Karnataka Times
Trending Stories, Viral News, Gossips & Everything in Kannada

Railway Station: ರೈಲ್ವೆ ನಿಲ್ದಾಣದಲ್ಲಿ ಐಷಾರಾಮಿ ಕೊಠಡಿಯಲ್ಲಿ ಉಳಿದುಕೊಳ್ಳಬೇಕಾ? ಹಾಗಾದ್ರೆ ಕೇವಲ 40 ರೂಪಾಯಿಗೆ ಬುಕಿಂಗ್ ಮಾಡಿ!

advertisement

ನಮ್ಮ ದೇಶದ ಒಟ್ಟು ಜನಸಂಖ್ಯೆಯ ಅರ್ಧದಷ್ಟು ಜನ ನಿತ್ಯವೂ ರೈಲಿನ ಮೂಲಕವೇ ಪ್ರಯಾಣ ಮಾಡುತ್ತಾರೆ ಎಂದರೆ ತಪ್ಪಾಗುವುದಿಲ್ಲ. ವಿಶ್ವದಲ್ಲಿಯೇ ಅತಿ ದೊಡ್ಡ ರೈಲ್ವೆ ಜಾಲತಾಣ ಹೊಂದಿರುವ ನಾಲ್ಕನೇ ರಾಷ್ಟ್ರ ಎಂದು ಕರೆಸಿಕೊಂಡಿರುವ ಭಾರತ ಅತಿ ಅಗ್ಗದ ಹಾಗೂ ಸೂವಸ್ಥಿತವಾದ ರೈಲ್ವೆ ಸೌಕರ್ಯವನ್ನು ಜನರಿಗೆ ಒದಗಿಸಿ ಕೊಡುತ್ತಿದೆ. ಹಾಗಾಗಿ ರೈಲಿನ ಮೂಲಕ ಜನರು ಆರಾಮದಾಯಕವಾಗಿ ಊರಿನಿಂದ ಊರಿಗೆ ಪ್ರಯಾಣ ಮಾಡಬಹುದಾಗಿದೆ.

Railway Station ದಲ್ಲಿ ಇರುವ ಈ ಕೊಠಡಿಗಳ ಬಗ್ಗೆ ನಿಮಗೆ ಗೊತ್ತಾ?

ಈಗಂತೂ ಚಳಿಗಾಲ ಆರಂಭವಾಗಿದೆ. ರೈಲು ಸಂಚಾರದಲ್ಲಿ ಈ ಸಮಯದಲ್ಲಿ ಸಾಕಷ್ಟು ಸಮಸ್ಯೆ ಉಂಟಾಗುತ್ತದೆ. ಕೆಲವು ಪ್ರದೇಶಗಳಲ್ಲಿ ಮಂಜು ಮುಸುಕಿದ ವಾತಾವರಣ ಇರುವುದರಿಂದ ರೈಲು ಸಂಚಾರ ಸುಲಭವಾಗಿ ಆಗುವುದಿಲ್ಲ. ಹೀಗಾಗಿ ಕೆಲವೊಂದು ರೈಲ್ವೆ ಸ್ಟೇಷನ್ (Railway Station) ನಲ್ಲಿ 10ರಿಂದ 15 ಗಂಟೆಗಳವರೆಗೂ ಕೂಡ ನೀವು ರೈಲಿಗಾಗಿ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು. ಇಂತಹ ಸಂದರ್ಭದಲ್ಲಿ ರೈಲು ಟಿಕೆಟ್ (Railway Ticket) ಬುಕ್ ಮಾಡಿಕೊಂಡವರು ಎಲ್ಲಿಗೆ ಹೋಗಬೇಕು ಎನ್ನುವ ಪ್ರಶ್ನೆ ಮೂಡುತ್ತೆ. ಆದ್ರೆ ಟೆನ್ಶನ್ ಬೇಡ, ರೈಲ್ವೆ ನಿಲ್ದಾಣದಲ್ಲಿಯೇ ನಿವೃತ್ತ ಕೊಠಡಿ (Retiring Room) ಇರುತ್ತದೆ ಇದನ್ನು ನೀವು ಕೇವಲ 25 ರೂಪಾಯಿಗಳಲ್ಲಿ ಬುಕ್ ಮಾಡಿಕೊಳ್ಳಬಹುದು. ಈ ಬಗ್ಗೆ ಇಲ್ಲಿದೆ ಇನ್ನಷ್ಟು ಮಾಹಿತಿ.

ನೀವು ಕುಟುಂಬ ಸಮೇತರಾಗಿ ರೈಲು ಪ್ರಯಾಣ ಮಾಡುತ್ತಿದ್ದರೆ ಇದು ನಿಮಗೆ ಬಹಳ ಯೂಸ್ ಆಗಬಹುದು. ಯಾಕೆಂದರೆ ಇದರಲ್ಲಿ ಸಿಂಗಲ್ ಬೆಡ್ರೂಮ್ (Single Bedroom) ಹೊಂದಿರುವ ಕೊಠಡಿ ಕೂಡ ಲಭ್ಯವಿದೆ. ಅದೇ ರೀತಿ ನೀವು ಒಂಟಿಯಾಗಿ ಪ್ರಯಾಣ ಮಾಡುವವರಾಗಿದ್ದರೆ ಡಾರ್ಮಿಟರಿ ಹಾಸಿಗೆ (Dormitory Bed) ಯನ್ನು ಪಡೆದುಕೊಳ್ಳಬಹುದು. ಅಷ್ಟೇ ಅಲ್ಲ ರೈಲ್ವೆಯ ಎಸಿ (AC) ಹಾಗೂ ನಾನ್ ಎಸಿ (Non AC) ಈ ರಿಟೈರಿಂಗ್ ರೂಮ್ ಗಳು ಕೂಡ ಲಭ್ಯವಿವೆ. ಇವುಗಳ ಬೆಲೆ ಹಾಗಾದರೆ ದುಬಾರಿ ಇರಬಹುದು ಎಂದು ನೀವು ಭಾವಿಸಿದರೆ ಖಂಡಿತವಾಗಿಯೂ ತಪ್ಪು. ಈ ರೂಮ್ಗಳು ಎಷ್ಟು ಐಷಾರಾಮಿ ಆಗಿರುತ್ತವೆಯೋ ಅಷ್ಟೇ ಕಡಿಮೆ ಬೆಲೆಗೆ ಲಭ್ಯವಿದೆ.

ರೈಲ್ವೆ ರಿಟೈರಿಂಗ್ ರೂಮ್ ಬೆಲೆ ಎಷ್ಟು:

 

advertisement

 

  • 3 ಗಂಟೆ ಅವಧಿಗೆ 25 ರೂಪಾಯಿಗಳು
  • 4 ರಿಂದ 6 ಗಂಟೆ ಅವಧಿಗೆ 40 ರೂಪಾಯಿಗಳು
  • 7 ರಿಂದ 9 ಗಂಟೆ ಅವಧಿಗೆ 50 ರೂಪಾಯಿಗಳು
  • 10 ರಿಂದ 12 ಗಂಟೆ ಅವಧಿಗೆ 60 ರೂಪಾಯಿಗಳು
  • 13 ರಿಂದ 15 ಗಂಟೆ ಅವಧಿಗೆ 70 ರೂಪಾಯಿಗಳು
  • 16 ರಿಂದ 18 ಗಂಟೆಯ ಅವಧಿಗೆ 80 ರೂಪಾಯಿಗಳು
  • 19 ರಿಂದ 21 ಗಂಟೆಗಳ ಅವಧಿಗೆ 80 ರೂಪಾಯಿಗಳು
  • 22 ರಿಂದ 24 ಗಂಟೆಗಳ ಅವಧಿಗೆ 100 ರೂಪಾಯಿಗಳು
  • 48 ಗಂಟೆಗಳ ಕಾಲ ಕೊಠಡಿ ಬಳಕೆಗೆ 200 ರೂಪಾಯಿಗಳು

ಈ ಐಷಾರಾಮಿ ಕೊಠಡಿ ಸೌಲಭ್ಯ ಯಾರಿಗೆ ಸಿಗುತ್ತೆ ಗೊತ್ತಾ?

ರೈಲ್ವೆ ನಿಲ್ದಾಣ (Railway Station) ದಲ್ಲಿ ಲಭ್ಯ ಇರುವ ನಿವೃತ್ತಿ ಕೊಠಡಿಯನ್ನು ಪಡೆದುಕೊಳ್ಳಲು ಆರ್‌ಎಸಿ ಅಥವಾ ದೃಢೀಕೃತ ಟಿಕೆಟನ್ನು ನೀವು ಹೊಂದಿರಬೇಕು. ಕಾಯುವಿಕೆಯ ಪಟ್ಟಿಯಲ್ಲಿ ಟಿಕೆಟ್ (Ticket) ಪಡೆದುಕೊಂಡಿರುವ ಪ್ರಯಾಣಿಕರಿಗೆ ಈ ಕೊಠಡಿಯ ಪ್ರಯೋಜನ ಸಿಗುವುದಿಲ್ಲ. ಡ್ಯೂಟಿಕೆಟ್ ಮಾಡುವಾಗ ನೀಡಿದ ಐಡಿ ಪುರಾವೆನ್ನೆ ಕೊಠಡಿ ಬುಕಿಂಗ್ ಕೂಡ ನೀಡಬೇಕಾಗುತ್ತದೆ.

ಇನ್ನು ಮುಖ್ಯವಾಗಿರುವಂತಹ ವಿಚಾರ ಅಂದ್ರೆ 5 km ಗಿಂತ ಹೆಚ್ಚು ದೂರ ಪ್ರಯಾಣ ಮಾಡುವವರಿಗೆ ಇದರ ಪ್ರಯೋಜನ ಸಿಗುತ್ತದೆ. ಹಾಗೆಯೇ ಕೊಠಡಿಗಾಗಿ ನೀವು 60 ದಿನಗಳಿಗಿಂತ ಅಂದರೆ ಎರಡು ತಿಂಗಳಿಗಿಂತ ಮೊದಲೇ ಬುಕ್ ಮಾಡಿಕೊಳ್ಳಬೇಕು. ನಂತರ ಕೊನೆಯ 48 ಗಂಟೆಗಳಿಗಿಂತ ಮುಂಚಿತವಾಗಿ ಬುಕಿಂಗ್ ಕ್ಯಾನ್ಸಲ್ (Cancel) ಮಾಡಿದ್ರೆ 10% ನಷ್ಟು ಶುಲ್ಕವನ್ನು ಪಾವತಿ ಮಾಡಿ ಉಳಿದ ಹಣವನ್ನು ಹಿಂಪಡೆಯಬಹುದು. ಅದೇ ರೀತಿ 24 ಗಂಟೆಗಳ ಒಳಗೆ ಟಿಕೆಟ್ (Railway Ticket) ಕ್ಯಾನ್ಸಲ್ ಮಾಡಿದರೆ 50% ನಷ್ಟು ಶುಲ್ಕ ಪಾವತಿಸಬೇಕಾಗುತ್ತದೆ. 24 ಗಂಟೆಗಳ ನಂತರ ನೀವು ಬುಕ್ ಮಾಡಿದ ರೂಮ್ ಕ್ಯಾನ್ಸಲ್ ಮಾಡಿದ್ರೆ ಯಾವುದೇ ರೀತಿಯ ರಿಪೇಮೆಂಟ್ ಇರುವುದಿಲ್ಲ. ಹಾಗಾಗಿ ಮುಂದಿನ ಬಾರಿ ರೈಲು ನಿಲ್ದಾಣದಲ್ಲಿ ರೈಲಿಗಾಗಿ ಕಾಯುವ ಬದಲು ನಿವೃತ್ತಿ ಕೊಠಡಿಯಲ್ಲಿ ವಿಶ್ರಾಂತಿ ಪಡೆಯಿರಿ.

advertisement

Leave A Reply

Your email address will not be published.