದೆ. ಹೀಗಾಗಿ UIDAI ನ ಅಧಿಕೃತ ವೆಬ್‌ಸೈಟ್‌ ನಲ್ಲಿ ನಿಮ್ಮ ಬಳಿಯಿರುವ URN ಸಂಖ್ಯೆಯೊಂದಿಗೆ ಆಧಾರ್ ಕಾರ್ಡ್ ಅನ್ನು ಟ್ರ್ಯಾಕ್ ಮಾಡಬಹುದು.

advertisement

Leave A Reply

Your email address will not be published.